ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Steve Smith retires: ಏಕದಿನ ಕ್ರಿಕೆಟ್‌ಗೆ ದಿಢೀರ್‌ ನಿವೃತ್ತಿ ಪ್ರಕಟಿಸಿದ ಸ್ವೀವನ್‌ ಸ್ಮಿತ್‌

Steve Smith retires: ಸ್ಮಿತ್ ಅವರು 2010 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ತಮ್ಮ ಚೊಚ್ಚಲ ಏಕದಿನ ಪಂದ್ಯವನ್ನು ಆಡಿದ್ದರು. ಲೆಗ್ ಸ್ಪಿನ್ನಿಂಗ್ ಆಲ್ ರೌಂಡರ್ ಆಗಿದ್ದ ಸ್ಮಿತ್ ಆ ಬಳಿಕ ಪೂರ್ಣ ಪ್ರಮಾಣದ ಬ್ಯಾಟರ್ ಆಗಿ ಬದಲಾದರು.

ಸೋಲಿನ ಬೆನ್ನಲ್ಲೇ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಪ್ರಕಟಿಸಿದ ಸ್ಮಿತ್‌

-

Abhilash BC
Abhilash BC Mar 5, 2025 12:31 PM

ದುಬೈ: ಆಸ್ಟ್ರೇಲಿಯಾ ತಂಡದ ಹಿರಿಯ ಆಟಗಾರ ಸ್ವೀವನ್‌ ಸ್ಮಿತ್‌(Steve Smith) ಅವರು ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ದಿಢೀರ್‌ ನಿವೃತ್ತಿ ಪ್ರಕಟಿಸಿದ್ದಾರೆ. ಮಂಗಳವಾರ ನಡೆದಿದ್ದ ಚಾಂಪಿಯನ್ಸ್‌ ಟ್ರೋಫಿ ಸೆಮಿಫೈನಲ್‌ ಪಂದ್ಯದಲ್ಲಿ ಭಾರತ ವಿರುದ್ಧ ಸೋಲು ಕಂಡ ಮರು ದಿನವೇ ಸ್ಮಿತ್‌ ಈ ವಿದಾಯ ಪ್ರಕಟಿಸಿದರು. 'ಇದು ನಿವೃತ್ತಿಗೆ ಉತ್ತಮ ಸಮಯ. ನಾನು ಆಸ್ಟ್ರೇಲಿಯಾ ಪರ ಆಡಿದ ಪ್ರತಿ ನಿಮಿಷವನ್ನು ಆನಂಧಿಸುವೆ' ಎಂದು ಸ್ಮಿತ್ ತಮ್ಮ ಪ್ರಕಟಣೆಯಲ್ಲಿ ಉಲ್ಲೇಖಿಸಿದ್ದಾರೆ.

"ಹಲವು ಅದ್ಭುತ ಸಮಯಗಳು ಮತ್ತು ಅದ್ಭುತ ನೆನಪುಗಳು ಇವೆ. ತಂಡದ ಸಹ ಆಟಗಾರರೊಂದಿಗೆ ಎರಡು ಏಕದಿನ ವಿಶ್ವಕಪ್‌ಗಳನ್ನು ಗೆದ್ದಿರುವ ಖಷಿ ಇದೆ. 2027 ರ ವಿಶ್ವಕಪ್‌ಗೆ ತಂಡದ ತಯಾರಿ ಪ್ರಾರಂಭಿಸಲು ಕ್ರಿಕೆಟ್‌ ಆಸ್ಟ್ರೇಲಿಯಾಕ್ಕೆ ದಾರಿ ಮಾಡಿಕೊಡಲು ಇದು ಸರಿಯಾದ ಸಮಯ ಎಂದು ಭಾವಿಸುತ್ತದೆ" ಎಂದು ಸ್ಮಿತ್ ನಿವೃತ್ತಿ ಬಳಿಕ ಹೇಳಿದರು.

ಸ್ವೀವನ್‌ ಸ್ಮಿತ್‌ 2015 ಮತ್ತು 2023ರ ಏಕದಿನ ವಿಶ್ವಕಪ್‌ ವಿಜೇತ ಆಸ್ಟ್ರೇಲಿಯಾ ತಂಡದ ಸದಸ್ಯನಾಗಿದ್ದರು. ನಾಯಕನಾಗಿಯೂ ಅವರು ಆಸೀಸ್‌ ಪರ ಉತ್ತಮ ದಾಖಲೆ ಹೊಂದಿದ್ದಾರೆ. ಕಮಿನ್ಸ್‌ ಅನುಪಸ್ಥಿತಿಯಲ್ಲಿ ಈ ಬಾರಿಯ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಸ್ಮಿತ್‌ ಹಂಗಾಮಿ ನಾಯಕನಾಗಿ ತಂಡವನ್ನು ಸೆಮಿ ಫೈನಲ್‌ ತನಕ ತಂದಿದ್ದರು. ಏಕದಿನ ಕ್ರಿಕೆಟ್‌ನಿಂದ ನಿವೃತ್ತಿಯಾದರೂ ಟೆಸ್ಟ್‌ನಲ್ಲಿ ಕೆಲ ಕಾಲ ಆಸೀಸ್‌ ಪರ ಆಡಲಿದ್ದೇನೆ ಎಂದು ಸ್ಮಿತ್‌ ಹೇಳಿದರು. ಮಂಗಳವಾರ ನಡೆದಿದ್ದ ಭಾರತ ವಿರುದ್ಧದ ಚಾಂಪಿಯನ್ಸ್‌ ಟ್ರೋಫಿ ಸೆಮಿ ಫೈನಲ್‌ ಪಂದ್ಯದಲ್ಲಿ ಸ್ಮಿತ್‌ 73 ರನ್‌ ಬಾರಿಸಿ ಮಿಂಚಿದ್ದರು.



ಸ್ಮಿತ್ ಅವರು 2010 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ತಮ್ಮ ಚೊಚ್ಚಲ ಏಕದಿನ ಪಂದ್ಯವನ್ನು ಆಡಿದ್ದರು. ಲೆಗ್ ಸ್ಪಿನ್ನಿಂಗ್ ಆಲ್ ರೌಂಡರ್ ಆಗಿದ್ದ ಸ್ಮಿತ್ ಆ ಬಳಿಕ ಪೂರ್ಣ ಪ್ರಮಾಣದ ಬ್ಯಾಟರ್ ಆಗಿ ಬದಲಾದರು.

ಆಸ್ಟ್ರೇಲಿಯಾ ಪರ ಸ್ಮಿತ್‌ 170 ಏಕದಿನ ಪಂದ್ಯಗಳನ್ನು ಆಡಿ 43.28 ಸರಾಸರಿಯಲ್ಲಿ 5,800 ರನ್ ಗಳಿಸಿದ್ದಾರೆ. ಇದರಲ್ಲಿ 12 ಶತಕಗಳು ಮತ್ತು 35 ಅರ್ಧ ಶತಕಗಳು ಸೇರಿವೆ. 34.67ರ ಸರಾಸರಿಯಲ್ಲಿ 28 ವಿಕೆಟ್‌ಗಳನ್ನೂ ಪಡೆದಿದ್ದಾರೆ. ಸ್ಮಿತ್‌ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಚೆಂಡು ವಿರೂಪ ಪ್ರಕರಣದಲ್ಲಿ ಒಂದು ವರ್ಷ ಶಿಕ್ಷೆ ಅನುಭವಿಸಿದ್ದರು. ಇದೇ ಪ್ರಕರಣದಿಂದ ಅವರು ನಾಯಕತ್ವವನ್ನು ಕೂಡ ಕಳೆದುಕೊಂಡಿದ್ದರು.