SpaDeX Mission: ಇಸ್ರೋದಿಂದ ಮತ್ತೊಂದು ಇತಿಹಾಸ ಸೃಷ್ಟಿ ; ಸ್ಪ್ಯಾಡೆಕ್ಸ್ ಮಿಷನ್ ಅಡಿಯಲ್ಲಿ ಡಾಕಿಂಗ್ ಪೂರ್ಣಗೊಳಿಸಿದ ಬಾಹ್ಯಾಕಾಶ ಸಂಸ್ಥೆ
ಗುರುವಾರ ಮುಂಜಾನೆ ಬಾಹ್ಯಾಕಾಶ ಡಾಕಿಂಗ್ ಪೂರ್ಣಗೊಂಡಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ. ಇಸ್ರೋ ಗುರುವಾರ ಬಾಹ್ಯಾಕಾಶದಲ್ಲಿ ಉಪಗ್ರಹ ಡಾಕಿಂಗ್ ಕಸರತ್ತು ನಡೆಸಿತು.

SpaDeX Mission

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (Isro) ಹೊಸ ಮೈಲುಗಲ್ಲನ್ನು ಸೃಷ್ಟಿಸಿದೆ. ಗುರುವಾರ ಬಾಹ್ಯಾಕಾಶದಲ್ಲಿ ಉಪಗ್ರಹ ಡಾಕಿಂಗ್ ಕಸರತ್ತು ನಡೆಸಿತು. ಇಂದು ಮುಂಜಾನೆ ಬಾಹ್ಯಾಕಾಶ ಡಾಕಿಂಗ್ ಪೂರ್ಣಗೊಂಡಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.
ಭಾನುವಾರ, ಜನವರಿ 12 ರಂದು, ISRO ತನ್ನ ಸ್ಪ್ಯಾಡೆಕ್ಸ್ ಮಿಷನ್‌ನ (SpaDeX) ಭಾಗವಾಗಿ ಪ್ರಯೋಗವನ್ನು ನಡೆಸಿತ್ತು. ಅದರಲ್ಲಿ ಬಾಹ್ಯಾಕಾಶದಲ್ಲಿ ಜೋಡಣೆ ಪ್ರಯೋಗಕ್ಕಾಗಿ ಉಡಾವಣೆ ಮಾಡಲಾಗಿರುವ ಎರಡು ಉಪಗ್ರಹಗಳನ್ನು ಮೂರು ಮೀಟರ್ ಅಂತರಕ್ಕೆ ತಂದು ಜೋಡಣೆಯ ಪ್ರಾಯೋಗಿಕ ಪ್ರಯತ್ನ ನಡೆಸಲಾಗಿತ್ತು. ಬಳಿಕ, ಸುರಕ್ಷಿತವಾಗಿ ಹಿಂದಕ್ಕೆ ಸರಿಸಲಾಗಿದೆ.
𝗦𝗽𝗮𝗗𝗲𝗫 𝗠𝗶𝘀𝘀𝗶𝗼𝗻 𝗨𝗽𝗱𝗮𝘁𝗲:
— ISRO InSight (@ISROSight) January 16, 2025
Following the docking, ISRO has successfully managed both satellites as a combined unit.
In the upcoming days, ISRO will proceed with undocking and power transfer evaluations.#SPADEX #ISRO pic.twitter.com/tMmCcF5opG
ಈ ಬಗ್ಗೆ ಎಕ್ಸ್ ನಲ್ಲಿ ಟ್ವೀಟ್ ಮಾಡಿದ್ದ ಇಸ್ರೋ, 'ಮೂರು ಮೀಟರ್‌ಗಳವರೆಗೆ ತಲುಪುವ ಪ್ರಾಯೋಗಿಕ ಪ್ರಯತ್ನವನ್ನು ಮಾಡಲಾಗಿದೆ. ಬಳಿಕ, ಬಾಹ್ಯಾಕಾಶ ನೌಕೆಗಳನ್ನು ಸುರಕ್ಷಿತ ದೂರದಲ್ಲಿ ಹಿಂದಕ್ಕೆ ಸರಿಸಲಾಗಿದೆ. ಕಾರ್ಯಾಚರಣೆಯ ದತ್ತಾಂಶವನ್ನು ಮತ್ತಷ್ಟು ವಿಶ್ಲೇಷಿಸಿದ ನಂತರ ಡಾಕಿಂಗ್ ಪ್ರಕ್ರಿಯೆಯನ್ನು ಮಾಡಲಾಗುತ್ತದೆ. ಸಣ್ಣ ಬಾಹ್ಯಾಕಾಶ ನೌಕೆಗಳನ್ನು ಬಳಸಿಕೊಂಡು ಬಾಹ್ಯಾಕಾಶದಲ್ಲಿ ಜೋಡಣೆ ಮಾಡುವ ಪ್ರಯೋಗವು, ಕಡಿಮೆ ವೆಚ್ಚದಲ್ಲಿ ಉನ್ನತ ತಂತ್ರಜ್ಞಾನ ಅಭಿವೃದ್ಧಿಪಡಿಸುವ ಮಿಷನ್ ಆಗಿದೆ ಎಂದು ಹೇಳಿತ್ತು.
ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ 220 ಕೆ.ಜಿ ತೂಕದ ಎರಡು ಉಪಗ್ರಹಗಳನ್ನು ಹೊತ್ತೊಯ್ದಿದ್ದ ಪಿಎಸ್‌ಎಲ್‌ವಿ ಸಿ 60 ರಾಕೆಟ್, 475 ಕಿ. ಮೀ ವೃತ್ತಾಕಾರದ ಕಕ್ಷೆಗೆ ಸೇರಿಸಿದೆ. ಸಾಮಾನ್ಯ ಮಿಷನ್ ಉದ್ದೇಶಗಳನ್ನು ಸಾಧಿಸಲು ಬಹು ರಾಕೆಟ್ ಉಡಾವಣೆಗಳ ಅಗತ್ಯವಿರುವಾಗ ಬಾಹ್ಯಾಕಾಶದಲ್ಲಿ ಡಾಕಿಂಗ್ ತಂತ್ರಜ್ಞಾನವು ಅತ್ಯಗತ್ಯವಾಗಿರುತ್ತದೆ ಎಂದು ಇಸ್ರೊ ಹೇಳಿದೆ.
ಸ್ಪೇಡೆಕ್ಸ್’ ಯೋಜನೆಯ ಯಶಸ್ಸು ಭಾರತೀಯ ಅಂತರಿಕ್ಷ ನಿಲ್ದಾಣ ಮತ್ತು ಚಂದ್ರನ ಮೇಲೆ ಗಗನಯಾತ್ರಿಯನ್ನು ಇಳಿಸುವುದು ಮುಂತಾದ ಭವಿಷ್ಯದ ಕಾರ್ಯಾಚರಣೆಗಳಿಗೆ ನಿರ್ಣಾಯಕ ಸಂಕೀರ್ಣ ತಂತ್ರಜ್ಞಾನಗಳಿಗೆ ದೇಶಕ್ಕೆ ನೆರವಾಗಲಿದೆ. ಒಂದೇ ತರನಾದ ಮಿಷನ್ಗಳ ಗುರಿ ಸಾಧನೆಗೆ ಬಹು ರಾಕೆಟ್ಗಳನ್ನು ಉಡಾವಣೆ ಮಾಡಿರುವಾಗ ಬಾಹ್ಯಾಕಾಶದಲ್ಲಿ ಡಾಕಿಂಗ್ ತಂತ್ರಜ್ಞಾನ ಅತ್ಯಗತ್ಯವಾಗಿರುತ್ತದೆ. ಈ ಮಿಷನ್ ಮೂಲಕ ಭಾರತವು ಬಾಹ್ಯಾಕಾಶ ಡಾಕಿಂಗ್ ತಂತ್ರಜ್ಞಾನವನ್ನು ಹೊಂದಿರುವ ವಿಶ್ವದ ನಾಲ್ಕನೇ ರಾಷ್ಟ್ರವಾಗಿದೆ.
ಈ ಸುದ್ದಿಯನ್ನೂ ಓದಿ : ISRO: ಬಾಹ್ಯಾಕಾಶದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲು ಇಸ್ರೋ ಸಜ್ಜು: 100ನೇ ಮಿಷನ್ ಘೋಷಣೆ