IND vs ENG: ಸಚಿನ್ ತೆಂಡೂಲ್ಕರ್ ದಾಖಲೆ ಮೇಲೆ ರೋಹಿತ್ ಶರ್ಮಾ ಕಣ್ಣು!
Rohit Sharma Eyes on Sachin Tendulkar's Record: ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸಾರಣಿಯಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ದಾಖಲೆಯೊಂದನ್ನು ಮುರಿಯುವ ಸಾಧ್ಯತೆ ಇದೆ. ಈ ದಾಖಲೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ನಾಗ್ಪುರ: ಭಾರತ ತಂಡದ ನಾಯಕ ರೋಹಿತ್ ಶರ್ಮಾ ತಮ್ಮ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಸಮಯದಲ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಕಾರ್ಯಕ್ರಮವೊಂದರಲ್ಲಿ ಭವಿಷ್ಯವೊಂದನ್ನು ನುಡಿದಿದ್ದರು. ಸಚಿನ್ ಅವರ ದಾಖಲೆಗಳನ್ನು ಯಾರಾದರೂ ಮುರಿಯಲು ಸಾಧ್ಯವೇ ಎಂದು ಕೇಳಿದಾಗ, ಅವರು, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕಡೆಗೆ ಬೆರಳು ತೋರಿಸಿದ್ದರು. ಈಗ ಅವರ ಭವಿಷ್ಯವಾಣಿ ನಿಜವಾಗಿದೆ. ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್ ಅವರ ಅತಿ ಹೆಚ್ಚು ಶತಕಗಳ ದಾಖಲೆಯನ್ನು ಮುರಿದಿದ್ದಾರೆ. ಮತ್ತೊಂದೆಡೆ, ರೋಹಿತ್ ಶರ್ಮಾ ವೇಗವಾಗಿ 11 ಸಾವಿರ ರನ್ ಗಳಿಸಿ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕುವ ಸನಿಹದಲ್ಲಿದ್ದಾರೆ.
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ 284 ಪಂದ್ಯಗಳ 276 ಇನ್ನಿಂಗ್ಸ್‌ಗಳಲ್ಲಿ 11 ಸಾವಿರ ರನ್‌ಗಳನ್ನು ಪೂರ್ಣಗೊಳಿಸಿದರು. 2002ರ ಜನವರಿ 28 ರಂದು ಕಾನ್ಪುರದಲ್ಲಿ ಇಂಗ್ಲೆಂಡ್ ವಿರುದ್ಧ 11 ಸಾವಿರ ರನ್‌ಗಳನ್ನು ಪೂರೈಸಿದ್ದರು. ಈ ಸಾಧನೆ ಮಾಡಿದ ಮೊದಲ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ಸಚಿನ್ ಅಂದು ಬರೆದಿದ್ದರು. ಇದರ ಬಳಿಕ ಅನೇಕ ಬ್ಯಾಟ್ಸ್‌ಮನ್‌ಗಳು ಈ ದಾಖಲೆ ಪಟ್ಟಿಯನ್ನು ಸೇರಿದರು. ಆದರೆ 2019 ಜುಲೈ 19 ರಂದು ಮ್ಯಾಂಚೆಸ್ಟರ್‌ನಲ್ಲಿ ಪಾಕಿಸ್ತಾನ ವಿರುದ್ಧ ವಿರಾಟ್ ಕೊಹ್ಲಿ 230 ಪಂದ್ಯಗಳ 222 ಇನಿಂಗ್ಸ್‌ಗಳಲ್ಲಿ 11 ಸಾವಿರ ರನ್‌ಗಳನ್ನು ಪೂರ್ಣಗೊಳಿಸಿದ್ದರು ಮತ್ತು ಅವರು ಪ್ರಸ್ತುತ ಈ ಮೈಲುಗಲ್ಲು ತಲುಪಿದ ಅತ್ಯಂತ ವೇಗದ ಬ್ಯಾಟ್ಸ್‌ಮನ್ ಆಗಿದ್ದಾರೆ.
IND vs ENG: ಇಂಗ್ಲೆಂಡ್ ಏಕದಿನ ಸರಣಿಯ ಭಾರತ ತಂಡದಲ್ಲಿ ವರುಣ್ ಚಕ್ರವರ್ತಿಗೆ ಸ್ಥಾನ!
ಸಚಿನ್ ದಾಖಲೆ ಮುರಿಯಲು ರೋಹಿತ್‌ಗೆ ಕೇವಲ 134 ರನ್ ಬೇಕು
ಅತಿ ಕಡಿಮೆ ಪಂದ್ಯಗಳಲ್ಲಿ ಮತ್ತು ಕಡಿಮೆ ಇನಿಂಗ್ಸ್‌ಗಳಲ್ಲಿ 11 ಸಾವಿರ ರನ್ ಗಳಿಸಿದವರ ಪಟ್ಟಿಯಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಎರಡನೇ ಸ್ಥಾನದಲ್ಲಿದ್ದರೆ, ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಈಗ ಮುಂದಿನ ಕೆಲವು ದಿನಗಳಲ್ಲಿ ಸಚಿನ್ ಮೂರನೇ ಸ್ಥಾನಕ್ಕೆ ಇಳಿಯುವ ಸಾಧ್ಯತೆಯಿದೆ. ರೋಹಿತ್ ಶರ್ಮಾ 11 ಸಾವಿರ ರನ್ ಪೂರ್ಣಗೊಳಿಸಲು ಕೇವಲ 134 ರನ್‌ಗಳ ಅಗತ್ಯವಿದೆ. ರೋಹಿತ್ ಶರ್ಮಾ 265 ಪಂದ್ಯಗಳ 257 ಇನಿಂಗ್ಸ್‌ಗಳಲ್ಲಿ 10866 ರನ್ ಗಳಿಸಿದ್ದಾರೆ. ಹಿಟ್‌ಮ್ಯಾನ್ 134 ರನ್ ಗಳಿಸಿದ ತಕ್ಷಣ ವಿಶೇಷ ಪಟ್ಟಿಗೆ ಸೇರುತ್ತಾರೆ. ಅವರು 11 ಸಾವಿರ ರನ್ ಗಳಿಸಿದ ಎರಡನೇ ಅತಿ ವೇಗದ ಬ್ಯಾಟ್ಸ್‌ಮನ್ ಆಗಲಿದ್ದಾರೆ.
ವೇಗವಾಗಿ 11,000 ಏಕದಿನ ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿ
- ವಿರಾಟ್ ಕೊಹ್ಲಿ (ಭಾರತ): 230 ಪಂದ್ಯಗಳು, 222 ಇನಿಂಗ್ಸ್‌ಗಳು
- ಸಚಿನ್ ತೆಂಡೂಲ್ಕರ್ (ಭಾರತ): 284 ಪಂದ್ಯಗಳು, 276 ಇನಿಂಗ್ಸ್‌ಗಳು
- ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ/ಐಸಿಸಿ): 295 ಪಂದ್ಯಗಳು, 286 ಇನಿಂಗ್ಸ್‌ಗಳು
- ಸೌರವ್ ಗಂಗೂಲಿ (ಏಷ್ಯಾ/ಭಾರತ): 298 ಪಂದ್ಯಗಳು, 288 ಇನಿಂಗ್ಸ್‌ಗಳು
- ಜಾಕ್ವೆಸ್ ಕಾಲಿಸ್ (ಐಸಿಸಿ/ದಕ್ಷಿಣ ಆಫ್ರಿಕಾ): 307 ಪಂದ್ಯಗಳು, 293 ಇನಿಂಗ್ಸ್‌ಗಳು
- ಕುಮಾರ್ ಸಂಗಕ್ಕಾರ (ಏಷ್ಯಾ/ಐಸಿಸಿ/ಶ್ರೀಲಂಕಾ): 340 ಪಂದ್ಯಗಳು, 318 ಇನಿಂಗ್ಸ್‌ಗಳು
- ಇಂಜಮಾಮ್-ಉಲ್-ಹಕ್ (ಏಷ್ಯಾ/ಪಾಕಿಸ್ತಾನ): 349 ಪಂದ್ಯಗಳು, 324 ಇನಿಂಗ್ಸ್‌ಗಳು
- ಸನತ್ ಜಯಸೂರ್ಯ (ಏಷ್ಯಾ/ಶ್ರೀಲಂಕಾ): 363 ಪಂದ್ಯಗಳು, 354 ಇನಿಂಗ್ಸ್‌ಗಳು
- ಮಹೇಲ ಜಯವರ್ಧನೆ (ಏಷ್ಯಾ/ಶ್ರೀಲಂಕಾ): 394 ಪಂದ್ಯಗಳು, 368 ಇನಿಂಗ್ಸ್‌ಗಳು