ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

SRH vs LSG: ಔಟ್‌ ಆದ ಕೋಪದಲ್ಲಿ ನೆಲಕ್ಕೆ ಜೋರಾಗಿ ಹೆಲ್ಮೆಟ್‌ ಹೊಡೆದ ನಿತೀಶ್‌ ರೆಡ್ಡಿ!

SRH vs LSG: 2025ರ ಇಂಡಿಯನ್ ಪ್ರೀಮಿಯರ್ ಲೀಗ್ 7ನೇ ಪಂದ್ಯದಲ್ಲಿ ಲಖನೌ ಸೂಪರ್‌ ಜಯಂಟ್ಸ್‌ ಹಾಗೂ ಸನ್‌ರೈಸರ್ಸ್‌ ಹೈದರಾಬಾದ್‌ ತಂಡಗಳು ಮಾರ್ಚ್‌ 27 ರಂದು ಕಾದಾಟ ನಡೆಸಿದ್ದವು. ಈ ಪಂದ್ಯದಲ್ಲಿ 28 ಎಸೆತಗಳಲ್ಲಿ 32 ರನ್ ಗಳಿಸಿದ ನಂತರ ನಿತೀಶ್ ಕುಮಾರ್ ರೆಡ್ಡಿ ರವಿ ಬಿಷ್ಣೋಯ್‌ಗೆ ಔಟ್‌ ಆದರು. ಬಳಿಕ ಡ್ರೆಸ್ಸಿಂಗ್‌ ರೂಂಗೆ ಹೋಗಿವ ಹಾದಿಯಲ್ಲಿ ತಮ್ಮ ಹೆಲ್ಮೆಟ್‌ ಅನ್ನು ನೆಲಕ್ಕೆ ಜೋರಾಗಿ ಎಸೆದಿದ್ದಾರೆ. ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಔಟ್‌ ಆದ ಕೋಪದಲ್ಲಿ ನೆಲಕ್ಕೆ ಹೆಲ್ಮೆಟ್‌ ಹೊಡೆದ ನಿತೀಶ್‌ ರೆಡ್ಡಿ!

ಔಟ್‌ ಆದ ಕೋಪದಲ್ಲಿ ಹೆಲ್ಮೆಟ್‌ ಎಸೆದ ನಿತೀಶ್‌ ರೆಡ್ಡಿ.

Profile Ramesh Kote Mar 27, 2025 10:47 PM

ಹೈದರಾಬಾದ್‌: ಇಲ್ಲಿನ ರಾಜೀವ್‌ ಗಾಂಧಿ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಮಾರ್ಚ್‌ 27 ರಂದು ಗುರುವಾರ ನಡೆದಿದ್ದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ಏಳನೇ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ಹಾಗೂ ಲಖನೌ ಸೂಪರ್‌ ಜಯಂಟ್ಸ್‌ (SRH vs LSG) ತಂಡಗಳು ಕಾದಾಟ ನಡೆಸಿದ್ದವು. ರಾಜಸ್ಥಾನ್‌ ರಾಯಲ್ಸ್‌ ವಿರುದ್ಧದ ಪಂದ್ಯದಲ್ಲಿ ಎಸ್‌ಆರ್‌ಎಚ್‌ ಬ್ಯಾಟ್ಸ್‌ಮನ್‌ಗಳು ಅಬ್ಬರಿಸಿದ್ದರು. ಆದರೆ, ಲಖನೌ ಬೌಲರ್‌ಗಳ ಎದುರು ಹೈದರಾಬಾದ್‌ ಬ್ಯಾಟ್ಸ್‌ಮನ್‌ಗಳ ಸ್ಪೋಟಕ ಬ್ಯಾಟ್‌ ಮಾಡಲು ಸಾಧ್ಯವಾಗಲಿಲ್ಲ. ಅಂದ ಹಾಗೆ ಒಂದು ಹಂತದಲ್ಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರುತ್ತಿದ್ದ ನಿತೀಶ್‌ ಕುಮಾರ್‌ ರೆಡ್ಡಿ (Nitish Reddy), ರವಿ ಬಿಷ್ಣೋಯ್‌ ಸ್ಪಿನ್‌ ಮೋಡಿಗೆ ಬಲಿಯಾದರು. ಔಟ್‌ ಆದ ಬಳಿಕ ಡ್ರೆಸ್ಸಿಂಗ್‌ ರೂಂ ಗೆ ತೆರಳುತ್ತಿದ್ದ ವೇಳೆ ನಿತೀಶ್‌ ರೆಡ್ಡ ತಮ್ಮ ಆಕ್ರೋಶವನ್ನು ಹೆಲ್ಮೆಟ್‌ ಮೇಲೆ ತೋರಿಸಿದರು.

ಇಶಾನ್‌ ಕಿಶನ್‌ ಗೋಲ್ಡನ್‌ ಡಕ್‌ಔಟ್‌ ಆದ ಬಳಿಕ ಕ್ರೀಸ್‌ಗೆ ಬಂದಿದ್ದ ನಿತೀಶ್‌ ರೆಡ್ಡಿ ಆರಂಭದಲ್ಲಿ ಉತ್ತಮವಾಗಿ ಕಾಣುತ್ತಿದ್ದರು. ಅವರು ಆಡಿದ್ದ 28 ಎಸೆತಗಳಲ್ಲಿ 32 ರನ್‌ಗಳನ್ನು ಕಲೆ ಹಾಕಿದ್ದರು. ಉತ್ತಮ ಆರಂಭ ಪಡೆದಿದ್ದ ಅವರು ಎಸ್‌ಆರ್‌ಎಚ್‌ಗೆ ಆಸರೆಯಾಗುವ ಭರವಸೆಯನ್ನು ನೀಡಿದ್ದರು. ಆದರೆ, 15ನೇ ಓವರ್‌ ಮೊದಲನೇ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಹಾಕಿದರು. ಆದರೆ, ಚೆಂಡನ್ನು ಅರಿಯುವಲ್ಲಿ ವಿಫಲರಾಗಿ ಕ್ಲೀನ್‌ ಬೌಲ್ಡ್‌ ಆದರು. ಔಟ್‌ ಆದ ಬೇಸರದಲ್ಲಿ ಪೆವಿಲಿಯನ್‌ಗೆ ಹೈದರಾಬಾದ್‌ ಮೂಲದ ಬ್ಯಾಟ್ಸ್‌ಮನ್‌ ಹೆಜ್ಜೆ ಹಾಕಿದರು. ಆದರೆ, ಡ್ರೆಸ್ಸಿಂಗ್‌ ರೂಂ ಸನಿಹ ಹೋಗುತ್ತಿದ್ದಂತೆ ಅವರು ತಮ್ಮ ಹೆಲ್ಮೆಟ್‌ ಅನ್ನು ನೆಲಕ್ಕೆ ಜೋರಾಗಿ ಎಸೆಯುವ ಮೂಲಕ ತಮ್ಮ ಆಕ್ರೋಶವನ್ನು ಹೊರ ಹಾಕಿದರು. ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

SRH vs LSG: ಟ್ರಾವಿಸ್‌ ಹೆಡ್‌ರನ್ನು ಕ್ಲೀನ್‌ ಬೌಲ್ಡ್‌ ಮಾಡಿದ ಪ್ರಿನ್ಸ್‌ ಯಾದವ್‌ ಯಾರು?

190 ರನ್‌ಗಳನ್ನು ಕಲೆ ಹಾಕಿದ ಎಸ್‌ಆರ್‌ಎಚ್‌

ಈ ಪಂದ್ಯದಲ್ಲಿ ಟಾಸ್‌ ಗೆದ್ದ ಲಖನೌ ಸೂಪರ್‌ ಜಯಂಟ್ಸ್‌, ಸನ್‌ ರೈಸರ್ಸ್ ಹೈದರಾಬಾದ್‌ ತಂಡವನ್ನು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಿತ್ತು. ಅದರಂತೆ ಸನ್‌ರೈಸರ್ಸ್ ತಂಡ ಬ್ಯಾಟಿಂಗ್‌ನಲ್ಲಿ ಶುಭಾರಂಭ ಕಂಡಿತ್ತು. ಆದರೆ ಮೂರನೇ ಓವರ್‌ನಲ್ಲಿ ಆತಿಥೇಯರು ಸತತ 2 ವಿಕೆಟ್‌ಗಳನ್ನು ಕಳೆದುಕೊಂಡರು. ಆದರೆ, ಒಂದು ತುದಿಯಿಂದ ಟ್ರಾವಿಸ್ ಹೆಡ್‌ ಬಿರುಸಿನ ಬ್ಯಾಟಿಂಗ್ ಮುಂದುವರಿಸಿದರು. ಇದಲ್ಲದೇ ಮಧ್ಯಮ ಕ್ರಮಾಂಕದಲ್ಲಿ ಸಣ್ಣ ಜೊತೆಯಾಟಗಳಿಂದ ಸನ್ ರೈಸರ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 190 ರನ್ ಗಳಿಸಲಷ್ಟೇ ಶಕ್ತವಾಯಿತು. ಬೌಲಿಂಗ್‌ನಲ್ಲಿ ಶಾರ್ದುಲ್ ಠಾಕೂರ್ ಲಖನೌ ಸೂಪರ್‌ ಜಯಂಟ್ಸ್‌ 4 ವಿಕೆಟ್ ಪಡೆದರು. ಇದಲ್ಲದೇ ಆವೇಶ್ ಖಾನ್, ದಿಗ್ವೇಶ್ ರಾಠಿ, ಪ್ರಿನ್ಸ್ ಯಾದವ್ ಮತ್ತು ರವಿ ಬಿಷ್ಣೋಯ್ ತಲಾ ಒಂದೊಂದು ವಿಕೆಟ್ ಪಡೆದರು.



ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ 30 ರನ್‌

ಪ್ರಸ್ತುತ ನಡೆಯುತ್ತಿರುವ 2025ರ ಐಪಿಎಲ್‌ ಟೂರ್ನಿಯಲ್ಲಿ ನಿತೀಶ್‌ ರೆಡ್ಡಿ ಬ್ಯಾಟಿಂಗ್‌ನಲ್ಲಿ ಸ್ಥಿರ ಪ್ರದರ್ಶನವನ್ನು ತೋರುತ್ತಿದ್ದಾರೆ. ಅವರು ರಾಜಸ್ಥಾನ್‌ ರಾಯಲ್ಸ್‌ ವಿರುದ್ಧದ ತನ್ನ ಆರಂಭಿಕ ಪಂದ್ಯದಲ್ಲಿಯೂ ಮಿಂಚಿದ್ದರು. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಿದ್ದ ಅವರು 15 ಎಸೆತಗಳಲ್ಲಿ 30 ರನ್‌ಗಳನ್ನು ಸಿಡಿಸಿದ್ದರು. ಆದರೆ, ಆ ಪಂದ್ಯದಲ್ಲಿಯೂ ಅವರು ಸ್ಪಿನ್ನರ್‌ ಮಹೇಶ್‌ ತೀಕ್ಷಣ ಎಸೆತದಲ್ಲಿ ವಿಕೆಟ್‌ ಒಪ್ಪಿಸಿದ್ದರು. ಇದೀಗ ತಮ್ಮ ಎರಡನೇ ಪಂದ್ಯದಲ್ಲಿಯೂ ಅವರು 32 ರನ್‌ಗಳನ್ನು ಕಲೆ ಹಾಕಿದ್ದಾರೆ. ಆದರೆ, ಅವರು ಈ ಎರಡೂ ಪಂದ್ಯಗಳಲ್ಲಿ ಇನ್ನೂ ಬೌಲ್‌ ಮಾಡುವ ಅವಕಾಶವನ್ನು ಪಡೆದಿಲ್ಲ.