#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Ranji Trophy 2024-25: ಹರಿಯಾಣ ವಿರುದ್ಧ ಗೆದ್ದು ಸೆಮಿಫೈನಲ್‌ಗೇರಿದ ಮುಂಬೈ!

Mumbai vs Haryana Match Highlights: ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನ ತೋರಿದ ಮುಂಬೈ ತಂಡ, ಹರಿಯಾಣ ವಿರುದ್ದ ಕ್ವಾರ್ಟರ್‌ ಫೈನಲ್‌ನಲ್ಲಿ 152 ರನ್‌ಳಿಂದ ಭರ್ಜರಿ ಗೆಲುವು ಪಡೆದಿದೆ. ಆ ಮೂಲಕ 2024-25ರ ಸಾಲಿನ ರಣಜಿ ಟ್ರೋಫಿ ಟೂರ್ನಿಯ ಸೆಮಿಫೈನಲ್‌ಗೆ ಪ್ರವೇಶ ಮಾಡಿದೆ.

ಅಜಿಂಕ್ಯ ರಹಾನೆ ಶತಕ: ರಣಜಿ ಟ್ರೋಫಿ ಸೆಮಿಫೈನಲ್‌ಗೇರಿದ ಮುಂಬೈ!

Mumbai vs Haryana Match Highlights

Profile Ramesh Kote Feb 11, 2025 10:56 PM

ನವದೆಹಲಿ: ನಾಯಕ ಅಜಿಂಕ್ಯ ರಹಾನೆ ಅವರ ಅದ್ಭುತ ಶತಕ ಮತ್ತು ಶಾರ್ದುಲ್ ಠಾಕೂರ್ ಅವರ ಒಂಬತ್ತು ವಿಕೆಟ್‌ಗಳ ನೆರವಿನಿಂದ ಹಾಲಿ ಚಾಂಪಿಯನ್ ಮುಂಬೈ, ಹರಿಯಾಣವನ್ನು 152 ರನ್‌ಗಳಿಂದ ಸೋಲಿಸಿ ರಣಜಿ ಟ್ರೋಫಿ ಸೆಮಿಫೈನಲ್‌ಗೆ ಪ್ರವೇಶಿಸಿದೆ. ನಾಲ್ಕನೇ ದಿನದ ಬೆಳಿಗ್ಗೆ 88 ರನ್‌ಗಳಿಗೆ ರಹಾನೆ ತಮ್ಮ ಇನಿಂಗ್ಸ್‌ ಅನ್ನು ಪುನರಾರಂಭಿಸಿದರು ಮತ್ತು ಶೀಘ್ರದಲ್ಲೇ ತಮ್ಮ ಪ್ರಥಮ ದರ್ಜೆ ವೃತ್ತಿ ಜೀವನದ 41 ನೇ ಶತಕವನ್ನು ಪೂರ್ಣಗೊಳಿಸಿದರು. ಅವರು 180 ಎಸೆತಗಳನ್ನು ಎದುರಿಸಿ 13 ಬೌಂಡರಿಗಳನ್ನು ಒಳಗೊಂಡ 108 ರನ್ ಗಳಿಸಿದರು. ಅವರ ಅದ್ಭುತ ಬ್ಯಾಟಿಂಗ್‌ನಿಂದ ಮುಂಬೈ ತನ್ನ ಎರಡನೇ ಇನಿಂಗ್ಸ್‌ನಲ್ಲಿ 339 ರನ್‌ಗಳನ್ನು ಗಳಿಸಿತು ಮತ್ತು ಹರಿಯಾಣ ತಂಡಕ್ಕೆ 354 ರನ್‌ಗಳ ಗುರಿಯನ್ನು ನೀಡಿತು.

ಹರಿಯಾಣ ತಂಡವು ಬ್ಯಾಟಿಂಗ್‌ ವೈಫಲ್ಯ ಅನುಭವಿಸಿತು ಹಾಗೂ ಅವರ ಹೋರಾಟ ಅಷ್ಟೊಂದು ಪರಿಣಾಮಕಾರಿಯಾಗಿ ಕಾಣಲಿಲ್ಲ. ಅವರ ತಂಡ ಕೇವಲ 201 ರನ್ ಗಳಿಸಿ ಔಟಾಯಿತು. ಮುಂಬೈ ಪರ ಡಯಾಸ್ 39 ರನ್‌ಗಳಿಗೆ ಐದು ವಿಕೆಟ್ ಪಡೆದರೆ, ಶಾರ್ದುಲ್ ಠಾಕೂರ್ 26 ರನ್‌ಗಳಿಗೆ ಮೂರು ವಿಕೆಟ್ ಪಡೆದರು. ಶಾರ್ದೂಲ್ ಎರಡೂ ಇನಿಂಗ್ಸ್‌ಗಳಿಂದ ಒಟ್ಟು 9 ವಿಕೆಟ್‌ಗಳನ್ನು ಪಡೆದರು. ಇದರೊಂದಿಗೆ ಬಿಸಿಸಿಐ ಆಯ್ಕೆದಾರರ ಗಮನವನ್ನು ಸೆಳೆದಿದ್ದಾರೆ.

Ranji Trophy: ಸೌರಾಷ್ಟ್ರ ಸೋಲಿನ ಬೆನ್ನಲ್ಲೆ ವೃತ್ತಿಪರ ಕ್ರಿಕೆಟ್‌ಗೆ ವಿದಾಯ ಹೇಳಿದ ಶೆಲ್ಡನ್ ಜಾಕ್ಸನ್!

ಹರಿಯಾಣ ತಂಡದ ಪರ ಕೇವಲ ನಾಲ್ಕು ಬ್ಯಾಟ್ಸ್‌ಮನ್‌ಗಳು ಮಾತ್ರ ಎರಡಂಕಿ ವೈಯಕ್ತಿಕ ಮೊತ್ತವನ್ನು ಗಳಿಸಿದ್ದರು. ಆರಂಭಿಕರಾದ ಲಕ್ಷ್ಯ ದಲಾಲ್ (64) ಮತ್ತು ಸುಮಿತ್ ಕುಮಾರ್ (62) ಕೂಡ ಅರ್ಧಶತಕ ಗಳಿಸಿದರು. ಮುಂಬೈ ತಂಡವು ತನ್ನ ಮೊದಲ ಇನಿಂಗ್ಸ್‌ನಲ್ಲಿ 315 ರನ್ ಗಳಿಸಿ, ಹರಿಯಾಣವನ್ನು 301 ರನ್‌ಗಳಿಗೆ ಆಲೌಟ್ ಮಾಡಿದ ನಂತರ 14 ರನ್‌ಗಳ ಅಲ್ಪ ಮುನ್ನಡೆ ಸಾಧಿಸಿತ್ತು.

ಮಂಗಳವಾರ ಬೆಳಿಗ್ಗೆ ಮುಂಬೈ ನಾಲ್ಕು ವಿಕೆಟ್ ನಷ್ಟಕ್ಕೆ 278 ರನ್ ಗಳಿಸಿ ಎರಡನೇ ಇನಿಂಗ್ಸ್‌ ಆರಂಭಿಸಿತ್ತು. ಸುಮಿತ್ ಕುಮಾರ್ ಮತ್ತು ಅನ್ಶುಲ್ ಕಾಂಬೋಜ್ ಅವರ ಎಸೆತಗಳಲ್ಲಿ ಬೌಂಡರಿ ಬಾರಿಸುವ ಮೂಲಕ ರಹಾನೆ ತಮ್ಮ ಸ್ಕೋರ್ ಅನ್ನು 99 ರನ್‌ಗಳಿಗೆ ಕೊಂಡೊಯ್ದರು ಮತ್ತು ನಂತರ ಒಂದು ರನ್ ಗಳಿಸುವ ಮೂಲಕ ಈ ಋತುವಿನ ಮೊದಲ ಶತಕವನ್ನು ಪೂರೈಸಿದರು.

Ranji Trophy: ತಮ್ಮ 200ನೇ ಪ್ರಥಮ ದರ್ಜೆ ಪಂದ್ಯದಲ್ಲಿ ಶತಕ ಸಿಡಿಸಿದ ಅಜಿಂಕ್ಯ ರಹಾನೆ!

ಅಜಿಂಕ್ಯ ರಹಾನೆ ಔಟಾದ ನಂತರ, ಮುಂಬೈ ತಂಡದ ಇನಿಂಗ್ಸ್‌ ಕೊನೆಗೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಸೋಮವಾರ ಅಜೇಯರಾಗಿದ್ದ ಶಿವಂ ದುಬೆ (48) ಎರಡು ರನ್‌ಗಳಿಂದ ಅರ್ಧಶತಕವನ್ನು ತಪ್ಪಿಸಿಕೊಂಡರು. ಮುಂಬೈ ತಂಡವು 10 ಓವರ್‌ಗಳಲ್ಲಿ 25 ರನ್‌ಗಳಿಗೆ ಕೊನೆಯ ಐದು ವಿಕೆಟ್‌ಗಳನ್ನು ಕಳೆದುಕೊಂಡಿತು.

ಸೆಮಿಫೈನಲ್‌ಗೆ ವಿದರ್ಭ, ಗುಜರಾತ್‌

ಮತ್ತೊಂದು ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ವಿದರ್ಭ ತಂಡ, ತಮಿಳುನಾಡು ವಿರುದ್ಧ 198 ರನ್‌ಗಳಿಂದ ಗೆಲುವು ಪಡೆಯುವ ಮೂಲಕ ಸೆಮಿಫೈನಲ್‌ಗೆ ಪ್ರವೇಶ ಮಾಡಿದೆ. ಗುಜರಾತ್‌ ಹಾಗೂ ಸೌರಾಷ್ಟ್ರ ನಡುವಣ ಕ್ವಾರ್ಟರ್‌ ಫೈನಲ್‌ ಪಂದ್ಯ ಕೂಡ ನಾಲ್ಕನೇ ದಿನದಲ್ಲಿ ಅಂತ್ಯವಾಯಿತು. ಸೌರಾಷ್ಟ್ರ ವಿರುದ್ಧ ಗುಜರಾತ್‌ ತಂಡ ಇನಿಂಗ್ಸ್‌ ಮತ್ತು 98 ರನ್‌ಗಳಿಂದ ಗೆದ್ದು ಅಂತಿಮ ನಾಲ್ಕರ ಘಟ್ಟಕ್ಕೆ ಲಗ್ಗೆ ಇಟ್ಟಿದೆ.