#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Viral Video:ಐಐಟಿಯನ್‌ ಬಾಬಾ, ಮೊನಾಲಿಸಾ ಆಯ್ತು...ಈಗ ಮಹಾ ಕುಂಭಮೇಳದಲ್ಲಿ ಹ್ಯಾರಿ ಪಾಟರ್‌!

ಲೇಖಕಿ ಜೆ.ಕೆ.ರೌಲಿಂಗ್ ರಚಿಸಿದ ಕಾದಂಬರಿಯ ಪ್ರಸಿದ್ಧ ಪಾತ್ರವಾದ ಹ್ಯಾರಿ ಪಾಟರ್‌ ಹೋಲುವ ವ್ಯಕ್ತಿಯೊಬ್ಬ ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಕಂಡುಬಂದಿದ್ದಾನೆ. ಈ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ಕುಂಭಮೇಳದಲ್ಲಿ ಎಲ್ಲರ ಗಮನ ಸೆಳೆದ ಹ್ಯಾರಿ ಪಾಟರ್! ವಿಡಿಯೊ ನೋಡಿ ನೆಟ್ಟಿಗರು ಶಾಕ್‌

harry potter

Profile pavithra Jan 21, 2025 3:02 PM

ಲಖನೌ: ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭಮೇಳ ನಡೆಯುತ್ತಿದೆ. ಕುಂಭಮೇಳದಲ್ಲಿ ಐಐಟಿ ಬಾಬಾ, ಇಂಧೋರ್‌ನ ಸುಂದರ ಕಂಗಳ ಹುಡುಗಿ ಇವರೆಲ್ಲರ ಸುದ್ದಿ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ಈಗ ಮತ್ತೊಂದು ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅದೇನು ಎಂದರೆ ಕುಂಭಮೇಳದಲ್ಲಿ ಹ್ಯಾರಿ ಪಾಟರ್ ಕಾಣಿಸಿಕೊಂಡಿದ್ದಾರೆ. ನೀವೂ ಕೂಡ ಶಾಕ್‌ ಆದ್ರಾ...? ಹೌದು ಹ್ಯಾರಿ ಪಾಟರ್‌ ಅನ್ನು ಹೋಲುವ ವ್ಯಕ್ತಿಯೊಬ್ಬರು ಈ ಕುಂಭಮೇಳದಲ್ಲಿ ಕಾಣಿಸಿಕೊಂಡಿದ್ದಾರಂತೆ. ಈ ವಿಡಿಯೊ ಸಖತ್‌ ವೈರಲ್‌ ಆಗಿದೆ. ಅಂದಹಾಗೇ, ಯಾರೀತ, ಏನು ಕತೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ವೈರಲ್ ವಿಡಿಯೊದಲ್ಲಿ ಜೀನ್ಸ್ ಮತ್ತು ಜಾಕೆಟ್ ಧರಿಸಿದ್ದ ವ್ಯಕ್ತಿಯೊಬ್ಬ, ತಟ್ಟೆಯಲ್ಲಿ ಪ್ರಸಾದವನ್ನು ತಿನ್ನುವುದು ಸೆರೆಯಾಗಿದೆ. ಈ ವ್ಯಕ್ತಿ ನೋಡುವುದಕ್ಕೆ ಥೇಟ್‌ ಹ್ಯಾರಿ ಪಾಟರ್‌ ರೀತಿ ಇದ್ದರಿಂದ ಎಲ್ಲರ ಗಮನ ಸೆಳೆದಿದ್ದಾನೆ.

ಲೇಖಕಿ ಜೆ.ಕೆ.ರೌಲಿಂಗ್ ರಚಿಸಿದ ಕಾದಂಬರಿಯ ಪ್ರಸಿದ್ಧ ಪಾತ್ರವಾದ ಹ್ಯಾರಿ ಪಾಟರ್‌ಗೆ ದುಂಡು ಕನ್ನಡಕ, ಕೆದರಿಕೊಂಡ ಕಪ್ಪು ಕೂದಲು ಮತ್ತು ಹಣೆಯ ಮೇಲೆ ಮಿಂಚಿನ ಆಕಾರದ ಗುರುತಿದೆ. ಈ ಲೇಖಕಿಯ ಕಾದಂಬರಿಗಳನ್ನು ಆಧರಿಸಿ ಚಲನಚಿತ್ರ ಸೀರಿಸ್‍ ಅನ್ನು ಚಿತ್ರೀಕರಿಸಲಾಗಿತ್ತು. ಈ ಚಿತ್ರದಲ್ಲಿ ನಟಿಸಿದ ಬ್ರಿಟಿಷ್ ನಟ ಡೇನಿಯಲ್ ರಾಡ್ಕ್ಲಿಫ್ ಹ್ಯಾರಿ ಪಾಟರ್ ಆಗಿ ಅಭಿನಯಿಸಿದ್ದರು.

ಜನವರಿ 11 ರಿಂದ ಜನವರಿ 20 ರವರೆಗೆ ಕಳೆದ 10 ದಿನಗಳಲ್ಲಿ 8.79 ಕೋಟಿ ಯಾತ್ರಾರ್ಥಿಗಳು ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. 45 ದಿನಗಳ ಕಾಲ ನಡೆಯುವ ಮಹಾಕುಂಭ-2025 ಜನವರಿ 13 ರಂದು ಪೌಶ್ ಪೂರ್ಣಿಮಾ ಸ್ನಾನದೊಂದಿಗೆ ಅಧಿಕೃತವಾಗಿ ಪ್ರಾರಂಭವಾಗಿದ್ದರೂ, ಭಕ್ತರು ಜನವರಿ 11 ರಂದೇ ಆಚರಣೆಗಾಗಿ ಸಂಗಮ್ ನಗರಕ್ಕೆ ಬರಲು ಪ್ರಾರಂಭಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:Mahakumbh 2025: ಕುಂಭಮೇಳದ ಪ್ರಮುಖ ಆಕರ್ಷಣೆ ʻಐಐಟಿಯನ್‌ ಬಾಬಾʼ ಅಖಾಡದಿಂದ ಕಿಕ್‌ಔಟ್‌?

ಸೋಮವಾರ ಒಂದೇ ದಿನ 53.33 ಲಕ್ಷಕ್ಕೂ ಹೆಚ್ಚು ಭಕ್ತರು ಸಂಗಮದ ಪವಿತ್ರ ನೀರಿನಲ್ಲಿ ಸ್ನಾನ ಮಾಡಿದ್ದಾರೆ. ಈ ವರ್ಷ ನಡೆಯುವ ಭವ್ಯ ಧಾರ್ಮಿಕ ಕಾರ್ಯಕ್ರಮದಲ್ಲಿ 45 ಕೋಟಿಗೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಉತ್ತರ ಪ್ರದೇಶದ ಸರ್ಕಾರ ನಿರೀಕ್ಷಿಸಿದೆ.