ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಐಪಿಎಲ್‌ ಟೂರ್ನಿಯಲ್ಲಿನ ಫಾರ್ಮ್‌ ಟೆಸ್ಟ್‌ ತಂಡದ ಆಯ್ಕೆಗೆ ಮಾನದಂಡವಾಗಬಾರದು: ಆರ್‌ ಅಶ್ವಿನ್‌!

R Ashwin on Shreyas Iyer Test Comeback: ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದ ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಶ್ರೇಯಸ್‌ ಅಯ್ಯರ್‌, ತಮ್ಮ ಅದೇ ಲಯವನ್ನು 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಮುಂದುವರಿಸಲು ಎದುರು ನೋಡುತ್ತಿದ್ದಾರೆ. ಆದರೆ, ಐಪಿಎಲ್‌ ಟೂರ್ನಿಯ ಫಾರ್ಮ್‌ ಅನ್ನು ಟೆಸ್ಟ್‌ ತಂಡದ ಕಮ್‌ಬ್ಯಾಕ್‌ಗೆ ಪರಿಗಣಿಸಬಾರದು ಎಂದು ಸ್ಪಿನ್‌ ದಿಗ್ಗಜ ಆರ್‌ ಅಶ್ವಿನ್‌ ಸಲಹೆ ನೀಡಿದ್ದಾರೆ.

ಶ್ರೇಯಸ್‌ ಅಯ್ಯರ್‌ರ ಐಪಿಎಲ್‌ ಫಾರ್ಮ್‌ ನೋಡಿ ಟೆಸ್ಟ್‌ಗೆ ಆರಿಸಬಾರದು!

ಶ್ರೇಯಸ್‌ ಅಯ್ಯರ್‌ಗೆ ಟೆಸ್ಟ್‌ ಕಮ್‌ಬ್ಯಾಕ್‌ ಬಗ್ಗೆ ಅಶ್ವಿನ್‌ ಅಭಿಪ್ರಾಯ.

Profile Ramesh Kote Mar 19, 2025 1:27 PM

ನವದೆಹಲಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಅಥವಾ ಬೇರೆ ಟೂರ್ನಿಗಳಲ್ಲಿ ಫಾರ್ಮ್‌ ಅನ್ನು ಪರಿಗಣಿಸಿ ಟೆಸ್ಟ್‌ ತಂಡಕ್ಕೆ ಪರಿಗಣಿಸುವುದನ್ನು ಸ್ಪಿನ್‌ ದಂತಕತೆ ರವಿಚಂದ್ರನ್‌ ಅಶ್ವಿನ್‌ (R Ashwin) ವಿರೋಧಿಸಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ಬಿಸಿಸಿಐ ಗುತ್ತಿಗೆಯನ್ನು ಕಳೆದುಕೊಂಡಿದ್ದ ಶ್ರೇಯಸ್‌ ಅಯ್ಯರ್‌, ಇತ್ತೀಚೆಗೆ ಮುಗಿದಿದ್ದ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ( Champions Trophy 2025) ಟೂರ್ನಿಯ ಮೂಲಕ ಕಮ್‌ಬ್ಯಾಕ್‌ ಮಾಡಿದ್ದರು. ಇದೀಗ ಐಪಿಎಲ್‌ ಟೂರ್ನಿಯಲ್ಲಿಯೂ ಅದೇ ಲಯವನ್ನು ಮುಂದುವರಿಸಲು ಪಂಜಾಬ್‌ ಕಿಂಗ್ಸ್‌ ನಾಯಕ ಎದುರು ನೋಡುತ್ತಿದ್ದಾರೆ. ಆದರೆ, ಕೇವಲ ಐಪಿಎಲ್‌ ಟೂರ್ನಿಯಲ್ಲಿನ ಫಾರ್ಮ್‌ ಅನ್ನು ನೋಡಿಕೊಂಡು ಭಾರತ ಟೆಸ್ಟ್‌ ತಂಡಕ್ಕೆ ಆಯ್ಕೆ ಮಾಡುವುದು ಸರಿಯಲ್ಲ ಎಂದು ಚೆನ್ನೈ ಸೂಪರ್‌ ಕಿಂಗ್ಸ್‌ ಸ್ಪಿನ್ನರ್‌ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಿರುವ ವಿಡಿಯೊದಲ್ಲಿ ಪ್ಯಾನಲಿಸ್ಟ್‌ ಒಬ್ಬರು, 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದರೆ ಶ್ರೇಯಸ್‌ ಅಯ್ಯರ್‌ ಅವರನ್ನು ಭಾರತ ಟೆಸ್ಟ್‌ ತಂಡಕ್ಕೆ ಪರಿಗಣಿಸಬಜಹುದೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದನ್ನು ಆರ್‌ ಅಶ್ವಿನ್‌ ಅಲ್ಲಗೆಳೆದರು. ಐಪಿಎಲ್‌ ಟೂರ್ನಿಯ ಪ್ರದರ್ಶನವನ್ನು ಟಿ20 ತಂಡಕ್ಕೆ ಪರಿಗಣಿಸಬಹುದು. ಅದು ಬಿಟ್ಟು ಟೆಸ್ಟ್‌ ತಂಡಕ್ಕೆ ಮಾನದಂಡವಾಗುವುದಿಲ್ಲ ಎಂದಿದ್ದಾರೆ.

IPL 2025: ಡೆಲ್ಲಿ ಕ್ಯಾಪಿಟಲ್ಸ್‌ ನಾಯಕತ್ವ ಕಳೆದುಕೊಂಡ ಬೆನ್ನಲ್ಲೆ ಕೆಎಲ್‌ ರಾಹುಲ್‌ಗೆ ಮತ್ತೊಂದು ಹಿನ್ನಡೆ!

"ಟೆಸ್ಟ್‌ ತಂಡದ ಆಯ್ಕೆಗೆ ಐಪಿಎಲ್‌ ಪ್ರದರ್ಶನ ಹೇಗೆ ಮಾನದಂಡವಾಗಲಿದೆ ಎಂದು ನೀವು ಹೇಳಿ? ನೀವು ಐಪಿಎಲ್‌ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿದರೆ, ನಿಮ್ಮ ಟೆಸ್ಟ್‌ ಕೌಶಲದಲ್ಲಿ ಸುಧಾರಣೆಯನ್ನು ಕಾಣಬಹುದಾ? ಏಕದಿನ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ತೋರಿದರೆ, ಆ ಆಟಗಾರ ಟೆಸ್ಟ್‌ಗೆ ಸಂಬಂಧಿಸಿದಂತೆ ಲೇಖನವನ್ನು ಬರೆಯಲಾಗುತ್ತದೆ," ಎಂದು ಆರ್‌ ಅಶ್ವಿನ್‌ ತಿಳಿಸಿದ್ದಾರೆ.

"ಯಾರಾದರೂ ಒಬ್ಬರು ಟೆಸ್ಟ್‌ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನವನ್ನು ತೋರಿದರೆ, ಜನರು ಅವರ ಟಿ20 ಕಮ್‌ಬ್ಯಾಕ್‌ ಮಾಡುತ್ತಾರೆ. ಇದೆಲ್ಲವೂ ತಪ್ಪು ಅಲ್ಲವಾ? ನೀವು ಐಪಿಎಲ್‌ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿದರೆ, ನಿಮ್ಮ ಟಿ20 ಕ್ರಿಕೆಟ್‌ನಲ್ಲಿ ಸಾಮರ್ಥ್ಯ ಸುಧಾರಣೆಯಾಗುತ್ತದೆ," ಎಂದ ಆರ್‌ ಅಶ್ವಿನ್‌, "ಶ್ರೇಯಸ್‌ ಅಯ್ಯರ್‌ ಅದ್ಭುತ ಆಟಗಾರ," ಎಂದು ಗುಣಗಾನ ಮಾಡಿದ್ದಾರೆ.

IPL 2025: ಪಂಜಾಬ್‌ ಕಿಂಗ್ಸ್‌ಗೆ ಕಪ್‌ ಗೆದ್ದುಕೊಡುವುದು ನನ್ನ ಗುರಿ ಎಂದ ಶ್ರೇಯಸ್‌ ಅಯ್ಯರ್‌!

ಶ್ರೇಯಸ್‌ ಅಯ್ಯರ್‌ಗೆ ಆರ್‌ ಅಶ್ವಿನ್‌ ಮೆಚ್ಚುಗೆ

ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಶ್ರೇಯಸ್‌ ಅಯ್ಯರ್‌ ಅವರನ್ನು ಆರ್‌ ಅಶ್ವಿನ್‌ ಶ್ಲಾಘಿಸಿದ್ದಾರೆ. ಇದೇ ಲಯವನ್ನು ಅವರು ಐಪಿಎಲ್‌ ಟೂರ್ನಿಯಲ್ಲಿ ಮುಂದುವರಿಸಲಿದ್ದಾರೆಂದ ಸ್ಪಿನ್‌ ದಿಗ್ಗಜ, ಕೋಲ್ಕತಾ ನೈಟ್‌ ರೈಡರ್ಸ್‌ ತಂಡದ 2024ರ ಐಪಿಎಲ್‌ ಗೆಲುವಿನಲ್ಲಿ ಶ್ರೇಯಸ್‌ ಅಯ್ಯರ್‌ ಪಾತ್ರದ ಬಗ್ಗೆ ಮಾತನಾಡಿದ್ದಾರೆ.

IPL 2025: ಐಪಿಎಲ್‌ ಪಂದ್ಯಾವಳಿ ಆರಂಭಕ್ಕೂ ಮುನ್ನ ನೀವು ತಿಳಿದುಕೊಳ್ಳಬೇಕಾದ ಪ್ರಮುಖ ಅಂಶಗಳು

"ಶ್ರೇಯಸ್‌ ಅಯ್ಯರ್‌ ನಿಜವಾಗಿಯೂ ಉತ್ತಮ ಪ್ರದರ್ಶನವನ್ನು ತೋರಿದ್ದಾರೆ. ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಅವರು ತೋರಿದ ಫಾರ್ಮ್‌ ಅನ್ನು ಪರಿಗಣಿಸಿದರೆ, ಐಪಿಎಲ್‌ ಟೂರ್ನಿಯಲ್ಲಿಯೂ ಅವರು ಅದೇ ಲಯವನ್ನು ಮುಂದುವರಿಸಿದರೆ, ನನಗೆ ಯಾವುದೇ ಅಚ್ಚರಿ ಇಲ್ಲ. ಅವರು ಅದ್ಭುತ ಆಟಗಾರ. ಕಳೆದ ಆವೃತ್ತಿಯಲ್ಲಿ ಕೆಕೆಆರ್‌ ಪ್ರಶಸ್ತಿ ಗೆಲುವಿನಲ್ಲಿ ಅವರ ಪ್ರಮುಖ ಪಾತ್ರವಹಿಸಿದ್ದರು," ಎಂದು ಆರ್‌ ಅಶ್ವಿನ್‌ ಕೊಂಡಾಡಿದ್ದಾರೆ.