ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

ಕೊಹ್ಲಿ ಆಟ ನೋಡಲು ಪ್ರೇಕ್ಷಕರ ನೂಕುನುಗ್ಗಲು; ಹಲವರಿಗೆ ಗಾಯ

ಕೊಹ್ಲಿ ಆಡುವ ಕಾರಣದಿಂದಲೇ ದಿಲ್ಲಿ ಕ್ರಿಕೆಟ್‌ ಸಂಸ್ಥೆ 10 ಸಾವಿರ ಉಚಿತ ಟಿಕೆಟ್‌ ನೀಡಿತ್ತು. ಜತೆಗೆ ಪಂದ್ಯಕ್ಕೆ ಹೆಚ್ಚಿನ ಪೊಲೀಸ್‌ ಭದ್ರತೆ ಕೂಡ ಮಾಡಲಾಗಿತ್ತು. ಆದರೆ ನಿರೀಕ್ಷೆಗೂ ಮೀರಿದ ಪ್ರೇಕ್ಷಕರು ಬಂದ ಕಾರಣ ಕೆಲ ಕಾಲ ನೂಕುನುಗ್ಗಲು ಸಂಭವಿಸಿತು.

ಕೊಹ್ಲಿ ಆಟ ನೋಡಲು ಪ್ರೇಕ್ಷಕರ ನೂಕುನುಗ್ಗಲು;  ಹಲವರಿಗೆ ಗಾಯ

Delhi stadium

Profile Abhilash BC Jan 30, 2025 12:38 PM

ನವದೆಹಲಿ: 12 ವರ್ಷಗಳ ಬಳಿಕ ದೇಶೀಯ ಕ್ರಿಕೆಟ್‌ ಪಂದ್ಯ ಆಡುತ್ತಿರುವ ವಿರಾಟ್‌ ಕೊಹ್ಲಿಯ(Virat Kohli) ಆಟ ನೋಡಲು ಬಂದ ಅಭಿಮಾನಿಗಳು ನಡೆಸಿದ ನೂಕುನುಗ್ಗಲಿನಿಂದ ಹಲವು ಪ್ರೇಕ್ಷಕರು ಗಾಯಗೊಂಡ ಘಟನೆ ಗುರುವಾರ ನಡೆದಿದೆ.

ಅರುಣ್‌ ಜೇಟ್ಲಿ ಕ್ರಿಕೆಟ್‌ ಸ್ಟೇಡಿಯಂನ(Delhi stadium) ಗೇಟ್ 16 ರ ಬಳಿ ಪ್ರೇಕ್ಷಕರು ಪರಸ್ಪರ ತಳ್ಳಾಟ ನಡೆಸಿದರು. ಇದರಿಂದಾಗಿ ಹಲವು ಅಭಿಮಾನಿಗಳು ಮಾತ್ರವಲ್ಲದೆ ಭದ್ರತಾ ಸಿಬ್ಬಂದಿಗಳು ಹಾಗೂ ಪೊಲೀಸರು ಗಾಯಗೊಂಡರು.

ದೆಹಲಿಯ ಕ್ರಿಕೆಟ್ ನಿರ್ವಾಹಕರು ಇಷ್ಟು ದೊಡ್ಡ ಪ್ರಮಾಣದ ಪ್ರೇಕ್ಷಕರನ್ನು ನಿರೀಕ್ಷೆ ಮಾಡಿರಲಿಲ್ಲ. ಹೀಗಾಗಿ ಗೇಟ್ 16 ಸೇರಿದಂತೆ ಕೇವಲ ಮೂರು ಗೇಟ್‌ಗಳನ್ನು ಅಭಿಮಾನಿಗಳಿಗಾಗಿ ತೆರೆಯಲು ನಿಗದಿಪಡಿಸಲಾಗಿತ್ತು. ಆದರೆ, ನಿರೀಕ್ಷೆಗಿಂತ ಅಧಿಕ ಪ್ರೇಕ್ಷಕರು ಪಂದ್ಯ ನೋಡಲು ಬಂದ ಕಾರಣ ಪರಿಸ್ಥಿತಿ ಕೈ ಮೀರಿ ಹೋಯಿತು. ನೂಕುನುಗ್ಗಲು ಆರಂಭಗೊಂಡ ತಕ್ಷಣ ಅಂತಿಮವಾಗಿ ಹೆಚ್ಚುವರಿ ಗೇಟ್ ಅನ್ನು ತೆರೆಯಲಾಯಿತು.

ಕೊಹ್ಲಿ ಆಡುವ ಕಾರಣದಿಂದಲೇ ದಿಲ್ಲಿ ಕ್ರಿಕೆಟ್‌ ಸಂಸ್ಥೆ 10 ಸಾವಿರ ಉಚಿತ ಟಿಕೆಟ್‌ ನೀಡಿತ್ತು. ಜತೆಗೆ ಪಂದ್ಯಕ್ಕೆ ಹೆಚ್ಚಿನ ಪೊಲೀಸ್‌ ಭದ್ರತೆ ಕೂಡ ಮಾಡಲಾಗಿತ್ತು. ಆದರೆ ನಿರೀಕ್ಷೆಗೂ ಮೀರಿದ ಪ್ರೇಕ್ಷಕರು ಬಂದ ಕಾರಣ ಕೆಲ ಕಾಲ ನೂಕುನುಗ್ಗಲು ಸಂಭವಿಸಿತು.

ಪಂದ್ಯದ ವೇಳೆ ಅಭಿಮಾನಿಯೊಬ್ಬ ಭದ್ರತಾ ಕೋಟೆಯನ್ನು ಉಲ್ಲಂಘಿಸಿ ಮೈದಾನಕ್ಕೆ ನುಗ್ಗಿ ವಿರಾಟ್‌ ಕೊಹ್ಲಿ(Virat Kohli) ಪಾದಕ್ಕೆ ಬಿದ್ದು ನಮಸ್ಕರಿಸಿದ ಘಟನೆಯೂ ನಡೆಯಿತು. ಕೊಹ್ಲಿ ದೆಹಲಿ ಪರ ಫೀಲ್ಡಿಂಗ್‌ ನಡೆಸುತ್ತಿದ್ದ ವೇಳೆ ಭದ್ರತಾ ಸಿಬ್ಬಂದಿಯ ಕಣ್ತಪ್ಪಿಸಿ ಮೈದಾನಕ್ಕೆ ನುಗ್ಗಿ ಕೊಹ್ಲಿಯ ಕಾಲಿಗೆ ಬಿದ್ದು ನಮಸ್ಕರಿಸಿದ್ದಾನೆ. ತಕ್ಷಣವೇ ಭದ್ರತಾ ಸಿಬ್ಬಂದಿ ಆತನನ್ನು ಹಿಡಿದು ಮೈದಾನದಿಂದ ಕರೆದೊಯ್ದರು. ಇದೇ ವೇಳೆ ಕೊಹ್ಲಿ ಭದ್ರತಾ ಸಿಬ್ಬಂದಿಗಳ ಜತೆ ಆತನಿಗೆ ಏನೂ ಮಾಡದಂತೆ ಮನವಿ ಮಾಡಿಕೊಂಡರು.