Bhagya Lakshmi Serial: ಬೀದಿಗೆ ಬಿತ್ತು ಭಾಗ್ಯ ಕುಟುಂಬ?: ಸೀಝ್ ಆಗಲಿದೆ ಮನೆ
ಭಾಗ್ಯಾ ತನ್ನ ತಂಗಿಗೆ ಕಾಲ್ ಮಾಡಿ.. ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸಿದೆ.. 50 ಸಾವಿರ ಅಂತ ಹೇಳಿದ್ದರು.. ಆದರೆ ಬರೀ 32 ಸಾವಿರ ಕೊಟ್ಟಿದ್ದಾರೆ ಅಷ್ಟೆ ಎಂದು ಹೇಳುತ್ತಾಳೆ.. ಸರಿಯಾದ ಸಮಯಕ್ಕೆ ದುಡ್ಡುಕೊಟ್ಟಿಲ್ಲ ಅಂದ್ರೆ ಎಲ್ಲರೂ ಬೀದಿಗೆ ಬೀಳುತ್ತಾರೆ ಎಂದು ಭಾಗ್ಯ ಅಂದುಕೊಳ್ಳುತ್ತಾಳೆ. ಅತ್ತ ನಮ್ಮ ಸಮಯ ಮುಗಿಯಿತು ಮನೆಯನ್ನು ಸೀಝ್ ಮಾಡೋಣ ಎಂದು ಅಧಿಕಾರಿಗಳು ಹೇಳಿದ್ದಾರೆ.

Bhagya Lakshmi Serial

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ ಭಾಗ್ಯಾಗೆ ಹೊಸ ಕೆಲಸ ಸಿಕ್ಕಿದರೂ ಅದರಲ್ಲಿ ನೆಮ್ಮಿದಿಯಿಲ್ಲದಂತಾಗಿದೆ. ದೇವಸ್ಥಾನದಲ್ಲಿ 250 ಮಂದಿಗೆ ಅಡುಗೆ ಮಾಡುವ ಜವಾಬ್ದಾರಿ ಭಾಗ್ಯಾಗೆ ಸಿಕ್ಕಿದೆ. ಇದರಿಂದ ಮನೆಯ ಇಎಮ್ಐ ಕಟ್ಟಿ ಸಾಲ ತೀರಿಸಲು ಭಾಗ್ಯಾ ಮುಂದಾಗುತ್ತಾಳೆ. ಆದರೆ, ಭಾಗ್ಯಾಗೆ ಈ ಕೆಲಸದಲ್ಲೂ ಕಷ್ಟಗಳ ಸರಮಾಲೆಯೇ ಬರುತ್ತಿದೆ. ಭಾಗ್ಯಾಳ ಸಹಾಯಕ್ಕಾಗಿ ಬಂದ ಅತ್ತೆ ಕುಸುಮಾ ಕಾಲಿಗೆ ಬಿಸಿ ಬಿಸಿ ಕುದಿಯುವ ನೀರು ಬಿದ್ದರೆ, ಕೆಲಸ ಆದ ಬಳಿಕ ಹೇಳಿದಷ್ಟು ಹಣ ಸಿಗಲಿಲ್ಲ. ಇದರಿಂದ ಭಾಗ್ಯಾ ಕುಟುಂಬ ಬೀದಿಗೆ ಬರುವ ಅಪಾಯದಲ್ಲಿದೆ.. ಅಧಿಕಾರಿಗಳಿ ಮನೆಯನ್ನು ಸೀಝ್ ಮಾಡಲು ಮುಂದಾಗಿದ್ದಾರೆ.
ಮನೆಯ ಲೋನ್ ತೀರಿಸಲು ಇಂದು ಕೊನೆಯ ದಿನ.. ನಾನು ಏನಾದರು ಮಾಡಿ 40,000 ರೂಪಾಯಿ ಅರೆಂಜ್ ಮಾಡುತ್ತೇನೆ ಎಂದು ಭಾಗ್ಯಾ ಮನೆಯಿಂದ ಹೊರಡುತ್ತಾಳೆ. ಕೆಲಸಕ್ಕಾಗಿ ದೇವರ ಮೊರೆ ಹೋಗುತ್ತಾಳೆ. ಈ ಸಂದರ್ಭ ದೇವಸ್ಥಾನದ ಪುರೋಹಿತರ ಸಹಾಯದಿಂದ 250 ಜನರಿಗೆ ಅಡುಗೆ ಮಾಡುವ ಕೆಲಸ ಸಿಗುತ್ತದೆ. ಇದಕ್ಕಾಗಿ ಭಾಗ್ಯಾ ಅತ್ತೆ ಕುಸುಮಾ ಹಾಗೂ ತಂಗಿಯನ್ನು ಕರೆಸಿಕೊಳ್ಳುತ್ತಾಳೆ. ಅದರಂತೆ ಮೂವರು ಸೇರಿಕೊಂಡು 250 ಜನರಿಗೆ ಅಡುಗೆ ಶುರುಮಾಡುತ್ತಾರೆ. ಆದರೆ, ಹೀಗೆ ಅಡುಗೆ ಮಾಡುವಾಗ ಕುಸುಮಾ ಕೈಯಿಂದ ಪಾತ್ರೆ ಜಾರಿ ಬಿಸಿ ನೀರು ಎಲ್ಲ ಕಾಲಿಗೆ ಚೆಲ್ಲುತ್ತದೆ. ನೋವು ತಡೆದುಕೊಳ್ಳಲಾಗದೆ ಕುಸುಮಾ ಜೋರಾಗಿ ಕಿರುಚಾಡುತ್ತಾರೆ.
ಭಾಗ್ಯ ಕೂಡಲೇ, ಪೂಜಾ ಜೊತೆ ಕುಸುಮಾಳನ್ನು ಆಸ್ಪತ್ರೆಗೆ ಕಳುಹಿಸಿದ್ದಾಳೆ. ಅಲ್ಲಿ ವೈದ್ಯರು ಕುಸುಮಾ ಕಾಲಿಗೆ ಔಷಧಿ ಹಚ್ಚಿದ್ದಾರೆ. ಅತ್ತೆ ಈಗ ಆರಾಮವಾಗಿದ್ದಾರೆ ಎಂದು ಪೂಜಾ ಹೇಳುತ್ತಾಳೆ. ಅದನ್ನು ಕೇಳಿ ಭಾಗ್ಯ ನಿಟ್ಟುಸಿರು ಬಿಡುತ್ತಾಳೆ. ಅತ್ತ ಭಾಗ್ಯಗೆ ಅಡುಗೆ ಕೆಲಸ ಕೊಟ್ಟಿದ್ದ ಯಜಮಾನರು, ಅಡುಗೆ ಕೆಲಸ ಏನಾಯಿತು ಎಂದು ನೋಡಲು ಬರುತ್ತಾರೆ. ಆದರೆ ಅವರು ಬರುವಷ್ಟರಲ್ಲಿ ಅಡುಗೆ ಕೆಲಸ ಯಾವುದೇ ಪ್ರಗತಿಯಾಗಿರುವುದಿಲ್ಲ. ಅದಕ್ಕೆ ಯಜಮಾನರು ಭಾಗ್ಯಗೆ ಗದರುತ್ತಾರೆ. ಆಗ ಭಾಗ್ಯ, ಇನ್ನೇನು ಅಡುಗೆ ಕೆಲಸ ಮುಗಿಸುತ್ತೇನೆ, ನಿಮ್ಮ ನಂಬಿಕೆ ಉಳಿಸುತ್ತೇನೆ ಎಂದು ಹೇಳುತ್ತಾಳೆ.
ಒಬ್ಬಂಟಿಯಾದ ಭಾಗ್ಯ, ಅಡುಗೆ ಕೆಲಸ ಮಾಡಲು ಇನ್ನಿಲ್ಲದ ಶ್ರಮ ಪಡುತ್ತಿರಬೇಕಾದರೆ, ಅವಳ ಗೆಳತಿಯರು ಎಲ್ಲರೂ ಅಲ್ಲಿಗೆ ಬರುತ್ತಾಳೆ. ಕಲರ್ಸ್ ಕನ್ನಡದ ಇತರೆ ಧಾರಾವಾಹಿಯ ನಾಯಕಿಯರೆಲ್ಲ ಇಲ್ಲಿ ಭಾಗ್ಯಾಗೆ ಸಹಾಯ ಮಾಡಲು ಬಂದಿದ್ದಾರೆ. ಅವರನ್ನು ಕಂಡು ಭಾಗ್ಯಗೆ ಮತ್ತಷ್ಟು ಬಲ ಬಂದಂತಾಗುತ್ತದೆ. ಹುಮ್ಮಸ್ಸಿನಿಂದ ಅವಳು ಕೆಲಸ ಶುರುಮಾಡುತ್ತಾಳೆ. ಅವಳ ಗೆಳತಿಯರು ಎಲ್ಲರೂ ಒಂದೊಂದು ಕೆಲಸ ಹಂಚಿಕೊಂಡು, ಭಾಗ್ಯಗೆ ಸಾಥ್ ನೀಡುತ್ತಾರೆ.
ಅತ್ತ ಭಾಗ್ಯ ಮನೆಯನ್ನು ಬ್ಯಾಂಕ್ ಅಧಿಕಾರಿಗಳು ಜಪ್ತಿ ಮಾಡಲು ಬಂದಿದ್ದಾರೆ. ಅವರು ಬರುವಷ್ಟರಲ್ಲಿ ತಾಂಡವ್ ಕೂಡ ಅಲ್ಲಿಗೆ ಬಂದಿದ್ದಾನೆ. ಬಂದವನೇ ಭಾಗ್ಯ ಎಲ್ಲಿ ಇನ್ನೂ ಕಾಣಿಸುತ್ತಿಲ್ಲ, ಮನೆಯನ್ನು ಹೇಗೆ ಉಳಿಸಿಕೊಳ್ಳುತ್ತಾಳೆ? ಅವಳಿಗೆ ದುಡ್ಡು ಎಲ್ಲಿಂದ ಬರುತ್ತದೆ ಎಂದು ಕೇಳುತ್ತಾನೆ. ಅದಕ್ಕೆ ಧರ್ಮರಾಜ್ ಅವನಿಗೆ ಗದರುತ್ತಾನೆ. ಎಷ್ಟುಹೊತ್ತು ಕಾದರೂ ಭಾಗ್ಯ ಬರುವುದು ಕಾಣುವುದಿಲ್ಲ. ಆಗ ಭಾಗ್ಯಾ ತನ್ನ ತಂಗಿಗೆ ಕಾಲ್ ಮಾಡಿ.. ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸಿದೆ.. 50 ಸಾವಿರ ಅಂತ ಹೇಳಿದ್ದರು.. ಆದರೆ ಬರೀ 32 ಸಾವಿರ ಕೊಟ್ಟಿದ್ದಾರೆ ಅಷ್ಟೆ ಎಂದು ಹೇಳುತ್ತಾಳೆ.. ಸರಿಯಾದ ಸಮಯಕ್ಕೆ ದುಡ್ಡುಕೊಟ್ಟಿಲ್ಲ ಅಂದ್ರೆ ಎಲ್ಲರೂ ಬೀದಿಗೆ ಬೀಳುತ್ತಾರೆ ಎಂದು ಭಾಗ್ಯ ಅಂದುಕೊಳ್ಳುತ್ತಾಳೆ. ಅತ್ತ ನಮ್ಮ ಸಮಯ ಮುಗಿಯಿತು ಮನೆಯನ್ನು ಸೀಝ್ ಮಾಡೋಣ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸದ್ಯ ಭಾಗ್ಯ 8 ಸಾವಿರ ರೂಪಾಯಿಯನ್ನ ಹೇಗೆ ಹೊಂದಿಸುತ್ತಾಳೆ?, ಮನೆಯನ್ನು ಸೀಝ್ ಮಾಡಲು ಹೊರಟ ಅಧಿಕಾರಿಗಳನ್ನು ಭಾಗ್ಯಾ ಹೇಗೆ ತಡೆಯುತ್ತಾಳೆ ಎಂಬುದು ಮುಂದಿನ ಎಪಿಸೋಡ್ನಲ್ಲಿ ನೋಡಬೇಕಿದೆ.
Dharma Keerthi Raj: ನಾನು ಕಷ್ಟ ಪಟ್ಟು ಖರೀದಿ ಮಾಡಿದ ಕಾರು ಮಾರಬೇಕಾಗಿ ಬಂತು: ಕಷ್ಟದ ದಿನ ನೆನೆದ ಧರ್ಮ