600 ವಿಕೆಟ್ ಕ್ಲಬ್ ಸೇರಿದ ಆಲ್ರೌಂಡರ್ ಜಡೇಜಾ!
Ravindra Jadeja: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 6000+ ರನ್ ಹಾಗೂ 600+ ವಿಕೆಟ್ ಕಿತ್ತ ಭಾರತದ 2ನೇ, ವಿಶ್ವದ 6ನೇ ಆಟಗಾರ ಎಂಬ ದಾಖಲೆಯೂ ಜಡೇಜಾ ಪಾಲಾಯಿತು. ಈ ಸಾಧನೆಗೈದ ಇತರ ಆಟಗಾರರೆಂದರೆ, ಕಪಿಲ್ ದೇವ್, ವಾಸಿಂ ಅಕ್ರಂ, ಶಾನ್ ಪೊಲಾಕ್, ಡೇನಿಯಲ್ ವೆಟೋರಿ, ಶಕೀಬ್.
ನಾಗ್ಪುರ: ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ(Ravindra Jadeja) ಅವರು ಇಂಗ್ಲೆಂಡ್ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ 3 ವಿಕೆಟ್ ಪಡೆಯುವ ಮೂಲಕ ಹೊಸ ಮೈಲುಗಲ್ಲು ಸಾಧಿಸಿದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 600 ವಿಕೆಟ್ ಕ್ಲಬ್‌ಗೆ ಸೇರ್ಪಡೆಗೊಂಡರು. ಇದರೊಂದಿಗೆ ಈ ಸಾಧನೆ ಮಾಡಿದ ಭಾರತದ 5ನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
36 ವರ್ಷದ ಜಡೇಜಾ 88 ಟೆಸ್ಟ್ ಪಂದ್ಯಗಳಲ್ಲಿ 323, 74 ಅಂತಾರಾಷ್ಟ್ರೀಯ ಟಿ20ಯಲ್ಲಿ 54 ಹಾಗೂ 198 ಏಕದಿನದಲ್ಲಿ 223 ವಿಕೆಟ್ ಪಡೆದಿದ್ದಾರೆ. ಕರ್ನಾಟಕದ ಅನಿಲ್ ಕುಂಬ್ಳೆ 953 ವಿಕೆಟ್‌ಗಳೊಂದಿಗೆ ಭಾರತೀಯರಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಆರ್.ಅಶ್ವಿನ್ 765, ಹರ್ಭಜನ್ ಸಿಂಗ್ 707, ಕಪಿಲ್ ದೇವ್ 687 ವಿಕೆಟ್ ಪಡೆದಿದ್ದು, ನಂತರದ ಸ್ಥಾನಗಳಲ್ಲಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 6000+ ರನ್ ಹಾಗೂ 600+ ವಿಕೆಟ್ ಕಿತ್ತ ಭಾರತದ 2ನೇ, ವಿಶ್ವದ 6ನೇ ಆಟಗಾರ ಎಂಬ ದಾಖಲೆಯೂ ಜಡೇಜಾ ಪಾಲಾಯಿತು. ಈ ಸಾಧನೆಗೈದ ಇತರ ಆಟಗಾರರೆಂದರೆ, ಕಪಿಲ್ ದೇವ್, ವಾಸಿಂ ಅಕ್ರಂ, ಶಾನ್ ಪೊಲಾಕ್, ಡೇನಿಯಲ್ ವೆಟೋರಿ, ಶಕೀಬ್ ಅಲ್ ಹಸನ್.
ಆ್ಯಂಡಸರ್ನ್ ದಾಖಲೆ ಪತನ
ಜಡೇಜಾ 2 ವಿಕೆಟ್ ಕೀಳಿತ್ತಿದ್ದಂತೆ ಇಂಗ್ಲೆಂಡ್‌ನ ಮಾಜಿ ದಿಗ್ಗಜ ಜೇಮ್ಸ್ ಆ್ಯಂಡರ್ಸನ್ ಅವರ ಹೆಸರಲ್ಲಿದ್ದ ದಾಖಲೆಯೊಂದನ್ನು ಮುರಿದಿದ್ದಾರೆ. ಭಾರತ ಹಾಗೂ ಇಂಗ್ಲೆಂಡ್ ಏಕದಿನ ಸರಣಿಯಲ್ಲಿ ಗರಿಷ್ಠ ವಿಕೆಟ್ ಕಿತ್ತ ಬೌಲರ್ ಎನಿಸಿಕೊಂಡರು. ಜಡೇಜಾ 42 ವಿಕೆಟ್‌ಗಳೊಂದಿಗೆ ಅಗ್ರಸ್ಥಾನಕ್ಕೇರಿದ್ದಾರೆ. ಆ್ಯಂಡಸರ್ನ್ 40 ವಿಕೆಟ್ ಪಡೆದಿದ್ದರು.
ಇದನ್ನೂ ಓದಿ IND vs ENG: ಇಂಗ್ಲೆಂಡ್ ವಿರುದ್ಧ ಗೆದ್ದು ಏಕದಿನ ಸರಣಿಯಲ್ಲಿ ಶುಭಾರಂಭ ಕಂಡ ಭಾರತ!
ಇಲ್ಲಿನ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಗುರುವಾರ ನಡೆದಿದ್ದ ಮೊದಲನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಇಂಗ್ಲೆಂಡ್ ತಂಡ, 47.4 ಓವರ್‌ಗಳಿಗೆ 248 ರನ್‌ಗಳಿಗೆ ಆಲ್‌ಔಟ್ ಆಗಿತ್ತು. ಆ ಮೂಲಕ ಎದುರಾಳಿ ಭಾರತ ತಂಡಕ್ಕೆ 249 ರನ್‌ಗಳ ಗುರಿಯನ್ನು ನೀಡಿತ್ತು. ಬಳಿಕ ಗುರಿ ಹಿಂಬಾಲಿಸಿದ ಭಾರತ ತಂಡ, ಮೂವರು ಬ್ಯಾಟ್ಸ್‌ಮನ್‌ಗಳ ಅರ್ಧಶತಕಗಳ ಬಲದಿಂದ 38.4 ಓವರ್‌ಗಳಿಗೆ 251 ರನ್‌ಗಳನ್ನು ಗಳಿಸಿ ಗೆಲುವಿನ ಗಡಿ ದಾಟಿತು.
ಇಂಗ್ಲೆಂಡ್ ನೀಡಿದ್ದ ಸ್ಪರ್ಧಾತ್ಮಕ ಗುರಿಯನ್ನು ಹಿಂಬಾಲಿಸಿದ ಭಾರತ ತಂಡಕ್ಕೆ ಉತ್ತಮ ಆರಂಭ ತಂದುಕೊಡುವಲ್ಲಿ ಓಪನರ್ಸ್ ರೋಹಿತ್ ಶರ್ಮಾ ಹಾಗೂ ಯಶಸ್ವಿ ಜೈಸ್ವಾಲ್ ವೈಫಲ್ಯ ಅನುಭವಿಸಿದರು. ಆದರೆ, ಶ್ರೇಯಸ್ ಅಯ್ಯರ್ (59 ರನ್), ಶುಭಮನ್ ಗಿಲ್ (87 ರನ್) ಹಾಗೂ ಅಕ್ಷರ್ ಪಟೇಲ್ (52 ರನ್) ಅರ್ಧಶತಕಗಳ ಬಲದಿಂದ ಭಾರತ ತಂಡ ಗೆಲುವಿನ ದಡ ಸೇರಿತು.