ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Saif Ali Khan: ಬಾಲಿವುಡ್‌ ನಟ ಸೈಫ್‌ ಆಲಿ ಖಾನ್‌ಗೆ ಚೂರಿ ಇರಿತ; ಆಸ್ಪತ್ರೆಗೆ ದಾಖಲು

Saif Ali Khan: ಬಾಲಿವುಡ್‌ ನಟ ಸೈಫ್‌ ಆಲಿ ಖಾನ್‌ ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಚೂರಿಯಿಂದ ಇರಿದಿದ್ದಾನೆ. ಬಾಂದ್ರಾ (ಪಶ್ಚಿಮ)ದಲ್ಲಿರುವ ಅವರ ಮನೆಗೆ ನುಗ್ಗಿದ ಅಪರಿಚಿತ ವ್ಯಕ್ತಿ ದಾಳಿ ನಡೆಸಿದ್ದಾನೆ. ಸದ್ಯ ಸೈಫ್‌ ಆಲಿ ಖಾನ್‌ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Saif Ali Khan: ಬಾಲಿವುಡ್‌ ನಟ ಸೈಫ್‌ ಆಲಿ ಖಾನ್‌ಗೆ ಚೂರಿ ಇರಿತ; ಆಸ್ಪತ್ರೆಗೆ ದಾಖಲು

Profile Ramesh B Jan 16, 2025 9:50 AM

ಮುಂಬೈ, ಜ. 16, 2025: ಬಾಂದ್ರಾ (ಪಶ್ಚಿಮ)ದಲ್ಲಿರುವ ಬಾಲಿವುಡ್‌ ಸ್ಟಾರ್‌ ಜೋಡಿ ಸೈಫ್‌ ಆಲಿ ಖಾನ್‌ (Saif Ali Khan) ಮತ್ತು ಕರೀನಾ ಕಪೂರ್‌ (Kareena Kapoor) ಅವರ ಮನೆಗೆ ದರೋಡೆಕೋರನೊಬ್ಬ ನುಗ್ಗಿದ ಘಟನೆ ನಡೆದಿದೆ. ಈ ವೇಳೆ ಸೈಫ್‌ ಆಲಿ ಖಾನ್‌ ಅವರಿಗೆ ದರೋಡೆಕೋರ ಚಾಕುವಿನಿಂದ ಇರಿದಿದ್ದಾನೆ. ಗಾಯಗೊಂಡಿರುವ ಸೈಫ್‌ ಆಲಿ ಖಾನ್‌ ಅವರನ್ನು ಮುಂಬೈಯ ಲೀಲಾವತಿ ಆಸ್ಪತರೆಗೆ ದಾಖಲಿಸಲಾಗಿದೆ. ಗುರುವಾರ (ಜ. 16) ಮುಂಜಾನೆ 2.30ರ ಸುಮಾರಿಗೆ ಈ ಘಟನೆ ನಡೆದಿದೆ.

''ದರೋಡೆಕೋರರನ್ನು ತಡೆಯಲು ಪ್ರಯತ್ನಿಸಿದಾಗ ಸೈಫ್ ಗಾಯಗೊಂಡಿದ್ದಾರೆ. ಸೈಫ್ ಮತ್ತು ಇತರ ಕುಟುಂಬ ಸದಸ್ಯರು ಮಲಗಿದ್ದ ವೇಳೆ ದರೋಡೆಕೋರ ನುಗ್ಗಿದ್ದಾನೆ. ಬಳಿಕ ನಡೆದ ಜಗಳದಲ್ಲಿ ಸೈಫ್‌ ಚೂರಿ ಇರಿತಕ್ಕೆ ಒಳಗಾಗಿದ್ದು, ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆʼʼ ಎಂದು ಮೂಲಗಳು ತಿಳಿಸಿವೆ.



ʼʼಮುಂಜಾನೆ 2.30ರ ಸುಮಾರಿಗೆ ದರೋಡೆ ಪ್ರಯತ್ನ ನಡೆದಿದೆ. ಮನೆಯವರು ಎಚ್ಚರಗೊಂಡ ಹಿನ್ನೆಲೆಯಲ್ಲಿ ದರೋಡೆಕೋರ ಓಡಿಹೋಗಲು ಯತ್ನಿಸಿದ್ದಾನೆ. ಈ ವೇಳೆ ಸೈಫ್ ಆಲಿ ಖಾನ್‌ ಅವರಿಗೆ ಚೂರಿಯಿಂದ ಇರಿದಿದ್ದಾನೆ. ಹೀಗಾಗಿ ಅವರನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದಾರೆʼʼ ಎಂದು ಪೊಲೀಸರು ಹೇಳಿದ್ದಾರೆ.

ಲೀಲಾವತಿ ಆಸ್ಪತ್ರೆಯ ಸಿಒಒ ಡಾ.ನೀರಜ್ ಉತ್ತಮಾನಿ ಮಾತನಾಡಿ, "ಸೈಫ್ ಅವರ ಮನೆಗೆ ನುಗ್ಗಿದ ಅಪರಿಚಿತ ವ್ಯಕ್ತಿ ಹಲ್ಲೆ ನಡೆಸಿದ್ದಾನೆ. ಸೈಫ್‌ ಅವರನ್ನು ಮುಂಜಾನೆ 3.30ಕ್ಕೆ ಆಸ್ಪತ್ರೆಗೆ ಕರೆತರಲಾಯಿತು. ಅವರಿಗೆ 6 ಕಡೆ ಗಾಯಗಳಾಗಿವೆ. ಆ ಪೈಕಿ 2 ಕಡೆಯ ಗಾಯ ಆಳವಾಗಿವೆ. ಚಿಕಿತ್ಸೆ ನೀಡುತ್ತಿದ್ದೇವೆʼʼ ಎಂದು ವಿವರಿಸಿದ್ದಾರೆ.

ಬಾಂದ್ರಾದಲ್ಲಿರುವ ಸದ್ಗುರು ಶರಣ್ ಕಟ್ಟಡದಲ್ಲಿ ಈ ಐಷರಾಮಿ ಅಪಾರ್ಟ್‌ಮೆಂಟ್‌ ಇದೆ. ಬಾಲ್ಕನಿ ಮತ್ತು ಈಜುಕೊಳವನ್ನು ಹೊಂದಿರುವ ವಿಶಾಲವಾದ 3 ಬೆಡ್‌ರೂಮ್‌ನ ಅಪಾರ್ಟ್‌ಮೆಂಟ್‌ನಲ್ಲಿ ಸೈಫ್‌ ಆಲಿ ಖಾನ್‌-ಕರೀನಾ ಕಪೂರ್‌ ದಂಪತಿ ತಮ್ಮ ಮಕ್ಕಳಾದ 8 ವರ್ಷದ ತೈಮೂರ್ ಮತ್ತು 4 ವರ್ಷದ ಜೆಹ್ ಅವರೊಂದಿಗೆ ವಾಸಿಸುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ: Jailer 2 Movie: ಮತ್ತೊಮ್ಮೆ ಆ್ಯಕ್ಷನ್‌ ಅವತಾರದಲ್ಲಿ ರಜನಿಕಾಂತ್‌; 'ಜೈಲರ್‌ 2' ಚಿತ್ರದ ಟೀಸರ್‌ ಔಟ್‌

"ಸೈಫ್ ಅಲಿ ಖಾನ್ ಅವರ ನಿವಾಸದಲ್ಲಿ ಕಳ್ಳತನದ ಪ್ರಯತ್ನ ನಡೆದಿದೆ. ಅವರು ಪ್ರಸ್ತುತ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದಾರೆ. ಮಾಧ್ಯಮಗಳು ಮತ್ತು ಅಭಿಮಾನಿಗಳು ತಾಳ್ಮೆಯಿಂದಿರಬೇಕೆಂದು ನಾವು ವಿನಂತಿಸುತ್ತೇವೆ. ನಾವು ಪೊಲೀಸರಿಗೆ ಸೂಕ್ತ ಮಾಹಿತಿ ನೀಡುತ್ತಿದ್ದೇವೆʼʼ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.