Ranji Trophy: ರಾಹುಲ್, ಕಾವೇರಪ್ಪ ಆಗಮನದಿಂದ ತಂಡ ಬಲಿಷ್ಠವಾಗಿದೆ; ಅಗರ್ವಾಲ್
ಕ್ಯಾಚಿಂಗ್ ಸೆಷನ್‌ಗಾಗಿ ಎಂ. ಚಿನ್ನಸ್ವಾಮಿ ಸ್ಟೇಡಿಯಂ ಮೈದಾನಕ್ಕೆ ತೆರಳುವ ಮೊದಲು ರಾಹುಲ್(KL Rahul) ಕೆಎಸ್‌ಸಿಎ 'ಬಿ' ಮೈದಾನದಲ್ಲಿ ಸುಮಾರು 1 ಗಂಟೆಗೂ ಹೆಚ್ಚು ಕಾಲ ನೆಟ್ಸ್‌ನಲ್ಲಿ ಬ್ಯಾಟ್ ಮಾಡಿದರು. ಕಾವೇರಪ್ಪ(Kaverappa) ಸಂಪೂರ್ಣ ಫಿಟ್‌ನೆಸ್‌ನೊಂದಿಗೆ ಬೌಲಿಂಗ್ ಮಾಡಿದರು.

KL Rahul

ಬೆಂಗಳೂರು: ರಣಜಿ ಟೂರ್ನಿಗೆ(Ranji Trophy) ಕರ್ನಾಟಕ ತಂಡಕ್ಕೆ ಮರಳಿದ ಟೀಮ್ ಇಂಡಿಯಾ ಆಟಗಾರ ಕೆ.ಎಲ್. ರಾಹುಲ್ ತಂಡದ ಸಹ ಆಟಗಾರರೊಂದಿಗೆ ಅಭ್ಯಾಸ ಆರಂಭಿಸಿದ್ದಾರೆ. ರಾಹುಲ್ ಜತೆ ವಿದ್ವತ್ ಕಾವೇರಪ್ಪ ಕೂಡ ತಂಡ ಸೇರಿದ್ದಾರೆ. ಗುರುವಾರ(ಜ.30) ಚಿನ್ನಸ್ವಾಮಿಯಲ್ಲಿ ಆರಂಭವಾಗಲಿರುವ ಹರಿಯಾಣ ವಿರುದ್ಧದ ಮಹತ್ವದ ಎಲೈಟ್ 'ಸಿ' ಗುಂಪಿನ ಪಂದ್ಯದಲ್ಲಿ ಇವರಿಬ್ಬರು ಕಣಕ್ಕಿಳಿಯಲಿದ್ದಾರೆ.
5 ವರ್ಷದ ಬಳಿಕ ರಣಜಿಗೆ ಮರಳಿದ ರಾಹುಲ್ ಕರ್ನಾಟಕ ಪರ ಆರಂಭಿಕನಾಗಿ ಆಡಲಿದ್ದಾರೆ. ಇತ್ತೀಚೆಗೆ ಆಸ್ಟ್ರೇಲಿಯಾ ಪ್ರವಾಸದಲ್ಲಿ ರಾಹುಲ್ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ತೋರುವ ಮೂಲಕ ಗಮನಸೆಳೆದಿದ್ದರು. ಇದೀಗ ರಣಜಿಯಲ್ಲಿಯೂ ಉತ್ತಮವಾಗಿ ಆಡಿ ಇಂಗ್ಲೆಂಡ್ ವಿರುದ್ಧದ ಏಕದಿನ ಮತ್ತು ಚಾಂಪಿಯನ್ಸ್ ಟ್ರೋಫಿಗೂ ಮುನ್ನ ತಮ್ಮ ಸಾಮರ್ಥ್ಯ ಪ್ರದರ್ಶಿಸಬೇಕಿದೆ.
ರಾಹುಲ್ ತಂಡದ ಸೇರಿದ ಬಗ್ಗೆ ನಾಯಕ ಮಯಾಂಕ್ ಅಗರ್ವಾಲ್ ಸಂತಸ ವ್ಯಕ್ತಪಡಿಸಿದ್ದಾರೆ. 'ನಾನು ರಾಹುಲ್ ಜತೆ ಆಡುವುದನ್ನು ನಿಜವಾಗಿಯೂ ಆನಂದಿಸುತ್ತೇನೆ. ಅವರು ಖಂಡಿತವಾಗಿಯೂ ನಿರೀಕ್ಷಿತ ಬ್ಯಾಟಿಂಗ್ ನಡೆಸುತ್ತಾರೆ ಎಂಬ ನಂಬಿಕೆ ನನಗಿದೆ' ಎಂದು ಮಯಾಂಕ್ ಹೇಳಿದರು.
ಇದನ್ನೂ ಓದಿ Virat Kohli: 12 ವರ್ಷದ ಬಳಿಕ ರಣಜಿಯಲ್ಲಿ ವಿರಾಟ್ ಕೊಹ್ಲಿ ಆಟ
ಕ್ಯಾಚಿಂಗ್ ಸೆಷನ್‌ಗಾಗಿ ಎಂ. ಚಿನ್ನಸ್ವಾಮಿ ಸ್ಟೇಡಿಯಂ ಮೈದಾನಕ್ಕೆ ತೆರಳುವ ಮೊದಲು ರಾಹುಲ್ ಕೆಎಸ್‌ಸಿಎ 'ಬಿ' ಮೈದಾನದಲ್ಲಿ ಸುಮಾರು 1 ಗಂಟೆಗೂ ಹೆಚ್ಚು ಕಾಲ ನೆಟ್ಸ್‌ನಲ್ಲಿ ಬ್ಯಾಟ್ ಮಾಡಿದರು. ಕಾವೇರಪ್ಪ ಸಂಪೂರ್ಣ ಫಿಟ್‌ನೆಸ್‌ನೊಂದಿಗೆ ಬೌಲಿಂಗ್ ಮಾಡಿದರು.
ಕರ್ನಾಟಕ ತಂಡ
ಮಯಾಂಕ್ ಅಗರ್ವಾಲ್ (ನಾಯಕ), ಕೆಎಲ್ ರಾಹುಲ್, ಶ್ರೇಯಸ್ ಗೋಪಾಲ್ (ಉಪ ನಾಯಕ), ದೇವದತ್ ಪಡಿಕ್ಕಲ್, ಅನೀಷ್ ಕೆವಿ, ಸ್ಮರಣ್ ಆರ್, ಶ್ರೀಜಿತ್ ಕೆಎಲ್ (ವಿ.ಕೀ), ಅಭಿನವ್ ಮನೋಹರ್, ಹಾರ್ದಿಕ್ ರಾಜ್, ಪ್ರಸಿಧ್ ಕೃಷ್ಣ, ವಿದ್ವತ್ ಕಾವೇರಪ್ಪ, ವಿ ಕೌಶಿಕ್, ಅಭಿಲಾಷ್ ಶೆಟ್ಟಿ, ಯಶೋವರ್ಧನ್ ಪರಾಂತಪ್, ನಿಕಿನ್ ಜೋಸ್, ಸುಜಯ್ ಸತೇರಿ (ವಿ.ಕೀ), ಮೊಹ್ಸಿನ್ ಖಾನ್.