ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʻಪಾಕಿಸ್ತಾನಕ್ಕೆ ಇನ್ನು ಮುಂದೆ ಕಾಲಿಡಲ್ಲ ಎಂದ ಡ್ಯಾರಿಲ್‌ ಮಿಚೆಲ್‌ʼ: ರಿಷದ್‌ ಹುಸೇನ್‌ ಅಚ್ಚರಿ ಹೇಳಿಕೆ!

ಭಾರತ ಹಾಗೂ ಪಾಕಿಸ್ತಾನ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿರುವ ಕಾರಣ ಪಾಕಿಸ್ತಾನ ಸೂಪರ್‌ ಲೀಗ್‌ ಟೂರ್ನಿಯನ್ನು ಮುಂದೂಡಲಾಗಿದೆ. ಇದರ ನಡುವೆ ವಿದೇಶಿ ಆಟಗಾರರು ಪಾಕಿಸ್ತಾನವನ್ನು ತೊರೆಯಲು ಎದುರು ನೋಡುತ್ತಿದ್ದಾರೆ. ಇದರ ನಡುವೆ ಬಾಂಗ್ಲಾದೇಶ ಸ್ಪಿನ್ನರ್‌ ರಿಷದ್‌ ಹುಸೇನ್‌, ಡ್ಯಾರಿಲ್‌ ಮಿಚೆಲ್‌ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ್ದಾರೆ.

ʻಪಾಕ್‌ಗೆ ಮುಂದೆಂದೂ ಕಾಲಿಡಲ್ಲ ಎಂದ ಮಿಚೆಲ್‌ʼ: ಬಾಂಗ್ಲಾ ಸ್ಪಿನ್ನರ್‌!

ಪಾಕಿಸ್ತಾನಕ್ಕೆ ಮುಂದೆಂದೂ ಕಾಲಿಡಲ್ಲ ಎಂದು ಡ್ಯಾರಿಲ್‌ ಮಿಚೆಲ್‌ ಹೇಳಿದ್ದಾರೆ.

Profile Ramesh Kote May 11, 2025 11:38 AM

ನವದೆಹಲಿ: ಭಾರತ ಹಾಗೂ ಪಾಕಿಸ್ತಾನ (IND vs PAK war) ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿರುವ ಕಾರಣ ಪಾಕಿಸ್ತಾನ ಸೂಪರ್‌ ಲೀಗ್‌ (PSL 2025) ಟೂರ್ನಿಯನ್ನು ಮುಂದೂಡಲಾಗಿದೆ. ಈ ಟೂರ್ನಿಯಲ್ಲಿ ವಿವಿಧ ತಂಡಗಳ ಪರ ಆಡುತ್ತಿರುವ ವಿದೇಶಿ ಆಟಗಾರರು ಭಯಬೀತರಾಗಿದ್ದು ಪಾಕಿಸಾನವನ್ನು ತೊರೆಯಲು ಎದುರು ನೋಡುತ್ತಿದ್ದಾರೆ. ಇದರ ನಡುವೆ ಈ ಟೂರ್ನಿಯ ಇನ್ನುಳಿದ ಪಂದ್ಯಗಳನ್ನು ಯುಎಇಯಲ್ಲಿ ಆಡಿಸಲು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಪ್ರಯತ್ನ ನಡೆಸುತ್ತಿದೆ. ಆದರೆ, ಎಮಿರೇಟ್ಸ್‌ ಕ್ರಿಕೆಟ್‌ ಮಂಡಳಿ ಇದಕ್ಕೆ ಒಪ್ಪಿಗೆ ನೀಡಿಲ್ಲ ಎಂದು ವರದಿಯಾಗಿದೆ. ಇದರ ನಡುವೆ ಬಾಂಗ್ಲಾದೇಶ ಸ್ಪಿನ್ನರ್‌ ರಿಷದ್‌ ಹುಸೇನ್‌ (Rishab Hossain) ಅಚ್ಚರಿ ಹೇಳಿಕೆಯೊಂದನ್ನು ನೀಡಿದ್ದಾರೆ. ನ್ಯೂಜಿಲೆಂಡ್‌ ಬ್ಯಾಟ್ಸ್‌ಮನ್‌ ಡ್ಯಾರಿಲ್‌ ಮಿಚೆಲ್‌ ಅವರು ಮುಂದೆಂದೂ ಪಾಕಿಸ್ತಾನಕ್ಕೆ ಕಾಲಿಡಲ್ಲ ಎಂದು ಹೇಳಿಕೊಂಡಿದ್ದಾರೆಂದು ಬಾಂಗ್ಲಾ ಸ್ಪಿನ್ನರ್‌ ತಿಳಿಸಿದ್ದಾರೆ.

ಕ್ರಿಕ್‌ಬಝ್‌ ಜೊತೆ ಮಾತನಾಡಿದ ರಿಷದ್‌ ಹುಸೇನ್‌, ಸ್ಯಾಮ್‌ ಬಿಲ್ಲಿಂಗ್ಸ್‌, ಡ್ಯಾರಿಲ್‌ ಮಿಚೆಲ್‌, ಕುಸಾಲ್‌ ಪೆರೆರಾ, ಡೇವಿಡ್‌ ವೀಸ್‌, ಟಾಮ್‌ ಕರನ್‌ ಸೇರಿದಂತೆ ವಿದೇಶಿ ಆಟಗಾರರು ಪಾಕಿಸ್ತಾನದಲ್ಲಿನ ಪರಿಸ್ಥಿತಿಯಿಂದಾಗಿ ಭಯ ಭೀತರಾಗಿದ್ದಾರೆ. ಇದರ ನಡುವೆ ಪಾಕಿಸ್ತಾನಕ್ಕೆ ಭವಿಷ್ಯದಲ್ಲಿ ಕಾಲಿಡುವುದಿಲ್ಲ ಎಂದು ಹೇಳಿಕೊಂಡಿದ್ದಾರೆ ಎಂಬ ಅಂಶವನ್ನು ರಿಷದ್‌ ಹುಸೇನ್‌ ಬಹಿರಂಗಪಡಿಸಿದ್ದಾರೆ.

PSL 2025: ಪಾಕಿಸ್ತಾನ ಸೂಪರ್‌ ಲೀಗ್‌ ತೊರೆಯಲು ಮುಂದಾದ ವಿದೇಶಿ ಆಟಗಾರರು!

"ಸ್ಯಾಮ್‌ ಬಿಲ್ಲಿಂಗ್ಸ್‌, ಡ್ಯಾರಿಲ್‌ ಮಿಚೆಲ್‌, ಕುಸಾಲ್‌ ಪೆರೆರಾ, ಡೇವಿಡ್‌ ವೀಸ್‌, ಟಾಮ್‌ ಕರನ್‌ ಸೇರಿದಂತೆ ವಿದೇಶಿ ಆಟಗಾರರೆಲ್ಲರೂ ಭಯ ಭೀತರಾಗಿದ್ದಾರೆ. ದುಬೈಗೆ ಬಂದಿಳಿದ ಬಳಿಕ ಡ್ಯಾರಿಲ್‌ ಮಿಚೆಲ್‌, ಪಾಕಿಸ್ತಾನಕ್ಕೆ ಭವಿಷ್ಯದಲ್ಲಿ ಎಂದಿಗೂ ಹೋಗುವುದಿಲ್ಲ ಎಂದು ಹೇಳಿದ್ದಾರೆ. ಅದರಲ್ಲಿಯೂ ಇಂಥಾ ಕಠಿಣ ಪರಿಸ್ಥಿತಿಯಲ್ಲಿ ನಾನೆಂದು ಪಾಕ್‌ಗೆ ಕಾಲಿಡಲ್ಲ ಎಂದು ತಿಳಿಸಿದ್ದಾರೆ. ಒಟ್ಟಾರೆ ಇವರೆಲ್ಲರೂ ಭಯ ಭೀತರಾಗಿದ್ದಾರೆ," ಎಂದು ಬಾಂಗ್ಲಾ ಸ್ಪಿನ್ನರ್‌ ಮಾಹಿತಿ ನೀಡಿದ್ದಾರೆ.

ಪಿಸಿಬಿ ಮನವಿಯನ್ನು ತಿರಸ್ಕರಿಸಿದ ಯುಎಇ

ಪಾಕಿಸ್ತಾನ ಸೂಪರ್‌ ಲೀಗ್‌ ಟೂರ್ನಿಯ ಇನ್ನುಳಿದ ಪಂದ್ಯಗಳನ್ನು ದುಬೈನಲ್ಲಿಆಡಿಸಲು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಬಯಸಿತ್ತು. ಆದರೆ ಪಿಸಿಬಿ ಮನವಿಯನ್ನು ಎಮಿರೇಟ್ಸ್‌ ಕ್ರಿಕೆಟ್‌ ಮಂಡಳಿ ನಿರಾಕರಿಸಿದೆ. ಇದರ ನಡಿವೆ ಐಸಿಸಿ ಅಧ್ಯಕ್ಷ ಜಯ ಶಾ ಮಹತ್ವದ ಪಾತ್ರವನ್ನು ವಹಿಸಿದ್ದಾರೆ ಎಂದು ಕ್ರಿಕ್‌ಬಝ್‌ ವರದಿ ಮಾಡಿದೆ. ಒಂದು ವೇಳೆ ಪಾಕಿಸ್ತಾನಕ್ಕೆ ಈ ಅವಕಾಶವನ್ನು ನೀಡಿದರೆ, ಇಮಿರೇಟ್ಸ್‌ ಕ್ರಿಕೆಟ್‌ ಮಂಡಳಿಗೆ ಐಸಿಸಿ ಹಾಗೂ ಬಿಸಿಸಿಐ ಕಡೆಯಿಂದ ಸಂಕಷ್ಟ ಎದುರಾಗಬಹುದು.

ಯುಎಇ ಮಹಿಳಾ ತಂಡದ 10 ಬ್ಯಾಟರ್‌ಗಳು ರಿಟೈರ್‌ ಔಟಾದರೂ ಕತಾರ್‌ ವಿರುದ್ದ 163 ರನ್‌ ಜಯ!

"ನಾವು ಬಿಸಿಸಿಐ ಮತ್ತು ಜೈ ಭಾಯ್‌ಗೆ ಋಣಿಯಾಗಿದ್ದೇವೆಮ," ಎಂದು ಇಸಿಬಿ ಅಧಿಕಾರಿಯೊಬ್ಬರು ಪಾಕಿಸ್ತಾನ ಸೂಪರ್‌ ಲೀಗ್‌ ಟೂರ್ನಿಗೆ ಆತಿಥ್ಯ ವಹಿಸುವುದಿಲ್ಲವೆಂದು ಕ್ರಿಕ್‌ಬಝ್‌ಗೆ ಖಚಿತಪಡಿಸಿದ್ದಾರೆ.

ಇಸಿಬಿ ಮೊದಲು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣವನ್ನು ಪಿಸಿಬಿಗೆ ಬಳಸಲು ನಿರಾಕರಿಸಿತ್ತು. ನಂತರ, ಪಿಎಸ್ಎಲ್ 2025 ಅನ್ನು ಆಯೋಜಿಸಲು ಪಿಸಿಬಿಯಿಂದ ದುಬಾರಿ ಮೊತ್ತದ ಶುಲ್ಕದ ಬೇಡಿಕೆಯನ್ನು ಇಟ್ಟಿತ್ತು. ಆದರೆ, ಈ ಮೊತ್ತವನ್ನು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಭರಿಸುವುದು ಕಷ್ಟವಾಗಿದೆ.