ಪ್ರಿ ವೆಡ್ಡಿಂಗ್ ಶೂಟ್‌ನಲ್ಲಿ ಹುಚ್ಚಾಟ: ನೀರಿನಲ್ಲಿ ಶವದಂತೆ ಮಲಗಿದ ಜೋಡಿ!
Viral Video: ಫ್ರಿ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿಕೊಳ್ಳುವುದು ಇಂದಿನ ಟ್ರೆಂಡ್. ಕೆಲವರಂತೂ ಸಮುದ್ರದ ಮಧ್ಯೆ, ಐತಿಹಾಸಿಕ ಸ್ಥಳದಲ್ಲಿ ಫೋಟೊ ಶೂಟ್ ಮಾಡಿಸಿಕೊಳ್ಳುವಂತಹ ಅತಿರೇಕದ ವರ್ತನೆಗೆ ಕೈ ಹಾಕುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ನೀರಿನಲ್ಲಿ ಶವದಂತೆ ಮಲಗಿ ಯುವ ಜೋಡಿ ಫೋಟೊ ಶೂಟ್ ಮಾಡಿಸಿದೆ. ಈ ವಿಡಿಯೊ ನೋಡಿದ ಆನೇಕರು ಕಿಡಿಕಾರಿದ್ದಾರೆ.
ಪ್ರಿ-ವೆಡ್ಡಿಂಗ್ ಶೂಟ್‌ನಲ್ಲಿ ಹುಚ್ಚಾಟ -
ನವದೆಹಲಿ, ಮಾ. 18: ಮದುವೆಯನ್ನು ವಿಭಿನ್ನವಾಗಿ ಆಯೋಜಿಸುವುದು ಹೆಚ್ಚಿನವರ ಕನಸು. ಅದರಲ್ಲೂ ಮದುವೆ ಮುಂಚಿತವಾಗಿ ಫ್ರಿ ವೆಡ್ಡಿಂಗ್ ಫೋಟೊ ಶೂಟ್ ಮಾಡಿಸಿಕೊಳ್ಳುವುದು ಇತ್ತೀಚಿನ ಟ್ರೆಂಡ್. ಸಮುದ್ರದ ಮಧ್ಯೆ, ಬೆಟ್ಟದ ತುದಿಯಲ್ಲಿ, ಐತಿಹಾಸಿಕ ಸ್ಥಳದಲ್ಲಿ ಫೋಟೊ ಶೂಟ್ ಮಾಡಿಸಿಕೊಳ್ಳುವಂತಹ ಅತಿರೇಕದ ವರ್ತನೆಗೂ ಕೆಲವರು ಮುಂದಾಗುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ ನೀರಿನಲ್ಲಿ ಶವದಂತೆ ಮಲಗಿ ಯುವ ಜೋಡಿ ಫೋಟೊ ಶೂಟ್ ಮಾಡಿಸಿದೆ. ಸದ್ಯ ಈ ವಿಡಿಯೊ (Viral Video) ನೋಡಿದ ಆನೇಕರು ಕಿಡಿಕಾರಿದ್ದಾರೆ.
ಕೆಸರು ಮಿಶ್ರಿತ ನೀರಿನಲ್ಲಿ ಭಾವಿ ದಂಪತಿ ಫೋಟೊ ಶೂಟ್ ಮಾಡಿಸಿದ್ದಾರೆ. ಕೆರೆಯ ನೀರಿನಲ್ಲಿ ಕಣ್ಣುಗಳನ್ನು ಮುಚ್ಚಿ ನೀರಿನ ಮೇಲೆ ತೇಲುತ್ತಿರುವುದು ವಿಡಿಯೊದಲ್ಲಿ ಕಂಡು ಬಂದಿದೆ. ಈ ನಡುವೆ ಕ್ಯಾಮೆರಾಮನ್‌ಗಳ ಗುಂಪು ಅವರ ಭಂಗಿಯನ್ನು ಸೆರೆಹಿಡಿಯಲು ಪ್ರಯತ್ನಿಸಿದೆ
ವಿಡಿಯೊ ನೋಡಿ:
Pre Wedding Shoots are getting too weird 😂😂 pic.twitter.com/xhVKjoZrVy
— Rosy (@rose_k01) March 18, 2026
ಈಗೀಗ ಪ್ರೀ ವೆಡ್ಡಿಂಗ್ ಶೂಟ್ ಇಲ್ಲದೆ ಮದುವೆಯೇ ನಡೆಯುವುದಿಲ್ಲ ಅನ್ನುವ ಮಟ್ಟಿಗೆ ತಲುಪಿ ಬಿಟ್ಟಿದೆ. ಸರೋವರದಂತೆ ಕಾಣುವ ಸ್ಥಳದಲ್ಲಿ ದಂಪತಿ ಮಲಗಿದ್ದಾರೆ. ಬಿಳಿ ಬಣ್ಣದ ಡ್ರೆಸ್ ತೊಟ್ಟು ಇಬ್ಬರೂ ರೋಮ್ಯಾಂಟಿಕ್ ಆಗಿ ಕಾಣಿಸಿದ್ದಾರೆ. ಕ್ಯಾಮೆರಾಮನ್‌ಗಳು ಕ್ರಿಯೇಟಿವ್ ಆಗಿ ಶಾಟ್ ತೆಗೆಯಲು ಪ್ರಯತ್ನಿಸಿದ್ದಾರೆ.
ಬೆಳಗ್ಗೆ 6:30ಕ್ಕೆ ಆಫೀಸ್‌ಗೆ ಹಾಜರಾಗಬೇಕು ಎಂಬ ಆದೇಶಕ್ಕೆ ಜೆನ್ ಝೀ ಉದ್ಯೋಗಿಯ ಖಡಕ್ ರೆಸ್ಪಾನ್ಸ್
ಈ ವಿಡಿಯೊವನ್ನು ರೋಸಿ ಎಂಬವರು ಹಂಚಿಕೊಂಡಿದ್ದಾರೆ. ಅವರು ವಿಡಿಯೊಕ್ಕೆ ವಿವಾಹಪೂರ್ವ ಚಿತ್ರೀಕರಣಗಳು ತುಂಬಾ ವಿಚಿತ್ರವಾಗುತ್ತಿವೆ ಎಂದು ಶೀರ್ಷಿಕೆ ನೀಡಿದ್ದಾರೆ. ನೆಟ್ಟಿಗರೊಬ್ಬರು, ಅವರು ಮದುವೆಯಾಗುತ್ತಿದ್ದಾರೆಯೇ ಅಥವಾ ಇದು ʼಕ್ರೈಮ್ ಪೆಟ್ರೋಲ್ʼ ಧಾರಾವಾಹಿಯ ಸಣ್ಣ ಒಂದು ನೋಟವೇ? ಎಂದು ಪ್ರಶ್ನಿಸಿದ್ದಾರೆ. ಅನೇಕರು ಈ ದೃಶ್ಯ ನೋಡಿ ಜೋಡಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.