2026ರ ವಿಧಾನಸಭಾ ಚುನಾವಣೆ: ಮೂರು ರಾಜ್ಯಗಳಲ್ಲಿ ಬಿಜೆಪಿಗೆ ಕಾದಿದೆ ಅಗ್ನಿ ಪರೀಕ್ಷೆ; ಈ ಬಾರಿಯಾದರೂ ಕಮಲ ಅರಳುತ್ತಾ?
ನಾಲ್ಕು ರಾಜ್ಯಗಳು, ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನ ಸಭಾ ಚುನಾವಣೆಗೆ ದಿನ ನಿಗದಿಯಾದ ಬೆನ್ನಲ್ಲೇ ಈ ಬಾರಿ ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿ ಭಾರಿ ಸವಾಲು ಎದುರಾಗಿದೆ. ಇಸ್ರೇಲ್, ಯುಎಸ್ ಸೇನಾ ಪಡೆಯು ಇರಾನ್ ಮೇಲೆ ನಡೆಸಿದ ದಾಳಿಯ ಪರಿಣಾಮ ಜಾಗತಿಕ ಮಟ್ಟದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಿದ್ದು, ಈ ನಡುವೆ ಬಿಜೆಪಿ ವಿಧಾನ ಸಭಾ ಚುನಾವಣೆಯನ್ನು ಎದುರಿಸಬೇಕಾಗಿದೆ.
ಸಂಗ್ರಹ ಚಿತ್ರ -
ನವದೆಹಲಿ: ಅಸ್ಸಾಂ (assam), ಪಶ್ಚಿಮ ಬಂಗಾಳ (west bengal), ತಮಿಳುನಾಡು (tamilnadu), ಕೇರಳ (kerala) ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯ (Puducherry) ಚುನಾವಣೆ ದಿನ ನಿಗದಿಯಾಗಿದ್ದು ಇದು ಬಿಜೆಪಿ (Bharatiya Janata Party) ಪಾಲಿಗೆ ಕಠಿಣ ಸವಾಲನ್ನು ಒಡ್ಡಲಿದೆ. ಇಸ್ರೇಲ್, ಯುಎಸ್ ಸೇನಾ ಪಡೆಯು ಇರಾನ್ ಮೇಲೆ ನಡೆಸಿದ ದಾಳಿಯ (Iran war) ಪರಿಣಾಮ ಜಾಗತಿಕ ಮಟ್ಟದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಿದ್ದು ಈ ನಡುವೆ ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿ ಭಾರಿ ಸವಾಲು ಎದುರಿಸಬೇಕಾಗಿದೆ. ಈ ಚುನಾವಣೆಯು ಐದು ರಾಜ್ಯಗಳಲ್ಲಿ ಬಿಜೆಪಿಯ ಪ್ರಭಾವ, ಚುನಾವಣಾ ನಿರೂಪಣೆ ಶಕ್ತಿ ಮತ್ತು ವಿರೋಧ ಪಕ್ಷದ ಕೋಟೆಗಳನ್ನು ಭೇದಿಸಲು ಅದು ಎಷ್ಟು ಸಮರ್ಥವಾಗಿದೆ ಎಂಬುದನ್ನು ಪರೀಕ್ಷಿಸಲಿದೆ.
ಇತ್ತೀಚಿಗೆ ಈ ಕುರಿತು ಮಾಹಿತಿ ನೀಡಿದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಕೇರಳಂ, ಪುದುಚೇರಿ ಮತ್ತು ಅಸ್ಸಾಂನಲ್ಲಿ ಒಂದೇ ಹಂತದಲ್ಲಿ ಏಪ್ರಿಲ್ 9ರಂದು ಮತದಾನ ನಡೆಯಲಿದೆ. ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್ 23 ಮತ್ತು 29ರಂದು, ತಮಿಳುನಾಡಿನಲ್ಲಿ ಏಪ್ರಿಲ್ 13ರಂದು ಮತದಾನ ನಡೆಯಲಿದೆ. ಎಲ್ಲಾ ಇದು ರಾಜ್ಯಗಳ ವಿಧಾನ ಸಭಾ ಚುನಾವಣಾ ಫಲಿತಾಂಶ ಮೇ 4ರಂದು ಹೊರ ಬೀಳಲಿದೆ ಎಂದು ತಿಳಿಸಿದರು.
ಪ್ರಧಾನಿ ಮೋದಿ ನಿರ್ಗಮಿಸಿದ 2 ದಿನಗಳ ನಂತರವೇ ಇರಾನ್ ಮೇಲೆ ದಾಳಿ ನಡೆಸಲು ಅವಕಾಶ ಸಿಕ್ಕಿತು: ಇಸ್ರೇಲ್ ಸ್ಪಷ್ಟನೆ
ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಈ ಮೂರು ಕ್ಷೇತ್ರದಲ್ಲಿ ತೀವ್ರ ಪ್ರತಿ ಸ್ಪರ್ಧೆ ಎದುರಾಗಲಿದೆ. ವಿರೋಧ ಪಕ್ಷದ ಭದ್ರ ಕೋಟೆಗಳಾದ ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಕೇರಳದಲ್ಲಿ ಬಿಜೆಪಿ ಪ್ರಭಾವ, ಅದರ ಚುನಾವಣಾ ಪ್ರಚಾರ ಎಷ್ಟರ ಮಟ್ಟಿಗೆ ಪ್ರಭಾವ ಬೀರುತ್ತದೆ ಎಂಬುದನ್ನು ಕಾದು ನೋಡಬೇಕು. ಇದು ಬಿಜೆಪಿಯ ಹೊಸ ಅಧ್ಯಕ್ಷ ನಿತಿನ್ ನಬಿನ್ ಅವರ ಪರೀಕ್ಷೆಯಾಗಿದೆ. ಆದರೆ ಎಂದಿನಂತೆ ಈ ಕ್ಷೇತ್ರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಚಾರ ಕಾರ್ಯಗಳನ್ನು ಮುನ್ನಡೆಸಲಿದ್ದಾರೆ.
ಹಿಂದೆ ಏನಾಗಿತ್ತು?
2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯ ಲೋಕಸಭಾ ಸ್ಥಾನಗಳ ಸಂಖ್ಯೆ 240ಕ್ಕೆ ಇಳಿದಿತ್ತು. 2014ರ ಚುನಾವಣೆ ಬಳಿಕ ನಡೆದ ಎಂಟು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಐದರಲ್ಲಿ ಗೆಲುವು ಸಾಧಿಸಿತ್ತು. ಒಡಿಶಾ, ಹರಿಯಾಣ, ಮಹಾರಾಷ್ಟ್ರ ಮತ್ತು ಅರುಣಾಚಲ ಪ್ರದೇಶದಲ್ಲಿ ಅದು ಗೆದ್ದಿದ್ದು, ಅದರ ಮಿತ್ರ ಪಕ್ಷವಾದ ಟಿಡಿಪಿ ಆಂಧ್ರಪ್ರದೇಶದಲ್ಲಿ ಗೆಲುವು ದಾಖಲಿಸಿತ್ತು. ಜಾರ್ಖಂಡ್, ಜಮ್ಮು ಮತ್ತು ಕಾಶ್ಮೀರ ಮತ್ತು ಸಿಕ್ಕಿಂನಲ್ಲಿ ವಿರೋಧ ಪಕ್ಷಗಳು ಗೆಲುವು ದಾಖಲಿಸಿದವು. ಕಳೆದ ವರ್ಷ ನಡೆದ ಚುನಾವಣೆಯಲ್ಲಿ ಬಿಜೆಪಿ ದೆಹಲಿಯಲ್ಲಿ ಗೆದ್ದಿದ್ದು,ಜನತಾದಳ (ಯುನೈಟೆಡ್) ಜೊತೆಗೆ ಬಿಹಾರದಲ್ಲಿ ಅಧಿಕಾರವನ್ನು ಉಳಿಸಿಕೊಂಡಿತು.
ಈ ಬಾರಿಯ ಸವಾಲುಗಳು
ಈ ಬಾರಿ ಬಿಜೆಪಿಗೆ ತೀವ್ರ ಸವಾಲು ಪಶ್ಚಿಮ ಬಂಗಾಳದಲ್ಲಿ ಎದುರಾಗಲಿದೆ. ಇಲ್ಲಿನ ಭದ್ರತೆ ಮತ್ತು ಆಡಳಿತಾತ್ಮಕ ವೈಫಲ್ಯಗಳ ಮೇಲೆ ಬಿಜೆಪಿ ಗಮನವಿಟ್ಟಿದ್ದು, ಇದೇ ವಿಷಯಗಳನ್ನು ಚುನಾವಣಾ ಪ್ರಚಾರಕ್ಕಾಗಿ ಬಳಸುವ ಸಾಧ್ಯತೆ ಇದೆ. 2021ರ ಚುನಾವಣೆಯಲ್ಲಿ ಅದು ಇದೇ ರೀತಿಯ ವಿಷಯಗಳನ್ನಿಟ್ಟುಕೊಂಡು 294 ಸ್ಥಾನಗಳಲ್ಲಿ 77 ಸ್ಥಾನಗಳನ್ನು ಗೆದ್ದಿತ್ತು. 2011ರಿಂದ ಇಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರವು ಅಧಿಕಾರದಲ್ಲಿದ್ದು, ಇಲ್ಲಿ ಆಡಳಿತ ವಿರೋಧಿ ಅಲೆ ಉಂಟಾಗುವ ನಿರೀಕ್ಷೆಯಲ್ಲಿ ಬಿಜೆಪಿ ಇದೆ. ಆದರೆ ಇಲ್ಲಿ ಬಿಜೆಪಿಗೆ ಇರುವ ದೊಡ್ಡ ಸವಾಲು ಎಂದರೆ ಮಮತಾ ಬ್ಯಾನರ್ಜಿಯವರನ್ನು ಎದುರಿಸುವ ಸಮರ್ಥ ನಾಯಕರಿಲ್ಲ.
ತಮಿಳುನಾಡು ಮತ್ತು ಕೇರಳದಲ್ಲಿ ಬಿಜೆಪಿ ಮೈತ್ರಿ ಕೂಟದ ಭಾಗವಾಗಿದೆ. ತಮಿಳುನಾಡಿನಲ್ಲಿ ಎಐಎಡಿಎಂಕೆ ನೇತೃತ್ವದ ಮೈತ್ರಿಕೂಟದಲ್ಲಿ ಕಿರಿಯ ಪಾಲುದಾರನಾಗಿದ್ದು, ಇಲ್ಲಿ ಮೈತ್ರಿಕೂಟ ಗೆದ್ದರೂ ಸಹ ಅದರ ಪ್ರಾಬಲ್ಯ ಹೆಚ್ಚುವುದಿಲ್ಲ.
4 ನಿಮಿಷದಲ್ಲೇ ಸ್ಥಳಕ್ಕೆ ಆಗಮಿಸಿ ವೃದ್ಧೆಯ ಪ್ರಾಣ ಉಳಿಸಿದ ಬ್ಲಿಂಕ್‌ಇಟ್ ಆಂಬ್ಯುಲೆನ್ಸ್
2021ರ ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ 234 ಸ್ಥಾನಗಳಲ್ಲಿ 66 ಸ್ಥಾನಗಳನ್ನು ಗೆದ್ದರೆ, ಬಿಜೆಪಿ ನಾಲ್ಕು ಮತ್ತು ಪಿಎಂಕೆ 5 ಸ್ಥಾನಗಳನ್ನು ಗೆದ್ದು ಎನ್‌ಡಿಎಯ ಒಟ್ಟು ಸ್ಥಾನವನ್ನು 75ಕ್ಕೆ ಏರಿಕೆ ಮಾಡಿತ್ತು. ಡಿಎಂಕೆ ನೇತೃತ್ವದ ಮೈತ್ರಿಕೂಟ 159 ಸ್ಥಾನಗಳನ್ನು ಗೆದ್ದಿತು.
ಇನ್ನು ಕೇರಳ ಸಿಪಿಐ-ಎಂನ ಪಿಣರಾಯಿ ವಿಜಯನ್ ಮುಷ್ಟಿಯಲ್ಲಿದೆ. ಇಲ್ಲಿ ಆಡಳಿತಾರೂಢ ಎಲ್‌ಡಿಎಫ್ ಸರ್ಕಾರಕ್ಕೆ ಪ್ರಮುಖ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಅನ್ನು ಹಿಂದಿಕ್ಕಲು ಬಿಜೆಪಿ ಪ್ರಯತ್ನಿಸುತ್ತಿದೆ. ಆದರೆ ಅದು ಇಲ್ಲಿ ಬಹುತೇಕ ಕಠಿಣವಾಗಿದೆ. 2021ರ ಚುನಾವಣೆಯಲ್ಲಿ ಇಲ್ಲಿನ 113 ಸ್ಥಾನಗಳಲ್ಲಿ ಬಿಜೆಪಿಗೆ ಯಾವುದನ್ನೂ ಗೆಲ್ಲುವುದು ಸಾಧ್ಯವಾಗಲಿಲ್ಲ.