champions trophy 2025: ಏಕದಿನ ಕ್ರಿಕೆಟ್ ನಿವೃತ್ತಿ ಬಗ್ಗೆ ಸ್ಪಷ್ಟನೆ ನೀಡಿದ ರೋಹಿತ್, ಕೊಹ್ಲಿ
Rohit Sharma: ರೋಹಿತ್ ಶರ್ಮ ಫೈನಲ್‌ನಲ್ಲಿಯೂ ಟಾಸ್ ಸೋಲುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಸತತ 12 ಬಾರಿ ಟಾಸ್ ಸೋತ ವೆಸ್ಟ್ ಇಂಡೀಸ್‌ನ ಬ್ರಿಯನ್ ಲಾರಾ ಅವರ ಅನಪೇಕ್ಷಿತ ದಾಖಲೆಯನ್ನು ಸರಿಗಟ್ಟಿದರು. ರೋಹಿತ್ ಅವರು 2023ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಿಂದ ಸತತ 12 ಪಂದ್ಯಗಳಲ್ಲಿ ಟಾಸ್ ಸೋತಿದ್ದಾರೆ.


ಚಾಂಪಿಯನ್ಸ್ ಟ್ರೋಫಿ(Champions Trophy 2025) ಬಳಿಕ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮ(Rohit Sharma) ಮತ್ತು ವಿರಾಟ್ ಕೊಹ್ಲಿ(Virat Kohli) ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಲಿದ್ದಾರೆ ಎಂಬ ವಂದತಿಗಳು ಟೂರ್ನಿ ಆರಂಭಕ್ಕೂ ಮುನ್ನವೇ ಆರಂಭವಾಗಿತ್ತು. ಭಾನುವಾರ ನ್ಯೂಜಿಲ್ಯಾಂಡ್ ವಿರುದ್ಧದ ಫೈನಲ್ ಗೆಲುವಿನ ಬಳಿಕ ಮಾತನಾಡಿದ ರೋಹಿತ್ ತಮ್ಮ ನಿವೃತ್ತಿ ಊಹಾಪೋಹಗಳಿಗೆ ಬ್ರೇಕ್ ಹಾಕಿದರು. ಫೈನಲ್‌ನಲ್ಲಿ ಭಾರತ ತಂಡ ನಾಲ್ಕು ವಿಕೆಟ್ ಅಂತರದ ಗೆಲುವು ಸಾಧಿಸಿ ಮೂರನೇ ಬಾರಿಗೆ ಟ್ರೋಫಿ ಗೆದ್ದ ಸಾಧನೆ ಮಾಡಿತು.
ಪಂದ್ಯ ಮುಕ್ತಾಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೋಹಿತ್, 'ನಾನು ಏಕದಿನ ಕ್ರಿಕೆಟ್‌ನಿಂದ ಸದ್ಯಕ್ಕೆ ನಿವೃತ್ತಿಯಾಗುವುದಿಲ್ಲ. ದಯವಿಟ್ಟು ಯಾವುದೇ ಊಹಾಪೋಹಗಳನ್ನು ಹರಡಬೇಡಿ. ಅಲ್ಲದೆ ಸದ್ಯ ಯಾವುದೇ ಭವಿಷ್ಯದ ಯೋಜನೆಗಳಿಲ್ಲ. ಮುಂದೆ ಏನಾಗುವುದೋ ಆಗಲಿ' ಎಂದು ಸ್ಪಷ್ಟನೆ ನೀಡಿದರು. ಅತ್ತ ವಿರಾಟ್ ಕೊಹ್ಲಿ ಕೂಡ ಸದ್ಯಕ್ಕೆ ನಿವೃತ್ತಿ ಇಲ್ಲ ಎನ್ನುವ ಮೂಲಕ ನಿವೃತ್ತಿ ವದಂತಿಯನ್ನು ತಳ್ಳಿ ಹಾಕಿದರು. ಹೀಗಾಗಿ ಉಭಯ ಆಟಗಾರರು ಕೂಡ 2027ರ ಏಕದಿನ ವಿಶ್ವಕಪ್ ತನಕ ಆಡುವುದು ಖಚಿತವೆನಿಸಿದೆ.
ROHIT SHARMA DROPS BANGER. 🎤
— Mufaddal Vohra (@mufaddal_vohra) March 9, 2025
- 2027 World Cup in South Africa.🤞🇮🇳 pic.twitter.com/SKPGbIOeQg
ರೋಹಿತ್ ಶರ್ಮ ಫೈನಲ್‌ನಲ್ಲಿಯೂ ಟಾಸ್ ಸೋಲುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಸತತ 12 ಬಾರಿ ಟಾಸ್ ಸೋತ ವೆಸ್ಟ್ ಇಂಡೀಸ್‌ನ ಬ್ರಿಯನ್ ಲಾರಾ ಅವರ ಅನಪೇಕ್ಷಿತ ದಾಖಲೆಯನ್ನು ಸರಿಗಟ್ಟಿದರು. ರೋಹಿತ್ ಅವರು 2023ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಿಂದ ಸತತ 12 ಪಂದ್ಯಗಳಲ್ಲಿ ಟಾಸ್ ಸೋತಿದ್ದಾರೆ. ವಿಶೇಷ ಎಂದರೆ ಒಂದು ಟಾಸ್ ಗೆಲ್ಲದಿದ್ದರೂ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಟ್ಟಿದ್ದಾರೆ. ಪ್ರತಿ ಬಾರಿಯೂ ಟಾಸ್ ಸೋತ ಬಗ್ಗೆ ಕೇಳುವಾಗ ರೋಹಿತ್ ಅವರ ಒಂದೇ ಉತ್ತರ ಟಾಸ್ ಮುಖ್ಯವಲ್ಲ ನಾವು ಹೇಗೆ ಆಡುತ್ತೇವೋ ಅದು ಪಂದ್ಯದ ಫಲಿತಾಂಶ ನಿರ್ಧರಿಸುತ್ತದೆ ಎನ್ನುತ್ತಿದ್ದರು. ಅವರು ಹೇಳಿದಂತೆ ತಂಡ ಅಜೇಯವಾಗಿ ಟ್ರೋಫಿ ಕೂಡ ಗೆದ್ದಿದೆ.
ಇದನ್ನೂ ಓದಿ IND vs NZ Final: ಚಾಂಪಿಯನ್ ಟ್ರೋಫಿ ಗೆದ್ದ ಭಾರತ ತಂಡವನ್ನು ಅಭಿನಂದಿಸಿದ ಮೋದಿ, ಸಿದ್ದರಾಮಯ್ಯ
ಫೈನಲ್‌ನಲ್ಲಿ ಅಮೋಘ ಆಟ
ಲೀಗ್‌ನಿಂದ ಸೆಮಿಫೈನಲ್ ತನಕ ರನ್ ಬರಗಾಲ ಕಂಡಿದ್ದ ರೋಹಿತ್ ಶರ್ಮ ಫೈನಲ್ ಪಂದ್ಯದಲ್ಲಿ ನಾಯಕನ ಆಟವಾಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ನಡೆಸಿದ ಹಿಟ್‌ಮ್ಯಾನ್ 7 ಬೌಂಡರಿ ಮತ್ತು 3 ಸಿಕ್ಸರ್‌ನೊಂದಿಗೆ 76 ರನ್ ಬಾರಿಸಿದರು. ಈ ಅಮೋಘ ಆಟಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು.