Ranji Trophy: ಮೇಘಾಲಯ ವಿರುದ್ಧದ ಪಂದ್ಯಕ್ಕೆ ರೋಹಿತ್, ಜೈಸ್ವಾಲ್, ಶ್ರೇಯಸ್ ಅಲಭ್ಯ
ಕಳೆದ ಜಮ್ಮು ಮತ್ತು ಕಾಶ್ಮೀರ ವಿರುದ್ಧದ ಪಂದ್ಯದಲ್ಲಿ ಈ ಮೂರು ಆಟಗಾರರು ಮುಂಬೈ ತಂಡವನ್ನು ಪ್ರತಿನಿಧಿಸಿದ್ದರು. ಆದರೆ ನಿರೀಕ್ಷಿತ ಆಟ ಪ್ರದರ್ಶಿಸಲಿಲ್ಲ. ಹೀಗಾಗಿ ತಂಡ ಸೋಲು ಕಂಡಿತ್ತು.


ಮುಂಬಯಿ: ಗುರುವಾರದಿಂದ(ಜ.30) ಆರಂಭವಾಗಲಿರುವ ಮೇಘಾಲಯ ವಿರುದ್ಧದ ರಣಜಿ ಟ್ರೋಫಿಯ(Ranji Trophy) ಪಂದ್ಯದಿಂದ ಮುಂಬೈ ತಂಡದ ಆಟಗಾರರಾದ ರೋಹಿತ್ ಶರ್ಮಾ(Rohit Sharma), ಸಹ ಆಟಗಾರರಾದ ಯಶಸ್ವಿ ಜೈಸ್ವಾಲ್(Yashasvi Jaiswal) ಮತ್ತು ಶ್ರೇಯಸ್ ಅಯ್ಯರ್(Shreyas Iyer) ಅಲಭ್ಯರಾಗಿದ್ದಾರೆ.
ಕಳೆದ ಜಮ್ಮು ಮತ್ತು ಕಾಶ್ಮೀರ ವಿರುದ್ಧದ ಪಂದ್ಯದಲ್ಲಿ ಈ ಮೂರು ಆಟಗಾರರು ಮುಂಬೈ ತಂಡವನ್ನು ಪ್ರತಿನಿಧಿಸಿದ್ದರು. ಆದರೆ ನಿರೀಕ್ಷಿತ ಆಟ ಪ್ರದರ್ಶಿಸಲಿಲ್ಲ. ಹೀಗಾಗಿ ತಂಡ ಸೋಲು ಕಂಡಿತ್ತು. ಇದೀಗ ರೋಹಿತ್ ಸೇರಿ ಅಯ್ಯರ್ ಮತ್ತು ಜೈಸ್ವಾಲ್ ಇಂಗ್ಲೆಂಡ್ ವಿರುದ್ಧದ ಏಕದಿನ ಮತ್ತು ಚಾಂಪಿಯನ್ಸ್ ಟ್ರೋಫಿಗೆ ಹೆಚ್ಚಿನ ಅಭ್ಯಾಸ ನಡೆಸುವ ಸಲುವಾಗಿ ರಣಜಿ ಪಂದ್ಯದಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ಜಮ್ಮು ಮತ್ತು ಕಾಶ್ಮೀರ ಎದುರು ಸೋಲು ಕಂಡ ಕಾರಣದಿಂದ ಅಜಿಂಕ್ಯ ರಹಾನೆ ನೇತೃತ್ವದ ಮುಂಬೈ ತಂಡದ ಕ್ವಾರ್ಟರ್ ಫೈನಲ್ ಪ್ರವೇಶ ಕಠಿಣವಾಗಿಸಿದೆ. ಮೇಘಾಲಯ ವಿರುದ್ಧ ದೊಡ್ಡ ಅಂತರದಿಂದ ಗೆದ್ದರಷ್ಟೇ ನಾಕೌಟ್ ಕನಸು ಜೀವಂತವಾಗಿ ಉಳಿಯಲಿದೆ.
ಇದನ್ನೂ ಓದಿ Rohit Sharma: ಗವಾಸ್ಕರ್ ವಿರುದ್ಧ ಬಿಸಿಸಿಐಗೆ ರೋಹಿತ್ ದೂರು
ಕೊಹ್ಲಿ ಕಣಕ್ಕೆ
2012ರ ಬಳಿಕ ಮೊದಲ ಬಾರಿ ರಣಜಿ ಟ್ರೋಫಿ ಕ್ರಿಕೆಟ್ ಆಡಲಿರುವ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಇಂದು(ಮಂಗಳವಾರ) ದೆಹಲಿ ತಂಡದೊಂದಿಗೆ ಅಭ್ಯಾಸ ನಡೆಸಲಿದ್ದಾರೆ. ಕೆ.ಎಲ್.ರಾಹುಲ್ ಕೂಡ 5 ವರ್ಷಗಳ ಬಳಿಕ ರಣಜಿ ಕ್ರಿಕೆಟ್‌ಗೆ ಮರಳಿದ್ದಾರೆ. ಹರ್ಯಾಣ ವಿರುದ್ಧದ ರಣಜಿ ಪಂದ್ಯದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಕೊಹ್ಲಿ ಆಡುವುದನ್ನು ವೀಕ್ಷಿಸಲು ಸೂಮಾರು 10000ಕ್ಕೂ ಹೆಚ್ಚು ಪ್ರೇಕ್ಷಕರು ಕೋಟ್ಲಾ ಕ್ರೀಡಾಂಗಣಕ್ಕೆ ಆಗಮಿಸುವ ನಿರೀಕ್ಷೆ ಇದ್ದು, ಹೀಗಾಗಿ ದೆಹಲಿ ಕ್ರಿಕೆಟ್ ಸಂಸ್ಥೆ ಸೂಕ್ತ ವ್ಯವಸ್ಥೆ ಮತ್ತು ಭಾರೀ ಭದ್ರತೆ ಕಲ್ಪಿಸಿದೆ. ಪ್ರೇಕ್ಷಕರಿಗೆ ಸ್ಟೇಡಿಯಂನ ಮೂರು ಗ್ಯಾಲರಿಯನ್ನು ಮಾತ್ರ ತೆರೆಯಲಿದೆ.