ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Narada Sanchara: ಬೆಲೆಯೇರಿಕೆಯ ಪರ್ವ!

ನೀರು, ಹಾಲು-ಹಣ್ಣು-ತರಕಾರಿ, ಆಹಾರ ಪದಾರ್ಥಗಳ ಬೆಲೆಯೇರಿಕೆ ಆದಾಗ, “ಹಿಂಗೆ ಏರಿಕೆಯಾದ್ರೆ ನಾವೆಲ್ಲಾ ಹೊಟ್ಟೆಗೆ ಹಿಟ್ಟಿನ ಬದಲು ಮಣ್ಣು ತಿನ್ನಬೇಕಾಗುತ್ತೆ" ಅಂತ ಜನರು ಆಕ್ರೋಶ ವ್ಯಕ್ತಪಡಿಸಿ ದ್ದುಂಟು. ಇಷ್ಟು ಸಾಲದೆಂಬಂತೆ ವಿದ್ಯುತ್ ದರವೂ ಏರಿಬಿಟ್ಟರೆ ಅಲ್ಲಿಗೆ ಮುಗೀತ್! ಬಾಯಿ ಬಡ್ಕೊಳ್ಳೋ ದೊಂದೇ ಬಾಕಿ!

Narada Sanchara:  ಬೆಲೆಯೇರಿಕೆಯ ಪರ್ವ!

Profile Ashok Nayak Feb 17, 2025 9:43 AM

ಕಲಹಪ್ರಿಯ

ಕೆಲವರ ಗ್ರಹಚಾರವೇ ಹಾಗೆ, ಒಂದೋ ಅವರು ಮತ್ತೊಬ್ಬರಿಂದ ಮೋಸ ಹೋಗಲೆಂದೇ ಹುಟ್ಟಿರು ತ್ತಾರೆ, ಇಲ್ಲವೇ ತಾವು ಮಾಡದ ತಪ್ಪಿಗೆ ಬೆಲೆಯೇರಿಕೆ ರೂಪದಲ್ಲಿ ಹಿಗ್ಗಾಮುಗ್ಗಾ ಚಾಟಿಯೇಟು ತಿನ್ನಬೇಕಾದ ದುರದೃಷ್ಟವಂತರಾಗಿರುತ್ತಾರೆ. ಕಸ್ತೂರಿ ಕರ್ನಾಟಕದ ಜನರು ಈ ಪೈಕಿ ಯಾವ ವರ್ಗಕ್ಕೆ ಸೇರಿದವರು ಎಂಬುದನ್ನು ನಿರ್ಧರಿಸುವುದನ್ನು ಓದುಗರಿಗೇ ಬಿಟ್ಟಿದ್ದಾರೆ ಕಲಹಪ್ರಿಯ ನಾರದರು! ಇದು ಸುಮ್ಮನೇ ‘ಲೂಸ್ ಟಾಕ್’ ರೀತಿಯಲ್ಲಿ ಆಡುತ್ತಿರುವ ಮಾತಲ್ಲ, ನಮ್ಮ ಜನರು ಅನುಭವಿಸು ತ್ತಿರುವ ಕಷ್ಟ-ಕೋಟಲೆಗಳ ಪರಂಪರೆಯ ಪ್ರಾಮಾಣಿಕ ಪ್ರಸ್ತುತಿ. ಬಸ್ ಪ್ರಯಾಣ ದರಗಳು ಏರಿಕೆ ಕಂಡಿದ್ದಾಯ್ತು. ನೀರಿನ ದರ, ಮೆಟ್ರೋ ಪ್ರಯಾಣದರಗಳು ಜನರಿಗೆ ಬಿಸಿ ಮುಟ್ಟಿಸಿ ದ್ದಾಯ್ತು, ದಿನಬಳಕೆಯ ವಸ್ತುಗಳು ಮತ್ತು ಆಹಾರ ಪದಾರ್ಥಗಳ ಬೆಲೆ ‘ಗಗನಗಾಮಿ’ ಆಗಿದ್ದಾಯ್ತು.

ಈಗ ಜನರಿಗೆ ‘ಕರೆಂಟ್ ಷಾಕ್’ ನೀಡಲು ಸಂಬಂಧ ಪಟ್ಟವರು ಹತಾರಗಳನ್ನು ರೆಡಿ ಮಾಡಿಕೊಳ್ಳು ತ್ತಿದ್ದಾರಂತೆ. ನೀರು, ಹಾಲು-ಹಣ್ಣು-ತರಕಾರಿ, ಆಹಾರ ಪದಾರ್ಥಗಳ ಬೆಲೆಯೇರಿಕೆ ಆದಾಗ, “ಹಿಂಗೆ ಏರಿಕೆಯಾದ್ರೆ ನಾವೆಲ್ಲಾ ಹೊಟ್ಟೆಗೆ ಹಿಟ್ಟಿನ ಬದಲು ಮಣ್ಣು ತಿನ್ನಬೇಕಾಗುತ್ತೆ" ಅಂತ ಜನರು ಆಕ್ರೋಶ ವ್ಯಕ್ತಪಡಿಸಿದ್ದುಂಟು. ಇಷ್ಟು ಸಾಲದೆಂಬಂತೆ ವಿದ್ಯುತ್ ದರವೂ ಏರಿಬಿಟ್ಟರೆ ಅಲ್ಲಿಗೆ ಮುಗೀತ್! ಬಾಯಿ ಬಡ್ಕೊಳ್ಳೋ ದೊಂದೇ ಬಾಕಿ! ಮತ್ತೊಂದೆಡೆ, ಪ್ರತಿ ಕೆ.ಜಿ. ಕಾಫಿಪುಡಿಯ ಬೆಲೆಯು 850 ರುಪಾಯಿಗಳಿಂದ 1100 ರುಪಾಯಿವರೆಗೆ ಏರಿಕೆಯಾಗಿರೋದ್ರಿಂದ, ಒಂದು ಕಪ್ ಕಾಫಿ ಬೆಲೆಯಲ್ಲಿ ಬರೋಬ್ಬರಿ 5 ರುಪಾ ಯಿ ಹೆಚ್ಚಳ ಆಗೋ ಸಾಧ್ಯತೆಯಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಇದನ್ನು ಓದಿದವರು ಬಿಸಿಕಾಫಿಯಿಂದ ಬಾಯಿ ಸುಟ್ಟುಕೊಳ್ಳುವುದಿರಲಿ, ಈ ಸುದ್ದಿಯನ್ನು ಕೇಳಿಯೇ ಕಿವಿಯನ್ನು ಸುಟ್ಟು ಕೊಳ್ಳುವಂತಾಗಿದೆ ಕಣ್ರೀ...

ಅಯ್ಯೋ ದುರ್ವಿಧಿಯೇ...

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಅವರಿಗೆ ಸೇರಿದ್ದ ಕೋಟ್ಯಂತರ ರುಪಾಯಿ ಬೆಲೆಬಾಳುವ ಸ್ಥಿರಾಸ್ತಿ ಹಾಗೂ ಚರಾಸ್ತಿಗಳನ್ನು, ವಿಶೇಷ ನ್ಯಾಯಾಲಯದ ಆದೇಶದಂತೆ ತಮಿಳು ನಾಡು ಸರಕಾರಕ್ಕೆ ಹಸ್ತಾಂತರಿಸಲಾಗಿದೆಯಂತೆ. ಹೀಗೆ ಸರಕಾರದ ಪಾಲಾದ ಸ್ವತ್ತುಗಳಲ್ಲಿ ಜಮೀ ನು, ಅಪಾರ ಚಿನ್ನಾಭರಣ ಮತ್ತು ಇತರ ವಸ್ತುಗಳು ಸೇರಿವೆಯಂತೆ. ಅದರಲ್ಲೂ 27 ಕೆ.ಜಿ. ಯಷ್ಟು ಚಿನ್ನವು ಸರಕಾರದ ತೆಕ್ಕೆಯನ್ನು ಸೇರಲಿದೆ ಎಂಬ ಸುದ್ದಿ ಓದಿದ ಕೆಲ ಹೆಂಗೆಳೆಯ ರಂತೂ, “ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ ಅಂತ ಅಷ್ಟಿಲ್ಲದೆ ಹೇಳಿದ್ದಾರಾ ನಮ್ಮ ಪೂರ್ವಜರು?" ಎಂದು ಹಳಹಳಿಸುತ್ತಾ, ನೆಟಿಗೆ ಮುರಿಯುತ್ತಿದ್ದಾರಂತೆ!