#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Drone Attack: ಸುಡಾನ್‌ನ ಡಾರ್‌ಫರ್‌ ಆಸ್ಪತ್ರೆ ಮೇಲೆ ಡ್ರೋನ್‌ ದಾಳಿ;30 ಸಾವು-ಹಲವರಿಗೆ ಗಂಭೀರ ಗಾಯ!

ಸುಡಾನ್‌ನ ಡಾರ್‌ಫರ್‌ ಪ್ರದೇಶದ ಎಲ್-ಫಾಶರ್‌ನಲ್ಲಿ ನಿರ್ಮಾಣ ಹಂತದಲ್ಲಿದ್ದ ಆಸ್ಪತ್ರೆಯ ಮೇಲೆ ಡ್ರೋನ್ ದಾಳಿಯಾಗಿದ್ದು, 30 ಜನರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಹಲವು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವೈದ್ಯಕೀಯ ಮೂಲಗಳು ಶನಿವಾರ ತಿಳಿಸಿದೆ. ಏಪ್ರಿಲ್ 2023 ರಿಂದ, ಸುಡಾನ್ ಸೈನ್ಯವು ಅರೆ ಸೈನಿಕ ಕ್ಷಿಪ್ರ ಬೆಂಬಲ ಪಡೆಗಳೊಂದಿಗೆ ಯುದ್ಧ ಆರಂಭಿಸಿದೆ. ಅವರು ಡಾರ್‌ಫರ್‌ನ ಸಂಪೂರ್ಣ ವಿಶಾಲವಾದ ಪಶ್ಚಿಮ ಪ್ರದೇಶವನ್ನು ವಶಪಡಿಸಿಕೊಂಡಿದ್ದಾರೆ.

ಸುಡಾನ್‌ ಆಸ್ಪತ್ರೆ ಮೇಲೆ ಡ್ರೋನ್‌ ದಾಳಿ;30 ಜನರ ದಾರುಣ ಸಾವು!

Drone Attack

Profile Deekshith Nair Jan 25, 2025 6:18 PM

ಖಾರ್ಟೂಮ್: ಸುಡಾನ್‌ನ(Sudan) ಡಾರ್‌ಫರ್‌(Darfur) ಪ್ರದೇಶದ ಎಲ್-ಫಾಶರ್‌ನಲ್ಲಿ ನಿರ್ಮಾಣ ಹಂತದಲ್ಲಿದ್ದ ಆಸ್ಪತ್ರೆಯ ಮೇಲೆ ಡ್ರೋನ್(Drone Attack) ದಾಳಿಯಾಗಿದ್ದು, 30 ಜನರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಹಲವು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವೈದ್ಯಕೀಯ ಮೂಲಗಳು ಶನಿವಾರ (ಜ.25) ತಿಳಿಸಿದೆ. ಏಪ್ರಿಲ್ 2023 ರಿಂದ, ಸುಡಾನ್ ಸೈನ್ಯವು ಅರೆ ಸೈನಿಕ ಕ್ಷಿಪ್ರ ಬೆಂಬಲ ಪಡೆಗಳೊಂದಿಗೆ ಯುದ್ಧ ಆರಂಭಿಸಿದೆ. ಅವರು ಡಾರ್‌ಫರ್‌ನ ಸಂಪೂರ್ಣ ವಿಶಾಲವಾದ ಪಶ್ಚಿಮ ಪ್ರದೇಶವನ್ನು ವಶಪಡಿಸಿಕೊಂಡಿದ್ದಾರೆ.

ಶುಕ್ರವಾರ(ಜ.24) ಸಂಜೆ ಸೌದಿ ಆಸ್ಪತ್ರೆಯ ಮೇಲಿನ ಬಾಂಬ್ ದಾಳಿಯು ಆಸ್ಪತ್ರೆಯ ಕಟ್ಟಡದ ವಿನಾಶಕ್ಕೆ ಕಾರಣವಾಗಿದೆ. ಅಲ್ಲಿನ ಪರಿಸ್ಥಿತಿ ತೀರಾ ಗಂಭೀರವಾಗಿದ್ದು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯಕೀಯ ಮೂಲಗಳ ಪ್ರಕಾರ ಕೆಲವು ವಾರಗಳ ಹಿಂದೆಯಷ್ಟೇ ಅದೇ ಕಟ್ಟಡದ ಮೇಲೆ ಡ್ರೋನ್‌ ದಾಳಿಯಾಗಿತ್ತು.



ಸುಡಾನ್‌ ಸಂಘರ್ಷ ನಿನ್ನೆ ಮೊನ್ನೆಯದಲ್ಲ. ಎರಡು ವರ್ಷಗಳಿಂದಲೂ ಅಲ್ಲಿ ಭೀಕರ ಯುದ್ಧ,ಸಾವು ನೋವುಗಳಾಗುತ್ತಿವೆ. ಕ್ಷಿಪಣಿ ದಾಳಿಗೆ ಅಲ್ಲಿನ ಮನೆಗಳು ಹಾನಿಗೀಡಾಗಿವೆ. ಆರೋಗ್ಯ ಶಿಬಿರಗಳು ಮತ್ತು ಯುನಿರ್ವಸಿಟಿ ಆಸ್ಪತ್ರೆಗೆ ನುಗ್ಗಿ ಲೂಟಿ ಎಸಗಿದ್ದಾರೆ. ಮಾರುಕಟ್ಟೆ, ಸಾರ್ವಜನಿಕ ಕಟ್ಟಡಗಳು, ಆಹಾರ ಗೋದಾಮುಗಳು ಮತ್ತು ಬ್ಯಾಂಕ್‌ ಕಟ್ಟಡಗಳಿಗೆ ಬೆಂಕಿ ಹಚ್ಚಿದ್ದಾರೆ. ಅಲ್ಲಿ ಈಗಲೂ ಪ್ರಕ್ಷುಬ್ಧ ವಾತಾವರಣ. ಸುಡಾನ್‌ನಲ್ಲಿ ಬರದ ಕ್ಷೋಭೆಗೆ ಸಿಲುಕಿ ಕೋಟ್ಯಂತರ ಜನರು ಹಸಿವಿನಿಂದ ಬಳಲುತ್ತಿದ್ದಾರೆ. ಸಂಘರ್ಷದ ಪರಿಣಾಮ ಈ ಸಂಖ್ಯೆ ಮತ್ತಷ್ಟು ಹೆಚ್ಚಲಿದೆ ಎಂದು ವಿಶ್ವಸಂಸ್ಥೆ ಈ ಹಿಂದೆಯೇ ಕಳವಳ ವ್ಯಕ್ತಪಡಿಸಿತ್ತು.

ಈ ಸುದ್ದಿಯನ್ನೂ ಓದಿ:Israeli Soldiers: ಗಾಜಾ ಕದನ ವಿರಾಮ;ಹಮಾಸ್‌ನಿಂದ ನಾಲ್ವರು ಇಸ್ರೇಲಿ ಸೈನಿಕರ ಬಿಡುಗಡೆ!

ಇದೀಗ ಆಸ್ಪತ್ರೆಯ ಮೇಲಿ ಡ್ರೋನ್‌ ದಾಳಿಯಿಂದಾಗಿ 30 ಜನರು ಅಸುನೀಗಿದ್ದಾರೆ. ಕ್ಷಾಮದಿಂದ ಅಲ್ಲಿನ ಜನರು ತತ್ತರಿಸಿ ಹೋಗಿದ್ದಾರೆ. ಯುದ್ಧ ಅವರನ್ನು ಮತ್ತಷ್ಟು ಹೈರಾಣಾಗಿಸಿದೆ. ಎಲ್-ಫಾಶರ್ ಸುತ್ತಮುತ್ತಲಿನ ಪ್ರದೇಶದಲ್ಲಿ, ಕ್ಷಾಮವು ಈಗಾಗಲೇ ಮೂರು ಸ್ಥಳಾಂತರ ಶಿಬಿರಗಳಲ್ಲಿದೆ. ಜಮ್ಜಾಮ್, ಅಬು ಶೌಕ್ ಮತ್ತು ಅಲ್-ಸಲಾಮ್ - ಮತ್ತು ಮೇ ವೇಳೆಗೆ ಇನ್ನು ಹಲವು ನಗರಗಳನ್ನು ಆವರಿಸಿಕೊಳ್ಳಲಿದೆ ಎಂದು ವರದಿಯಾಗಿದೆ.