POSH Committee: ಸ್ಯಾಂಡಲ್ವುಡ್ನಲ್ಲಿ ಕೊನೆಗೂ ರಚನೆಯಾಯ್ತು ಪೋಶ್ ಸಮಿತಿ
POSH Committee: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದ ಪೋಶ್ ಸಮಿತಿ ರಚನೆಯಾಗಿದೆ. ಎಂ. ನರಸಿಂಹಲು, ಎಂ.ಎನ್. ಕುಮಾರ್, ಸಾ.ರಾ. ಗೋವಿಂದು, ಎನ್.ಎಂ.ಸುರೇಶ್, ಅನ್ನಪೂರ್ಣ-ಎನ್‌ಜಿಒ, ಬಿ.ಎಲ್. ನಾಗರಾಜ್ (ನಾಗಣ್ಣ), ಅನಿತಾರಾಣಿ ಇದರ ಸದಸ್ಯರು.
ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (Karnataka Film Chamber Of Commerce) ವತಿಯಿಂದ ಪೋಶ್ ಸಮಿತಿ (POSH Committee) ರಚನೆಯಾಗಿದೆ. 7 ಮಂದಿ ಸದಸ್ಯರನ್ನು ಒಳಗೊಂಡ ಪೋಶ್ ಆಂತರಿಕ ಸಮಿತಿ ರಚಿಸಲಾಗಿದ್ದು, ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಅವರ ಸೂಚನೆ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಪೋಶ್ ಆಂತರಿಕ ಸಮಿತಿ ಸದಸ್ಯರು
ಎಂ. ನರಸಿಂಹಲು
ಎಂ.ಎನ್. ಕುಮಾರ್
ಸಾ.ರಾ. ಗೋವಿಂದು
ಎನ್.ಎಂ ಸುರೇಶ್
ಅನ್ನಪೂರ್ಣ-ಎನ್‌ಜಿಒ
ಬಿ.ಎಲ್. ನಾಗರಾಜ್ (ನಾಗಣ್ಣ)
ಅನಿತಾರಾಣಿ
ಕರ್ನಾಟಕ ರಾಜ್ಯ ಮಹಿಳಾ ಆಯೋಗದಿಂದ 3 ಬಾರಿ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಗೆ ನೋಟಿಸ್ ಜಾರಿ ಮಾಡಿ, ಪೋಶ್ ಕಮಿಟಿ ರಚಿಸುವಂತೆ ಸೂಚನೆ ನೀಡಲಾಗಿತ್ತು. ಕೊನೆಗೂ ಕನ್ನಡ ಫಿಲ್ಮ್ ಚೇಂಬರ್ ವತಿಯಿಂದ ಪೋಶ್ ಆಂತರಿಕ ಸಮಿತಿ ರಚಿಸಿ ಅದಕ್ಕೆ ಸದಸ್ಯರನ್ನೂ ನೇಮಕ ಮಾಡಲಾಗಿದೆ.
2025ರ ಜ. 8 ಹಾಗೂ ಜ. 10ರಂದು ಬೆಂಗಳೂರು ನಗರ ಜಿಲ್ಲಾಡಳಿತದ ಅಧಿಕಾರಿಗಳು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಭೇಟಿ ನೀಡಿ ಪೋಶ್ ಕಾಯ್ದೆಯ ಬಗ್ಗೆ ಮಾಹಿತಿ ನೀಡಿದ್ದರು. ಅದರಂತೆ ಜ.17ರಂದು 7 ಸದಸ್ಯರನ್ನೊಳಗೊಂಡಂತೆ ಆಂತರಿಕ ಸಮಿತಿಯನ್ನು ರಚಿಸಲಾಗಿದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ. ನರಸಿಂಹಲು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Shiv Rajkumar: ʼಮೃತ್ಯುಂಜಯʼ ಶಿವಣ್ಣ ಭರ್ಜರಿ ವೆಲ್‌ಕಮ್‌ಗೆ ಅಭಿಮಾನಿಗಳು ಸಜ್ಜು
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಬೈಲಾ ಹಾಗೂ ನಿಯಮಾವಳಿ ಪ್ರಕಾರ ಮಂಡಳಿಯ ಸದಸ್ಯರಾದವರಿಗೆ ಮಾತ್ರ ಸಮಿತಿಯು ಅನ್ವಯವಾಗುತ್ತದೆ. ಯಾರಿಗೂ ಕಿರುಕುಳ ಉಂಟಾದರೂ ತಮ್ಮ ಗಮನಕ್ಕೆ ತಂದು ದೂರು ಕೊಟ್ಟರೆ ಅದನ್ನು ಕೂಲಂಕುಶವಾಗಿ ಪರಿಶೀಲನೆ ನಡೆಸಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಾಹಿತಿ ಅವರು ನೀಡಿದ್ದಾರೆ.