ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ರೋಹಿತ್‌ ಶರ್ಮಾರ‌ ಟಿ20ಐ ವಿಶ್ವ ದಾಖಲೆಯನ್ನು ಮುರಿದ ಪಾಲ್‌ ಸ್ಟರ್ಲಿಂಗ್!

Paul Sterling Breaks Rohit Sharma's World Record: ಐರ್ಲೆಂಡ್‌ ಹಾಗೂ ಯುಎಇ ವಿರುದ್ಧದ ಟಿ20ಐ ಪಂದ್ಯದಲ್ಲಿ ಪಾಲ್‌ ಸ್ಟರ್ಲಿಂಗ್‌ ಅವರು, ಭಾರತ ತಂಡದ ಮಾಜಿ ನಾಯಕ ರೋಹಿತ್‌ ಶರ್ಮಾ ಅವರ ಟಿ20ಐ ಕ್ರಿಕೆಟ್‌ನಲ್ಲಿನ ವಿಶ್ವ ದಾಖಲೆಯನ್ನು ಮುರಿದಿದ್ದಾರೆ. ಆ ಮೂಲಕ ಟಿ20ಐ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರ ಎಂಬ ದಾಖಲೆಯನ್ನು ಬರೆದಿದ್ದಾರೆ.

ರೋಹಿತ್‌ ಶರ್ಮಾರ ವಿಶ್ವ ದಾಖಲೆಯನ್ನು ಮುರಿದ ಪಾಲ್‌ ಸ್ಟರ್ಲಿಂಗ್‌!

ರೋಹಿತ್‌ ಶರ್ಮಾರ ವಿಶ್ವ ದಾಖಲೆಯನ್ನು ಮುರಿದ ಪಾಲ್‌ ಸ್ಟರ್ಲಿಂಗ್‌. -

Profile
Ramesh Kote Jan 30, 2026 12:32 AM

ನವದೆಹಲಿ: ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ವಿರುದ್ಧದ ಮೊದಲನೇ ಟಿ20ಐ ಪಂದ್ಯವನ್ನು (IRE vs UAE) ಆಡುವ ಮೂಲಕ ಐರ್ಲೆಂಡ್‌ ತಂಡದ ನಾಯಕ ಪಾಲ್‌ ಸ್ಟರ್ಲಿಂಗ್‌ (Paul Sterling) ಅವರು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆಯನ್ನು ಬರೆದಿದ್ದಾರೆ. ಆ ಮೂಲಕ ಭಾರತ ತಂಡದ ಮಾಜಿ ನಾಯಕ ರೋಹಿತ್‌ ಶರ್ಮಾ (Rohit Sharma) ಅವರ ವಿಶ್ವ ದಾಖಲೆಯನ್ನು ಮುರಿದಿದ್ದಾರೆ. ಜನವರಿ 29 ರಂದು ದುಬೈ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಮೊದಲನೇ ಟಿ20ಐ ಪಂದ್ಯದಲ್ಲಿ ಟಾಸ್‌ಗೆ ಬರುತ್ತಿದ್ದ ಐರ್ಲೆಂಡ್‌ ನಾಯಕ ಈ ನೂತನ ಮೈಲುಗಲ್ಲು ತಲುಪಿದ್ದಾರೆ. ಈ ವಿಶ್ವ ದಾಖಲೆಯ ಬಗ್ಗೆ ಇಲ್ಲಿ ಸಂಪೂರ್ಣವಾಗಿ ವಿವರಿಸಿದ್ದಾರೆ.

ಸದ್ಯ ದುಬೈನಲ್ಲಿ ಐರ್ಲೆಂಡ್‌ ಹಾಗೂ ಯುಎಇ ನಡುವೆ ಎರಡು ಪಂದ್ಯಗಳ ಟಿ20ಐ ಸರಣಿ ನಡೆಯುತ್ತಿದೆ. ಆ ಮೂಲಕ ಭಾರತ ಹಾಗೂ ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ನಡೆಯುವ ಟಿ20 ವಿಶ್ವಕಪ್‌ ಟೂರ್ನಿಗೆ ಈ ಎರಡೂ ತಂಡಗಳು ಅಭ್ಯಾಸವನ್ನು ನಡೆಸುತ್ತಿವೆ. ಚುಟುಕು ವಿಶ್ವಕಪ್‌ ಫೆಬ್ರವರಿ 7 ರಂದು ಆರಂಭವಾಗಲಿದೆ.

WPL 2026: ಯುಪಿ ವಾರಿಯರ್ಸ್‌ ವಿರುದ್ಧ ಗೆದ್ದು ಫೈನಲ್‌ಗೆ ಪ್ರವೇಶಿಸಿದ ಆರ್‌ಸಿಬಿ ವನಿತೆಯರು!

ಅಂದ ಹಾಗೆ ಪಾಲ್‌ ಸ್ಟರ್ಲಿಂಗ್‌ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ 2009ರಲ್ಲಿಯೇ ಪದಾರ್ಪಣೆ ಮಾಡಿದ್ದರು. ಇದೀಗ ಅವರು ಯುಎಇ ವಿರುದ್ಧ ಮೊದಲನೇ ಪಂದ್ಯದ ಮೂಲಕ ತಮ್ಮ ಟಿ20ಐ ವೃತ್ತಿ ಜೀವನದಲ್ಲಿ 160ನೇ ಪಂದ್ಯವನ್ನು ಪೂರ್ಣಗೊಳಿಸಿದರು. ಇದರ ಜೊತೆಗೆ 45ನೇ ಬಾರಿ ತಮ್ಮ ಐರ್ಲೆಂಡ್‌ ತಂಡವನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮುನ್ನಡೆಸಿದಂತಾಯಿತು. ತಮ್ಮ 160ನೇ ಟಿ20ಐ ಪಂದ್ಯದಲ್ಲಿ ಅವರು ಆಡಿದ ಮೂರು ಎಸೆತಗಳಲ್ಲಿ ಎರಡು ಬೌಂಡರಿ ಗಳಿಸಿ ವಿಕೆಟ್‌ ಒಪ್ಪಿಸಿದರು.



ವಿಶ್ವ ದಾಖಲೆ ಬರೆದ ಪಾಲ್‌ ಸ್ಟರ್ಲಿಂಗ್

ತಮ್ಮ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 160ನೇ ಪಂದ್ಯವನ್ನು ಆಡುವ ಮೂಲಕ ಪಾಲ್‌ ಸ್ಟರ್ಲಿಂಗ್‌ ವಿಶ್ವ ದಾಖಲೆಯನ್ನು ಬರೆದಿದ್ದಾರೆ. ಟಿ20ಐ ಕ್ರಿಕೆಟ್‌ ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ. ಆ ಮೂಲಕ ಭಾರತ ತಂಡದ ಮಾಜಿ ನಾಯಕ ರೋಹಿತ್‌ ಶರ್ಮಾ ಅವರ ವಿಶ್ವ ದಾಖಲೆಯನ್ನು ಐರ್ಲೆಂಡ್‌ ನಾಯಕ ಮುರಿದಿದ್ದಾರೆ.

ಶ್ರೇಯಸ್‌ ಅಯ್ಯರ್‌ಗೆ ಏಕೆ ಅವಕಾಶ ನೀಡಿಲ್ಲ? ಗೌತಮ್‌ ಗಂಭೀರ್‌ಗೆ ಆಕಾಶ್‌ ಚೋಪ್ರಾ ಪ್ರಶ್ನೆ!

ಅತಿ ಹೆಚ್ಚು ಟಿ20ಐ ಪಂದ್ಯಗಳನ್ನು ಆಡಿದ ಆಟಗಾರರು

ಪಾಲ್‌ ಸ್ಟರ್ಲಿಂಗ್: (ಐರ್ಲೆಂಡ್‌) 2009-2026, 160 ಪಂದ್ಯಗಳು

ರೋಹಿತ್‌ ಶರ್ಮಾ: (ಭಾರತ) 2007-2024, 159 ಪಂದ್ಯಗಳು

ಜಾರ್ಜ್‌ ಡಾರ್ಕೆಲ್‌: (ಐರ್ಲೆಂಡ್‌) 2010-2026, 153 ಪಂದ್ಯಗಳು

ಮೊಹಮ್ಮದ್‌ ನಬಿ: (ಅಫ್ಘಾನಿಸ್ತಾನ) 2010-2026, 148 ಪಂದ್ಯಗಳು

ಜೋಸ್‌ ಬಟ್ಲರ್‌: (ಇಂಗ್ಲೆಂಡ್‌) 2011-2025, 144 ಪಂದ್ಯಗಳು

ಪಾಲ್‌ ಸ್ಟರ್ಲಿಂಗ್‌ ಪಾಲಿಗೆ 9ನೇ ಟಿ20 ವಿಶ್ವಕಪ್‌

2026ರ ಟಿ20 ವಿಶ್ವಕಪ್ ಪಾಲ್‌ ಸ್ಟರ್ಲಿಂಗ್‌ ಪಾಲಿಗೆ 9ನೇ ಟೂರ್ನಿಯಾಗಿದೆ. 2009, 2010, 2012, 2014, 2016, 2021, 2022, ಮತ್ತು 2024 ರ ಟಿ20 ವಿಶ್ವಕಪ್‌ ಟೂರ್ನಿಗಳಲ್ಲಿಯೂ ಅವರು ಆಡಿದ್ದಾರೆ. ಆದರೆ 2007ರ ಉದ್ಘಾಟನಾ ಆವೃತ್ತಿಯನ್ನು ಮಾತ್ರ ತಪ್ಪಿಸಿಕೊಂಡಿದ್ದಾರೆ. ಸ್ಟರ್ಲಿಂಗ್, ರೋಹಿತ್ ಮತ್ತು ಬಾಂಗ್ಲಾದೇಶದ ಮಾಜಿ ನಾಯಕ ಶಕೀಬ್ ಅಲ್ ಹಸನ್ ಅವರೊಂದಿಗೆ ಒಂಬತ್ತು ಬಾರಿ ವಿಶ್ವಕಪ್‌ ಟೂರ್ನಿಯನ್ನು ಆಡಿದ ಮೂರನೇ ಆಟಗಾರರಾಗಲಿದ್ದಾರೆ. ರೋಹಿತ್ ಮತ್ತು ಶಕೀಬ್ ಇಬ್ಬರೂ 2007 ರಿಂದ 2024 ರವರೆಗಿನ ಮೊದಲ ಒಂಬತ್ತು ಆವೃತ್ತಿಗಳಲ್ಲಿ ಆಡಿದ್ದರು.