ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Assault Case: ಯುವತಿಗೆ ಮೆಸೇಜ್;‌ ಯುವಕನ ಬಟ್ಟೆ ಬಿಚ್ಚಿಸಿ, ಮರ್ಮಾಂಗಕ್ಕೆ ಒದ್ದು ರೇಣುಕಾಸ್ವಾಮಿ ಕೇಸ್‌ ಮಾದರಿಯಲ್ಲಿ ಹಲ್ಲೆ

Assault Case: ಹುಡುಗಿ ವಿಚಾರಕ್ಕೆ ಯುವಕನ ಬಟ್ಟೆ ಬಿಚ್ಚಿ, ಮರ್ಮಾಂಗಕ್ಕೆ ಒದ್ದು ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ. ʼನೀನೂ ರೇಣುಕಾಸ್ವಾಮಿ ರೀತಿ ಸಾಯ್ತೀಯಾʼ ಎಂದು ದಬಾಯಿಸುತ್ತಾ ಯುವಕನಿಗೆ ಥಳಿಸಿದ್ದಾರೆ. ಒಬ್ಬನ ಮೇಲೆ 8 ರಿಂದ 10 ಜನ ದುಷ್ಕರ್ಮಿಗಳು ಮುಗಿಬಿದ್ದು ಭೀಕರವಾಗಿ ಹಲ್ಲೆ ಮಾಡಿದ್ದಾರೆ.

ಯುವಕನ ಮರ್ಮಾಂಗಕ್ಕೆ ಒದ್ದು ರೇಣುಕಾಸ್ವಾಮಿ ಕೇಸ್‌ ಮಾದರಿಯಲ್ಲಿ ಹಲ್ಲೆ

ಹರೀಶ್‌ ಕೇರ ಹರೀಶ್‌ ಕೇರ Jul 7, 2025 9:32 AM

ಬೆಂಗಳೂರು: ಅಶ್ಲೀಲ ಮೆಸೇಜ್‌ (obscene message) ಮಾಡಿದ್ದಕ್ಕಾಗಿ ಚಿತ್ರದುರ್ಗದ ರೇಣುಕಾಸ್ವಾಮಿ ಮೇಲೆ ನಡೆದ ಹಲ್ಲೆ- ಕೊಲೆ (Renukaswamy murder case) ಮಾದರಿಯಲ್ಲಿಯೇ ಹಲ್ಲೆ (Assault Case) ಪ್ರಕರಣವೊಂದು ಬೆಂಗಳೂರು (Bengaluru crime news) ಗ್ರಾಮಾಂತರ ಜಿಲ್ಲೆಯ ನೆಲಮಂಗಲ (Nelamangala) ತಾಲೂಕಿನ ಸೋಲದೇವನಹಳ್ಳಿಯಲ್ಲಿ ನಡೆದಿದೆ. ಕಳೆದ ವರ್ಷ ಚಿತ್ರದುರ್ಗದ ರೇಣುಕಾ ಸ್ವಾಮಿ ಭೀಕರ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ ಹದಿನೇಳು ಮಂದಿ ಜೈಲು ಸೇರಿದ್ದರು. ಇದೀಗ ಬೆಂಗಳೂರಿನಲ್ಲಿ ರೇಣುಕಾಸ್ವಾಮಿ ರೀತಿಯೇ ಅಮಾನುಷ ಕೃತ್ಯ ನಡೆದಿದ್ದು ಹುಡುಗಿಯ ವಿಚಾರಕ್ಕೆ ಯುವಕನ ಬಟ್ಟೆ ಬಿಚ್ಚಿ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ.

ಹುಡುಗಿ ವಿಚಾರಕ್ಕೆ ಯುವಕನ ಬಟ್ಟೆ ಬಿಚ್ಚಿ, ಮರ್ಮಾಂಗಕ್ಕೆ ಒದ್ದು ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ. ʼನೀನೂ ರೇಣುಕಾಸ್ವಾಮಿ ರೀತಿ ಸಾಯ್ತೀಯಾʼ ಎಂದು ದಬಾಯಿಸುತ್ತಾ ಯುವಕನಿಗೆ ಥಳಿಸಿದ್ದಾರೆ. ಒಬ್ಬನ ಮೇಲೆ 8 ರಿಂದ 10 ಜನ ದುಷ್ಕರ್ಮಿಗಳು ಮುಗಿಬಿದ್ದು ಭೀಕರವಾಗಿ ಹಲ್ಲೆ ಮಾಡಿದ್ದಾರೆ. ಕೋಲುಗಳಿಂದ ಯುವಕನಿಗೆ ಮನಸೋ ಇಚ್ಛೆ ಥಳಿಸಿದ್ದಾರೆ. ಕಾಲುಗಳಿಂದ ಒದ್ದು ಕೈಯ್ಯಲ್ಲಿ ಗುದ್ದಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಯುವಕನನ್ನು ಬೆತ್ತಲೆ ಮಾಡಿ ಆತನ ಮರ್ಮಾಂಗ ತುಳಿದು ವಿಕೃತಿ ಮೆರೆದಿದ್ದಾರೆ. ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ರಾಕ್ಷಸರಂತೆ ವರ್ತಿಸಿದ ಇವರಿಗೆ ದರ್ಶನ್ ಸ್ಪೂರ್ತಿ ಎಂದು ಹೇಳಲಾಗುತ್ತಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯಲ್ಲಿ ಕಾಲೇಜಿಗೆ ಹೋಗುವಾಗ ಕುಶಾಲ್ ಮತ್ತು ಯುವತಿಯ ಮಧ್ಯೆ ಪ್ರೀತಿ ಶುರುವಾಗಿತ್ತು. ಕೆಲವು ತಿಂಗಳ ಹಿಂದೆ ಎರಡು ವರ್ಷದ ಪ್ರೀತಿ ಮುರಿದು ಬಿದ್ದಿದೆ. ಈ ವೇಳೆ ಯುವತಿಗೆ ಬೇರೊಬ್ಬ ಹುಡುಗನ ಪರಿಚಯವಾಗಿತ್ತು. ಇದನ್ನು ಸಹಿಸಲಾಗದೆ ಯುವತಿಗೆ ಕುಶಾಲ್ ಅಶ್ಲೀಲ ಮೆಸೇಜ್ ಮಾಡಿದ್ದ. ಹಾಗಾಗಿ ಯುವತಿಯ ಗೆಳೆಯ ಮತ್ತು ಆತನ ಸ್ನೇಹಿತರು ಸೇರಿ ಕುಶಾಲ್‌ನನ್ನು ಕಿಡ್ನ್ಯಾಪ್ ಮಾಡಿದ್ದಾರೆ. ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುವುದಾಗಿ ಕರೆಸಿ ಕಾರಿನಲ್ಲಿ ಅಪಹರಣ ಮಾಡಿದ್ದಾರೆ.

ಕುಶಾಲ್‌ನನ್ನು ಅಪರಿಚಿತ ಸ್ಥಳಕ್ಕೆ ಕರೆದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಯುವಕನ ಬಟ್ಟೆಯೆಲ್ಲ ಬಿಚ್ಚಿ ಮರ್ಮಾಂಗಕ್ಕೆ ತುಳಿದು ವಿಕೃತಿ ಮೆರೆದ ಆರೋಪಿಗಳು ವಿಡಿಯೋ ಸಹ ಮಾಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್ ಥರವೇ ಇದೂ ಆಗುತ್ತದೆ ಎಂದು ವಿಡಿಯೋ ಮಾಡಿದ್ದಾರೆ. ಅಲ್ಲದೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಘಟನೆ ಸಂಬಂಧ ಪೊಲೀಸರು ನಾಲ್ವರು ಆರೋಪಿಗಳನ್ನು ಆರೆಸ್ಟ್ ಮಾಡಿದ್ದಾರೆ. ಹೇಮಂತ್, ಯಶವಂತ್, ಶಿವಶಂಕರ್ ಮತ್ತು ಶಶಾಂಕ್ ಗೌಡ ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: Assault Case: ಮಾಡೆಲ್‌ ಮೇಲೆ ಖಾಸಗಿ ಬಸ್‌ ಸಿಬ್ಬಂದಿ ಹಲ್ಲೆ, ಬೆಲೆಬಾಳುವ ಸ್ವತ್ತುಗಳ ಸುಲಿಗೆ