ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Saif Ali Khan: ಸೈಫ್‌ ಅಲಿ ಖಾನ್‌ ಮೇಲೆ ದಾಳಿ ನಡೆಸಿದ್ದ ಆರೋಪಿಯ ಹಿನ್ನಲೆಯೇನು? ಯಾರೀತ ?

ನಟ ಸೈಫ್‌ ಅಲಿ ಖಾನ್‌ ಅವರ ಮೇಲೆ ಹಲ್ಲೆ ನಡೆಸಿದ್ದ ಆರೋಪಿಯನ್ನು ಮುಂಬೈ ಪೊಲೀಸರು ಭಾನುವಾರ ಬೆಳಗ್ಗೆ ಬಂಧಿಸಿದ್ದಾರೆ. ಸದ್ಯ ಆತನ ವಿಚಾರಣೆ ವೇಳೆ ದಾಖಲೆಗಳನ್ನು ವಶಪಡಿಸಿಕೊಂಡ ಪೊಲೀಸರು ಆತ ಬಾಂಗ್ಲಾದೇಶದ ಪ್ರಜೆಯೇ ಎಂಬ ಅನುಮಾನ ವ್ಯಕ್ತವಾಗಿದೆ.

ಬಾಂಗ್ಲಾ ಪ್ರಜೆಯಿಂದ ಸೈಫ್‌ ಮೇಲೆ ಹಲ್ಲೆ! ಪೊಲೀಸರು ಹೇಳಿದ್ದೇನು?

Saif Ali Khan stabbing

Profile Vishakha Bhat Jan 19, 2025 10:19 AM

ಮುಂಬೈ: ಬಾಲಿವುಡ್‌ ನಟ ಸೈಫ್‌ ಅಲಿ ಖಾನ್‌ (Saif Ali Khan) ಅವರ ಮೇಲೆ ಜ.16 ರಂದು ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆಸಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಮುಂಬೈ ಪೊಲೀಸರು ಭಾನುವಾರ ಬೆಳಗ್ಗೆ ಬಂಧಿಸಿದ್ದಾರೆ. ಆತನ ಮೂಲ ಹೆಸರು ಮೊಹಮ್ಮದ್ ಷರೀಫ್ ಉಲ್ ಇಸ್ಲಾಂ ಶೆಹಜಾದ್ ಎಂದು ತಿಳಿದು ಬಂದಿದ್ದು, ತನ್ನ ಹೆಸರನ್ನು ವಿಜಯ್‌ ದಾಸ್‌ ಎಂದು ಬದಲಾಯಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಆರೋಪಿಯ ಬಂಧನದ ನಂತರ ಆತನ ಬಳಿ ಇರುವ ಕೆಲ ದಾಖಲೆಗಳನ್ನು ಪರಿಸೀಲಿಸಿದ ಪೊಲೀಸರು ಆತ ಬಾಂಗ್ಲಾದೇಶಿ ಪ್ರಜೆ ಎಂದು ಶಂಕಿಸಿದ್ದಾರೆ. ಆರೋಪಿಯು ನಟನ ಮನೆಗೆ ನುಗ್ಗಿ ಅಪರಾಧ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ.

ಮನೆಕೆಲಸಕ್ಕೆ ಬಂದಿದ್ದನಾ ಆರೋಪಿ ?

ಆರೋಪಿ ಮೊಹಮ್ಮದ್ ಷರೀಫ್ ಉಲ್ ಇಸ್ಲಾಂ ಶೆಹಜಾದ್ ಹೌಸ್‌ ಕೀಪಿಂಗ್‌ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಈ ಹಿಂದೆ ಸೈಫ್‌ ಮನೆಗೆ ಸ್ವಚ್ಛತಾಗಾರನಾಗಿ ಹೋಗಿದ್ದ ಎಂದು ಕೆಲ ಮೂಲಗಳು ಹೇಳುತ್ತಿವೆ. ಆದರೆ ಪೊಲೀಸರು ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.



ಈ ಬಗ್ಗೆ ಮುಂಬೈ ಪೊಲೀಸ್ ಡಿಸಿಪಿ ದೀಕ್ಷಿತ್ ಗೆಡಮ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಆತನ ಬಳಿ ಇಸ್ಲಾಂ ಧರ್ಮಕ್ಕೆ ಕೆಲ ವಸ್ತುಗಳಿವೆ. ದಾಖಲೆಯ ಪ್ರಕಾರ ಆತ ಬಾಂಗ್ಲಾದೇಶದ ಪ್ರಜೆ ಎಂದೆನಿಸುತ್ತದೆ. ಆತ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ್ದಾನೆಂದು ಶಂಕೆ ಇದೆ. ಭಾರತಕ್ಕೆ ಬಂದ ನಂತರ ಆತ ಹಲವಾರು ಹೆಸರುಗಳನ್ನು ಹೊಂದಿದ್ದಾನೆ. ಬಿಜೋಯ್ ದಾಸ್, ವಿಜಯ್ ದಾಸ್, ಮೊಹಮ್ಮದ್ ಇಲ್ಯಾಸ್ ಮತ್ತು ಬಿಜೆ ಎಂದು ಅನೇಕ ಬಾರಿ ಹೆಸರನ್ನು ಬದಲಾಯಿಸಿದ್ದಾನೆ. ಆರೋಪಿಯು ಕಳೆದ ಏಳೆಂಟು ತಿಂಗಳುಗಳಿಂದ ಮುಂಬೈ ಮತ್ತು ಥಾಣೆಯ ವಿವಿಧ ಸ್ಥಳಗಳಲ್ಲಿ ಕೆಲಸ ಮಾಡುತ್ತಿದ್ದ ಎಂದು ಅವರು ತಿಳಿಸಿದ್ದಾರೆ. ಈ ಹಿಂದೆ ಸೈಫ್ ಅವರ ನಿವಾಸಕ್ಕೆ ಹೋಗಿದ್ದರು ಎಂಬುದಕ್ಕೆ ಯಾವುದೇ ಪುರಾವೆಗಳು ನಮಗೆ ಸಿಕ್ಕಿಲ್ಲ. ಆತನಿಗೆ ಈ ಹಿಂದೆ ಯಾವುದೇ ಕ್ರಿಮಿನಲ್ ದಾಖಲೆ ಇಲ್ಲ

ಪೊಲೀಸ್‌ ಮೂಲಗಳ ಪ್ರಕಾರ ಕೆಲವು ದಿನಗಳ ಮೊದಲು, ಆರೋಪಿ ಗುತ್ತಿಗೆದಾರರೊಂದಿಗೆ ನಿರ್ಮಾಣ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ. ಈ ಘಟನೆಯ ಬಳಿಕ ಆತ ತಲೆಮರೆಸಿಕೊಂಡಿದ್ದು, ನಿರಂತರವಾಗಿ ಸುದ್ದಿ ವಾಹಿನಿಗಳನ್ನು ವೀಕ್ಷಿಸುತ್ತಿದ್ದನು ಮತ್ತು ಸುದ್ದಿಗಳನ್ನು ಟ್ರ್ಯಾಕ್ ಮಾಡುತ್ತಿದ್ದನು, ಬಂಧನದ ಭಯದಿಂದ ತನ್ನ ಫೋನ್ ಅನ್ನು ಸಹ ಸ್ವಿಚ್ ಆಫ್ ಮಾಡಿದ್ದಾನೆ ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ : Saif Ali Khan : ಕೊನೆಗೂ ಬಲೆಗೆ ಬಿದ್ದ ಅಸಲಿ ಆರೋಪಿ ; ಸೈಫ್‌ ಅಲಿ ಖಾನ್‌ ಮೇಲೆ ಹಲ್ಲೆ ನಡೆಸಿದ್ದ ಕಿಡಿಗೇಡಿ ಬಂಧನ

ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಪೊಲೀಸರು ಮೊಹಮ್ಮದ್ ಷರೀಫ್ ಉಲ್ ಇಸ್ಲಾಂ ಶೆಹಜಾದ್ನನ್ನು ಬಾಂದ್ರಾಕ್ಕೆ ಕರೆತಂದಿದ್ದು, ನ್ಯಾಯಾಧೀಶರ ಎದುರು ಹಾಜರುಪಡಿಸಲಿದ್ದಾರೆ. ಆತನ ಬಳಿ ಇರುವ ದಾಖಲೆಗಳನ್ನು ವಶಪಡಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಆತ ನಕಲಿ ಭಾರತೀಯ ಗುರುತನ್ನು ಹೊಂದಿದ್ದಾನೆ ಎಂದು ಪೊಲೀಸರು ಬಹಿರಂಗಗೊಳಿಸಿದ್ದಾರೆ.