Rapper Naezy: ಬಾಲ್ಯದಲ್ಲಿ ಕಳ್ಳತನ ಮಾಡಿ ಪೊಲೀಸರಿಂದ ತಗಲಾಕೊಂಡಿದ್ದೆ ಎಂದ ಬಿಗ್ ಬಾಸ್ OTT ಸ್ಪರ್ಧಿ
ಹಿಂದಿ ಬಿಗ್‌ಬಾಸ್ OTT 3 ಖ್ಯಾತಿಯ ರ್‍ಯಾಪರ್ ನೇಜಿ ಬಾಲ್ಯದಲ್ಲಿ ತಾನು ಕಿಡಿಗೇಡಿತನ, ಕಳ್ಳತನ ಮಾಡಿ ಪೊಲೀಸರಿಂದ ತಗಲಾಕೊಂಡಿದ್ದೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಕಳ್ಳತನ ಮಾಡಿ ಪೊಲೀಸರು ಥಳಿಸಿದ ನಂತರ ಇದರಿಂದ ಪಾಠ ಕಲಿತಿದ್ದೇನೆ ಎಂದು ಬಾಲ್ಯದ ಅನುಭವ ಬಿಚ್ಚಿಟ್ಟಿದ್ದಾರೆ.
ಮುಂಬೈ: ಬಿಗ್ ಬಾಸ್ OTT 3 ಖ್ಯಾತಿಯ ರ್‍ಯಾಪರ್ ನೇಜಿ (Rapper Naezy) ಎಂದೇ ಫೇಮ್ ಕ್ರಿಯೇಟ್ ಮಾಡಿಕೊಂಡ ನಾವೇದ್ ಶೇಖ್ ಅವರು ಮುಂಬೈ ಮೂಲದ ರ್‍ಯಾಪರ್ ಆಗಿದ್ದು, ಸ್ಟ್ರೀಟ್ ಹಿಪ್ ಹಾಪ್ ಶೈಲಿಗೆ ಹೆಸರುವಾಸಿಯಾಗಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ರ್‍ಯಾಪರ್ ನೇಜಿ ಬಾಲ್ಯದಲ್ಲಿ ತಾನು ಕಿಡಿಗೇಡಿತನ, ಕಳ್ಳತನ ಮಾಡಿ ಪೊಲೀಸರಿಂದ ತಗಲಾಕೊಂಡಿದ್ದೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ತನ್ನ ಶಾಲಾ ದಿನದ ನೆನಪು ಮಾಡಿಕೊಂಡ ರ್‍ಯಾಪರ್ ನೇಜಿ ಶೌಚಾಲಯದ ಬಾಗಿಲು ಒಡೆದಿದ್ದಕ್ಕೆ ಪ್ರಾಂಶುಪಾಲರು ಥಳಿಸಿದ ಘಟನೆಯನ್ನು ಅವರು ಹಂಚಿಕೊಂಡಿದ್ದಾರೆ. ಶಾಲೆ ಮುಗಿದ ಬಳಿಕ ರ್‍ಯಾಪರ್ ನೇಜಿ ಗೆಳೆಯರೊಂದಿಗೆ ಸೇರಿ ಕಳ್ಳತನ ಮಾಡಿದ್ದು ಇದೆ ಎಂದು ಹೇಳಿಕೊಂಡಿದ್ದಾರೆ. ಅಂಗಡಿಗಳಿಂದ ಐಸ್ ಕ್ರೀಮ್ ಪ್ಯಾಕ್, ಮ್ಯೂಸಿಕ್ ಸಿಡಿ, ಕ್ಯಾಸೆಟ್‌ಗಳಂತಹ ವಸ್ತುವನ್ನು ಕದಿಯುತ್ತಿದ್ದೆ. ಸೈಕಲ್ ಅನ್ನು ಕದ್ದಿದ್ದೇನೆ. ಕಳ್ಳತನ ಮಾಡಿ ಪೊಲೀಸರು ಥಳಿಸಿದ ನಂತರ ಇದರಿಂದ ಪಾಠ ಕಲಿತಿದ್ದೇನೆ ಎಂದು ಬಾಲ್ಯದ ಅನುಭವ ಬಿಚ್ಚಿಟ್ಟಿದ್ದಾರೆ.
ಇಂಗ್ಲಿಷ್-ಮಾಧ್ಯಮ ಶಾಲೆಯಲ್ಲಿ ಓದಿರುವುದರಿಂದ ಹಿಪ್ ಹಾಪ್ ಹಾಡುಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಯಿತು ಎಂದಿದ್ದಾರೆ. ಕಾಲೇಜು ಅವಧಿಯಲ್ಲೆ ಸಂಗೀತ ಕುರಿತಾಗಿ ಆಸಕ್ತಿ ಹೆಚ್ಚಿತ್ತು. ಸೈಬರ್ ಸೆಂಟರ್ ಮೂಲಕ ಬ್ಲ್ಯಾಕ್ ಐಡ್ ಪೀಸ್ ಮತ್ತು ಟೇಲರ್ ಸ್ವಿಫ್ಟ್ ಅವರ ಹಾಡುಗಳನ್ನು ಡೌನ್‌ಲೋಡ್ ಮಾಡಿಕೊಂಡು ಆ ದಿನದಲ್ಲೇ ಅಭ್ಯಾಸ ಮಾಡುತ್ತಿದೆ. ತನಗೆ ಇಷ್ಟ ವಾದ ಹುಡುಗಿಯನ್ನು ಮೆಚ್ಚಿಸಲು ಸಾಹಿತ್ಯವನ್ನು ಕಲಿತೆ ಎಂದು ಹೇಳಿಕೊಂಡಿದ್ದಾರೆ. ಆದರೆ ಇವರ ಸಾಹಿತ್ಯವನ್ನು ಯಾರೋ ಕದ್ದ ನಂತರ ತಮ್ಮ ವೃತ್ತಿಜೀವನವು ಪ್ರಾರಂಭವಾಯಿತು. ಸಂಗೀತದ ಬಗ್ಗೆ ಉತ್ಸಾಹ ಮತ್ತಷ್ಟು ಹೆಚ್ಚಿಸಿತು ಅಂದಿದ್ದಾರೆ.
ಡಿವೈನ್ ಮತ್ತು ನೇಜಿ ಇತ್ತೀಚೆಗೆ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಈ ಬಗ್ಗೆ ಮಾತನಾಡಿದ ನೇಜಿ , ಡಿವೈನ್ ಅವರು ಅಂದುಕೊಂಡಂತೆ ಸಾಧಿಸಿದ್ದಾರೆ. ನಾನು ಇನ್ನೂ ಆ ಮಟ್ಟವನ್ನು ತಲುಪಿಲ್ಲ. ಆದರೆ ನಾವು ಇಬ್ಬರು ಸಹೋದರರು ಇದ್ದಂತೆ ನಮ್ಮಲ್ಲಿ ಪರಸ್ಪರ ಯಾವುದೇ ಸಮಸ್ಯೆಗಳಿಲ್ಲ ಎಂದು ಹೇಳಿದ್ದಾರೆ.
ರ್‍ಯಾಪರ್ ನೇಜಿ ಅವರು ಡಿವೈನ್ ಜೊತೆ "ಮೇರೆ ಗಲ್ಲಿ ಮೇ" ಹಾಡಿನೊಂದಿಗೆ ರ್ಯಾಪ್ ಸಾಂಗ್ ಕ್ಷೇತ್ರಕ್ಕೆ ಮೊದಲು ಪ್ರವೇಶಿಸಿದರು. ಜೋಯಾ ಅಖ್ತರ್ ನಿರ್ದೇಶನದ ಗಲ್ಲಿ ಬಾಯ್‌ನಲ್ಲಿ ರಣವೀರ್ ಸಿಂಗ್ ಚಿತ್ರ ಮೂಡಿ ಬಂದಿತ್ತು. ಈ ಚಿತ್ರದ ಬಗ್ಗೆ ಮಾತನಾಡಿದ ನೇಜಿ ಈ ಸಿನಿಮಾ ಕಾಲ್ಪನಿಕವಾಗಿದೆ. ಈ ಸಿನಿಮಾ ನಿಜ ಜೀವನವನ್ನು ಪ್ರತಿಬಿಂಬಿಸಿಲ್ಲ. ಹಾಗಾಗಿ ವಾಸ್ತವದಿಂದ ಈ ಸಿನಿಮಾ ದೂರ ಇದೆ ಎಂದು ರ್‍ಯಾಪರ್ ನೇಜಿ ಸ್ಪಷ್ಟಪಡಿಸಿದ್ದಾರೆ.
ಇದನ್ನು ಓದಿ: Viral Video:ಐಐಟಿಯನ್ ಬಾಬಾ, ಮೊನಾಲಿಸಾ ಆಯ್ತು...ಈಗ ಮಹಾ ಕುಂಭಮೇಳದಲ್ಲಿ ಹ್ಯಾರಿ ಪಾಟರ್!
ನಾನು ನನ್ನ ಕಷ್ಟದ ಸಮಯದಲ್ಲಿ ಹಾಡುಗಳನ್ನು ಬರೆಯುತ್ತೇನೆ ಮತ್ತು ಒಳ್ಳೆಯ ಸಮಯದಲ್ಲಿ ಅವುಗಳನ್ನು ರಿಲೀಸ್ ಮಾಡುತ್ತೇನೆ. ಹೀಗಾಗಿ ರ್‍ಯಾಪ್ ಹಾಡುಗಳ ಆಸಕ್ತಿಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದೇನೆ ಎಂದಿದ್ದಾರೆ. ಹಿಪ್ ಹಾಪ್ ಹಾಡನ್ನು ಬಿಡುಗಡೆ ಮಾಡಿದವರಲ್ಲಿ ನೇಜಿ ಮೊದಲಿಗರಾಗಿದ್ದು ಕೆಲಸ ಇಲ್ಲದ ಸಂದರ್ಭ ಉದ್ಯಮದಿಂದ ದೂರವಿದ್ದಾಗ ನನ್ನ ಆಸಕ್ತಿಯ ರಾಪ್ ಹಾಡು ನನ್ನನ್ನು ಕೈ ಹಿಡಿದಿದೆ. ಆ ಬಳಿಕ ನೇಜಿ ಅವರು ಕ್ಲಬ್ ಗಳಲ್ಲಿ, ಪಾರ್ಟಿ ಆಯೋಜನೆ ಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಲು ಪ್ರಾರಂಭಿಸಿದರು ಎಂದು ಹೇಳಿಕೊಂಡಿದ್ದಾರೆ.