Actor Rajavardhan: ಪೈಲ್ವಾನ್ ಅವತಾರದಲ್ಲಿ ರಾಜವರ್ಧನ್; 'ಗಜರಾಮ' ಟ್ರೈಲರ್ ಔಟ್
ಸ್ಯಾಂಡಲ್‌ವುಡ್‌ನ ಭರವಸೆಯ ನಟರಲ್ಲಿ ಒಬ್ಬರೆನಿಸಿಕೊಂಡಿರುವ ರಾಜವರ್ಧನ್ ಅಭಿನಯದ 'ಗಜರಾಮ' ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. 2 ನಿಮಿಷ 46 ಸೆಕೆಂಡ್ ಇರುವ ಟ್ರೈಲರ್‌ನಲ್ಲಿ ಆ್ಯಕ್ಷನ್, ಎಮೋಷನ್, ಸೆಂಟಿಮೆಂಟ್, ಲವ್ ಅಂಶಗಳೇ ಗಮನ ಸೆಳೆಯುತ್ತಿವೆ.

ರಾಜವರ್ಧನ್.

ಬೆಂಗಳೂರು: ಕನ್ನಡ ಚಿತ್ರರಂಗದ ಭರವಸೆಯ ನಟ ರಾಜವರ್ಧನ್ (Actor Rajavardhan) ಅಭಿನಯದ ಬಹು ನಿರೀಕ್ಷಿತ 'ಗಜರಾಮ' (Gajarama) ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. 2 ನಿಮಿಷ 46 ಸೆಕೆಂಡ್ ಇರುವ ಟ್ರೈಲರ್ ಆ್ಯಕ್ಷನ್, ಎಮೋಷನ್, ಸೆಂಟಿಮೆಂಟ್, ಲವ್ ಅಂಶಗಳೇ ಗಮನ ಸೆಳೆಯುತ್ತಿವೆ. ರಾಜವರ್ಧನ್ ಕುಸ್ತಿಕಣದಲ್ಲಿ ಪೈಲ್ವಾನ್ ಆಗಿ ತೊಡೆ ತಟ್ಟಿದ್ದು, ಕಬೀರ್ ಸಿಂಗ್ ಖಳನಾಯಕನಾಗಿ ಅಬ್ಬರಿಸಿದ್ದಾರೆ. ಪೊಲೀಸ್ ಪಾತ್ರದಲ್ಲಿ ದೀಪಕ್ ಖದರ್ ತೋರಿಸಿದ್ದು, ತಪಸ್ವಿನಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ಮಾಸ್ ಕ್ವೀನ್ ರಾಗಿಣಿ ದ್ವಿವೇದಿ (Ragini Dwivedi) ಹೆಜ್ಜೆ ಹಾಕಿರುವ 'ಸಾರಾಯಿ ಶಾಂತಮ್ಮ' ಹಾಡು ಈಗಾಗಲೇ ಹಿಟ್ ಲೀಸ್ಟ್ ಸೇರಿದೆ. ಚಿತ್ರಕ್ಕೆ ಕೆ.ಎಸ್. ಚಂದ್ರಶೇಖರ್ ಛಾಯಾಗ್ರಾಹಣ, ಜ್ಞಾನೇಶ್ ಬಿ. ಮಠದ್ ಸಂಕಲನ, ಧನಂಜಯ್ ಅವರ ಕೊರಿಯೋಗ್ರಾಫಿ, ಚಿನ್ಮಯ್ ಭಾವಿಕೆರೆ, ಜಯಂತ್ ಕಾಯ್ಕಿಣಿ , ಚೇತನ್ ಕುಮಾರ್ ಅವರ ಸಾಹಿತ್ಯವಿದೆ. ಮೆಲೋಡಿ ಮಾಂತ್ರಿಕ ಮನೋಮೂರ್ತಿ ಸಂಗೀತ ಚಿತ್ರದ ತೂಕ ಹೆಚ್ಚಿಸಿದೆ.
ಒಂದಷ್ಟು ನಿರ್ದೇಶಕರ ಜತೆ ಅಸಿಸ್ಟೆಂಟ್, ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ಅನುಭವವಿರುವ ಸುನಿಲ್ ಕುಮಾರ್ ಅವರೀಗ 'ಗಜರಾಮ' ಸಿನಿಮಾ ಮೂಲಕ ಸ್ವತಂತ್ರ್ಯ ನಿರ್ದೇಶಕರಾಗಿ ಭಡ್ತಿ ಪಡೆಯುತ್ತಿದ್ದಾರೆ. 'ಬಾಂಡ್ ರವಿ' ಸಿನಿಮಾವನ್ನು ನಿರ್ಮಾಣ ಮಾಡಿರುವ ಲೈಫ್ ಲೈನ್ ಫಿಲ್ಮ್ ಪ್ರೊಡಕ್ಷನ್ ಅಡಿಯಲ್ಲಿ ನರಸಿಂಹಮೂರ್ತಿ 'ಗಜರಾಮ' ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಮಲ್ಲಿಕಾರ್ಜುನ್ ಕಾಶಿ ಮತ್ತು ಝೇವಿಯರ್ ಫರ್ನಾಂಡಿಸ್ ಸಹ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ. ಟ್ರೈಲರ್ ಮೂಲಕ ಆಮಂತ್ರಣ ಕೊಟ್ಟಿರುವ ಚಿತ್ರತಂಡ ಫೆ. 7ಕ್ಕೆ ಸಿನಿಮಾವನ್ನು ತೆರೆಗೆ ತರಲಿದೆ.
ಈ ಸುದ್ದಿಯನ್ನೂ ಓದಿ: Gana Movie: ಪ್ರಜ್ವಲ್ ದೇವರಾಜ್ ಅಭಿನಯದ ʼಗಣʼ ಚಿತ್ರ ಜ.31ಕ್ಕೆ ರಿಲೀಸ್
2017ರಲ್ಲಿ ತೆರೆಕಂಡ ʼನೂರೊಂದು ನೆನಪುʼ ಚಿತ್ರದ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಿದ ರಾಜವರ್ಧನ್ ಅವರು ಹಿರಿಯ ನಟ ಡಿಂಗ್ರಿ ನಾಗರಾಜ್ ಪುತ್ರ. ಕಳೆದ ವರ್ಷ ರಾಜವರ್ಧನ್ ಅಭಿನಯದ ʼಪ್ರಣಯಂʼ ಮತ್ತು ʼಹಿರಣ್ಯʼ ಸಿನಿಮಾಗಳು ತೆರೆ ಕಂಡಿದ್ದವು.