ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gauribidanur News: ಜಗತ್ತಿಗೆ ಶಾಂತಿಯನ್ನು ಸಂವರ್ಧನೆ ಮಾಡಲು ಧ್ಯಾನದ ಅಗತ್ಯವಿದೆ: ಡಾ.ಕೆ.ವಿ. ಪ್ರಕಾಶ್

ವಿಶ್ವಸಂಸ್ಥೆ 2024 ಡಿಸೆಂಬರ್ 21ರಂದು ವಿಶ್ವ ಧ್ಯಾನ ದಿನವೆಂದು  ಘೋಷಿಸಿದ್ದು ಜಗತ್ತಿನಾದ್ಯಂತ ಈ ದಿನವನ್ನು ಆಚರಿಸುತ್ತಾರೆ. ಧ್ಯಾನದಿಂದ ಏಕಾಗ್ರತೆ ಹೆಚ್ಚಾಗುತ್ತದೆ. ಏಕಾಗ್ರತೆಯಿಂದ ಮಾನಸಿಕ ಸ್ಥಿರತೆ ಮತ್ತು ಸಮತೋಲನವನ್ನು ಸಾಧಿಸಬಹುದು. ನಮ್ಮ ಗುರಿಯನ್ನು ಸಾಧಿಸಲು ಧ್ಯಾನ ಹೆಚ್ಚು ಸಹಕಾರಿ ಯಾಗಿದೆ.

ತೀರ್ಥ ಶಾಲೆಯಲ್ಲಿ ನಡೆದ ವಿಶ್ವ ಧ್ಯಾನ ದಿನಾಚರಣೆಯಲ್ಲಿ ಭಾಗವಹಿಸಿ ಹೇಳಿಕೆ

ಜಗತ್ತಿಗೆ ಶಾಂತಿಯನ್ನು ಸಂವರ್ಧನೆ ಮಾಡಲು ಧ್ಯಾನದ ಅಗತ್ಯವಿದೆ  ಎಂದು ತೀರ್ಥ ಶಾಲೆಯ ಡಾ.ಕೆ.ವಿ. ಪ್ರಕಾಶ್ ತಿಳಿಸಿದರು. -

Ashok Nayak
Ashok Nayak Dec 20, 2025 11:47 PM

ಗೌರಿಬಿದನೂರು: ಇಂದು ನಾವು ಎರಡನೆಯ ವಿಶ್ವ ಧ್ಯಾನ ದಿನವನ್ನು ಆಚರಿಸುತ್ತಿದ್ದೇವೆ. ಇಂದಿನ ಜಗತ್ತಿಗೆ ಶಾಂತಿಯನ್ನು ಸಂವರ್ಧನೆ ಮಾಡಲು ಧ್ಯಾನದ ಅಗತ್ಯವಿದೆ. ಎಲ್ಲಾ ವಯೋಮಾನದವರು ಧ್ಯಾನ ಮಾಡಬಹುದು. ಧ್ಯಾನವು  ಕೇವಲ ವೈಯಕ್ತಿಕ ಸುಖ- ಶಾಂತಿಗಷ್ಟೇ ಅಲ್ಲದೆ, ಒತ್ತಡ, ಆತಂಕ, ಘರ್ಷಣೆ, ಅನಿಶ್ಚಿತತೆ  ಮತ್ತು ಭಾವನಾತ್ಮಕ ಸಂಕಟಗಳಿಂದ ಬಳಲುತ್ತಿರುವ ಸಮಸ್ತ ಸಮಾಜಕ್ಕೆ ಧ್ಯಾನ ಅತ್ಯಂತ ಪ್ರಸ್ತುತ. ಧ್ಯಾನವು ವ್ಯಕ್ತಿಯನ್ನು ಸ್ವಯಂ ಶಿಸ್ತಿನ ಕಡೆಗೆ ಒಯ್ಯುತ್ತದೆ ಎಂದು ತೀರ್ಥ ಸಂಸ್ಥೆಯ ಅಧ್ಯಕ್ಷ ಪ್ರೊ.ಕೆ.ವಿ.ಪ್ರಕಾಶ್ ಅಭಿಪ್ರಾಯಪಟ್ಟರು.

ಪಟ್ಟಣದ ಮುನೇಶ್ವರ ಬಡಾವಣೆಯ ತೀರ್ಥ ಶಾಲೆಯಲ್ಲಿ ನಡೆದ ವಿಶ್ವ ಧ್ಯಾನ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.

ಇದನ್ನೂ ಓದಿ: Gauribidanur News: ಸಾದರ ಸಮುದಾಯದ ಏಳಿಗೆಯೇ ಸಂಘದ ಪ್ರಧಾನ ಧ್ಯೇಯವಾಗಿದೆ: ಗೌರವಾಧ್ಯಕ್ಷ ಪಿ.ಟಿ.ಶ್ರೀನಿವಾಸ್

ವಿಶ್ವಸಂಸ್ಥೆ 2024 ಡಿಸೆಂಬರ್ 21ರಂದು ವಿಶ್ವ ಧ್ಯಾನ ದಿನವೆಂದು  ಘೋಷಿಸಿದ್ದು ಜಗತ್ತಿನಾದ್ಯಂತ ಈ ದಿನವನ್ನು ಆಚರಿಸುತ್ತಾರೆ. ಧ್ಯಾನದಿಂದ ಏಕಾಗ್ರತೆ ಹೆಚ್ಚಾಗುತ್ತದೆ. ಏಕಾಗ್ರತೆಯಿಂದ ಮಾನಸಿಕ ಸ್ಥಿರತೆ ಮತ್ತು ಸಮತೋಲನವನ್ನು ಸಾಧಿಸಬಹುದು. ನಮ್ಮ ಗುರಿಯನ್ನು ಸಾಧಿಸಲು ಧ್ಯಾನ ಹೆಚ್ಚು ಸಹಕಾರಿಯಾಗಿದೆ. ಇಂದಿನ ವಿಶ್ವ ಧ್ಯಾನ ದಿನದ ಘೋಷವಾಕ್ಯ: ಒಬ್ಬರಲ್ಲಿ ಬದಲಾವಣೆಯು ಲಕ್ಷಾಂತರದಲ್ಲಿ ಬದಲಾವಣೆಯಾಗಲಿದೆ ಎಂದರು.

ನಾವು ಧ್ಯಾನದ ಮೂಲಕ ಆದರ್ಶ ಮತ್ತು ಸಂಘಟಿತ ಸಮಾಜವನ್ನು ಸಂರಚಿಸಬಹುದು ಎಂದು ತಿಳಿಸಿದರು. ಶಾಲಾ ಮುಖ್ಯ ಶಿಕ್ಷಕಿ ಎಂ. ಶೋಭಾ ಮಾತನಾಡಿ, ನಮ್ಮನ್ನು ಒತ್ತಡದಿಂದ ಮುಕ್ತ ಗೊಳಿಸಿ ನಮ್ಮ ಅಂತರAಗದೊAದಿಗೆ ಬೆಸೆಯುವ ಒಂದು ಮಾರ್ಗವೇ ಧ್ಯಾನ. ಧ್ಯಾನವು ಸ್ವಯಂ ಅರಿವನ್ನು ಹೆಚ್ಚಿಸಿ,ಆತಂಕವನ್ನು ಕಡಿಮೆ ಮಾಡುತ್ತದೆ. ಧ್ಯಾನವು ನೆಮ್ಮದಿ ನೀಡುವ ಮೂಲಕ ನಮ್ಮ ತರಂಗಗಳನ್ನು ಶುದ್ಧಗೊಳಿಸುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ ಮತ್ತು ಮನಸ್ಸನ್ನು ಕೇಂದ್ರೀಕರಿಸಲು ಹೆಚ್ಚು ಸಹಕಾರಿಯಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಲಾ ಸಿಬ್ಬಂದಿಯವರಾದ ಭಾರ್ಗವಿ, ಸುಜಾತ,ಚಂದ್ರಮ್ಮ ಮತ್ತು ತಿಮ್ಮಕ್ಕ ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಾಮೂಹಿಕವಾಗಿ ಧ್ಯಾನವನ್ನು ಮಾಡಲಾಯಿತು.