ಮಾ.22, 23ರಂದು ಬೆಂಗಳೂರಿನಲ್ಲಿ ಸೌತ್ ಏಷ್ಯಾ ಇಂಟರ್ನ್ಯಾಷನಲ್ ಪೀಸ್ ಕಾನ್ಫರೆನ್ಸ್/ ಎಸ್ಎಐಪಿಸಿ
ದಕ್ಷಿಣ ಏಷ್ಯಾದಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಬೆಳೆಸಲು ವೈವಿಧ್ಯಮಯ ಪಾಲುದಾರರನ್ನು ಒಟ್ಟುಗೂಡಿಸುತ್ತದೆ ಹಾಗೇ ಸಂವಾ ದ, ಸಹಯೋಗ ಮತ್ತು ನೂತನ ಪರಿಹಾರಗಳ ಮೂಲಕ ಶಾಂತಿ ಮತ್ತು ಸಾಮರಸ್ಯದ ಸಮರ್ಪಿತ ಅನ್ವೇಷಣೆಯಲ್ಲಿ ದಕ್ಷಿಣ ಏಷ್ಯಾದಾದ್ಯಂತ ನಾಯಕರು, ಸಮುದಾಯ ಗಳು ಮತ್ತು ನಾವೀನ್ಯ ಕಾರರನ್ನು ಒಗ್ಗೂಡಿಸುವ ಗುರಿಯನ್ನು ಎಸ್ಎಐಪಿಸಿ 2025 ಹೊಂದಿದೆ.


ಬೆಂಗಳೂರು: ರೋಟರಿ ಡಿಸ್ಟ್ರಿಕ್ಟ್ 3192 ಆಯೋಜಿಸಿರುವ ದಕ್ಷಿಣ ಏಷ್ಯಾ ಅಂತಾರಾಷ್ಟ್ರೀಯ ಶಾಂತಿ ಸಮ್ಮೇಳನ (ಸೌತ್ ಏಷ್ಯಾ ಇಂಟರ್ನ್ಯಾಷನಲ್ ಪೀಸ್ ಕಾನ್ಫರೆನ್ಸ್/ ಎಸ್ಎಐಪಿಸಿ) 2025 ಮಾರ್ಚ್ 22 ಮತ್ತು 23 ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಆರ್ಟ್ ಆಫ್ ಲಿವಿಂಗ್ ನ ಶ್ರೀ ಶ್ರೀ ರವಿಶಂಕರ್ ಗುರೂಜಿ ಉಪಸ್ಥಿತರಿರಲಿದ್ದಾರೆ. ಮುಖ್ಯ ಅತಿಥಿಗಳಾಗಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ, ಅರಣ್ಯ ಸಚಿವ ಈಶ್ವರ ಖಂಡ್ರೆ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಭಾಗವಹಿಸ ಲಿದ್ದಾರೆ. ಮೂರು ಬಾರಿ ಗ್ರ್ಯಾಮಿ ಪ್ರಶಸ್ತಿ ವಿಜೇತ ಸಂಯೋಜಕ ಮತ್ತು ಪರಿಸರವಾದಿ ರಿಕಿ ಕೇಜ್ ಬ್ರಾಂಡ್ ಅಂಬಾಸಿಡರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.
ಇದನ್ನೂ ಓದಿ: Bangalore News: ಮಾ.2ರಂದು ನಗರದಲ್ಲಿ ಬೃಹತ್ “ಸ್ಕಿನ್ನಥಾನ್” : 10, 5 ಮತ್ತು 3 ಕಿಲೋಮೀಟರ್ ಓಟ ಆಯೋಜನೆ
ಈ ಸಮ್ಮೇಳನವು ಪ್ರಾದೇಶಿಕ ಸವಾಲುಗಳನ್ನು ಎದುರಿಸಲಿದ್ದು, ದಕ್ಷಿಣ ಏಷ್ಯಾದಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಬೆಳೆಸಲು ವೈವಿಧ್ಯಮಯ ಪಾಲುದಾರರನ್ನು ಒಟ್ಟುಗೂಡಿಸುತ್ತದೆ ಹಾಗೇ ಸಂವಾ ದ, ಸಹಯೋಗ ಮತ್ತು ನೂತನ ಪರಿಹಾರಗಳ ಮೂಲಕ ಶಾಂತಿ ಮತ್ತು ಸಾಮರಸ್ಯದ ಸಮರ್ಪಿತ ಅನ್ವೇಷಣೆಯಲ್ಲಿ ದಕ್ಷಿಣ ಏಷ್ಯಾದಾದ್ಯಂತ ನಾಯಕರು, ಸಮುದಾಯಗಳು ಮತ್ತು ನಾವೀನ್ಯ ಕಾರರನ್ನು ಒಗ್ಗೂಡಿಸುವ ಗುರಿಯನ್ನು ಎಸ್ಎಐಪಿಸಿ 2025 ಹೊಂದಿದೆ.
ಈ ಸಮ್ಮೇಳನವು ಶಾಂತಿ ನಿರ್ಮಾಣ, ಪರಿಸರ, ಆರೋಗ್ಯ ರಕ್ಷಣೆ, ಸಾರ್ವಜನಿಕ ಆರೋಗ್ಯ, ಸುಸ್ಥಿರ ಜೀವನೋಪಾಯ, ಶಿಕ್ಷಣದ ಲಭ್ಯತೆ, ಹಸಿವು ಮತ್ತು ಅಪೌಷ್ಟಿಕತೆಯನ್ನು ಪರಿಹರಿಸುವುದು, ಸಮು ದಾಯ ಸ್ವಯಂಸೇವಕರನ್ನು ಪ್ರೋತ್ಸಾಹಿಸುವುದು ಎಂಬ ಮೂರು ನಿರ್ಣಾಯಕ ಕ್ಷೇತ್ರಗಳಲ್ಲಿ ಸಂವಾದ, ಸಹಯೋಗ ಮತ್ತು ಕ್ರಿಯಾತ್ಮಕ ಪರಿಹಾರಗಳು ಮತ್ತು ನೀತಿ ನಿರೂಪಣೆಯನ್ನು ಉತ್ತೇಜಿ ಸುತ್ತದೆ.
ಇನ್ನು ಈ ಸಮ್ಮೇಳನವು ಭೂತಾನ್, ಭಾರತ, ನೇಪಾಳ ಮತ್ತು ಶ್ರೀಲಂಕಾದ ಸಾಂಪ್ರದಾಯಿಕ ನೃತ್ಯಗಳಿಗೆ ಸಾಕ್ಷಿಯಾಗಲಿದ್ದು, ಆ ಮೂಲಕ ಈ ಪ್ರದೇಶದ ಏಕತೆ ಮತ್ತು ಸಂಸ್ಕೃತಿಯ ರೋಮಾಂ ಚಕ ಚಿತ್ರಣವನ್ನು ಪ್ರದರ್ಶಿಸುತ್ತದೆ