Protest for Inner Reservation: ಒಳಮೀಸಲಾತಿಗೆ ಆಗ್ರಹಿಸಿ ಮಾದಿಗ ಸಮುದಾಯ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ
ಸದಾಶಿವ ಆಯೋಗವು 2011ರ ಜನಗಣತಿಯನ್ನು ಆಧಾರವಾಗಿಟ್ಟುಕೊಂಡು ರಾಜ್ಯದ ಜನಸಂಖ್ಯೆ ಯ ರಾಜಕೀಯ ಪ್ರಾತಿನಿಧ್ಯದಲ್ಲಿ ಮತ್ತು ಶಿಕ್ಷಣ ಕ್ಷೇತ್ರದ ಪ್ರವೇಶಾತಿಗಳಲ್ಲಿ ಪ್ರಾತಿನಿಧ್ಯದ ಕೊರತೆಯನ್ನು ದಾಖಲಿಸಿದ್ದಾರೆ. ಇದರಂತೆ ಪರಿಶಿಷ್ಟ ಜಾತಿಗಳಲ್ಲಿ ಎಷ್ಟು ಮಂದಿ ಗುಡಿಸಲುಗಳಲ್ಲಿ ವಾಸಿಸುತ್ತಿದ್ದಾರೆ


ಚಿಕ್ಕಬಳ್ಳಾಪುರ: ಸರಕಾರವೇ 14 ಕೋಟಿ ಖರ್ಚು ಮಾಡಿ ತಯಾರಿಸಿರುವ ಸದಾಶಿವ ಆಯೋಗದ ವರದಿಯಂತೆ ಒಳಮೀಸಲಾತಿ ಜಾರಿ ಮಾಡುವ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯ ತಮ್ಮ ಬದ್ಧತೆಯನ್ನು ಪ್ರದರ್ಶಿಸಬೇಕು. ಇಲ್ಲವಾದಲ್ಲಿ ಕುರ್ಚಿಬಿಟ್ಟು ಇಳಿಸುವ ಕಾಲ ದೂರವಿಲ್ಲ ಎಂದು ದಸಂಸ ಸಂಘಟನಾ ಸಂಚಾಲಕ ಬಾಲಕುಂಟಹಳ್ಳಿ ಗಂಗಾಧರ್ ಎಚ್ಚರಿಕೆ ನೀಡಿದರು.
ನಗರ ಹೊರವಲಯ ಜಿಲ್ಲಾಡಳಿತ ಭವನದ ಎದುರು ಬುಧವಾರ ಮಾದಿಗ ಸಮುದಾಯಗಳ ಸ್ವಾಭಿಮಾನದ ಒಕ್ಕೂಟ ಒಳಮೀಸಲು ಜಾರಿಗಾಗಿ ನಡೆಸಿದ ಬೃಹತ್ ಹೋರಾಟವನ್ನು ಉದ್ದೇಶಿಸಿ ಮಾತನಾಡಿದರು.
ಸದಾಶಿವ ಆಯೋಗವು 2011ರ ಜನಗಣತಿಯನ್ನು ಆಧಾರವಾಗಿಟ್ಟುಕೊಂಡು ರಾಜ್ಯದ ಜನಸಂಖ್ಯೆ ಯ ರಾಜಕೀಯ ಪ್ರಾತಿನಿಧ್ಯದಲ್ಲಿ ಮತ್ತು ಶಿಕ್ಷಣ ಕ್ಷೇತ್ರದ ಪ್ರವೇಶಾತಿಗಳಲ್ಲಿ ಪ್ರಾತಿನಿಧ್ಯದ ಕೊರತೆ ಯನ್ನು ದಾಖಲಿಸಿದ್ದಾರೆ. ಇದರಂತೆ ಪರಿಶಿಷ್ಟ ಜಾತಿಗಳಲ್ಲಿ ಎಷ್ಟು ಮಂದಿ ಗುಡಿಸಲುಗಳಲ್ಲಿ ವಾಸಿಸುತ್ತಿದ್ದಾರೆ. ಎಷ್ಟು ಮಂದಿ ಉನ್ನತ ಶಿಕ್ಷಣ ಪಡೆದಿದ್ದಾರೆ.,ಶಿಕ್ಷಣವೇ ಪಡೆಯಲಾಗದವರು ಎಷ್ಟಿದ್ದಾರೆ. ಭೂರಹಿತರು, ನಿವೇಶನ ರಹಿತರು,ವಸತಿ ರಹಿತರು ಎಷ್ಟಿದ್ದಾರೆ.ಜನಸಂಖ್ಯೆಗೆ ತಕ್ಕಂತೆ ನೌಕರಿ ಪಡೆದವರು, ಸರಕಾರದ ಯಾವ ಸೌಲಭ್ಯಗಳೂ ಇಲ್ಲದವರು ಎಷ್ಟಿದ್ದಾರೆ. ಇದೇ ಮಾನ ದಂಡಗಳ ಆಧಾರದಲ್ಲಿ ವಿವಿಧ ಸಮುದಾಯಗಳ ಹಿಂದುಳಿದಿರುವಿಕೆಯನ್ನು ಗುರುತಿಸಲಾದ ತರ್ಕ ಬದ್ಧ ದತ್ತಾಂಶಗಳ ಆಧಾರದಲ್ಲಿ ೧೦೧ ಪರಿಶಿಷ್ಟ ಜಾತಿಗಳನ್ನು ೪ ಗುಂಪುಗಳಾಗಿ ವಿಂಗಡಿಸಿ ಜಾತಿ ಉಪಜಾತಿಗಳಿಗೆ ಸೂಕ್ತವಾದ ಒಳಮೀಸಲಾತಿಯನ್ನು ನೀಡಲು ಸದಾಶಿವ ಆಯೋಗ ಶಿಫಾರಸ್ಸು ಮಾಡಿದೆ ಎಂದರು.
ಅದರಂತೆ ಗ್ರೂಪ್ 1 ರಲ್ಲಿ ಮಾದಿಗ ಮತ್ತು ಸಂಬಂಧಿತ ಸಮುದಾಯಗಳಿಗೆ ಶೇ,೬ರಷ್ಟು, ಗ್ರೂಫ್ ೨ರಲ್ಲಿ ಹೊಲೆಯರು ಮತ್ತು ಸಂಬAಧಿತ ಸಮುದಾಯಗಳಿಗೆ ಶೇ,೫ರಷ್ಟು,ಗ್ರೂಫ್ ೩ರಲ್ಲಿ ಭೋವಿ, ಲಂಬಾಣಿ,ಕೊರಮ,ಕೊರಚ ಸಮುದಾಯಗಳಿಗೆ ಶೇ ೩ರಷ್ಟು, ಹಾಗೂ ಅಸ್ಪೃಷ್ಯರಲ್ಲೇ ಅಸ್ಪೃಶ್ಯ ರಾದ ಅಲೆಮಾರಿಗಳಿಗೆ ಶೇ.೧ರಷ್ಟು ಒಳಮೀಸಲಾತಿ ವರ್ಗೀಕರಣಕ್ಕಾಗಿ ಶಿಫಾರಸು ಮಡಿ ಸದಾಶಿವ ಆಯೋಗ ೬ ಜೂನ್ ೨೦೧೨ರಲ್ಲಿ ಸರಕಾರಕ್ಕೆ ವರದಿಯನ್ನು ಸಲ್ಲಿಸಿದೆ. ಅಲ್ಲಿಂದ ಈವರೆಗೆ ಎಲ್ಲಾ ಸರಕಾರಗಳೂ ಕಾಲಹರಣ ಮಾಡಿವೆ ವಿನಃ ಒಳಮೀಸಲಾತಿ ಜಾರಿ ಮಾಡಿಲ್ಲ. ಸುಪ್ರಿಂಕೋರ್ಟ್ ರಾಜ್ಯ ಸರಕಾರಗಳಿಗೆ ಅಧಿಕಾರ ನೀಡಿದ್ದರೂ ಜಾರಿಗೊಳಿಸಿಲ್ಲ ಎಂದರೆ ಇವರಿಗೆ ದಲಿತರ ಮೇಲೆ ಪ್ರೀತಿ ವಿಶ್ವಾಸ ಇಲ್ಲವೆಂದೇ ಅರ್ಥ ಎಂದು ಕಿರಿ ಕಾರಿದರು.
ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಸೂಕ್ತವಾದ ದತ್ತಾಂಶಗಳನ್ನು ಪರಿಗಣಿಸಿ ವಿಳಂಭ ನೀತಿ ಅನುಸರಿಸದೆ ರಾಜ್ಯ ಸರಕಾರ ಒಳಮೀಸಲಾತಿ ಜಾರಿ ಮಾಡಬೇಕು.ನ್ಯಾ,ನಾಗಮೋಹನ್‌ದಾಸ್ ಸಮಿತಿಗೆ ಸದಾಶಿವ ಆಯೋಗದ ದತ್ತಾಂಶಗಳಿರುವ ವರದಿಯ ಶಿಫಾರಸ್ಸುಗಳನ್ನು ಬಳಸಿಕೊಂಡು ವರದಿ ತಯಾರಿಸಲು ಸರಕಾರಕ್ಕೆ ಆದೇಶ ನೀಡಬೇಕು. ಸದಾಶಿವ ಆಯೋಗದ ವರ್ಗೀಕರಣದ ಶಿಫಾರಸ್ಸನ್ನು ಪರಿಗಣಿಸಿ ಹೆಚ್ಳವಾಗಿರುವ ಮೀಸಲಾತಿಯ ಶೇ.೧೭ರ ಅನುಪಾತದಲ್ಲಿ ಹೆಚ್ಚುವರಿ ಶೇ.೨ ಮೀಸಲಾತಿಯನ್ನು ಜಾತಿ ಸಂಖ್ಯೆಗೆ ಅನುಗುಣವಾಗಿ ಎಬಿಸಿಡಿ ವರ್ಗೀಕರಣದ ಗುಂಪುಗಳಿಗೆ ಸಮಾನವಾಗಿ ಹಂಚಬೇಕು.ಅದರಲ್ಲಿ ಮಾದಿಗ ಮತ್ತು ಸಂಬಂಧಿತ ಜಾತಿಗಳಿಗೆ ಶೇ ೭ರಷ್ಟು ಮೀಸ ಲಾತಿ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.
ಸಚಿವ ಸಂಪುಟವು ನಿರ್ಣಯಿಸಿದಂತೆ ಒಳಮೀಸಲಾತಿ ಜಾರಿ ಆಗುವವರೆಗೆ ಯಾವುದೇ ನೇಮಕಾತಿ ನಡೆಸಬಾರದು.ನಿಜವಾದ ೪೯ ಅಲೆಮಾರಿಗಳನ್ನು ಪ್ರತ್ಯೇಕವಾಗಿ ಗುರುತಿಸಿ ಶೇ.೧ಕ್ಕಿಂತ ಹೆಚ್ಚು ಒಳಮೀಸಲಾತಿ ನೀಡಿ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಸಮಾಜ ಕಲ್ಯಾಣ ಇಲಾಖೆಯ ಬಜೆಟ್‌ನಲ್ಲಿ ಮತ್ತು ಎಸ್ಸಿಎಸ್‌ಪಿ,ಟಿಎಸ್‌ಪಿ,ಅನುದಾನದಲ್ಲಿ ಮಾದಿಗ, ಸಮಗಾರ, ಡೋಹರ, ಮಚಗಾರ, ಜಾತಿಗಳ ಜನಸಂಖ್ಯೆಯ ಆಧಾರದಲ್ಲಿ ಪ್ರತ್ಯೇಕವಾಗಿ ಸಾವಿರ ಕೋಟಿ ಅನುದಾನ ಮೀಸಲಿಟ್ಟು ಅದೇ ವರ್ಷ ವೆಚ್ಚ ಮಾಡಲು ಕ್ರಮವಹಿಸಬೇಕು.ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರವಾದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.