ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‌Narendra Modi: ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಭರ್ಜರಿ ರೋಡ್‌ ಶೋ, 40 ಸಾವಿರ ಜನ ಸೇರಿಸಲು ಬಿಜೆಪಿ ‌ಪ್ಲಾನ್

Namma Metro: ಜಯನಗರದ ರಾಗಿಗುಡ್ಡ ಪ್ರಸನ್ನ ಆಂಜನೇಯ ದೇವಸ್ಥಾನದಿಂದ ಜಯನಗರದ ಶಾಲಿನಿ ಗ್ರೌಂಡ್‌ವರೆಗೆ ಮೋದಿ ರೋಡ್ ಶೋ ನಡೆಸಲು ಬಿಜೆಪಿ ನಿರ್ಧರಿಸಿದೆ. ಎಲೆಕ್ಟ್ರಾನಿಕ್ ಸಿಟಿ ಬಳಿ ಮೆಟ್ರೋ ಹಳದಿ ಮಾರ್ಗಕ್ಕೆ ಮೋದಿ ಚಾಲನೆ ನೀಡಲಿದ್ದಾರೆ. ಬಳಿಕ ಅಲ್ಲಿಂದ ಮೆಟ್ರೋದಲ್ಲೇ ರಾಗಿ ಗುಡ್ಡದ ಬಳಿ ಮೋದಿ ಆಗಮಿಸಲಿದ್ದಾರೆ.

ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಭರ್ಜರಿ ರೋಡ್‌ ಶೋಗೆ ಬಿಜೆಪಿ ಪ್ಲಾನ್

ಹರೀಶ್‌ ಕೇರ ಹರೀಶ್‌ ಕೇರ Aug 5, 2025 8:21 AM

ಬೆಂಗಳೂರು: ನಮ್ಮ ಮೆಟ್ರೋ ಹಳದಿ ಮಾರ್ಗ (Namma Metro Yellow Line) ಉದ್ಘಾಟನೆಗೆ ಮುಹೂರ್ತ ಫಿಕ್ಸ್ ಆಗಿದೆ. ಇದೇ ಆಗಸ್ಟ್ 10ರಂದು ಹಳದಿ ಮಾರ್ಗ ಉದ್ಘಾಟನೆಯಾಗಲಿದ್ದು, ಪ್ರಧಾನಿ ನರೇಂದ್ರ ಮೋದಿ (PM Narendra Modi) ಉದ್ಘಾಟನೆಗೆ ಆಗಮಿಸಲಿದ್ದಾರೆ. ಉದ್ಘಾಟನೆ ಬಳಿಕ ಮೋದಿಯವರ ಭರ್ಜರಿ ರೋಡ್ ಶೋ (Road show) ನಡೆಸಲು ರಾಜ್ಯ ಬಿಜೆಪಿ (Karnataka BJP) ಪ್ಲಾನ್ ಮಾಡಿದೆ.

ಜಯನಗರದ ರಾಗಿಗುಡ್ಡ ಪ್ರಸನ್ನ ಆಂಜನೇಯ ದೇವಸ್ಥಾನದಿಂದ ಜಯನಗರದ ಶಾಲಿನಿ ಗ್ರೌಂಡ್‌ವರೆಗೆ ಮೋದಿ ರೋಡ್ ಶೋ ನಡೆಸಲು ಬಿಜೆಪಿ ನಿರ್ಧರಿಸಿದೆ. ಎಲೆಕ್ಟ್ರಾನಿಕ್ ಸಿಟಿ ಬಳಿ ಮೆಟ್ರೋ ಹಳದಿ ಮಾರ್ಗಕ್ಕೆ ಮೋದಿ ಚಾಲನೆ ನೀಡಲಿದ್ದಾರೆ. ಬಳಿಕ ಅಲ್ಲಿಂದ ಮೆಟ್ರೋದಲ್ಲೇ ರಾಗಿ ಗುಡ್ಡದ ಬಳಿ ಮೋದಿ ಆಗಮಿಸಲಿದ್ದಾರೆ. ಅಲ್ಲಿಂದ ರೋಡ್ ಶೋ ಮೂಲಕ ಶಾಲಿನಿ ಗ್ರೌಂಡ್‌ಗೆ ಮೋದಿ ಆಗಮಿಸಲಿದ್ದಾರೆ. ಬಳಿಕ ಸಾರ್ವಜನಿಕ ಸಮಾರಂಭದಲ್ಲಿ ಪ್ರಧಾನಿ ಭಾಗಿಯಾಗಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಆಗಮಿಸೋ ಹಿನ್ನೆಲೆಯಲ್ಲಿ ಅವರ ಸ್ವಾಗತ ಹಾಗೂ ಕಾರ್ಯಕ್ರಮಕ್ಕೆ ರಾಜ್ಯ ಬಿಜೆಪಿ ಭರ್ಜರಿ ಸಿದ್ಧತೆ ನಡೆಸಿದೆ. ಜಯನಗರದ ಶಾಲಿನಿ ಮೈದಾನದಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ಹಾಗೂ ಜಯನಗರ ಶಾಸಕ ಸಿಕೆ ರಾಮಮೂರ್ತಿ ಭೂಮಿ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದ ವೇದಿಕೆಗೆ ಭೂಮಿ ಪೂಜೆ ನಡೆಸಿದರು.

ಈ ವೇಳೆ ಮಾತನಾಡಿದ ಆರ್ ಅಶೋಕ್, ಹಳದಿ ಮಾರ್ಗದ ಮೆಟ್ರೋ ನಮ್ಮ ಬಹಳ ದಿನದ ಕನಸು. 10ನೇ ತಾರೀಕು ನರೇಂದ್ರ ಮೋದಿಯವರು ಉದ್ಘಾಟನೆ ಮಾಡಲಿದ್ದಾರೆ. ಜಯನಗರದ ಶಾಲಿನಿ ಆಟದ ಮೈದಾನದಲ್ಲಿ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಲು ಬೃಹತ್ ಕಾರ್ಯಕ್ರಮ ಮಾಡ್ತಿದ್ದೇವೆ. ಸುಮಾರು 40 ಸಾವಿರ ಜನ ಈ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ. 18-20 ಸಾವಿರ ಕೋಟಿ ಹಣ ಖರ್ಚು ಮಾಡಿ ಉದ್ಘಾಟನೆ ಮಾಡಲಾಗ್ತಿದೆ. ಕಾರ್ಯಕ್ರಮ ಯಶಸ್ವಿ ಅಗಲಿ ಅಂತ ಇವತ್ತು ಪೂಜೆ ಮಾಡಿದ್ದೇವೆ. ಜಯನಗರದ ರಾಗಿಗುಡ್ಡದಿಂದ ಶಾಲಿನಿ ಗ್ರೌಂಡ್‌ವರೆಗೂ ರೋಡ್ ಶೋ ಇದೆ. ರೋಡ್ ಶೋ ನಂತರ ವೇದಿಕೆ ಕಾರ್ಯಕ್ರಮ ನಡೆಯಲಿದೆ ಅಂತ ಅಶೋಕ್ ಮಾಹಿತಿ ನೀಡಿದ್ದಾರೆ.

ಈ ಮೆಟ್ರೋದಲ್ಲಿ ಸುಮಾರು 8ರಿಂದ 10 ಲಕ್ಷ ಜನ ಪ್ರತಿದಿನ ಓಡಾಡುವ ನಿರೀಕ್ಷೆ ಇದೆ. ಇದರಿಂದ ಟ್ರಾಫಿಕ್ ಸಮಸ್ಯೆ ಕೂಡ ಕಡಿಮೆ ಆಗಲಿದೆ. ಅಟಲ್ ಬಿಹಾರಿ ವಾಜಪೇಯಿ, ಅನಂತ್ ಕುಮಾರ್ ಅವ್ರು ಬೆಂಗಳೂರಿಗೆ ಮೆಟ್ರೋ ತಂದುಕೊಟ್ಟರು. ಈ ಹಳದಿ ಮಾರ್ಗಕ್ಕೆ ಮೋದಿಯವರೇ ಶಂಕುಸ್ಥಾಪನೆ ಮಾಡಿದ್ದರು.‌ ಈಗ ಅವರೇ ಉದ್ಘಾಟನೆ ಮಾಡುತ್ತಿರುವುದು ವಿಶೇಷ ಎಂದು ಅಶೋಕ್‌ ಹೇಳಿದರು.

ಇದನ್ನೂ ಓದಿ: Metro Yellow Line: ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್; ಆ.10ರಂದು ಹಳದಿ ಮಾರ್ಗ ಉದ್ಘಾಟಿಸಲಿರುವ ಪ್ರಧಾನಿ ಮೋದಿ