ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

SICA: ಆತಿಥ್ಯ ವಿದ್ಯಾರ್ಥಿಗಳಿಗಾಗಿ ಒಂದು ಭವ್ಯ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ

ದಕ್ಷಿಣ ಭಾರತೀಯ ಪಾಕಶಾಲೆಯ ಸಂಘ (The South Indian Culinary Association) ತನ್ನ ಪ್ರಮುಖ ವೃತ್ತಿ ಮಾರ್ಗದರ್ಶನ ಉಪಕ್ರಮವಾದ "ಸ್ಟೆಪ್ಪಿಂಗ್ ಸ್ಟೋನ್ –ಆಕಾಂಕ್ಷೆಗಳಿಗೆ ಉತ್ತೇಜನ, ಭವಿಷ್ಯದ ರೂಪಿಸುವಿಕೆ" ಎಂಬ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿದೆ. ಈ ಕಾರ್ಯಕ್ರಮವು ಆತಿಥ್ಯ ಕ್ಷೇತ್ರದ ಆಕಾಂಕ್ಷಿಗಳಾದ ವಿದ್ಯಾರ್ಥಿಗಳಿಗಾಗಿ ವಿಶೇಷವಾಗಿ ರೂಪಿಸಲಾಗಿದೆ.

ಆತಿಥ್ಯ ವಿದ್ಯಾರ್ಥಿಗಳಿಗಾಗಿ ಒಂದು ಭವ್ಯ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ

ದಕ್ಷಿಣ ಭಾರತೀಯ ಪಾಕಶಾಲೆಯ ಸಂಘ

Profile Ramesh Kote Mar 21, 2025 6:54 PM

ಬೆಂಗಳೂರು: ದಕ್ಷಿಣ ಭಾರತೀಯ ಪಾಕಶಾಲೆಯ ಸಂಘ (The South Indian Culinary Association) ತನ್ನ ಪ್ರಮುಖ ವೃತ್ತಿ ಮಾರ್ಗದರ್ಶನ ಉಪಕ್ರಮವಾದ "ಸ್ಟೆಪ್ಪಿಂಗ್ ಸ್ಟೋನ್ –ಆಕಾಂಕ್ಷೆಗಳಿಗೆ ಉತ್ತೇಜನ, ಭವಿಷ್ಯದ ರೂಪಿಸುವಿಕೆ" ಎಂಬ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿದೆ. ಈ ಕಾರ್ಯಕ್ರಮವು ಆತಿಥ್ಯ ಕ್ಷೇತ್ರದ ಆಕಾಂಕ್ಷಿಗಳಾದ ವಿದ್ಯಾರ್ಥಿಗಳಿಗಾಗಿ ವಿಶೇಷವಾಗಿ ರೂಪಿಸಲಾಗಿತ್ತು. ಆರ್‌ಕೆಜಿ ತುಪ್ಪ ಮತ್ತು ಕೆಎಲ್‌ಇ ಸೊಸೈಟಿಯ ಎಸ್ ನಿಜಲಿಂಗಪ್ಪ ಕಾಲೇಜಿನ ಹೋಟೆಲ್ ಮ್ಯಾನೇಜ್‌ಮೆಂಟ್ ವಿಭಾಗದ ಸಹಯೋಗದೊಂದಿಗೆ ಆಯೋಜಿಸಲಾದ ಈ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಉದ್ಯಮದ ತಜ್ಞರಿಂದ ಮಾರ್ಗದರ್ಶನ, ಸಲಹೆ ಮತ್ತು ವೃತ್ತಿ ಸಂಬಂಧಿತ ಒಳನೋಟಗಳನ್ನು ನೀಡಲಾಯಿತು.

ಈ ಕಾರ್ಯಕ್ರಮವು ಉದ್ಯಮದ ಉನ್ನತ ತಜ್ಞರು ಮತ್ತು ಪ್ರಖ್ಯಾತ ಬಾಣಸಿಗರೊಂದಿಗೆ ಆಕರ್ಷಕ ಪ್ಯಾನಲ್ ಚರ್ಚೆಯನ್ನು ಒಳಗೊಂಡಿತ್ತು, ಇದು ವಿದ್ಯಾರ್ಥಿಗಳಿಗೆ ಆತಿಥ್ಯ ವ್ಯವಹಾರದ ಶ್ರೇಷ್ಠರಿಂದ ಕಲಿಯಲು ಒಂದು ಅಪರೂಪದ ಅವಕಾಶವನ್ನು ಒದಗಿಸಿತು.

ಈ ಕಾರ್ಯಕ್ರಮದಲ್ಲಿ ಪ್ರಮುಖ ವಕ್ತಾರರಾದ ಜಿಆರ್‌ಟಿ ಹೋಟೆಲ್ಸ್‌ನ ಕಾರ್ಪೊರೇಟ್ ಎಕ್ಸಿಕ್ಯೂಟಿವ್ ಶೆಫ್ ಶೆಫ್ ಸೀತಾರಾಮನ್ ಪ್ರಸಾದ್ , ಬೆಂಗಳೂರು ಕೆಫೆಯ ಡೈರೆಕ್ಟರ್ ಆಫ್ ಆಪರೇಷನ್ಸ್ ಶೆಫ್ ಕಾಶಿ ವಿಶ್ವನಾಥನ್, ಶೆಫ್ಸ್ ಇಂಪ್ರಿಂಟ್ ಸಂಸ್ಥಾಪಕ ಮತ್ತು ಮುಖ್ಯ ಸೃಜನಶೀಲ ಅಧಿಕಾರಿ ಶೆಫ್ ಭರಣೀಧರನ್ ಹಾಗೂ ಆರ್‌ಕೆಜಿ ತುಪ್ಪದ ಮ್ಯಾನೇಜಿಂಗ್ ಪಾರ್ಟ್‌ನರ್ ಅರವಿಂದ್ ಭಾಗವಹಿಸಿದ್ದರು.

Karnataka Weather: ಮುಂದಿನ 6 ದಿನ ಬೆಂಗಳೂರು ಸೇರಿ ರಾಜ್ಯದ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಅಬ್ಬರಿಸಲಿದೆ ಮಳೆ

ಆತಿಥ್ಯ ಕ್ಷೇತ್ರದ ಯುವ ಪ್ರತಿಭೆಗಳನ್ನು ಶಕ್ತಿಗೊಳಿಸುವುದು

ಈ ಕಾರ್ಯಕ್ರಮದಲ್ಲಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ 350ಕ್ಕೂ ಹೆಚ್ಚು ಆತಿಥ್ಯ ವಿದ್ಯಾರ್ಥಿಗಳು ಭಾಗವಹಿಸಿದ್ದರು, ಅವರಿಗೆ ಮೌಲ್ಯಯುತ ನೆಟ್‌ವರ್ಕಿಂಗ್ ಮತ್ತು ಕಲಿಕೆಯ ಅವಕಾಶಗಳು ದೊರೆತವು.

ಕಾರ್ಯಕ್ರಮದ ಬಗ್ಗೆ ಮಾತನಾಡಿದ ಕೆಎಲ್‌ಇ ಹೋಟೆಲ್ ಮ್ಯಾನೇಜ್‌ಮೆಂಟ್ ವಿಭಾಗದ ಸಂಯೋಜಕ ಅಮಲನ್ ಮಾತನಾಡಿ, "ಸ್ಟೆಪ್ಪಿಂಗ್ ಸ್ಟೋನ್ ಕಾರ್ಯಕ್ರಮವನ್ನು ಆತಿಥ್ಯ ವಿದ್ಯಾರ್ಥಿಗಳಿಗೆ ‘ಕಲಿ, ಮುನ್ನಡೆ ಮತ್ತು ಉತ್ಕೃಷ್ಟಗೊಳ್ಳು’ ಎಂಬ ಧ್ಯೇಯದೊಂದಿಗೆ ರೂಪಿಸಲಾಗಿತ್ತು. ಶೈಕ್ಷಣಿಕ ಕಲಿಕೆ ಮತ್ತು ಉದ್ಯಮದ ನಿರೀಕ್ಷೆಗಳ ನಡುವಿನ ಅಂತರವನ್ನು ಕಡಿಮೆ ಮಾಡುವುದು ನಮ್ಮ ಗುರಿಯಾಗಿತ್ತು, ಇದರಿಂದ ನಮ್ಮ ವಿದ್ಯಾರ್ಥಿಗಳು ಭವಿಷ್ಯಕ್ಕೆ ಸಿದ್ಧರಾಗುತ್ತಾರೆ," ಎಂದು ಹೇಳಿದ್ದಾರೆ.

ಎಸ್‌ಐಸಿಎ ಎಂದರೇನು?

ದಕ್ಷಿಣ ಭಾರತೀಯ ಪಾಕಶಾಲೆಯ ಸಂಘ (SICA)ವು ಪಾಕಶಾಸ್ತ್ರ ಮತ್ತು ಆತಿಥ್ಯ ಕ್ಷೇತ್ರದಲ್ಲಿ ಉತ್ಕೃಷ್ಟತೆಯನ್ನು ಉತ್ತೇಜಿಸಲು ಮೀಸಲಾಗಿರುವ ಒಂದು ಪ್ರಮುಖ ಸಂಸ್ಥೆಯಾಗಿದೆ. ತರಬೇತಿ ಕಾರ್ಯಕ್ರಮಗಳು, ಮಾರ್ಗದರ್ಶನ ಮತ್ತು ಉದ್ಯಮ ಸಹಯೋಗದ ಮೂಲಕ, ಎಸ್‌ಐಸಿಎ ಭಾರತದಲ್ಲಿ ಆತಿಥ್ಯ ವೃತ್ತಿಪರರ ಭವಿಷ್ಯವನ್ನು ರೂಪಿಸುವಲ್ಲಿ ಮುಂದುವರಿದಿದೆ.