ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಆರ್.ಟಿ.ಎಕ್ಸ್.ನ ಪ್ರಾಟ್ ಅಂಡ್ ವ್ಹಿಟ್ನೀ ಭಾರತಕ್ಕೆ ಆಶಿಷ್ ಸರಾಫ್ ಅವರನ್ನು ಉಪಾಧ್ಯಕ್ಷ ಹಾಗೂ ಕಂಟ್ರಿ ಹೆಡ್ ಆಗಿ ನೇಮಕ

ಪ್ರಾಟ್ ಅಂಡ್ ವ್ಹಿಟ್ನೀ ಕಳೆದ ನಾಲ್ಕು ವರ್ಷಗಳಿಂದ ಭಾರತದಲ್ಲಿ ತನ್ನ ಎಂಜಿನಿಯರಿಂಗ್, ಡಿಜಿಟಲ್ ಪರಿವರ್ತನೆ, ಪೂರೈಕೆ ಸರಣಿ ಮತ್ತು ಮಾರುಕಟ್ಟೆ ನಂತರದ ಉಪಸ್ಥಿತಿಗೆ 40 ಮಿಲಿಯನ್ ಡಾಲರ್ ಹೂಡಿಕೆ ಮೀರಿ ಹೂಡಿಕೆ ಮಾಡಿದೆ” ಎಂದು ಪ್ರಾಟ್ ಅಂಡ್ ವ್ಹಿಟ್ನೀಯ ಚೀಫ್ ಡಿಜಿಟಲ್ ಆಫೀಸರ್ ಸತೀಶ್ ಕುಮಾರ್ ಕುಮಾರ ಸಿಂಗಂ ಹೇಳಿದರು

ಆರ್.ಟಿ.ಎಕ್ಸ್.ನ ಪ್ರಾಟ್ ಅಂಡ್ ವ್ಹಿಟ್ನೀ ಭಾರತಕ್ಕೆ ಆಶಿಷ್ ಸರಾಫ್ ನೇಮಕ

Profile Ashok Nayak Apr 16, 2025 11:21 AM

ನವದೆಹಲಿ: ಆರ್.ಟಿ.ಎಕ್ಸ್.( NYSE: RTX)) ಉದ್ಯಮ ಪ್ರಾಟ್ ಅಂಡ್ ವ್ಹಿಟ್ನೀ ಇಂದು ಪ್ರಾಟ್ ಅಂಡ್ ವ್ಹಿಟ್ನೀ ಇಂಡಿಯಾದ ಉಪಾಧ್ಯಕ್ಷ ಹಾಗೂ ಕಂಟ್ರಿ ಹೆಡ್ ಆಗಿ ಆಶಿಷ್ ಸರಾಫ್ ಅವರನ್ನು ನೇಮಕ ಮಾಡಿ ಪ್ರಕಟಿಸಿದೆ. ಪ್ರಾಟ್ ಅಂಡ್ ವ್ಹಿಟ್ನೀಯ ಅತ್ಯಂತ ಹಿರಿಯ ದೇಶದ ಒಳಗಿನ ನಾಯಕರಾದ ಆಶಿಷ್ ಭಾರತದಲ್ಲಿ ಎಲ್ಲ ಕಾರ್ಯತಂತ್ರೀಯ ಪ್ರಗತಿ ಮತ್ತು ಪರಿವರ್ತನೆಯ ಪ್ರಯತ್ನಗಳ ನೇತೃತ್ವ ವಹಿಸಲಿದ್ದಾರೆ. ಅವರು ಪ್ರಾಟ್ ಅಂಡ್ ವ್ಹಿಟ್ನೀಯ ದೇಶದ ಒಳಗಿನ ಎಂಜಿನಿಯರಿಂಗ್, ಪೂರೈಕೆ ಸರಣಿ, ಗ್ರಾಹಕ ಸೇವೆ, ಕಾರ್ಯಾಚರಣೆಗಳು ಮತ್ತು ಡಿಜಿಟಲ್ ಪರಿವರ್ತನೆ ಕೇಂದ್ರಗಳ ಪ್ರಗತಿ ಮತ್ತು ಹೊಂದಾಣಿಕೆಗೆ ಜವಾಬ್ದಾರಿಯಾಗಿರುತ್ತಾರೆ.

ಆಶಿಷ್ ಥೇಲ್ಸ್ ನಿಂದ ಪ್ರಾಟ್ ಅಂಡ್ ವ್ಹಿಟ್ನೀ ಸೇರಿಕೊಂಡಿದ್ದು ಅಲ್ಲಿ ಅವರು ವೈಮಾನಿಕ, ರಕ್ಷಣೆ, ಬಯೋಮೆಟ್ರಿಕ್ಸ್, ಸೈಬರ್ ಸೆಕ್ಯುರಿಟಿ ಮತತ್ತು ಗ್ಲೋಬಲ್ ಕೇಪಬಿಲಿಟಿ ಸೆಂಟರ್ ಒಳಗೊಂಡು ಥೇಲ್ಸ್ ಇಂಡಿಯಾ ಎಲ್ಲ ಉದ್ಯಮಗಳ ಕಂಟ್ರಿ ಡೈರೆಕ್ಟರ್ ಮತ್ತು ಅಧ್ಯಕ್ಷರಾಗಿದ್ದರು.

“ಪ್ರಾಟ್ ಅಂಡ್ ವ್ಹಿಟ್ನೀ ಕಳೆದ ನಾಲ್ಕು ವರ್ಷಗಳಿಂದ ಭಾರತದಲ್ಲಿ ತನ್ನ ಎಂಜಿನಿಯರಿಂಗ್, ಡಿಜಿಟಲ್ ಪರಿವರ್ತನೆ, ಪೂರೈಕೆ ಸರಣಿ ಮತ್ತು ಮಾರುಕಟ್ಟೆ ನಂತರದ ಉಪಸ್ಥಿತಿಗೆ 40 ಮಿಲಿಯನ್ ಡಾಲರ್ ಹೂಡಿಕೆ ಮೀರಿ ಹೂಡಿಕೆ ಮಾಡಿದೆ” ಎಂದು ಪ್ರಾಟ್ ಅಂಡ್ ವ್ಹಿಟ್ನೀಯ ಚೀಫ್ ಡಿಜಿಟಲ್ ಆಫೀಸರ್ ಸತೀಶ್ ಕುಮಾರ್ ಕುಮಾರ ಸಿಂಗಂ ಹೇಳಿದರು. “ಲಾಭ ಮತ್ತು ನಷ್ಟ ನಿರ್ವಹಣೆ, ಉದ್ಯಮದ ಪರಿವರ್ತನೆ ಮತ್ತು ಕಾರ್ಯತಂತ್ರೀಯ ಸಹಯೋಗಗಳ ಅಪಾರ ಪರಿಣಿತಿಯು ದೇಶದ ಒಳಗಡೆ ಮುಂದಿನ ಹಂತದ ಪ್ರಗತಿಯನ್ನು ಉತ್ತೇಜಿಸುತ್ತದೆ” ಎಂದರು.

ಇದನ್ನೂ ಓದಿ: E-Commerce: ಇ-ಕಾಮರ್ಸ್‌ ವೇದಿಕೆಗಳು ಎಪಿಎಂಸಿ ಆಡಳಿತಕ್ಕೆ: ವಿಧೇಯಕ ಅಂಗೀಕಾರ

ಆಶಿಷ್ ಅವರಿಗೆ ಉದ್ಯಮ ಮತ್ತು ಕನ್ಸಲ್ಟಿಂಗ್ ಅನುಭವದಲ್ಲಿ 20ಕ್ಕೂ ಹೆಚ್ಚು ವರ್ಷಗಳ ಅನುಭವ ವಿದ್ದು ವೈಮಾನಿಕ, ಬಾಹ್ಯಾಕಾಶ, ರಕ್ಷಣೆ, ಬಯೋಮೆಟ್ರಿಕ್ಸ್ ಮತ್ತು ಉತ್ಪಾದನಾ ವಲಯಗಳಲ್ಲಿ ಅವರು ಅಪಾರ ಹಿನ್ನೆಲೆ ಹೊಂದಿದ್ದಾರೆ. ಥೇಲ್ಸ್ ನಲ್ಲಿ ಅವರ ಅವಧಿಗೆ ಮುನ್ನ ಆಶಿಷ್ ಏರ್ ಬಸ್ ತ್ತು ಟಾಟಾ-ಸಿಕೊರ್ಸ್ಕಿ ಜಂಟಿ ಉದ್ಯಮದಲ್ಲಿ ಹಲವಾರು ನಾಯಕತ್ವ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಅವರು ಯು.ಎಸ್. ಮತ್ತು ಯೂರೋಪ್ ಗಳಲ್ಲಿ ಸ್ಟ್ರಾಟಜಿ ಅಂಡ್ ಆಪರೇಷನ್ಸ್ ಗೆ ಆದ್ಯತೆ ನೀಡಿ ಡೆಲಾಯ್ಟ್ ಕನ್ಸಲ್ಟಿಂಗ್ ನಲ್ಲಿ ಹಾಗೂ ಉತ್ಪಾದನಾ ಹಾಗೂ ಎಂಜಿನಿಯರಿಂಗ್ ವಲಯಗಳಲ್ಲಿ ಪೂರೈಕೆ ಸರಣಿಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ.

ಪ್ರಾಟ್ ಅಂಡ್ ವ್ಹಿಟ್ನೀ ಹಲವಾರು ದಶಕಗಳಿಂದ ಭಾರತೀಯ ವೈಮಾನಿಕ ಕ್ಷೇತ್ರಕ್ಕೆ ಶಕ್ತಿ ತುಂಬು ತ್ತಿದೆ ಮತ್ತು ಅದರ ವಿಸ್ತರಿಸುತ್ತಿರುವ ಹೆಜ್ಜೆ ಗುರುತು ಈಗ 800ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. ಇಂದು, ಪ್ರಾಟ್ ಅಂಡ್ ವ್ಹಿಟ್ನೀಯ ಎಂಜಿನ್ ಗಳು ಮತ್ತು ಆಕ್ಸಿಲರಿ ಪವರ್ ಯೂನಿಟ್ ಭಾರತದಲ್ಲಿ ವಾಣಿಜ್ಯ, ಪ್ರಾದೇಶಿಕ ಮತ್ತು ಸೇನಾ ವೈಮಾನಿಕತೆಯಲ್ಲಿ 600ಕ್ಕೂ ಹೆಚ್ಚು ವಿಮಾನ ಗಳಿಗೆ ಬೆಂಬಲಿಸುತ್ತಿವೆ. ಅದರಲ್ಲಿ ಎ320 ನಿಯೊ ಕುಟುಂಬ, ಎಟಿಆರ್ 72ಗಳು ಮತ್ತು ಭಾರತೀಯ ವಾಯುಸೇನೆಯ ಸಿ-295 ಮತ್ತು ಸಿ-17 ಗ್ಲೋಬ್ ಮಾಸ್ಟರ್ III ಗಳಿವೆ.