RG Kar Case: ಆರ್‌ಜಿಕರ್ ಪ್ರಕರಣ; ಮಮತಾ ಬ್ಯಾನರ್ಜಿ ಸಾಕ್ಷ್ಯಗಳನ್ನು ತಿರುಚಿದ್ದಾರೆ: ಸಂತ್ರಸ್ತೆ ವೈದ್ಯೆಯ ತಂದೆ ವಾಗ್ದಾಳಿ
RG Kar Case: ಕೋಲ್ಕತಾದ ಆರ್‌ಜಿ ಕರ್ ಕಾಲೇಜಿನ ಟ್ರೈನಿ ವೈದ್ಯೆಯ ಪ್ರಕರಣದಲ್ಲಿ ಅಪರಾಧಿಗೆ ಜೀವಾವಧಿ ಶಿಕ್ಷೆಯಾಗಿದೆ. ಅತ್ಯಾಚಾರ ಮಾಡಿ ಅಮಾನವೀಯವಾಗಿ ಹತ್ಯೆ ಎಸಗಿದ ಅವನನ್ನು ಗಲ್ಲಿಗೇರಿಸಬೇಕೆಂದು ಸಂತ್ರಸ್ತೆಯ ಪೋಷಕರು ನ್ಯಾಯಾಲಯದ ಮೊರೆ ಹೋಗಿದ್ದರು. ಗಲ್ಲುಶಿಕ್ಷೆ ತಪ್ಪಲು ಮಮತಾ ಬ್ಯಾನರ್ಜಿಯೇ ಕಾರಣ, ಅವರು ಸಾಕ್ಷ್ಯಗಳನ್ನು ತಿರುಚಿದ್ದಾರೆ ಎಂದು ವೈದ್ಯೆಯ ತಂದೆ ವಾಗ್ಧಾಳಿ ನಡೆಸಿದ್ದಾರೆ.
ನವದೆಹಲಿ: ಕೊಲ್ಕತ್ತಾದ (Kolkata) ಆರ್‌ಜಿ ಕರ್ ಕಾಲೇಜಿನ ಟ್ರೈನಿ ವೈದ್ಯೆಯ ಮೇಲೆ ಅತ್ಯಾಚಾರವೆಸಗಿ ಅಮಾನುಷವಾಗಿ ಹತ್ಯೆಗೈದ ಸಂಜಯ್ ರಾಯ್‌ಗೆ (Sanjay Roy) ನ್ಯಾಯಾಲಯವು ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ಪ್ರಕರಣದಲ್ಲಿ ಸಿಬಿಐ ಸರಿಯಾದ ಪುರಾವೆ ಒದಗಿಸದೇ ಇರುವುದಕ್ಕೆ ಅಪರಾಧಿಗೆ ಜೀವಾವಧಿ ಶಿಕ್ಷೆಯಾಗಿದೆ (RG Kar Case) ಎಂದು ಸಂತ್ರಸ್ತೆ ವೈದ್ಯೆಯ ತಂದೆ ಆರೋಪಿಸಿದ್ದಾರೆ. ಮಮತಾ ಬ್ಯಾನರ್ಜಿ ಸಾಕ್ಷ್ಯಗಳನ್ನು ತಿರುಚಿದ್ದಾರೆ ಎಂದು ವಾಗ್ಧಾಳಿ ನಡೆಸಿದ್ದಾರೆ.
ಕೋಲ್ಕತಾದ ಆರ್‌ಜಿ ಕರ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸಂಜಯ್ ರಾಯ್‌ನಿಂದ ಅತ್ಯಾಚಾರ ಮತ್ತು ಹತ್ಯೆಗೀಡಾದ ಟ್ರೈನಿ ವೈದ್ಯನ ತಂದೆ ಮಂಗಳವಾರ (ಜ .21) ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದ್ಧಾರೆ. ಸರಿಯಾದ ಸಾಕ್ಷ್ಯಧಾರಗಳನ್ನು ಒದಗಿಸಿದ್ದರೆ ಅಪರಾಧಿಗೆ ಗಲ್ಲುಶಿಕ್ಷೆಯಾಗುತ್ತಿತ್ತು. ಆದರೆ ಬ್ಯಾನರ್ಜಿ ಸಾಕ್ಷ್ಯಗಳನ್ನು ತಿರುಚಿದ್ದು, ಪ್ರಕರಣದ ದಾರಿ ತಪ್ಪಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.
#WATCH | Kolkata, West Bengal: Sealdah Court sends convict in RG Kar rape-murder case, Sanjay Roy to life imprisonment |
— ANI (@ANI) January 20, 2025
The victim's father says, "What the Court thinks as a good judgement based on the evidence produced by the CBI, the Court has given that verdict...We have a… pic.twitter.com/VA8kV8GEQK
ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕರ್ತವ್ಯ ನಿರತ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಕೊಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸಂಜಯ್ ರಾಯ್‌ಗೆ ಸೋಮವಾರ ಸೀಲ್ದಾ ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶ ಅನಿರ್ಬನ್ ದಾಸ್ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video:ಐಐಟಿಯನ್ ಬಾಬಾ, ಮೊನಾಲಿಸಾ ಆಯ್ತು...ಈಗ ಮಹಾ ಕುಂಭಮೇಳದಲ್ಲಿ ಹ್ಯಾರಿ ಪಾಟರ್!
ಪ್ರಕರಣದಲ್ಲಿ ಕೋಲ್ಕತಾ ಪೊಲೀಸರ ಆರಂಭಿಕ ತನಿಖೆಯನ್ನು ನ್ಯಾಯಾಲಯವು ಕಟುವಾಗಿ ಟೀಕಿಸಿದೆ. ಹಲವಾರು ಲೋಪಗಳನ್ನು ಎತ್ತಿ ತೋರಿಸಿದೆ. ಅಧಿಕಾರಿಗಳು ಪ್ರಕರಣವನ್ನು ಆತ್ಮಹತ್ಯೆ ಎಂದು ಹೇಳಿ ಮುಚ್ಚಿ ಹಾಕಲು ಪ್ರಯತ್ನಿಸಿದ್ದು ನಾಚಿಕೆಗೇಡಿನ ಸಂಗತಿ ಎಂದು ನ್ಯಾಯಾಧೀಶರು ಹೇಳಿದರು.