ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Om Prakash murder: ಗನ್‌ ತೋರಿಸಿ ಬೆದರಿಸುತ್ತಿದ್ದ ಓಂಪ್ರಕಾಶ್‌, 10 ಬಾರಿ ಚೂರಿಯಿಂದ ಇರಿದ ಪತ್ನಿ

ಮೂರು ದಿನಗಳ ಹಿಂದೆ ಐಪಿಎಸ್‌ ಫ್ಯಾಮಿಲಿ ವಾಟ್ಸಾಪ್​ ಗ್ರೂಪ್​ನಲ್ಲಿ ಓಂ ಪ್ರಕಾಶ್‌ ಪತ್ನಿ ಪಲ್ಲವಿಯವರು, “ನನ್ನ ಪತಿ ನನಗೆ, ಮಗಳಿಗೆ ತುಂಬಾ ಚಿತ್ರಹಿಂಸೆ ಕೊಡುತ್ತಿದ್ದಾರೆ. ಮನೆಯಲ್ಲಿ ನನ್ನ ಪತಿ ಗನ್ ಹಿಡಿದುಕೊಂಡು ಓಡಾಡುತ್ತಿದ್ದಾರೆ. ಶೂಟ್ ಮಾಡಿ ಕೊಲೆ ಮಾಡುತ್ತೇನೆ ಎಂದು ಭಯಪಡಿಸುತ್ತಿದ್ದಾರೆ. ಹೀಗಾಗಿ, ಪತಿ ವಿರುದ್ಧ ಸುಮೊಟೋ ಕೇಸ್" ದಾಖಲಿಸುವಂತೆ ಮೆಸೇಜ್ ಮಾಡಿದ್ದರಂತೆ.

ಗನ್‌ ತೋರಿಸಿ ಬೆದರಿಸುತ್ತಿದ್ದ ಓಂ ಪ್ರಕಾಶ್‌, 10 ಬಾರಿ ಚೂರಿ ಇರಿದ ಪತ್ನಿ

ಓಂ ಪ್ರಕಾಶ್

ಹರೀಶ್‌ ಕೇರ ಹರೀಶ್‌ ಕೇರ Apr 21, 2025 7:05 AM

ಬೆಂಗಳೂರು: ನಿವೃತ್ತ ಪೊಲೀಸ್​ ಮಹಾನಿರ್ದೇಶಕ ಓಂ ಪ್ರಕಾಶ್ (DG and IG Om Prakash murder case) ಅವರ ಹತ್ಯೆಯಾಗಿದ್ದು, ಸ್ವತಃ ಪತ್ನಿಯೇ (wife) ಅವರನ್ನು ಹತ್ತು ಬಾರಿ ಚಾಕುವಿನಿಂದ ಇರಿದು (Stabbed) ಹತ್ಯೆ ಮಾಡಿದ್ದಾರೆ. ಮನೆಯಲ್ಲಿ ಸದಾ ಗನ್‌ ಹಿಡಿದುಕೊಂಡು ಓಡಾಡುತ್ತಿದ್ದ ಓಂ ಪ್ರಕಾಶ್‌, ಗನ್‌ ತೋರಿಸಿ ಪತ್ನಿಗೆ ಬೆದರಿಕೆ (threat) ಹಾಕುತ್ತಿದ್ದರು ಎಂದು ಗೊತ್ತಾಗಿದೆ. ಇದರಿಂದ ಪತ್ನಿ ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದ್ದರು ಎಂದೂ ತಿಳಿದುಬಂದಿದೆ. ಹೀಗಾಗಿ ಪತಿಗೇ ಚಾಕುವಿನಿಂದ ಇರಿಯುವ ಮೂಲಕ ತಮ್ಮ ಚಿತ್ರಹಿಂಸೆಗೆ ಅವರು ಕೊನೆ ಹಾಡಿದ್ದಾರೆ ಎನ್ನಲಾಗಿದೆ.

ಬೆಂಗಳೂರಿನ (Bengaluru) ಹೆಚ್​ಎಸ್​ಆರ್​ ಲೇಔಟ್​​ ನಿವಾಸದಲ್ಲಿ ಓಂ ಪ್ರಕಾಶ್ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ನಿವೃತ್ತ ಡಿಜಿ ಮತ್ತು ಐಜಿಪಿ ಓಂ ಪ್ರಕಾಶ್ ಅವರನ್ನು​ ಪತ್ನಿ ಪಲ್ಲವಿಯವರೇ ಕೊಲೆ ಮಾಡಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಪತ್ನಿ ಪಲ್ಲವಿ ಮತ್ತು ಪುತ್ರಿ ಕೃತಿ ಅವರನ್ನು ವಶಕ್ಕೆ ಪಡೆದಿದ್ದಾರೆ. ಪ್ರಾಥಮಿಕ ತನಿಖೆ ವೇಳೆ, ಪತಿ ಓಂ ಪ್ರಕಾಶ್ ಅವರನ್ನು ಪತ್ನಿ ಪಲ್ಲವಿ 8 ರಿಂದ10 ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿರುವುದು ತಿಳಿದುಬಂದಿದೆ. ಚಾಕು ಇರಿತದಿಂದ ಓಂ ಪ್ರಕಾಶ್​ ಅವರ ಎದೆ, ಹೊಟ್ಟೆ ಹಾಗೂ ಕೈ ಭಾಗಕ್ಕೆ ಗಂಭೀರವಾದ ಗಾಯವಾಗಿದೆ. ಹೊಟ್ಟೆ ಭಾಗಕ್ಕೆ ಸುಮಾರು 4-5 ಬಾರಿ ಚಾಕುವಿನಿಂದ ಇರಿದ ಪರಿಣಾಮ ತೀವ್ರ ರಕ್ತಸ್ರಾವವಾಗಿದೆ. ಮನೆಯ ಪಡಸಾಲೆ ತುಂಬ ರಕ್ತ ಹರಿದಿದೆ. ಓಂ ಪ್ರಕಾಶ್​ ಅವರು ಸುಮಾರು 15-20 ನಿಮಿಷಗಳ ಕಾಲ ರಕ್ತದ ಮಡುವಿನಲ್ಲಿ ಒದ್ದಾಡಿ ಪ್ರಾಣ ಬಿಟ್ಟಿದ್ದಾರೆ.

ಪತಿಯ ನರಳಾಟವನ್ನು ಪತ್ನಿ ಪಲ್ಲವಿ ನೋಡುತ್ತಾ ನಿಂತಿದ್ದರು. ನಂತರ, ಪತ್ನಿ ಪಲ್ಲವಿ ಹೆಚ್​ಎಸ್​ಆರ್ ಲೇಔಟ್ ಪೊಲೀಸರಿಗೆ​ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಪತಿ ಓಂ ಪ್ರಕಾಶ್​ ಮೃತಪಟ್ಟ ಬಳಿಕ, ಪಲ್ಲವಿ ಮತ್ತೋರ್ವ ನಿವೃತ್ತ ಡಿಜಿ ಮತ್ತು ಐಜಿಪಿಯ ಪತ್ನಿಗೆ ವಿಡಿಯೋ ಕರೆ ಮಾಡಿ, ‘I have Finished monster’ ಅಂತ ಎಂದಿದ್ದರಂತೆ.

ಮೂರು ದಿನಗಳ ಹಿಂದೆ IPS ಫ್ಯಾಮಿಲಿ ವಾಟ್ಸಾಪ್​ ಗ್ರೂಪ್​ನಲ್ಲಿ ಪತ್ನಿ ಪಲ್ಲವಿಯವರು, “ನನ್ನ ಪತಿ ನನಗೆ, ಮಗಳಿಗೆ ತುಂಬಾ ಚಿತ್ರಹಿಂಸೆ ಕೊಡುತ್ತಿದ್ದಾರೆ. ಮನೆಯಲ್ಲಿ ನನ್ನ ಪತಿ ಗನ್ ಹಿಡಿದುಕೊಂಡು ಓಡಾಡುತ್ತಿದ್ದಾರೆ. ಶೂಟ್ ಮಾಡಿ ಕೊಲೆ ಮಾಡುತ್ತೇನೆ ಎಂದು ಭಯಪಡಿಸುತ್ತಿದ್ದಾರೆ. ಹೀಗಾಗಿ, ಪತಿ ವಿರುದ್ಧ ಸುಮೊಟೋ ಕೇಸ್ ದಾಖಲಿಸುವಂತೆ” ಮೆಸೇಜ್ ಮಾಡಿದ್ದರಂತೆ.

ಆಸ್ತಿ ವಿಚಾರಕ್ಕೆ ತಗಾದೆ

ಆಸ್ತಿ ವಿಚಾರಕ್ಕೆ ಕೊಲೆಯಾಗಿದೆ ಎಂಬ ಅನುಮಾನವೂ ವ್ಯಕ್ತವಾಗಿದೆ. ನಿವೃತ್ತ ಪೊಲೀಸ್​ ಮಹಾನಿರ್ದೇಶಕ ಓಂ ಪ್ರಕಾಶ್ ಅವರು ದಾಂಡೇಲಿಯಲ್ಲಿ ಆಸ್ತಿ ಹೊಂದಿದ್ದರು. ಈ ಆಸ್ತಿಯನ್ನು ಓಂ ಪ್ರಕಾಶ್ ಅವರು ತಮ್ಮ ತಂಗಿಯ ಹೆಸರಿಗೆ ಮಾಡಿದ್ದರು ಎಂದು ತಿಳಿದುಬಂದಿದೆ. ತಂಗಿ ಹೆಸರಿನಲ್ಲಿ ಆಸ್ತಿ ಮಾಡಿದ್ದಕ್ಕೆ ಹಲವು ದಿನಗಳಿಂದ ಓಂ ಪ್ರಕಾಶ್​ ಮತ್ತು ಅವರ ಪತ್ನಿ ಪಲ್ಲವಿ ನಡುವೆ ಗಲಾಟೆ ನಡೆಯುತ್ತಿತ್ತು ಎಂದು ಹೇಳಲಾಗುತ್ತಿದೆ. ಇನ್ನು, ತಂಗಿ ವಿಚಾರವಾಗಿ ಮಾತನಾಡಬೇಡ ಅಂತ ಪತ್ನಿ ಪಲ್ಲವಿ ಅವರಿಗೆ ಓಂಪ್ರಕಾಶ್‌ ವಾರ್ನ್‌ ಮಾಡಿದ್ದರಂತೆ. ಈ ವಿಚಾರಕ್ಕೆ ಕೊಲೆಯಾಗಿದೆ ಎಂದು ಹೇಳಲಾಗುತ್ತಿದೆ.

ಓಂ ಪ್ರಕಾಶ್ ಅವರಿಗೆ ಸೇರಿದ ಎರಡು ಮನೆ ಬೆಂಗಳೂರಿನಲ್ಲಿ ಇವೆ. ಕಾವೇರಿ ಜಂಕ್ಷನ್​ನ ಪ್ರೆಸ್ಟೀಜ್ ಅಪಾರ್ಟ್ಮೆಂಟ್​ನಲ್ಲಿ ಫ್ಲಾಟ್ ಇದೆ. ಹೆಚ್.ಎಸ್.ಆರ್ ಲೇಔಟ್​ನ ಐಪಿಎಸ್ ಕ್ವಾಟ್ರಸ್​ನಲ್ಲಿ ಮನೆ ಇದೆ. ಮನೆಯಲ್ಲಿ ಗಲಾಟೆ ಆದಾಗ ಓಂ ಪ್ರಕಾಶ್​ ಅವರು ಪ್ರೆಸ್ಟೀಜ್ ಅಪಾರ್ಟ್ಮೆಂಟ್​ನಲ್ಲಿ ವಾಸಿಸುತ್ತಿದ್ದರು ಎಂದು ಮಾಹಿತಿ ದೊರೆತಿದೆ.

ಇದನ್ನೂ ಓದಿ: Om Prakash Murder: ಮಾಜಿ ಡಿಜಿ-ಐಜಿಪಿ ಓಂ ಪ್ರಕಾಶ್‌ ಪತ್ನಿ ಅರೆಸ್ಟ್; ಕೊಲೆ ಬಳಿಕ Monsterನ ಮುಗಿಸಿದೆ ಎಂದು ವಿಡಿಯೋ ಕಾಲ್‌!