Chikkaballapur News: ನಾಡು ನುಡಿ ರಕ್ಷಣೆ ಸ್ವಾಭಿಮಾನಿ ಕನ್ನಡಿಗರ ಆದ್ಯ ಕರ್ತವ್ಯ : ಕಾಂಗ್ರೆಸ್ ಮುಖಂಡ ಪುಟ್ಟು ಆಂಜಿನಪ್ಪ
ಶತಮಾನಕ್ಕೂ ಹೆಚ್ಚಿನ ಇತಿಹಾಸವಿರುವ ಕನ್ನಡ ಸಾಹಿತ್ಯ ಪರಿಷತ್ತು ಈ ಸುಧೀರ್ಘ ಅವಧಿಯಲ್ಲಿ ಕನ್ನಡಿಗರು ಮೆಚ್ಚುವಂತಹ ಕೆಲಸ ಮಾಡಿರುವುದನ್ನು ನಾವೆಲ್ಲಾ ಕಂಡಿದ್ದೇವೆ. ಇಂತಹ ಉನ್ನತ ವಾದ ಸಂಸ್ಥೆಯ ತಾಲೂಕು ಸಮ್ಮೇಳನಕ್ಕೆ ಸಹೃದಯರು, ಹಿರಿಯ ಪತ್ರಕರ್ತರು,ಚಿಂತಕರು, ಶಿಕ್ಷಣ ಪ್ರೇಮಿಗಳು ಆದ ರೂಪಸಿ ರಮೇಶ್ ಅವರನ್ನು ಆಯ್ಕೆ ಮಾಡಿ ಅವರ ಸಾರಥ್ಯದಲ್ಲಿ 10ನೇ ಸಾಹಿತ್ಯ ಸಮ್ಮೇಳನ ಮಾಡಿರುವುದು ಹೆಮ್ಮೆಯ ಸಂಗತಿ

ಶಿಡ್ಲಘಟ್ಟ: ನಾಡು ನುಡಿ ರಕ್ಷಣೆಗೆ ಮುಂದಾಗುವುದು ಪ್ರತಿಯೊಬ್ಬ ಸ್ವಾಭಿಮಾನಿ ಕನ್ನಡಿಗರ ಆಧ್ಯ ಕರ್ತವ್ಯವಾಗಬೇಕಿದೆ ಎಂದು ಕಾಂಗ್ರೆಸ್ ಮುಖಂಡ ಪುಟ್ಟು ಆಂಜಿನಪ್ಪ ತಿಳಿಸಿದರು. ನಗರದ ಮಯೂರ ವೃತ್ತದಲ್ಲಿ ಶನಿವಾರ ಪುಟ್ಟು ಆಂಜಿನಪ್ಪ ಗೆಳೆಯರ ಸಮ್ಮುಖದಲ್ಲಿ ಏರ್ಪಡಿಸಿದ್ದ ಸರಳ ಸಮಾರಂಭದ 10ನೇ ತಾಲೂಕು ಸಮ್ಮೇಳನಾಧ್ಯಕ್ಷ ರೂಪಸಿ ರಮೇಶ್ ಅವರಿಗೆ ಅಭಿ ನಂದಿಸಿ ಮಾತನಾಡಿದರು. ರಸಋಷಿ ಕುವೆಂಪು ಹೇಳಿರುವಂತೆ ನಾಡಿನಲ್ಲಿನ ಕನ್ನಡಿಗರು ಎಲ್ಲೇ ಇದ್ದರೂ, ಹೇಗೆ ಇದ್ದರೂ ಎಂದೆಂದಿಗೂ ನಮ್ಮ ಹೃದಯ ಕನ್ನಡತನದಿಂದ ಕೂಡಿರಬೇಕು. ಕನ್ನಡಾಭಿಮಾನ ಒಂದಿದ್ದರೆ ನಾಡ ಭಾಷೆಯ ಶ್ರೀಮಂತಿಕೆ ಶತಶತಮಾನಗಳ ಕಾಲ ಅಚ್ಚಳಿಯದೆ ಉಳಿಯಲು ಸಾಧ್ಯ ಎಂದರು.
ಶತಮಾನಕ್ಕೂ ಹೆಚ್ಚಿನ ಇತಿಹಾಸವಿರುವ ಕನ್ನಡ ಸಾಹಿತ್ಯ ಪರಿಷತ್ತು ಈ ಸುಧೀರ್ಘ ಅವಧಿಯಲ್ಲಿ ಕನ್ನಡಿಗರು ಮೆಚ್ಚುವಂತಹ ಕೆಲಸ ಮಾಡಿರುವುದನ್ನು ನಾವೆಲ್ಲಾ ಕಂಡಿದ್ದೇವೆ. ಇಂತಹ ಉನ್ನತ ವಾದ ಸಂಸ್ಥೆಯ ತಾಲೂಕು ಸಮ್ಮೇಳನಕ್ಕೆ ಸಹೃದಯರು, ಹಿರಿಯ ಪತ್ರಕರ್ತರು,ಚಿಂತಕರು, ಶಿಕ್ಷಣ ಪ್ರೇಮಿಗಳು ಆದ ರೂಪಸಿ ರಮೇಶ್ ಅವರನ್ನು ಆಯ್ಕೆ ಮಾಡಿ ಅವರ ಸಾರಥ್ಯದಲ್ಲಿ 10ನೇ ಸಾಹಿತ್ಯ ಸಮ್ಮೇಳನ ಮಾಡಿರುವುದು ಹೆಮ್ಮೆಯ ಸಂಗತಿ.ಕಾರ್ಯಕ್ರಮಕ್ಕೆ ಬಂದು ಶ್ರೀಯುತರನ್ನು ಅಭಿನಂದಿ ಸುವ ಕೆಲಸ ಮಾಡಬೇಕಿತ್ತು. ಅನಿವಾರ್ಯ ಕಾರಣಗಳಿಂದ ಬರಲಾಗಲಿಲ್ಲ. ಇಂದು ಬಿಡುವು ಮಾಡಿಕೊಂಡು ಗೆಳೆಯರು ಹಿತೈಷಿಗಳ ಸಮ್ಮುಖದಲ್ಲಿ ಸನ್ಮಾನಿಸುತ್ತಿದ್ದೇನೆ ಎಂದರು.
ಇದನ್ನೂ ಓದಿ: Chikkaballapur News: ಘಂಟಂವಾರಿಪಲ್ಲಿಯಲ್ಲಿ: ಗಮನ ಸೆಳೆದ ಮಕ್ಕಳ ಗ್ರಾಮ ಸಭೆ: ಸಮಸ್ಯೆಗಳ ಅನಾವರಣ
ಆಧುನಿಕತೆಯ ಭರಾಟೆಯಲ್ಲಿ ಕನ್ನಡದ ಭಾಷೆಯ ಮೇಲೆ ಅನ್ಯ ಭಾಷೆಗಳ ಪ್ರಭಾವ ಹೆಚ್ಚುತ್ತಿರು ವುದು ಕಳವಳಕಾರಿ ಸಂಗತಿಯಾಗಿದೆ. ಇಂದಿನ ನವ ಮಾಧ್ಯಮಗಳ ಯುಗದಲ್ಲಿ ಅನ್ಯ ಭಾಷೆಗಳನ್ನು ಕಲಿಯುವ ಅನಿವಾರ್ಯತೆ ಇದ್ದರೂ ಸಹ ಕನ್ನಡ ಭಾಷೆಯನ್ನು ಕಡೆಗಣಿಸಬಾರದು. ಮೊಬೈಲ್ ಲೋಕದ ಬೆಳವಣಿಗೆ ಓದು ಮತ್ತು ಬರಹದ ಸಂಸ್ಕೃತಿಯನ್ನು ನಾಶಮಾಡುತ್ತಿದ್ದು ಇದು ಪರೋಕ್ಷ ವಾಗಿ ಭಾಷೆಯ ಬೆಳವಣಿಗೆ ಬಳಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.ಏನೇ ಆದರೂ ನಾವೆಲ್ಲರೂ ಮಾತೃಭಾಷೆ ಕನ್ನಡ ಕಲಿತು ಅಭಿಮಾನದಿಂದ ಮಾತನಾಡುವ ಮೂಲಕ ಕನ್ನಡ ಭಾಷೆ ಉಳಿಸಿ ಬೆಳೆಸಬೇಕಾಗಿದೆ ಎಂದರು. ಇದೇ ವೇಳೆ ಕಸಾಪವತಿಯಿಂದ ಪುಟ್ಟು ಆಂಜಿನಪ್ಪ ಅವರನ್ನು ಕೂಡ ಸನ್ಮಾನಿಸಲಾಯಿತು.
ಈ ವೇಳೆ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ರೂಪಿಸಿ ರಮೇಶ್, ಕಸಾಪ ಅಧ್ಯಕ್ಷ ಪಟೇಲ್ ನಾರಾಯ ಣಸ್ವಾಮಿ, ಟಿ. ಟಿ .ನರಸಿಂಹಪ್ಪ ,ಚಿಂತಡಪಿ ಮಾರುತಿ, ರಾಜಕುಮಾರ್, ದಾಮೋದರ್, ಸಾಧಿಕ್ ಪಾಷ, ರಾಮಾಂಜಿ, ಮುರಳಿ, ದೇವರಾಜ್, ದರ್ಶನ್, ರಾಕೇಶ್, ರವಿಚಂದ್ರ, ವೆಂಕಟೇಶ್, ವರದರಾಜು ಸೇರಿದಂತೆ ಇತರರು ಹಾಜರಿದ್ದರು.