Ranji Trophy: ಭಾರತ ತಂಡದಲ್ಲಿ ಸ್ಥಾನ ಸಿಗದ ಬಗ್ಗೆ ಕರುಣ್ ನಾಯರ್ ಪ್ರತಿಕ್ರಿಯೆ!
Karun Nair on India snub: ವಿಜಯ್ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಹೊರತಾಗಿಯೂ ಐಸಿಸಿ ಚಾಂಪಿಯನ್ಸ್ ಟ್ರೋಫಿ ಭಾರತ ತಂಡದಲ್ಲಿ ಕರುಣ್ ನಾಯರ್‌ಗೆ ಅವಕಾಶ ಸಿಕ್ಕಿರಲಿಲ್ಲ. ಈ ಬಗ್ಗೆ ವಿದರ್ಭ ನಾಯಕ ಪ್ರತಿಕ್ರಿಯೆ ನೀಡಿದ್ದಾರೆ. ಚಾಂಪಿಯನ್ಸ್ ಟ್ರೋಫಿಗೆ ನಾನು ನಿರೀಕ್ಷೆ ಮಾಡಿರಲಿಲ್ಲ ಎಂದು ಹೇಳಿದ್ದಾರೆ.
ನವದೆಹಲಿ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಭಾರತ ತಂಡದಲ್ಲಿ ಸ್ಥಾನ ಸಿಗದ ಹೊರತಾಗಿಯೂ ಟೆಸ್ಟ್ ತಂಡಕ್ಕೆ ಮರಳಬೇಕೆಂಬ ಇಂಗಿತವನ್ನು ಹೊಂದಿದ್ದೇನೆಂದು ವಿದರ್ಭ ತಂಡದ ಬ್ಯಾಟ್ಸ್‌ಮನ್ ಕರುಣ್ ನಾಯರ್ ಹೇಳಿಕೊಂಡಿದ್ದಾರೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಸ್ಥಾನ ಸಿಗುವ ಬಗ್ಗೆ ನನಗೆ ಯಾವುದೇ ನಿರೀಕ್ಷೆ ಇರಲಿಲ್ಲ. ಆದರೆ, ಟೆಸ್ಟ್ ತಂಡಕ್ಕೆ ಮರಳುವ ಬಗ್ಗೆ ವಿಶ್ವಾಸವಿದೆ ಎಂದು ಹೇಳಿಕೊಂಡಿದ್ದಾರೆ.
ಭಾರತ ತಂಡದ ಆಯ್ಕೆಯ ಸಂದರ್ಭದಲ್ಲಿ ಕರುಣ್ ನಾಯರ್ ಅವರ ಹೆಸರನ್ನು ಚರ್ಚೆ ನಡೆಸಲಾಗಿತ್ತು ಎಂದು ಬಿಸಿಸಿಐ ಚೀಫ್ ಸೆಲೆಕ್ಟರ್ ಹೇಳಿದ್ದರು. ಅಂದ ಹಾಗೆ ಕರುಣ್ ನಾಯರ್ ಅವರು 2017ರಲ್ಲಿ ಭಾರತ ತಂಡದ ಪರ ಕೊನೆಯ ಬಾರಿ ಆಡಿದ್ದರು. ಅವರು ಆಡಿರುವ ಆರು ಟೆಸ್ಟ್ ಪಂದ್ಯಗಳಿಂದ 62.33ರ ಸರಾಸರಿಯಲ್ಲಿ 374 ರನ್‌ಗಳನ್ನು ಗಳಿಸಿದ್ದಾರೆ. 303 ರನ್‌ಗಳು ಇವರ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. ಭಾರತ ಏಕದಿನ ತಂಡದಲ್ಲಿಯೂ ಕರುಣ್ ನಾಯರ್ ಆಡಿದ್ದಾರೆ ಹಾಗೂ 46 ರನ್ ಗಳಿಸಿದ್ದಾರೆ.
ಸ್ಪೋರ್ಟ್ಸ್ ಟುಡೇ ಜೊತೆ ಮಾತನಾಡಿದ ಕರುಣ್ ನಾಯರ್, "ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಟೂರ್ನಿಗೂ ಮುನ್ನ ನಾನು ಯಾವುದರ ಬಗ್ಗೆಯೂ ಚಿಂತಿಸಿರಲಿಲ್ಲ. ಭಾರತ ತಂಡದಲ್ಲಿ ಆಡುವುದು ಸ್ವಲ್ಪ ದೂರವಿದೆ ಎಂದು ನಾನು ಭಾವಿಸಿದ್ದೆ. ಆದರೆ, ನಿಮ್ಮಲ್ಲಿ ಕನಸಿದೆ, ನಿಮ್ಮದೇ ಆದ ಆಲೋಚನೆ ನಿಮಗಿದೆ ಹಾಗೂ ನೀವು ದೊಡ್ಡ ಸಂಗತಿಗಳನ್ನು ಸಾಧಿಸುವುದು ಇದೆ. ಆದರೆ, ನೀವು ಇದನ್ನು ಚಿಂತಿಸುವುದಿಲ್ಲ. ನಾನು ಇದನ್ನು ಸಾಧಿಸುತ್ತೇನೆಯೇ? ನಾನು ಮಾಡುತ್ತೇನೆಂದು ನೀವು ಯೋಚಿಸಿದ್ದೀರಾ? ಇದು ಯಾವಾಗಲೂ ನಿಮ್ಮ ತಲೆಯಲ್ಲಿ ಪ್ರಶ್ನೆ ಇದ್ದೇ ಇರುತ್ತದೆ," ಎಂದು ಹೇಳಿದ್ದಾರೆ.
MAH vs VID: 44 ಎಸೆತಗಳಲ್ಲಿ ಅಜೇಯ 88 ರನ್ ಸಿಡಿಸಿದ ಕನ್ನಡಿಗ ಕರುಣ್ ನಾಯರ್!
ವಿಜಯ್ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಕರುಣ್ ನಾಯರ್ ಅವರು ಎಂಟು ಪಂದ್ಯಗಳಿಂದ 779 ರನ್‌ಗಳನ್ನು ಕಲೆ ಹಾಕಿದ್ದರು. ಆ ಮೂಲಕ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದ್ದರು. ಅವರು ಐದು ಶತಕಗಳನ್ನು ಕೂಡ ಸಿಡಿಸಿದ್ದರು. ಆದರೆ, ಭಾರತ ಏಕದಿನ ತಂಡದಲ್ಲಿ ಕನ್ನಡಿಗನಿಗೆ ಅವಕಾಶ ಸಿಗಲಿಲ್ಲ. ಆದರೂ ಕರುಣ್ ನಾಯರ್ ಬೇಸರ ವ್ಯುಕ್ತಪಡಿಸದೆ, ಭಾರತ ತಂಡಕ್ಕೆ ಮರಳುತ್ತೇನೆಂಬ ವಿಶ್ವಾಸವನ್ನು ಹೊಂದಿದ್ದಾರೆ.
"ಭಾರತ ತಂಡದ ಪರ ಟೆಸ್ಟ್ ಕ್ರಿಕೆಟ್ ಆಡಬೇಕೆಂಬ ಕನಸು ನನಗೆ ಇನ್ನೂ ಇದೆ. ನಾನು ಇದನ್ನು ಸಾಕಷ್ಟು ಸಂದರ್ಶನಗಳಲ್ಲಿ ಹೇಳಿದ್ದೇನೆ. ನನ್ನ ಮನಸಿನಲ್ಲಿ ಇರುವುದು ಇದೊಂದೆ ಅಂಶ. ಐಸಿಸಿ ಚಾಂಪಿಯನ್ಸ್ ಟ್ರೋಫಿ ತಂಡ ಅಥವಾ ಬೇರೆ ಯಾವುದೇ ತಂಡಕ್ಕೆ ಆಯ್ಕೆಯಾಗಬೇಕೆಂಬ ನಿರೀಕ್ಷೆ ನನಗಿರಲಿಲ್ಲ. ಇದದ ಬಗ್ಗೆ ನನಗೆ ಖುಷಿ ಇದೆ," ಎಂದು ಕರುಣ್ ನಾಯರ್ ತಿಳಿಸಿದ್ದಾರೆ.
ವಿಜಯ್ ಹಝಾರೆ ಟ್ರೋಫಿ ಟೂರ್ನಿಯಲ್ಲಿ ವೈಯಕ್ತಿಕ ಗರಿಷ್ಠ ರನ್ ಗಳಿಸಿದ ಬಳಿಕ ಕರುಣ್ ನಾಯರ್ ಅವರನ್ನು ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಗುಣಗಾನ ಮಾಡಿದ್ದಾರೆ. ತಮ್ಮ ಬಾಲ್ಯದ ನೆಚ್ಚಿನ ಆಟಗಾರನ ಹೊಗಳಿಕೆಯ ಮಾತುಗಳಿಂದ ತುಂಬಾ ಸಂತೋಷವಾಗಿದೆ ಎಂದು ವಿದರ್ಭ ನಾಯಕ ಹೇಳಿಕೊಂಡಿದ್ದಾರೆ.
Ranji Trophy: ಕರ್ನಾಟಕ ತಂಡದಲ್ಲಿ ಕೆಎಲ್ ರಾಹುಲ್‌ರ ಬ್ಯಾಟಿಂಗ್ ಕ್ರಮಾಂಕ ಹೆಸರಿಸಿದ ಕೋಚ್!
"ನಿಮ್ಮ ಬಾಲ್ಯದ ಹೀರೋ ಅವರಿಂದ ಮೆಚ್ಚುಗೆಯನ್ನು ಪಡೆಯುವುದು ಇದುವರೆಗಿನ ಶ್ರೇಷ್ಠ ಭಾವನೆಗಳಲ್ಲಿ ಒಂದಾಗಿದೆ. ಅದೊಂದು ಅದ್ಭುತ ಕ್ಷಣವಾಗಿತ್ತು. ಆ ಸಂದೇಶವನ್ನು ಹೊರಹಾಕಲು ಸಮಯ ತೆಗೆದುಕೊಂಡಿದ್ದಕ್ಕಾಗಿ ನಾನು ಅವರಿಗೆ ನಿಜವಾಗಿಯೂ ಕೃತಜ್ಞನಾಗಿದ್ದೇನೆ. ಅವರಿಂದ ಆ ರೀತಿಯ ಮಾತುಗಳನ್ನು ಪಡೆದಿದ್ದಕ್ಕೆ ನಾನು ನಿಜವಾಗಿಯೂ ಆಶೀರ್ವದಿಸಿದ್ದೇನೆ. ಆದರೆ ಮತ್ತೆ, ನಾನು ಪ್ರದರ್ಶನವನ್ನು ಮುಂದುವರಿಸಬೇಕಾಗಿದೆ. ಪ್ರತಿ ಪಂದ್ಯ ಮತ್ತು ಪ್ರತಿ ಇನಿ ಗ್ಸ್‌ಗಳು ಎಣಿಕೆಯಾಗುತ್ತವೆ, ಆದ್ದರಿಂದ ಅದು ನನ್ನ ಗಮನವಾಗಿ ಉಳಿದಿದೆ," ಎಂದು ನಾಯರ್ ತಿಳಿಸಿದ್ದಾರೆ.