Chikkaballapur News: ಘಂಟಂವಾರಿಪಲ್ಲಿಯಲ್ಲಿ: ಗಮನ ಸೆಳೆದ ಮಕ್ಕಳ ಗ್ರಾಮ ಸಭೆ: ಸಮಸ್ಯೆಗಳ ಅನಾವರಣ
ಗ್ರಾಮ ಪಂಚಾಯತಿ ವ್ಯಾಪ್ತಿಯ 9 ಪ್ರಾಥಮಿಕ, 3 ಹಿರಿಯ ಪ್ರಾಥಮಿಕ, ಹಾಗೂ 1 ಪ್ರೌಢಶಾಲೆ ಒಟ್ಟು 13 ಶಾಲೆಗಳಿಂದ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಶಾಲೆಯ ಸಮಸ್ಯೆಗಳನ್ನು ಮುಕ್ತ ವಾಗಿ ಅದ್ಯಕ್ಷರು, ಪಿ.ಡಿ.ಓ ಹಾಗೂ ಗ್ರಾಮ ಪಂಚಾಯತಿ ಸದಸ್ಯರ ಗಮನ. ಸೆಳೆದು ಸಮಸ್ಯೆಗಳ ಪರಿಹಾರವನ್ನು ಕಂಡು ಕೊಂಡರು
ಬಾಗೇಪಲ್ಲಿ: ಕಸಬಾ ಹೋಬಳಿ ಘಂಟಂವಾರಿಪಲ್ಲಿಯಲ್ಲಿ ಗ್ರಾಮ ಪಂಚಾಯತಿ ಆವರಣದಲ್ಲಿ ಅದ್ಯಕ್ಷ ಹೆಚ್.ಎಸ್. ನವೀನ್ ಅವರ ನೇತೃತ್ವದಲ್ಲಿ ಮಂಗಳವಾರ ವಿವಿಧ ಶಾಲಾ ವಿದ್ಯಾರ್ಥಿಗಳು ತಮ್ಮ ಶಾಲೆಯ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಚರ್ಚಿಸಿ ಅಧಿಕಾರಿಗಳ ಗಮನ ಸೆಳೆದರು.
ಗ್ರಾಮ ಪಂಚಾಯತಿ ವ್ಯಾಪ್ತಿಯ 9 ಪ್ರಾಥಮಿಕ, 3 ಹಿರಿಯ ಪ್ರಾಥಮಿಕ, ಹಾಗೂ 1 ಪ್ರೌಢಶಾಲೆ ಒಟ್ಟು 13 ಶಾಲೆಗಳಿಂದ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಶಾಲೆಯ ಸಮಸ್ಯೆಗಳನ್ನು ಮುಕ್ತ ವಾಗಿ ಅದ್ಯಕ್ಷರು, ಪಿ.ಡಿ.ಓ ಹಾಗೂ ಗ್ರಾಮ ಪಂಚಾಯತಿ ಸದಸ್ಯರ ಗಮನ. ಸೆಳೆದು ಸಮಸ್ಯೆಗಳ ಪರಿಹಾರ ವನ್ನು ಕಂಡುಕೊಂಡರು.
ಮಕ್ಕಳು ಗ್ರಾಮ ಸಭೆಯಲ್ಲಿ ಶಿಕ್ಷಣ, ಆರೋಗ್ಯ, ಶೌಚಾಲಯ ಒದಗಿಸಿ, ಶಾಲಾ ಕಾಂಪೌಂಡ್, ಆಟದ ಮೈದಾನ, ಕೊಠಡಿ ರಿಪೇರಿ, ಅಡಿಗೆ ಮನೆ ರಿಪೇರಿ, ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ, ಶಾಲೆಗಳಿಗೆ ಸುಣ್ಣ ಬಣ್ಣ, ಗ್ರೀಸ್ ಬೋರ್ಡ್, ಡಿಸ್ಕ್ ರಿಪೇರಿ, ಬಸ್ ವ್ಯವಸ್ಥೆ ಕಲ್ಪಿಸಿ, ಸರ್ಕಾರಿ ಮಕ್ಕಳಿಗೆ ಸೈಕಲ್ ವಿತರಣೆ, ಶಾಲಾ ಆವರಣದಲ್ಲಿ, ಬೆಟ್ಟ ಗುಡ್ಡಗಳನ್ನು ತೆರವುಗೊಳಸಿ, ಹಾವುಗಳು ಕಾಟ, ಶಾಲಾ ಆವರಣದಲ್ಲಿ ಕುಡಕರ ಹಾವಳಿಯಿಂದ ಬೆಳಗ್ಗೆ ಬಿಯರ್ ಬಾಟಲ್ ಗಳ ದರ್ಶನ, ಸರ್ಕಾರಿ ಶಾಲಾ ಜಾಗವನ್ನು ರಕ್ಷಸಿ, ಭೂ ಮಾಪನ ಇಲಾಖೆ ವತಿಯಿಂದ ಶಾಲಾ ಜಾಗ ಅಳತೆ ಮಾಡಿ ಇ-ಖಾತೆ ಮಾಡಿಸಿ ಹೀಗೆ ಸರ್ಕಾರಿ ಶಾಲೆಗಳಲ್ಲಿ ಇವರು ಅನೇಕ ಸಮಸ್ಯೆಗಳನ್ನು ವಿದ್ಯಾರ್ಥಿಗಳ ಅನಾವರಣ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅದ್ಯಕ್ಷ ಹೆಚ್.ಎಸ್.ನವೀನ್ ಮಾತನಾಡಿ ‘ಪಂಚಾಯಿತಿ ಯೇ ಮಕ್ಕಳ ಬಳಿ ಹೋಗಿ ಅವರ ಸಮಸ್ಯೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಶಾಲೆಯ ಆವರಣ ದಲ್ಲಿ ಗ್ರಾಮ ಸಭೆ ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳು ಮುಕ್ತವಾಗಿ ಚರ್ಚಿಸಿದ್ದಾರೆ.
ವಿದ್ಯಾರ್ಥಿಗಳಿಂದ, ಶಾಲೆಯ ಕುಂದು ಕೊರತೆಗಳ ಬಗ್ಗೆ ಮಾಹಿತಿಯನ್ನು ಪಡೆದು ಗ್ರಾಮ ಪಂಚಾ ಯಿತಿ ಮಟ್ಟದಲ್ಲಿ ಸಾಧ್ಯವಾಗುವ ಕಾರ್ಯಗಳನ್ನು ಪಂಚಾಯಿತಿ ಮಟ್ಟದಲ್ಲಿ ಬಗೆಹರಿಸುತ್ತೇವೆ. ಹಾಗೂ ಇನ್ನುಳಿದ ಕಾರ್ಯಗಳ ಬಗ್ಗೆ ಉನ್ನತ ಮಟ್ಟದ ಪ್ರಾಧಿಕಾರದೊಂದಿಗೆ ಅಂದರೆ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಡೆಯಿಂದಾಗಲಿ, ಜಿಲ್ಲಾ ಪಂಚಾಯಿತಿ ಕಡೆಯಿಂದಾಗಲಿ, ಸಮನ್ವಯ ಸಾಧಿಸಿ ಕುಂದು ಕೊರತೆಗಳನ್ನು ಬಗೆಹರಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಪಿಡಿಓ ನಾರಾಯಣ ಸ್ವಾಮಿ, ಸದಸ್ಯರಾದ ರವಣಮ್ಮ ,ನಾರಾಯಣ ಸ್ವಾಮಿ, ಮಂಜುನಾಥ, ವೆಂಕಟೇಶ್, ಶ್ರೀನಿವಾಸ್, ಮುಖ್ಯ ಶಿಕ್ಷಕಿ ರಾಮಸುಬ್ಬಮ್ಮ.ಜಿ. ಶಿಕ್ಷಕರಾದ ನಾರಾಯಣ ಸ್ವಾಮಿ, ಜಿ.ವಿ.ಚಂದ್ರಶೇಖರ, ರಾಮಚಂದ್ರಪ್ಪ ವೆಂಕಟೇಶ್, ಟಿ.ಬಿ.ವೆಂಕಟ ರವಣಪ್ಪ, ರಾಧಮ್ಮ, ವೈ.ಎಸ್.ಪ್ರಮೀಳಾ ಮುನಿಯಪ್ಪ,ಮಂಜುಳಾ, ಪುಷ್ಪ, ಸುಭಾನ್, ಲೀಲಾವತಿ, ಶಿವಪ್ಪ,ನಾಗರಾಜು ಹಾಗೂ ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಹಾಜರಿದ್ದರು.