ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Plane crash: ದಕ್ಷಿಣ ಸುಡಾನ್‌ನಲ್ಲಿ ವಿಮಾನ ಪತನ; ಭಾರತೀಯರು ಸೇರಿದಂತೆ 20 ಪ್ರಯಾಣಿಕರ ದುರ್ಮರಣ!

ದಕ್ಷಿಣ ಸುಡಾನ್‌ನ ಪ್ರದೇಶವೊಂದರಲ್ಲಿ ಟೇಕ್-ಆಫ್‌ ಆಗುವ ವೇಳೆ ವಿಮಾನ ಪತನಗೊಂಡಿದ್ದು, ಭಾರತೀಯರು ಸೇರಿದಂತೆ 20 ಜನರು ದಾರುಣವಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಚೀನಾದ ತೈಲ ಸಂಸ್ಥೆಯಾದ ಗ್ರೇಟರ್ ಪಯೋನೀರ್ ಆಪರೇಟಿಂಗ್ ಕಂಪನಿ ಚಾರ್ಟರ್ಡ್ ಮಾಡಿದ ಈ ವಿಮಾನದಲ್ಲಿ ಇಬ್ಬರು ಪೈಲಟ್‌ಗಳು ಸೇರಿದಂತೆ 21 ಮಂದಿ ಇದ್ದರು ಎಂದು ಮೂಲಗಳು ತಿಳಿಸಿವೆ.

Plane Crash

ಜುಬಾ: ದಕ್ಷಿಣ ಸುಡಾನ್‌ನ(South Sudan) ಪ್ರದೇಶವೊಂದರಲ್ಲಿ ಇಂದು ಸಂಜೆ(ಜ.29) ಟೇಕ್-ಆಫ್‌ ಆಗುವ ವೇಳೆ ವಿಮಾನ ಪತನಗೊಂಡಿದ್ದು,ಭಾರತೀಯರು(Plane Crash) ಸೇರಿದಂತೆ 20 ಜನರು ದಾರುಣವಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಚೀನಾದ ತೈಲ ಸಂಸ್ಥೆಯಾದ ಗ್ರೇಟರ್ ಪಯೋನೀರ್ ಆಪರೇಟಿಂಗ್ ಕಂಪನಿ( Greater Pioneer Operating Company ) ಚಾರ್ಟರ್ಡ್ ಮಾಡಿದ ಈ ವಿಮಾನದಲ್ಲಿ ಇಬ್ಬರು ಪೈಲಟ್‌ಗಳು ಸೇರಿದಂತೆ 21 ಮಂದಿ ಇದ್ದರು ಎಂದು ಮೂಲಗಳು ತಿಳಿಸಿವೆ.

ದಕ್ಷಿಣ ಸೂಡಾನ್ ರಾಜಧಾನಿ ಜುಬಾದಲ್ಲಿರುವ(Juba) ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಲು ತೈಲ ಸೆಂಟರ್‌ ಬಳಿ ಟೇಕ್ ಆಫ್ ಆಗುತ್ತಿದ್ದಾಗ ವಿಮಾನ ಪತನಗೊಂಡಿದೆ. ವಿಮಾನ ನಿಲ್ದಾಣದಿಂದ 500 ಮೀಟರ್ ದೂರದಲ್ಲಿ ವಿಮಾನ ಅಪಘಾತಕ್ಕೀಡಾಗಿದೆ ಎಂದು ಆಯಿಲ್‌ ರಿಚ್ ಯೂನಿಟಿಯ ಮಾಹಿತಿ ಸಚಿವ ಗಟ್ವೆಚ್ ಬಿಪಾಲ್ ಸಚಿವರು ದೂರವಾಣಿ ಮೂಲಕ ಎಎಫ್‌ಪಿಗೆ ತಿಳಿಸಿದ್ದಾರೆ.



ವಿಮಾನದಲ್ಲಿ 21 ಪ್ರಯಾಣಿಕರಿದ್ದರು. ಸದ್ಯಕ್ಕೆ ಒಬ್ಬರು ಮಾತ್ರ ಬದುಕುಳಿದಿದ್ದಾರೆ ಎಂದು ಸಚಿವರು ಹೇಳಿದ್ದಾರೆ ಎಲ್ಲಾ ಪ್ರಯಾಣಿಕರು GPOC ಉದ್ಯೋಗಿಗಳಾಗಿದ್ದು, 16 ಪ್ರಯಾಣಿಕರು ದಕ್ಷಿಣ ಸುಡಾನ್‌ ಪ್ರಜೆಗಳು, ಇಬ್ಬರು ಚೀನೀ ಪ್ರಜೆಗಳು ಮತ್ತು ಒಬ್ಬರು ಭಾರತೀಯರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ದೃಢಪಡಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:Drone Attack: ಸುಡಾನ್‌ನ ಡಾರ್‌ಫರ್‌ ಆಸ್ಪತ್ರೆ ಮೇಲೆ ಡ್ರೋನ್‌ ದಾಳಿ;30 ಸಾವು-ಹಲವರಿಗೆ ಗಂಭೀರ ಗಾಯ!

ಸಚಿವರ ಪ್ರಕಾರ, ಬದುಕುಳಿದಿರುವ ಓರ್ವ ವ್ಯಕ್ತಿ ಆಯಿಲ್‌ ಸೆಂಟರ್‌ನ ಉದ್ಯೋಗಿಯಾಗಿದ್ದಾರೆ. ದಕ್ಷಿಣ ಸುಡಾನ್‌ನ ಎಂಜಿನಿಯರ್ ಒಬ್ಬರು ಅವರನ್ನು ಬೆಂಟಿಯು ಆಸ್ಪತ್ರೆಗೆ ದಾಖಲಿಸಿದ್ದಾರೆ.



ಅಪಘಾತದ ಹಿಂದಿನ ಕಾರಣದ ಕುರಿತು ಸ್ಪಷ್ಟತೆ ದೊರೆತಿಲ್ಲ. ಅಧಿಕಾರಿಗಳು ಮೃತರ ಗುರುತನ್ನು ಬಹಿರಂಗಪಡಿಸಿಲ್ಲ. ವಿಮಾನವು ತೈಲ ಕಾರ್ಮಿಕರನ್ನು ಹೊತ್ತೊಯ್ಯುತ್ತಿತ್ತು ಎಂದು ವರದಿಯಾಗಿದೆ.