ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Republic Day: ಭಾರತದ ಗಣರಾಜ್ಯೋತ್ಸವ, ಸಂವಿಧಾನದ ಬಗ್ಗೆ ಗೊತ್ತಿರದ ವಿಚಾರಗಳು ಇಲ್ಲಿವೆ

ಗಣರಾಜ್ಯೋತ್ಸವವನ್ನು ಪ್ರತಿ ವರ್ಷ ಜನವರಿ 26ರಂದು ಆಚರಿಸಲಾಗುತ್ತದೆ. ಈ ದಿನದಂದು ಭಾರತದ ಸಂವಿಧಾನವು ಜಾರಿಗೆ ಬಂದಿತ್ತು ಮತ್ತು ಭಾರತವು ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ರಾಷ್ಟ್ರವಾಯಿತು.

ಭಾರತದ ಸಂವಿಧಾನದ ಕುರಿತಾದ ಕೆಲ ಇಂಟ್ರೆಸ್ಟಿಂಗ್ ವಿಚಾರ ಇಲ್ಲಿದೆ

ಭಾರತದ ಗಣರಾಜ್ಯೋತ್ಸವ ಹಿಂದಿನ ಆಸಕ್ತಿಕರ ಸಂಗತಿಗಳು

Profile Sushmitha Jain Jan 26, 2025 7:06 AM

ಬೆಂಗಳೂರು: ಜನವರಿ 26ರ ಗಣರಾಜ್ಯೋತ್ಸವ (Republic) ದಿನ ಪ್ರತಿಯೊಬ್ಬ ಭಾರತೀಯರ ಪಾಲಿಗೆ ಹಬ್ಬವೇ ಸರಿ. ಈ ವರ್ಷ 76ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ. 1950ರಲ್ಲಿ ಭಾರತದ ಸಂವಿಧಾನ ನಮಗೆಲ್ಲರಿಗೂ ಸಿಕ್ಕಂತಹ ಗೌರವಯುತ ದಿನ ಇದು. ಅದರಲ್ಲೂ ಬ್ರಿಟಿಷರು ರೂಪಿಸಿದ್ದ ಗೌರ್ನಮೆಂಟ್ ಆಫ್ ಇಂಡಿಯಾ ಆ್ಯಕ್ಟ್ 1935 ಅನ್ನು ಬದಲಿಸಿದ ದಿನ. ಗಣರಾಜ್ಯೋತ್ಸವದ ದಿನ ದೆಹಲಿಯಲ್ಲಿ ನಡೆಯುವ ವಿಶೇಷ ಪೆರೇಡ್ ನೋಡಲು ನಿಜಕ್ಕೂ ಅದ್ಬುತ (Republic Day Interesting Facts). ಈ ಲೇಖನದಲ್ಲಿ ಗಣರಾಜ್ಯೋತ್ಸವ ದಿನದ ಬಗೆಗಿನ ಕೆಲವೊಂದು ಮುಖ್ಯ ಮತ್ತು ಆಸಕ್ತಿಕರ ಅಂಶಗಳನ್ನು (Interesting Facts) ನಿಮ್ಮ ಮುಂದೆ ತೆರೆದಿಡುತ್ತಿದ್ದೇವೆ.

1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಸಂವಿಧಾನ ರಚನೆಗೆ ಸಿದ್ಧತೆ ಆರಂಭವಾಯಿತು. ಇದಕ್ಕಾಗಿ ಭಾರತದ ಸಂವಿಧಾನ ಸಭೆಯನ್ನು ರಚಿಸಲಾಯಿತು ಮತ್ತು 1949ರ ಜನವರಿ 26ರಂದು ಸಂವಿಧಾನವನ್ನು ಅಂಗೀಕರಿಸಲಾಯಿತು. ಇದನ್ನು ಅಧಿಕೃತವಾಗಿ 1950ರ ಜನವರಿ 26ರಂದು ಜಾರಿಗೆ ತರಲಾಯಿತು.

ಸಂವಿಧಾನದ ಎರಡು ಕೈಬರಹದ ಪ್ರತಿಗಳಿಗೆ 1950ರ ಜನವರಿ 24ರಂದು ಸಹಿ ಹಾಕಲಾಯಿತು. ಎರಡು ದಿನಗಳ ನಂತರ ಅಂದರೆ ಜನವರಿ 26ರಂದು ದೇಶದಾದ್ಯಂತ ಸಂವಿಧಾನ ಜಾರಿಗೆ ಬಂತು. ಭಾರತೀಯ ಸಂವಿಧಾನದ ಈ ಪ್ರತಿಗಳನ್ನು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಕೈಯಿಂದ ಬರೆಯಲಾಗಿದೆ. ಈ ಪ್ರತಿಗಳನ್ನು ಸಂಸತ್ ಭವನದ ಗ್ರಂಥಾಲಯದಲ್ಲಿ ಸುರಕ್ಷಿತವಾಗಿ ಇಡಲಾಗಿದೆ.

ವಿಶ್ವದ ಅತ್ಯಂತ ದೊಡ್ಡ ಸಂವಿಧಾನ

ಭಾರತದ್ದು ವಿಶ್ವದಲ್ಲಿಯೇ ಅತ್ಯಂತ ದೊಡ್ಡದಾದ ಸಂವಿಧಾನ. ಸಂವಿಧಾನ ರಚನೆಗೆ ಡಾ.ಬಿ.ಆರ್.ಅಂಬೇಡ್ಕರ್ ಅವರ ನೇತೃತ್ವದ ತಂಡವನ್ನು ರಚಿಸಲಾಗಿತ್ತು. ತಂಡದಲ್ಲಿ ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಗೋಪಾಲಸ್ವಾಮಿ ಅಯ್ಯಂಗಾರ್, ಟಿ.ಟಿ.ಕೃಷ್ಣಮಾಚಾರಿ, ಡಿ.ಪಿ.ಖೇತಾನ್, ಸರ್ ಬೆನೆಗಲ್, ಕನ್ಹಯ್ಯಲಾಲ್ ಮುನ್ಷಿ ಮತ್ತು ಮೊಹಮ್ಮದ್ ಸಾಅದುಲ್ಲಾ ಮತ್ತಿತರರಿದ್ದರು. 448 ವಿಧಿಗಳನ್ನು 22 ಭಾಗಗಳಲ್ಲಿಯೂ 10 (ನಂತರ 12) ಅನುಚ್ಛೇದಗಳನ್ನೂ, 118 ತಿದ್ದುಪಡಿಗಳನ್ನೂ ಹೊಂದಿರುವ ಈ ಸಂವಿಧಾನದ ಆಂಗ್ಲ ಭಾಷೆಯ ಆವೃತ್ತಿಯು 1,17,369 ಶಬ್ಧಗಳನ್ನು ಹೊಂದಿದೆ.

ಸಂವಿಧಾನ ರಚನೆಗೆ ತೆಗೆದುಕೊಂಡ ಸಮಯ

ಡಾ.ಬಿ.ಆರ್. ಅಂಬೇಡ್ಕರ್‌ ಅವರು ಭಾರತದ ಸಂವಿಧಾನದ ಕರಡನ್ನು ಸಿದ್ಧಪಡಿಸಲು, 2 ವರ್ಷ 11 ತಿಂಗಳು ಮತ್ತು 18 ದಿನಗಳನ್ನು ತೆಗೆದುಕೊಂಡರು. ತದನಂತರ ಇಂಗ್ಷಿಷ್‌ ಮತ್ತು ಹಿಂದಿಯಲ್ಲಿ ಹಸ್ತಾಕ್ಷರದಲ್ಲಿ ಸಂವಿಧಾನಗಳನ್ನು ಸಿದ್ಧಪಡಿಸಲಾಯಿತು.

ಹಸ್ತಾಕ್ಷರದಲ್ಲಿರುವ ಪ್ರತಿಗಳು

ಹಸ್ತಾಕ್ಷರದಲ್ಲಿ ಬರೆದಿರುವ ಭಾರತೀಯ ಸಂವಿಧಾನದ ಆ ಎರಡೂ ಪ್ರತಿಗಳನ್ನು ಸಂಸತ್ತಿನ ಗ್ರಂಥಾಲಯದಲ್ಲಿ ಹೀಲಿಯಂ ಭರ್ತಿ ಮಾಡಿರುವ ಪೆಟ್ಟಿಗೆಯಲ್ಲಿ ಜೋಪಾನವಾಗಿ ಇಡಲಾಗಿದೆ. ಇದು ಅನುಷ್ಠಾನಕ್ಕೆ ಬಂದಾಗಿನಿಂದ ಇದುವರೆಗೂ 94 ತಿದ್ದುಪಡಿಗಳು ಆಗಿವೆ.

ಮುಂಡಕ ಉಪನಿಷತ್ತಿನಿಂದ ಬಂದ ಧ್ಯೇಯವಾಕ್ಯ

ಮುಂಡಕ ಉಪನಿಷತ್ತಿನಿಂದ ಭಾರತದ ಧ್ಯೇಯವಾಕ್ಯ ʼಸತ್ಯಮೇವ ಜಯತೇʼಯನ್ನು ಆರಿಸಿಕೊಳ್ಳಲಾಗಿದೆ. ಅಲ್ಲದೆ ಮದನ್ ಮೋಹನ್ ಮಾಳವಿಯಾ ಅವರು ಈ ಧ್ಯೇಯವಾಕ್ಯವನ್ನು ಆರಿಸಿದ ಕೀರ್ತಿಗೆ ಪಾತ್ರರಾದರು.

ಇಡೀ ದೇಶದಲ್ಲಿ ಅನುಷ್ಠಾನ

ಈ ಎರಡೂ ಭಾಷೆಗಳಲ್ಲಿ ಸಿದ್ಧಪಡಿಸಿದ ಸಂವಿಧಾನದ ಪ್ರತಿಗಳಿಗೆ 1950ರ ಜನವರಿ 24ರಂದು 308 ಮಂದಿಗಳು ಸಹಿಯನ್ನು ಹಾಕಿದರು. ಅದಾಗಿ ಎರಡು ದಿನಗಳ ನಂತರ ಈ ಸಂವಿಧಾನವು ಜಾರಿಗೆ ಬಂತು. ಆನಂತರ ಅದನ್ನು ಇಡೀ ದೇಶದಲ್ಲಿ ಅನುಷ್ಠಾನಕ್ಕೆ ತರಲಾಯಿತು.

ಕೆಲವು ಕುತೂಹಲಕಾರಿ ಸಂಗತಿ

1949ರಲ್ಲಿ ಭಾರತದ ಸಂವಿಧಾನವನ್ನು ಸಂವಿಧಾನ ರಚನಾ ಸಭೆಯ ಅಧ್ಯಕ್ಷ ಡಾ. ರಾಜೇಂದ್ರ ಪ್ರಸಾದ್ ಅವರಿಗೆ ಹಸ್ತಾಂತರಿಸಲಾಯಿತು. ಈ ದಿನದಂದು ಭಾರತದ ಸಂವಿಧಾನವನ್ನು ಸಿದ್ಧಪಡಿಸಲಾಯಿತು.

1950ರಲ್ಲಿ ಭಾರತವನ್ನು ಸಾರ್ವಭೌಮ ಪ್ರಜಾಸತ್ತಾತ್ಮಕ ಗಣರಾಜ್ಯವೆಂದು ಘೋಷಿಸಲಾಯಿತು ಮತ್ತು ಭಾರತದ ಸಂವಿಧಾನವು ಜಾರಿಗೆ ಬಂತು. ಸ್ವತಂತ್ರ ಭಾರತದ ಮೊದಲ ಮತ್ತು ಕೊನೆಯ ಗವರ್ನರ್ ಜನರಲ್ ಚಕ್ರವರ್ತಿ ರಾಜಗೋಪಾಲಾಚಾರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಡಾ.ರಾಜೇಂದ್ರ ಪ್ರಸಾದ್ ದೇಶದ ಮೊದಲ ರಾಷ್ಟ್ರಪತಿಯಾದರು.

1929ರ ಡಿಸೆಂಬರ್‌ನಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನವು ಲಾಹೋರ್‌ನಲ್ಲಿ ನಡೆಯಿತು. ಈ ಅಧಿವೇಶನದ ಅಧ್ಯಕ್ಷತೆಯನ್ನು ಪಂಡಿತ್ ಜವಾಹರಲಾಲ್ ನೆಹರೂ ವಹಿಸಿದ್ದರು.

1930ರ ಜನವರಿ 26ರೊಳಗೆ ಬ್ರಿಟಿಷ್ ಸರ್ಕಾರವು ಭಾರತಕ್ಕೆ ಡೊಮಿನಿಯನ್ ಸ್ಥಾನಮಾನವನ್ನು ನೀಡದಿದ್ದರೆ, ಭಾರತವು ಸಂಪೂರ್ಣವಾಗಿ ಸ್ವತಂತ್ರವೆಂದು ಘೋಷಿಸುತ್ತದೆ ಎಂದು ಅಧಿವೇಶನದಲ್ಲಿ ನಿರ್ಣಯವನ್ನು ಅಂಗೀಕರಿಸಲಾಯಿತು. 1930ರ ಜನವರಿ 26ರವರೆಗೆ ಬ್ರಿಟಿಷ್ ಸರ್ಕಾರವು ಏನನ್ನೂ ನೀಡದಿದ್ದಾಗ, ಕಾಂಗ್ರೆಸ್ ಅಂದು ಭಾರತಕ್ಕೆ ಸಂಪೂರ್ಣ ಸ್ವಾತಂತ್ರ್ಯದ ಸಂಕಲ್ಪವನ್ನು ಘೋಷಿಸಿತು.

ಈ ಸುದ್ದಿಯನ್ನು ಓದಿ: Republic Day 2025: ನಾಳೆ 76ನೇ ಗಣರಾಜ್ಯೋತ್ಸವ; ಈ ದಿನದ ಇತಿಹಾಸ ಏನು? ಆಚರಣೆ ಹೇಗೆ? ಇಲ್ಲಿದೆ ಮಾಹಿತಿ

ಭಾರತವು 1930ರ ಜನವರಿ 26ರಂದು ಸ್ವಾತಂತ್ರ್ಯ ದಿನವನ್ನು ಆಚರಿಸಿತು. 1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬರುವವರೆಗೂ ಜನವರಿ 26ನ್ನು ಸ್ವಾತಂತ್ರ್ಯ ದಿನವನ್ನಾಗಿ ಆಚರಿಸಲಾಗುತ್ತಿತ್ತು. ಇದರ ನಂತರ ದೇಶವು ಸ್ವತಂತ್ರವಾಯಿತು ಮತ್ತು ಆಗಸ್ಟ್ 15 ಅನ್ನು ಭಾರತದ ಸ್ವಾತಂತ್ರ್ಯ ದಿನವೆಂದು ಅಂಗೀಕರಿಸಲಾಯಿತು.

ನಮ್ಮ ಸಂವಿಧಾನವು 1949ರ ನವೆಂಬರ್ 26ರ ಹೊತ್ತಿಗೆ ಸಿದ್ಧವಾಯಿತು. ಸಂವಿಧಾನವು 1950ರ ಜನವರಿ 26ರಂದು ಜಾರಿಗೆ ಬಂತು ಮತ್ತು ಅಂದಿನಿಂದ ಈ ದಿನವನ್ನು ಗಣರಾಜ್ಯ ದಿನ ಎಂದು ಆಚರಿಸಲಾಗುತ್ತದೆ. ಭಾರತದ ಸ್ವಾತಂತ್ರ್ಯದ ನಂತರ ಸಂವಿಧಾನ ಸಭೆಯನ್ನು ರಚಿಸಲಾಯಿತು. ಸಂವಿಧಾನ ರಚನಾ ಸಮಿತಿಯು 1946ರ ಡಿಸೆಂಬರ್ 9ರಂದು ತನ್ನ ಕೆಲಸವನ್ನು ಪ್ರಾರಂಭಿಸಿತು. ಸಂವಿಧಾನ ರಚನೆಯ ಸಮಯದಲ್ಲಿ ಸಂವಿಧಾನ ಸಭೆಯು ಒಟ್ಟು 114 ದಿನಗಳ ಕಾಲ ಸಭೆ ಸೇರಿತು. ಅದರ ಸಭೆಗಳಲ್ಲಿ ಭಾಗವಹಿಸಲು ಪತ್ರಿಕಾ ಮತ್ತು ಸಾರ್ವಜನಿಕರಿಗೆ ಸ್ವಾತಂತ್ರ್ಯವಿತ್ತು.

ಸಂವಿಧಾನವು ಜನವರಿ 26ರಂದು ಏಕೆ ಜಾರಿಗೆ ಬಂತು?

1949ರ ನವೆಂಬರ್ 26ರಂದು ಸಂವಿಧಾನ ಸಭೆಯು ಸಂವಿಧಾನವನ್ನು ಅಂಗೀಕರಿಸಿತು. ಇದನ್ನು ಜನವರಿ 26ರಂದು ಜಾರಿಗೆ ತರಲಾಯಿತು. ಇದಕ್ಕೆ ಕಾರಣವೆಂದರೆ 1930ರ ಜನವರಿ 26ರಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಭಾರತವನ್ನು ಪೂರ್ಣ ಸ್ವರಾಜ್ ಎಂದು ಘೋಷಿಸಿತು. 20 ವರ್ಷಗಳ ನಂತರ ಒಂದೇ ದಿನದಲ್ಲಿ ಸಂವಿಧಾನ ಜಾರಿಯಾಗಿದೆ. ಭಾರತೀಯ ಸಂವಿಧಾನವನ್ನು ಕೈಯಿಂದ ಬರೆಯಲಾಗಿದೆ, ಅದು ಸಂಸತ್ತಿನ ಗ್ರಂಥಾಲಯದಲ್ಲಿ ಇನ್ನೂ ಸುರಕ್ಷಿತವಾಗಿದೆ.