ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ramesh Aravind: ರಮೇಶ್ ವೃತ್ತಿ ಬದುಕಿಗೆ 40 ವರ್ಷ: ಭಾವುಕ ಕ್ಷಣಕ್ಕೆ ಸಾಕ್ಷಿಯಾಯಿತು ಸರಿಗಮಪ ಶೋ

ಸ್ಯಾಂಡಲ್‌ವುಡ್‌ನ ಸ್ಫುರದ್ರೂಪಿ ನಟ ರಮೇಶ್ ಅರವಿಂದ್ ಅವರ 40 ವರ್ಷಗಳ ಸಿನಿ ಸಾಧನೆಯನ್ನು ಸಂಗೀತ ವೇದಿಕೆ ಸಂಭ್ರಮಿಸಿದೆ. ಕನ್ನಡದ ಟಿ.ವಿ ಇತಿಹಾಸದಲ್ಲಿ ಅತೀ ಹೆಚ್ಚು ಜನಮನ್ನಣೆಗಳಿಸಿದ ಸಿಂಗಿಂಗ್ ರಿಯಾಲಿಟಿ ಶೋ ಸರಿಗಮಪಕ್ಕೆ ರಮೇಶ್ ಅರವಿಂಗ್ ಬಂದಿದ್ದಾರೆ.

ರಮೇಶ್ ವೃತ್ತಿ ಬದುಕಿಗೆ 40 ವರ್ಷ: ಭಾವುಕ ಕ್ಷಣಕ್ಕೆ ಸಾಕ್ಷಿಯಾಯಿತು ಸರಿಗಮಪ

Ramesh Aravind Sarigamapa

Profile Vinay Bhat Mar 6, 2025 4:14 PM

ಕನ್ನಡದ ಟಿ.ವಿ ಇತಿಹಾಸದಲ್ಲಿ ಅತೀ ಹೆಚ್ಚು ಜನಮನ್ನಣೆಗಳಿಸಿದ ಸಿಂಗಿಂಗ್ ರಿಯಾಲಿಟಿ ಶೋ ಅಂದರೆ ಅದು ಸರಿಗಮಪ. Zee ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಸರಿಗಮಪ' ಇತ್ತೀಚೆಗಷ್ಟೆ ತನ್ನ ಹೊಸ ಆವೃತ್ತಿಯೊಂದಿಗೆ ಕನ್ನಡಿಗರ ಮುಂದೆ ಮತ್ತೆ ಬಂದಿದೆ. ಈಗಾಗಲೇ ಸರಿಗಮಪ ಶೋಗೆ ಚಿತ್ರರಂಗದ ಅನೇಕ ಘಣ್ಯರು ಅತಿಥಿಗಳಾಗಿ ಬಂದು ಹೋಗಿದ್ದಾರೆ. ಇದೀಗ ವಿಶೇಷ ಅತಿಥಿಯಾಗಿ ಸ್ಯಾಂಡಲ್‌ವುಡ್‌ ತ್ಯಾಗರಾಜ ರಮೇಶ್‌ ಅರವಿಂದ್‌ ಅವರು ಬಂದಿದ್ದಾರೆ.

ಸ್ಯಾಂಡಲ್‌ವುಡ್‌ನ ಸ್ಫುರದ್ರೂಪಿ ನಟ ರಮೇಶ್ ಅರವಿಂದ್ ಅವರ 40 ವರ್ಷಗಳ ಸಿನಿ ಸಾಧನೆಯನ್ನು ಸಂಗೀತ ವೇದಿಕೆ ಸಂಭ್ರಮಿಸಿದೆ. ರಮೇಶ್ ಅವರು ವೃತ್ತಿ ಬದುಕಿನಲ್ಲಿ 40ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. 1986ರಲ್ಲಿ ರಮೇಶ್ ನಟಿಸಿದ್ದ ಮೊದಲ ಸಿನಿಮಾ ಸುಂದರ ಸ್ವಪ್ನಗಳು ತೆರೆಕಂಡಿತ್ತು. ಅಲ್ಲಿಂದ ಶುರುವಾಗ ರಮೇಶ್ ವೃತ್ತಿ ಬದುಕು ಕನ್ನಡದ ಜೊತೆಗೆ ತಮಿಳಿನಲ್ಲೂ ವಿಸ್ತಾರಗೊಂಡಿತ್ತು. ಹಿಂದಿ, ತೆಲುಗು, ಮಲಯಾಳಂ ಸಿನಿಮಾಗಳಲ್ಲೂ ರಮೇಶ್‌ ನಟಿಸಿದ್ದಾರೆ. ಕಮಲ್ ಹಾಸನ್ ಥರದ ಲೆಜೆಂಡ್ ಕಲಾವಿದರಿಗೆ ನಿರ್ದೇಶನ ಕೂಡ ಮಾಡಿದ್ದಾರೆ ರಮೇಶ್ ಅರವಿಂದ್.

ಇದೀಗ ಚಿತ್ರರಂಗದಲ್ಲಿ 4 ದಶಕಗಳ ಜರ್ನಿ ಮಾಡಿರುವ ನಟ ರಮೇಶ್‌ ಅರವಿಂದ್ ಅವರಿಗೆ ಟ್ರಿಬ್ಯೂಟ್ ನೀಡುವ ಸಲುವಾಗಿ ಸರಿಗಮಪ ಶೋನಲ್ಲಿ ಈ ವಾರ ರಮೇಶ್‌ ಸಿನಿಮಾಗಳ ಹಾಡುಗಳ ಹಬ್ಬ ನಡೆಯಲಿದೆ. ಮತ್ತೊಂದು ವಿಶೇಷತೆ ಎಂದರೆ ಈ ಶೋಗೆ ರಮೇಶ್ ಅವರ ಮಗಳು ಕೂಡ ಸರ್​ಪ್ರೈಸ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ರಮೇಶ್ ಅವರ ಪುತ್ರಿ ನಿಹಾರಿಕಾ ಅವರು ಸಾಮಾನ್ಯವಾಗಿ ಯಾವುದೇ ರಿಯಾಲಿಟಿ ಶೋಗಳಲ್ಲೂ ಕಾಣಿಸಿಕೊಳ್ಳುವುದಿಲ್ಲ. ಸಿನಿಮಾ ರಂಗದಿಂದ ದೂರ ಇರೋ ಇವರು ಎಂಎನ್‌ಸಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ವರ್ಷಗಳ ಹಿಂದೆ ಮದುವೆ ಕೂಡ ಆಗಿದ್ದರು. ತುಂಬ ಖಾಸಗಿಯಾಗಿ ಈ ಮದುವೆ ನಡೆದಿತ್ತು. ನಿಹಾರಿಕಾ ಅವರು ಅಷ್ಟಾಗಿ ಕ್ಯಾಮೆರಾ ಮುಂದೆ ಬರಲು ಇಷ್ಟಪಡೋದಿಲ್ಲ ಎಂದು ಸಾಕಷ್ಟು ಕಡೆ ರಮೇಶ್‌ ಅವರೇ ಹೇಳಿಕೊಂಡಿದ್ದಾರೆ. ಹೀಗಿದ್ದರೂ ಇವರು ಈ ಶೋಗೆ ಮೊದಲ ಬಾರಿ ಬಂದಿದ್ದಾರೆ.

ಸರಿಗಮಪ ವೇದಿಕೆಯಲ್ಲಿ ಅಮೆರಿಕ ಅಮೆರಿಕ ಸಿನಿಮಾ ನಾಯಕಿ ಹೇಮಾ ಪ್ರಭಾತ್, ಚಂದ್ರಮುಖಿ ಪ್ರಾಣಸಖಿ ಸಿನಿಮಾ ನಟಿ ಭಾವನಾ ರಾಮಯ್ಯ, ಗೀತರಚನೆಕಾರ ಕೆ ಕಲ್ಯಾಣ್‌ ಅವರು ಕಾಣಿಸಿಕೊಂಡು, ರಮೇಶ್‌ ಅರವಿಂದ್‌ ಜೊತೆಗಿನ ಸುಂದರ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ. ಪ್ರತಿಯೊಂದು ಚಿತ್ರದಲ್ಲೂ ಡಬಲ್ ಹೀರೋಗಳೆ ಇರ್ತಾರೆ. ಆ ಡಬಲ್ ಹೀರೋಗಳಲ್ಲಿ ಒಂದು ಸಂಗೀತವೇ ಹೀರೋ ಆಗಿರುತ್ತದೆ ಎಂದು ರಮೇಶ್ ಅರವಿಂದ್ ಹೇಳಿಕೊಂಡಿದ್ದಾರೆ.

Bhagya Lakshmi Serial: ಬೀದಿಗೆ ಬಿತ್ತು ಭಾಗ್ಯ ಕುಟುಂಬ?: ಸೀಝ್ ಆಗಲಿದೆ ಮನೆ