Republic Day 2025: ಜ.26ರ ಗಣರಾಜ್ಯೋತ್ಸವ ಪಥ ಸಂಚಲನದ ಸಂಪೂರ್ಣ ವಿವರಗಳು ಇಲ್ಲಿವೆ

ಸ್ವಾತಂತ್ರ್ಯ ದಿನಾಚರಣೆ ನಮ್ಮ ದೇಶ ಪರಕೀಯರ ದಾಸ್ಯದಿಂದ ಮುಕ್ತಿಗೊಂಡು ಪ್ರಜಾಪ್ರಭುತ್ಚ ದೇಶವಾಗಿ ಮೂಡಿಬಂದ ದ್ಯೋತಕವಾಗಿದ್ದರೆ, ಗಣರಾಜ್ಯೋತ್ಸವ ನಮ್ಮ ದೇಶ ಒಂದು ಸಶಕ್ತ ಗಣತಂತ್ರ ರಾಷ್ಟ್ರವಾದ ಸವಿ ನೆನಪಿನ ಆಚರಣೆಯಾಗಿದೆ.

ಜ.26ರ ಗಣರಾಜ್ಯೋತ್ಸವ ಪಥ ಸಂಚಲನದ ಸಂಪೂರ್ಣ ವಿವರಗಳು ಇಲ್ಲಿವೆ
Profile Sushmitha Jain Jan 23, 2025 9:43 AM

ನವದೆಹಲಿ: ಈ ಬಾರಿಯ ಗಣರಾಜ್ಯೋತ್ಸವ ಆಚರಣೆಗೆ (Republic Day) ರಾಷ್ಟ್ರ ರಾಜಧಾನಿಯಲ್ಲಿ ಭರದ ಸಿದ್ಧತೆಗಳು ನಡೆಯುತ್ತಿವೆ. 76ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲು ಸರ್ವ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಈ ದಿನದಂದು ದೆಹಲಿಯಲ್ಲಿರುವ ಕರ್ತವ್ಯ ಪಥದಲ್ಲಿ (Kartavya Path) ನಡೆಯುವ ಆಕರ್ಷಕ ಪಥ ಸಂಚಲನದಲ್ಲಿ (parade) ನಮ್ಮ ದೇಶದ ಸೇನಾ ಶಕ್ತಿ ಹಾಗೂ ದೇಶದ ಸಾಂಸ್ಕೃತಿಕ ಮತ್ತು ಭೌಗೊಳಿಕ ವೈವಿಧ್ಯತೆಯನ್ನು ಬಿಂಬಿಸುವ ಸ್ತಬ್ಧ ಚಿತ್ರಗಳು (tableau) ಹಾಗೂ ವಿವಿಧ ಕಾರ್ಯಕ್ರಗಳು ಗಮನ ಸೆಳೆಯುತ್ತವೆ.

ಇಲ್ಲಿ ನಡೆಯುವ ಪ್ರತೀ ಪಥಸಂಚಲನ, ಪ್ರತೀ ಸೆಲ್ಯೂಟ್ ಮತ್ತು ಪ್ರತೀ ಸ್ತಬ್ಧಚಿತ್ರಗಳು ಹಾಗೂ ಗಣರಾಜ್ಯೋತ್ಸವದ ಪಥ ಸಂಚಲನವು ಭಾರತ ಒಂದು ಗಣತಂತ್ರ ಸಹಿತವಾದ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಮೂಡಿಬಂದ ಬಗೆಯನ್ನು ಬಿಂಬಿಸುತ್ತದೆ.

ಈ ಸಲದ ಗಣರಾಜ್ಯೋತ್ಸವ ‘ಸ್ವರ್ಣಿಮ್ ಭಾರತ್ : ವಿರಾಸತ್ ಔರ್ ವಿಕಾಸ್’ (Swarnim Bharat: Virasat aur Vikas) ಎಂಬ ಘೋಷ ವಾಕ್ಯದೊಂದಿಗೆ ಆಚರಿಸಲ್ಪಡುತ್ತಿದೆ. ಇದರಲ್ಲಿ ನಮ್ಮ ದೇಶದ ಸಾಂಸ್ಕೃತಿಕ ವೈಭವ ಮತ್ತು ಅಭಿವೃದ್ಧಿಯ ಸಾಧನೆಗಳನ್ನು ಸಂಭ್ರಮಿಸಲಾಗುತ್ತದೆ. ಈ ಬಾರಿಯ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಭಾರತದ ಮಿಲಿಟರಿ ಸಾಮರ್ಥ್ಯ ಮತ್ತು ಸಾಂಸ್ಕೃತಿಕ ವೈಭವದ ಅನಾವರಣ ನಡೆಯಲಿದೆ. ಈ ಮೂಲಕ ಗಣರಾಜ್ಯೋತ್ಸವದ ಪಥ ಸಂಚಲನವೂ ಸಹ ಚಿರಕಾಲ ನೆನಪಿನಲ್ಲಿ ಉಳಿಯುವ ಹೊಸ ಮೈಲುಗಲ್ಲುಗಳು, ಸಂಪ್ರದಾಯಗಳು ಮತ್ತು ನಮ್ಮ ದೇಶದ ಹೆಮ್ಮೆಯ ಪ್ರತೀಕಗಳನ್ನು ಇಲ್ಲಿ ಸೇರಿರುವವರಿಗೆ ಕಟ್ಟಿಕೊಡುವಲ್ಲಿ ಯಶಸ್ವಿಯಾಗಲಿವೆ ಎಂಬ ವಿಶ್ವಾಸ ಮೂಡಿದೆ.

ಈ ಬಾರಿಯ ಗಣರಾಜ್ಯೋತ್ಸವ ಪಥಸಂಚಲನವು ಜ.26ರಂದು ಬೆಳಿಗ್ಗೆ 10.30 ಗಂಟೆಗೆ ಪ್ರಾರಂಭಗೊಳ್ಳಲಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ (National War Memorial) ತೆರಳಿ ಅಲ್ಲಿ ಹುತಾತ್ಮರಾದವರಿಗೆ ಗೌರವ ಸಲ್ಲಿಸುವ ಮೂಲಕ ಗಣರಾಜ್ಯೋತ್ಸವದ ಅಧಿಕೃತ ಕಾರ್ಯಕ್ರಮಗಳು ಚಾಲನೆ ಪಡೆದುಕೊಳ್ಳಲಿವೆ. ಆ ಬಳಿಕ ರಾಷ್ಟ್ರಪತಿಗಳು ಕರ್ತವ್ಯ ಪಥಕ್ಕೆ ಆಗಮಿಸಿದ ಬಳಿಕ ಆಕರ್ಷಕ ಪಥ ಸಂಚಲನ ಚಾಲನೆಯನ್ನು ಪಡೆದುಕೊಳ್ಳಲಿದೆ.

ಈ ಪಥಸಂಚಲನವು ರಾಷ್ಟ್ರಪತಿ ಭವನದ (Rashtrapati Bhavan) ಬಳಿಯಿಂದ ಪ್ರಾರಂಭಗೊಂಡು ಕರ್ತವ್ಯ ಪಥದ ಮೂಲಕ ಸಾಗಿಬಂದು ಇಂಡಿಯಾ ಗೇಟ್ ಮೂಲಕ ಹಾದು ಹೋಗಿ ಕೆಂಪುಕೋಟೆಯಲ್ಲಿ (Red Fort) ಸಮಾಪನಗೊಳ್ಳಲಿದೆ.

ಪ್ರತೀ ವರ್ಷವೂ ನಮ್ಮ ಸೇನಾಶಕ್ತಿ ಮತ್ತು ಈ ದೇಶದ ಸಾಂಸ್ಕೃತಿಕ ಹಾಗೂ ಭೌಗೋಳಿಕ ವೈಶಿಷ್ಟ್ಯೆಗಳನ್ನು ಹಾಗೂ ವೈಜ್ಞಾನಿಕ ಸಾಧನೆಗಳನ್ನು ಸಾರುವ ಸ್ತಬ್ಧ ಚಿತ್ರಗಳು ಮತ್ತು ಕಾರ್ಯಕ್ರಮಗಳನ್ನು ವೀಕ್ಷಿಸಲು ವಿಶ್ವದ ವಿವಿಧ ರಾಷ್ಟ್ರಗಳನ್ನು ಮುಖ್ಯ ಅತಿಥಿಗಳನ್ನಾಗಿ ಆಹ್ವಾನಿಸಲಾಗುತ್ತದೆ. ಅಂತೆಯೇ ಈ ಬಾರಿಯ ಗಣರಾಜ್ಯೋತ್ಸವ ಕಾರ್ಯಕ್ರದಲ್ಲಿ ಇಂಡೋನೇಷ್ಯಾದ (Indonesia) ನೂತನ ಚುನಾಯಿತ ಅಧ್ಯಕ್ಷ ಪ್ರಭೋವೋ ಸುಬಿಯಾಂಟೋ (Prabowo Subianto) ಮುಖ್ಯ ಅತಿಥಿಗಳಾಗಿ ಈ ಭವ್ಯ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ.

ಈ ಗಣರಾಜ್ಯೋತ್ಸವ ಪಥಸಂಚಲನ ಕಾರ್ಯಕ್ರಮನ್ನು ನೀವು ನೇರವಾಗಿ ವೀಕ್ಷಿಸಬಹುದಾಗಿದ್ದು ಇದಕ್ಕಾಗಿ, ಮೀಸಲಿಡದ ಸೀಟುಗಳಿಗೆ ರೂ.20 ಹಾಗು ಮೀಸಲಿರಿಸಿದ ಸೀಟುಗಳಿಗೆ ರೂ.100 ಶುಲ್ಕವಿರುತ್ತದೆ. ಇದಕ್ಕಾಗಿ ಆಫ್ ಲೈನ್ ಬುಕ್ಕಿಂಗ್ ವ್ಯವಸ್ಥೆ ಇದ್ದು, ನವ ದೆಹಲಿಯಲ್ಲಿರುವ ನಿರ್ಧಿಷ್ಟ ಸ್ಥಳಗಳಲ್ಲಿ ಜ.25ರವರೆಗೆ ನೀವು ಟಿಕೆಟ್ ಗಳನ್ನು ಪಡೆದುಕೊಳ‍್ಳಬಹುದಾಗಿದೆ. ಈ ಕೌಂಟರ್ ಗಳು ಬೆಳಿಗ್ಗೆ 10 ಗಂಟಯಿಂದ ಸಾಯಂಕಾಲ 5 ಗಂಟೆಯವರೆಗೆ ತೆರೆದಿರುತ್ತದೆ.

ಇದನ್ನೂ ಓದಿ: Vishweshwar Bhat Column: ಒಂದು ಮರದ ಕೊಂಬೆ ಅಲ್ಲಾಡಿಸಿದ್ದಕ್ಕೆ ಕ್ಯಾತೆ ತೆಗೆದ ಜಪಾನಿಯರು!

ಇನ್ನು, ಗಣರಾಜ್ಯೋತ್ಸವ ಪೆರೇಡ್ ವಿಕ್ಷಿಸಲು ಪ್ರವೇಶ ಹೇಗೆ ಎಂಬ ಪ್ರಶ್ನೆಗೆ ಇಲ್ಲಿ ಉತ್ತರವಿದೆ. ಆ ದಿನ ಬೆಳಿಗ್ಗೆ 7 ಗಂಟೆಗೆ ಇಲ್ಲಿಗೆ ತೆರಳುವ ಗೇಟ್ ಗಳನ್ನು ತೆರೆಯಲಾಗುತ್ತದೆ. ಮತ್ತು ಈ ಗೇಟ್ ಗಳು 9 ಗಂಟೆಗೆ ಮುಚ್ಚಲ್ಪಡುತ್ತವೆ. ಭದ್ರತಾ ತಪಾಸಣೆ ಹಾಗೂ ಸಂಭಾವ್ಯ ಸಂಚಾರಿ ನಿಬಂಧನಗೆಳ ಕಾರಣದಿಂದ ಸಾಕಷ್ಟು ಮುಂಚಿತವಾಗಿಯೇ ಕಾರ್ಯಕ್ರಮ ಸ್ಥಳವನ್ನು ತಲುಪುವುದು ಉತ್ತಮ. ಅಂದ ಹಾಗೆ ಅಲ್ಲಿಗೆ ಹೋಗುವ ಸಂದರ್ಭದಲ್ಲಿ ನಿಮ್ಮೊಂದಿಗೆ ಸೂಕ್ತ ಫೊಟೋ ಐಡಿ ಮತ್ತು ಟಿಕೆಟ್ ಅಥವಾ ಪಾಸನ್ನು ಕೊಂಡೊಯ್ಯಲು ಮಾತ್ರ ಮರೆಯದಿರಿ!

ಜ.26ರಂದು ದೆಹಲಿ ಮೆಟ್ರೋ ಬೆಳ್ಳಂಬೆಳಿಗ್ಗೆ 4 ಗಂಟೆಗೆ ತನ್ನ ಸೇವೆಗಳನ್ನು ಪ್ರಾರಂಭಿಸಲಿದೆ ಮತ್ತು ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಭಾಗವಹಿಸಲು ತೆರಳಲು ಟಿಕೆಟ್ ಪಡೆದುಕೊಂಡವರಿಗೆ ಮೆಟ್ರೋ ಪ್ರಯಾಣ ಆ ದಿನ ಉಚಿತವಾಗಿರಲಿದೆ. ಬಳಿಕ ಮೆಟ್ರೋ ಸ್ಟೇಷನ್ ಗಳಿಂದ ಕಾರ್ಯಕ್ರಮ ನಡೆಯುವ ಸ್ಥಳದವರೆಗೆ ಉಚಿತ ಬಸ್ಸಿನ ವ್ಯವಸ್ಥೆಯೂ ಇರಲಿದೆ.

ಇನ್ನು, ನೀವು ನಿಮ್ಮ ಸ್ವಂತ ವಾಹನದಲ್ಲಿ ತೆರಳುವುದಿದ್ದರೆ ನಿಗದಿತ ಶುಲ್ಕ ಪಾವತಿಸಿ ನಿಮ್ಮ ವಾಹನಗಳನ್ನು ಸುರಕ್ಷಿತವಾಗಿ ಪಾರ್ಕ್ ಮಾಡಿ ನಿವು ಗಣರಾಜ್ಯೋತ್ಸವ ಪರೇಡ್ ಎಂಜಾಯ್ ಮಾಡಬಹುದು. ಹಾಗೆಂದು ಎಲ್ಲೆಂದರಲ್ಲಿ ವಾಹನ ಪಾರ್ಕಿಂಗ್ ಮಾಡಿ ಹೋದಲ್ಲಿ ಮಾತ್ರ ದಂಡ ಕಟ್ಟಬೇಕಾದಿತು ಮಾತ್ರವಲ್ಲದೇ ನಿಮ್ಮ ವಾಹನವನ್ನು ಸಂಚಾರಿ ಪೊಲೀಸರು ಎತ್ತಾಕ್ಕೊಂಡು ಹೋಗುವ ಸಾಧ್ಯತೆಗಳೂ ಇವೆ.

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ