MAH vs VID: 44 ಎಸೆತಗಳಲ್ಲಿ ಅಜೇಯ 88 ರನ್ ಸಿಡಿಸಿದ ಕನ್ನಡಿಗ ಕರುಣ್ ನಾಯರ್!
ಪ್ರಸ್ತುತ ನಡೆಯುತ್ತಿರುವ ವಿಜಯ್ ಹಝಾರೆ ಟ್ರೋಫಿ ಟೂರ್ನಿಯಲ್ಲಿ ವಿದರ್ಭ ತಂಡದ ನಾಯಕ ಕರುಣ್ ನಾಯರ್ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಅವರು ಮಹಾರಾಷ್ಟ್ರ ತಂಡದ ವಿರುದ್ಧ ಕರುಣ್ ನಾಯರ್ ಅವರು 44 ಎಸೆತಗಳಲ್ಲಿ ಅಜೇಯ 88 ರನ್‌ಗಳನ್ನು ಸಿಡಿಸಿದ್ದಾರೆ.
ವಡೋದರ: ಭಾರತ ತಂಡದ ಆಯ್ಕೆಯ ರೇಸ್‌ನಲ್ಲಿ ಮುಂಚೂಣಿಯಲ್ಲಿರುವ ವಿದರ್ಭ ತಂಡದ ನಾಯಕ ಕರುಣ್ ನಾಯರ್ ಅವರು ಪ್ರಸ್ತುತ ನಡೆಯುತ್ತಿರುವ ವಿಜಯ್ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಮತ್ತೊಂದು ಸ್ಪೋಟಕ ಇನಿಂಗ್ಸ್ ಆಡಿದ್ದಾರೆ. ಮಹಾರಾಷ್ಟ್ರ ವಿರುದ್ಧದ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಅವರು ತ್ವರಿತವಾಗಿ ಅರ್ಧಶತ ಸಿಡಿಸಿದ್ದಾರೆ.
ಇಲ್ಲಿನ ಕೊಟಂಬಿ ಕ್ರೀಡಾಂಗಣದಲ್ಲಿ ಗುರುವಾರ ನಡೆದಿದ್ದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ವಿದರ್ಭ ತಂಡದ ಪರ ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ನಾಯಕ ಕರುಣ್ ನಾಯರ್ ಅಬ್ಬರದ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು. ಕೊನೆಯ 15 ಓವರ್‌ಗಳು ಬಾಕಿ ಇರುವಾಗ ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ಕರುಣ್ ನಾಯರ್ ಸ್ಪೋಟಕ ಬ್ಯಾಟ್ ಮಾಡಿದರು.
ಅರ್ಧಶತಕ ಸಿಡಿಸಿ ವಿರಾಟ್ ಕೊಹ್ಲಿ, ಎಬಿಡಿ ದಾಖಲೆ ಮುರಿದ ದೇವದತ್ ಪಡಿಕ್ಕಲ್!
ಇವರು ಎದುರಿಸಿದ ಕೇವಲ 44 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 9 ಬೌಂಡರಿಗಳೊಂದಿಗೆ ಅಜೇಯ 88 ರನ್‌ಗಳನ್ನು ಸಿಡಿಸಿದರು. ಅದರಲ್ಲಿಯೂ ವಿಶೇಷವಾಗಿ ಅವರು 200ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು. ಆ ಮೂಲಕ ವಿದರ್ಭ ತಂಡ ತನ್ನ ಪಾಲಿನ 50 ಓವರ್‌ಗಳಿಗೆ 3 ವಿಕೆಟ್‌ಗಳ ನಷ್ಟಕ್ಕೆ 380 ರನ್‌ಗಳನ್ನು ಕಲೆ ಹಾಕಿತು.
ಅದರಲ್ಲಿಯೂ ವಿಶೇಷವಾಗಿ 48ನೇ ಓವರ್‌ನಲ್ಲಿ ಕರುಣ್ ನಾಯರ್ 51 ರನ್‌ಗಳನ್ನು ಕಲೆ ಹಾಕಿದ್ದರು. ನಂತರ ಅವರು ತಮ್ಮ ಕೊನೆಯ 13 ಎಸೆತಗಳಲ್ಲಿ 37 ರನ್‌ಗಳನ್ನು ಸಿಡಿಸಿದ್ದರು. ಅಂದಹಾಗೆ ಇಲ್ಲಿಯತನಕ ಕರುಣ್ ನಾಯರ್ ಆಡಿದ್ದ 7 ಇನಿಂಗ್ಸ್‌ಗಳಲ್ಲಿ 752 ರನ್‌ಗಳನ್ನು ಕಲೆ ಹಾಕಿದ್ದಾರೆ. ಆ ಮೂಲಕ ಪ್ರಸಕ್ತ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಇದಕ್ಕೂ ಮುನ್ನ ಅವರು ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಔಟ್ ಆಗದೆ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದರು. ಇದರಲ್ಲಿ ಅವರು ಐದು ಶತಕಗಳನ್ನು ಬಾರಿಸಿದ್ದಾರೆ. ಈ ಟೂರ್ನಿಯಲ್ಲಿ ಕರುಣ್ ನಾಯರ್ ಔಟ್ ಆಗದೆ 88*, 122*, 112, 111*, 163*, 44* and 112* ರನ್‌ಗಳನ್ನು ಗಳಿಸಿದ್ದಾರೆ.
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ರಣಜಿ ಟ್ರೋಫಿ ಆಡಬೇಕೆಂದ ಯುವರಾಜ್ ಸಿಂಗ್!
ಇಂಗ್ಲೆಂಡ್ ವಿರುದ್ಧದ ತವರು ಏಕದಿನ ಸರಣಿ ಹಾಗೂ ಫೆಬ್ರವರಿ 19 ರಂದು ಆರಂಭವಾಗುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಭಾರತ ತಂಡವನ್ನು ಆಯ್ಕೆ ಮಾಡಲು ಬಿಸಿಸಿಐ ಆಯ್ಕೆದಾರರು ಜನವರಿ 10 ಅಥವಾ 19 ರಂದು ಭೇಟಿಯಾಗುವ ಸಾಧ್ಯತೆ ಇದೆ. ಇದೇ ಸಮಯದಲ್ಲಿ ಕರುಣ್ ನಾಯರ್ ಅವರು 50 ಓವರ್‌ಗಳ ಸ್ವರೂಪದಲ್ಲಿ ತಮ್ಮ ವೃತ್ತಿ ಜೀವನದ ಶ್ರೇಷ್ಠ ಫಾರ್ಮ್‌ನಲ್ಲಿದ್ದಾರೆ.
ಕರ್ನಾಟಕ ತಂಡದ ಪರ ದೇಶಿ ಕ್ರಿಕೆಟ್ ವೃತ್ತಿ ಜೀವನವನ್ನು ಆರಂಭಿಸಿದ್ದ ಕರುಣ್ ನಾಯರ್ ಅವರು ತ್ರಿಶತಕ ಸಿಡಿಸುವ ಮೂಲಕ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಅನ್ನು ಅದ್ದೂರಿಯಾಗಿ ಆರಂಭಿಸಿದ್ದರು. ಆದರೂ ಅವರು ಭಾರತ ತಂಡದ ಪರ ದೀರ್ಘವಾಗಿ ಆಡುವಲ್ಲಿ ವಿಫಲರಾಗಿದ್ದರು. ಭಾರತ ತಂಡದ ಪರ ಕೇವಲ ಎರಡು ಒಡಿಐ ಪಂದ್ಯಗಳನ್ನು ಅವರು ಆಡಿದ್ದರು.