Ranji Trophy quarterfinal: ಮುಂಬೈ ತಂಡ ಸೇರಿದ ಸೂರ್ಯಕುಮಾರ್, ದುಬೆ
ಕೆಲ ದಿನಗಳ ಹಿಂದಷ್ಟೇ ಮುಕ್ತಾಯ ಕಂಡಿದ್ದ ಇಂಗ್ಲೆಂಡ್ ವಿರುದ್ಧದ ತವರಿನ ಟಿ20 ಸರಣಿಯಲ್ಲಿ ಭಾರತ ತಂಡ ಸರಣಿ ಗೆಲುವು ಸಾಧಿಸಿದ್ದರೂ, ಸೂರ್ಯಕುಮಾರ್ ಯಾದವ್(Suryakumar Yadav) ಸಂಪೂರ್ಣ ವಿಫಲರಾಗಿದ್ದರು. ಆಡಿದ ಐದು ಇನಿಂಗ್ಸ್‌ಗಳಿಂದ ಕೇವಲ 28 ರನ್(0,12,14,0 ಹಾಗೂ 2) ಕಲೆ ಹಾಕಿದ್ದರು. ಇದರಲ್ಲಿ 2 ಸೂನ್ಯ ಕೂಡ ಒಳಗೊಂಡಿತ್ತು.
ಮುಂಬೈ: ರಣಜಿ ಟ್ರೋಫಿ 2024-25 ಕ್ವಾರ್ಟರ್ ಫೈನಲ್‌ಗಾಗಿ(Ranji Trophy quarterfinal) ಮುಂಬೈ ಕ್ರಿಕೆಟ್ ಅಸೋಸಿಯೇಷನ್ 18 ಸದಸ್ಯರ ತಂಡವನ್ನು ಹೆಸರಿಸಿದೆ. ಈ ತಂಡದಲ್ಲಿ ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಕೂಡ ಸ್ಥಾನ ಪಡೆದಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಮುಕ್ತಾಯ ಕಂಡಿದ್ದ ಇಂಗ್ಲೆಂಡ್ ವಿರುದ್ಧದ ತವರಿನ ಟಿ20 ಸರಣಿಯಲ್ಲಿ ಭಾರತ ತಂಡ ಸರಣಿ ಗೆಲುವು ಸಾಧಿಸಿದ್ದರೂ, ಸೂರ್ಯಕುಮಾರ್ ಯಾದವ್ ಸಂಪೂರ್ಣ ವಿಫಲರಾಗಿದ್ದರು. ಆಡಿದ ಐದು ಇನಿಂಗ್ಸ್‌ಗಳಿಂದ ಕೇವಲ 28 ರನ್(0,12,14,0 ಹಾಗೂ 2) ಕಲೆ ಹಾಕಿದ್ದರು. ಇದರಲ್ಲಿ 2 ಸೂನ್ಯ ಕೂಡ ಒಳಗೊಂಡಿತ್ತು.
ಮುಂಬೈ ತಂಡ ಕ್ವಾರ್ಟರ್ ಫೈನಲ್‌ನಲ್ಲಿ ಹರಿಯಾಣ ವಿರುದ್ಧ ಆಡಲಿದೆ. ಈ ಪಂದ್ಯ ಫೆಬ್ರವರಿ 8ರಂದು ಆರಂಭಗೊಳ್ಳಲಿದೆ. ಶ್ರೇಯಸ್ ಅಯ್ಯರ್ ಇಂಗ್ಲೆಂಡ್ ಏಕದಿನ ಸರಣಿಯ ಭಾಗವಾಗಿರುವ ಕಾರಣ ಅವರು ಮುಂಬೈ ತಂಡದಿಂದ ಬಿಡುಗಡೆಗೊಂಡಿದ್ದಾರೆ. ಇವರ ಸ್ಥಾನಕ್ಕೆ ಸೂರ್ಯಕುಮಾರ್ ಯಾದವ್ರನ್ನು ಬದಲಿಯಾಗಿ ಆಯ್ಕೆ ಮಾಡಲಾಗಿದೆ. ರಹಾನೆ ತಂಡದ ನಾಯಕನಾಗಿದ್ದಾರೆ. ಸೂರ್ಯಕುಮಾರ್ ಜತೆಗೆ ಶಿವಂ ದುಬೆ ಕೂಡ ಮುಂಬೈ ತಂಡಕ್ಕೆ ಮರಳಿದ್ದಾರೆ.
ಮುಂಬೈ ತಂಡ
ಅಜಿಂಕ್ಯ ರಹಾನೆ (ನಾಯಕ), ಆಯುಷ್ ಮ್ಹಾತ್ರೆ, ಅಂಗ್ಕ್ರಿಶ್ ರಘುವಂಶಿ, ಅಮೋಘ್ ಭಟ್ಕಳ್, ಸೂರ್ಯಕುಮಾರ್ ಯಾದವ್, ಸಿದ್ಧೇಶ್ ಲಾಡ್, ಶಿವಂ ದುಬೆ, ಆಕಾಶ್ ಆನಂದ್ (ವಿ.ಕೀ), ಹಾರ್ದಿಕ್ ತಮೋರ್, ಸೂರ್ಯಾಂಶ್ ಶೆಡ್ಜ್, ಶಾರ್ದೂಲ್ ಠಾಕೂರ್, ಶಮ್ಸ್ ಮುಲಾನಿ, ತನುಷ್ ಎ ಕೋಟ್ಯಾನ್, , ಸಿಲ್ವೆಸ್ಟರ್ ಡಿಸೋಜಾ, ರಾಯ್ಸ್ಟನ್ ಡಯಾಸ್, ಅಥರ್ವ ಅಂಕೋಲೆಕರ್, ಹರ್ಷ ತನ್ನಾ.
ಇದನ್ನೂ ಓದಿ ರಣಜಿ ಕಮ್‌ಬ್ಯಾಕ್‌ನಲ್ಲಿ ಕೊಹ್ಲಿ 6ಕ್ಕೆ ಕ್ಲೀನ್ ಬೌಲ್ಡ್
ಸೂರ್ಯುಕುಮಾರ್ ಫಾರ್ಮ್ ಬಗ್ಗೆ ಅಶ್ವಿನ್ ಪ್ರಶ್ನೆ
ಸತತ ಬ್ಯಾಟಿಂಗ್ ವೈಫಲ್ಯ ಕಾಣುತ್ತಿರುವ ಸೂರ್ಯಕುಮಾರ್ ಫಾರ್ಮ್ ಬಗ್ಗೆ ಮಾಜಿ ಆಟಗಾರ ಆರ್. ಅಶ್ವಿನ್ ಪ್ರಶ್ನೆ ಮಾಡಿದ್ದಾರೆ. "ಸಮಸ್ಯೆ ಇರುವುದು ಸೂರ್ಯಕುಮಾರ್ ಅವರ ಬ್ಯಾಟಿಂಗ್‌ನಲ್ಲಿ. ಸಂಜು ಸ್ಯಾಮ್ಸನ್ ಹಾಗೂ ಸೂರ್ಯಕುಮಾರ್ ಒಂದೇ ತರಹದ ಎಸೆತಗಳಲ್ಲಿ, ಒಂದೇ ಶಾಟ್‌ಗೆ, ಒಂದೇ ಫೀಲ್ಡ್ ಸೆಟ್‌ಗೆ, ಒಂದೇ ತಪ್ಪಿನಿಂದ ಔಟ್ ಆಗಿದ್ದಾರೆ" ಎಂದು ಆರ್ ಅಶ್ವಿನ್ ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ದೂರಿದ್ದಾರೆ.
'ಒಂದು ಅಥವಾ ಎರಡು ಪಂದ್ಯಗಳಲ್ಲಿ ಇದು ನಡೆದರೆ, ಇದನ್ನು ನಾನು ಅರ್ಥ ಮಾಡಿಕೊಳ್ಳುತ್ತೇನೆ. ಆದರೆ, ಇಲ್ಲಿ ಒಂದೇ ರೀತಿಯಲ್ಲಿ ಪದೇಪದೆ ಔಟ್ ಆದ ಪ್ರಶ್ನೆಗೆ ನಮ್ಮ ಬ್ಯಾಟ್ಸ್‌ಮನ್‌ಗಳು ಉತ್ತರಿಸಬೇಕಾದ ಅಗತ್ಯವಿದೆ' ಎಂದು ಅಶ್ವಿನ್ ಪ್ರಶ್ನಿಸಿದ್ದಾರೆ.