ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Nations League: ಪೆನಾಲ್ಟಿ ಶೂಟೌಟ್‌ನಲ್ಲಿ ಸ್ಪೇನ್ ಮಣಿಸಿ ಚಾಂಪಿಯನ್‌ ಪಟ್ಟ ಅಲಂಕರಿಸಿದ ಪೋರ್ಚುಗಲ್

Cristiano Ronaldo: ಪಂದ್ಯ ಗೆಲುವಿನ ಬಳಿಕ ಕ್ರಿಸ್ಟಿಯಾನೊ ರೊನಾಲ್ಡೊ ಮೈದಾನದಲ್ಲೇ ಕಣ್ಣೀರು ಹಾಕಿದರು. ಅಭ್ಯಾಸದ ಸಮಯದಲ್ಲಿಯೇ ಗಾಯದ ಸಮಸ್ಯೆಯಿದ್ದರೂ ಟ್ರೋಫಿಗಾಗಿ, ಆಡಬೇಕಾಗಿತ್ತು ಇದು. ನಮ್ಮ ದೇಶ. ಅದಕ್ಕಾಗಿ ಎಲ್ಲವನ್ನೂ ನೀಡಿದ್ದೇನೆ ಎಂದು ರೊನಾಲ್ಡೊ ತಿಳಿಸಿದರು.

ಪೆನಾಲ್ಟಿ ಶೂಟೌಟ್‌ನಲ್ಲಿ ಸ್ಪೇನ್ ಮಣಿಸಿ ಟ್ರೋಫಿ ಗೆದ್ದ ಪೋರ್ಚುಗಲ್

-

Abhilash BC
Abhilash BC Jun 9, 2025 10:43 AM

ಮ್ಯೂನಿಚ್: ಅಲಿಯಾನ್ಸ್ ಅರೆನಾದಲ್ಲಿ ಭಾನುವಾರ ರಾತ್ರಿ ನಡೆದಿದ್ದ ನೇಷನ್ಸ್ ಲೀಗ್ ಫುಟ್ಬಾಲ್‌ ಫೈನಲ್(Nations League) ಪಂದ್ಯದಲ್ಲಿ ಪೋರ್ಚುಗಲ್ ತಂಡವು ಬಲಿಷ್ಠ ಸ್ಪೇನ್ ತಂಡವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ 5-3 ಗೋಲುಗಳಿಂದ ಮಣಿಸಿ ಚಾಂಪಿಯನ್‌ ಎನಿಸಿತು. ಗೆಲುವಿನ ಬಳಿಕ ದಿಗ್ಗಜ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ(Cristiano Ronaldo) ಕಣ್ಣೀರು ಹಾಕಿದರು. ಹೆಚ್ಚುವರಿ ಸಮಯದಲ್ಲಿ 2-2 ಡ್ರಾ ಮಾಡಿಕೊಂಡ ನಂತರ ಫಲಿತಾಂಶಕ್ಕಾಗಿ ಪೆನಾಲ್ಟಿ ಶೂಟೌಟ್‌ ಮೊರೆ ಹೋಗಲಾಯಿತು. ಇಲ್ಲಿ ಪೋರ್ಚುಗಲ್ 5-3 ಗೋಲುಗಳಿಂದ ಸ್ಪೇನ್ ತಂಡವನ್ನು ಸೋಲಿ ಎರಡನೇ ಬಾರಿಗೆ ನೇಷನ್ಸ್ ಲೀಗ್ ಟ್ರೋಫಿ ಗೆದ್ದ ಸಾಧನೆ ಮಾಡಿತು.

ಗಾಯದ ಮಧ್ಯೆಯೂ ತಂಡದ ಗೆಲುವಿಗಾಗಿ ಹೋರಾಡಿದ ರೊನಾಲ್ಡೊ, 88 ನೇ ನಿಮಿಷದಲ್ಲಿ ಗೋಲು ಗಳಿಸುವ ಮೂಲಕ ಪಂದ್ಯವನ್ನು ಸಮಬಲಕ್ಕೆ ತಂದರು. ಜತೆಗೆ ಪಂದ್ಯವನ್ನು ಹೆಚ್ಚುವರಿ ಸಮಯಕ್ಕೆ ಕೊಂಡೊಯ್ಯುವಲ್ಲಿ ಕಾರಣರಾದರು. ಈ ಗೋಲಿನೊಂದಿಗೆ ಅವರು ಅಂತಾರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರ ಎನಿಸಿದರು. ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ 138 ನೇ ಗೋಲು ಗಳಿಸಿದ್ದಾರೆ. ಈದೇ ವೇಳೆ ಲಿಯೋನೆಲ್ ಮೆಸ್ಸಿ ಮತ್ತು ಸುನಿಲ್ ಛೆಟ್ರಿಯನ್ನು ಹಿಂದಿಕ್ಕಿದರು.



ಪಂದ್ಯ ಗೆಲುವಿನ ಬಳಿಕ ರೊನಾಲ್ಡೊ ಮೈದಾನದಲ್ಲೇ ಕಣ್ಣೀರು ಹಾಕಿದರು. ಅಭ್ಯಾಸದ ಸಮಯದಲ್ಲಿಯೇ ಗಾಯದ ಸಮಸ್ಯೆಯಿದ್ದರೂ ಟ್ರೋಫಿಗಾಗಿ, ಆಡಬೇಕಾಗಿತ್ತು ಇದು. ನಮ್ಮ ದೇಶ. ಅದಕ್ಕಾಗಿ ಎಲ್ಲವನ್ನೂ ನೀಡಿದ್ದೇನೆ ಎಂದು ರೊನಾಲ್ಡೊ ತಿಳಿಸಿದರು.