Rashid Khan: ಟಿ20ಯಲ್ಲಿ ವಿಶ್ವ ದಾಖಲೆ ಬರೆದ ರಶೀದ್ ಖಾನ್
ರಶೀದ್ ಖಾನ್(Rashid Khan) ಅಫಘಾನಿಸ್ತಾನ ತಂಡದ ಪರ 96 ಟಿ20 ಪಂದ್ಯಗಳನ್ನಾಡಿ 161 ವಿಕೆಟ್ ಮತ್ತು 467 ರನ್ ಬಾರಿಸಿದ್ದಾರೆ. ಏಕದಿನದಲ್ಲಿ 111 ಪಂದ್ಯಗಳಿಂದ 1346 ರನ್ ಮತ್ತು 198 ವಿಕೆಟ್ ಕೆಡವಿದ್ದಾರೆ. 6 ಟೆಸ್ಟ್ ಪಂದ್ಯಗಳಿಂದ 45 ವಿಕೆಟ್ ಪಡೆದಿದ್ದಾರೆ.
ನವದೆಹಲಿ: ಅಫ್ಘಾನಿಸ್ತಾನದ ಸ್ಟಾರ್ ಸ್ಪಿನ್ನರ್ ರಶೀದ್ ಖಾನ್(Rashid Khan) ಅವರು ವೆಸ್ಟ್ ಇಂಡೀಸ್‌ನ ಮಾಜಿ ಆಟಗಾರ ಡ್ವೇನ್ ಬ್ರಾವೊ(Dwayne Bravo) ಅವರನ್ನು ಹಿಂದಿಕ್ಕಿ T20 ಕ್ರಿಕೆಟ್‌ನಲ್ಲಿ ಪ್ರಮುಖ ವಿಕೆಟ್ ಟೇಕರ್ ಆಗುವ ಮೂಲಕ ಇತಿಹಾಸವನ್ನು ಬರೆದಿದ್ದಾರೆ. SA20 ಲೀಗ್‌ನಲ್ಲಿ ಪಾರ್ಲ್ ರಾಯಲ್ಸ್ ವಿರುದ್ಧ MI ಕೇಪ್ ಟೌನ್‌ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಶೀದ್ 2 ವಿಕೆಟ್ ಕಬಳಿಸುವುದರೊಂದಿಗೆ ಈ ಗಮನಾರ್ಹ ಸಾಧನೆಯನ್ನು ಮಾಡಿದರು.
ರಶೀದ್ 2 ವಿಕೆಟ್ ಪಡೆಯುತ್ತಿದ್ದಂತೆ ಟಿ20 ಕ್ರಿಕೆಟ್‌ನಲ್ಲಿ ಅತ್ಯಧಿಕ ವಿಕೆಟ್ ಕಿತ್ತ ವಿಶ್ವದ ಮೊದಲ ಬೌಲರ್ ಎನಿಸಿಕೊಂಡರು. ಇದುವರೆಗೆ ಅವರು 461 T20 ಪಂದ್ಯಗಳನ್ನಾಡಿ 633* ವಿಕೆಟ್‌ಗಳನ್ನು ಕಿತ್ತಿದ್ದಾರೆ. ಇದಕ್ಕೂ ಮುನ್ನ ಅತ್ಯಧಿಕ ವಿಕೆಟ್ ಕಿತ್ತ ದಾಖಲೆ ಡ್ವೇನ್ ಬ್ರಾವೊ ಹೆಸರಿನಲ್ಲಿತ್ತು. ಬ್ರಾವೊ 631 ವಿಕೆಟ್ ಕಿತ್ತಿದ್ದರು.
The moment Rashid Khan becomes Leading Wicket taker in T20s.🤩🔥pic.twitter.com/0bdGiQAFGx
— ACB Xtra (@acb_190) February 4, 2025
ರಶೀದ್ ಖಾನ್ 18.07 ರ ಅತ್ಯುತ್ತಮ ಬೌಲಿಂಗ್ ಸರಾಸರಿ ಕಾಯ್ದುಕೊಂಡಿದ್ದಾರೆ. 17 ರನ್‌ಗೆ 6 ವಿಕೆಟ್ ಉರುಳಿಸಿದ್ದು ವೈಯಕ್ತಿಕ ಉತ್ತಮ ದಾಖಲೆಯಾಗಿದೆ. ನಾಲ್ಕು ಬಾರಿ ಐದು ವಿಕೆಟ್ ಗೊಂಚಲು ಪಡೆದಿದ್ದಾರೆ.
ಅತ್ಯಧಿಕ ವಿಕೆಟ್ ಕಿತ್ತ ಸಾಧಕರು
ರಶೀದ್ ಖಾನ್: 633
ಡ್ವೇನ್ ಬ್ರಾವೋ: 631
ಸುನೀಲ್ ನಾರಾಯಣ್ : 574
ಇಮ್ರಾನ್ ತಾಹಿರ್: 531
ಶಕೀಬ್ ಅಲ್ ಹಸನ್: 492
ಇದನ್ನೂ ಓದಿ IND vs ENG: ಥ್ರೋಡೌನ್ ಸ್ಪೆಷಲಿಸ್ಟ್ ರಘುವನ್ನು ತಡೆದ ಪೊಲೀಸರು!
ರಶೀದ್ ಖಾನ್ ಅಂತಾರಾಷ್ಟ್ರೀಯ ಕ್ರಿಕೆಟ್ ಸಾಧನೆ
ರಶೀದ್ ಖಾನ್ ಅಫಘಾನಿಸ್ತಾನ ತಂಡದ ಪರ 96 ಟಿ20 ಪಂದ್ಯಗಳನ್ನಾಡಿ 161 ವಿಕೆಟ್ ಮತ್ತು 467 ರನ್ ಬಾರಿಸಿದ್ದಾರೆ. ಏಕದಿನದಲ್ಲಿ 111 ಪಂದ್ಯಗಳಿಂದ 1346 ರನ್ ಮತ್ತು 198 ವಿಕೆಟ್ ಕೆಡವಿದ್ದಾರೆ. 6 ಟೆಸ್ಟ್ ಪಂದ್ಯಗಳಿಂದ 45 ವಿಕೆಟ್ ಪಡೆದಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರ ಆಡುವ ಮೂಲಕ ಐಪಿಎಲ್ ಪದಾರ್ಪಣೆ ಮಾಡಿದ್ದ ರಶೀದ್ ಈವರೆಗೆ 121 ಐಪಿಎಲ್ ಪಂದ್ಯಗಳನ್ನಾಡಿ 149 ವಿಕೆಟ್ ಕಲೆಹಾಕಿದ್ದಾರೆ. ಪ್ರಸಕ್ತ ಗುಜರಾತ್ ಟೈಟಾನ್ಸ್ ತಂಡದ ಆಟಗಾರನಾಗಿದ್ದಾರೆ.