ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Stock Market: 48 ಗಂಟೆಗಳಲ್ಲಿ ಭಾರತ- ಅಮೆರಿಕ ಟ್ರೇಡ್‌ ಡೀಲ್‌! ಸೆನ್ಸೆಕ್ಸ್-ನಿಫ್ಟಿ ಫ್ಲಾಟ್‌

ಅಮೆರಿಕ ಮತ್ತು ಭಾರತದ ನಡುವೆ ಮಹತ್ವದ ಟ್ರೇಡ್‌ ಡೀಲ್‌ ಕುರಿತ ಅನಿಶ್ಚಿತತೆ ಇರುವ ಹಿನ್ನೆಲೆಯಲ್ಲಿ ಸ್ಟಾಕ್‌ ಮಾರ್ಕೆಟ್‌ನಲ್ಲಿ ಸೂಚ್ಯಂಕಗಳು ಮಂದಗತಿಯಲ್ಲಿ ಇತ್ತು ಎಂದು ತಜ್ಞರು ತಿಳಿಸಿದ್ದಾರೆ. ಈ ನಡುವೆ ಕಚ್ಚಾ ತೈಲ ದರಗಳು ಇಳಿಕೆಯ ಹಾದಿಯಲ್ಲಿತ್ತು. ಏಕೆಂದರೆ ತೈಲೋತ್ಪಾದಕ ರಾಷ್ಟ್ರಗಳ ಒಕ್ಕೂಟವಾದ ಒಪೆಕ್‌, ಉತ್ಪಾದನೆಯನ್ನು ಹೆಚ್ಚಿಸುವುದಾಗಿ ತಿಳಿಸಿದೆ.

48 ಗಂಟೆಗಳಲ್ಲಿ ಭಾರತ- ಅಮೆರಿಕ ಟ್ರೇಡ್‌ ಡೀಲ್‌! ಸೆನ್ಸೆಕ್ಸ್‌ ಫ್ಲಾಟ್‌

Profile Rakshita Karkera Jul 7, 2025 4:40 PM

ಮುಂಬೈ: ಭಾರತೀಯ ಷೇರು ಮಾರುಕಟ್ಟೆಯಲ್ಲಿ(Stock Market) ಸೆನ್ಸೆಕ್ಸ್‌ ಮತ್ತು ನಿಫ್ಟಿ ಇವತ್ತು ಫ್ಲಾಟ್‌ ಆಗಿತ್ತು. ದಿನದ ಮುಕ್ತಾಯಕ್ಕೆ ಸೆನ್ಸೆಕ್ಸ್‌ 9 ಅಂಕ ಗಳಿಸಿಕೊಂಡು 83,442ಕ್ಕೆ ಸ್ಥಿರವಾದರೆ, ನಿಫ್ಟಿ 25,461ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು . ಮುಖ್ಯವಾಗಿ ಅಮೆರಿಕ ಮತ್ತು ಭಾರತದ ನಡುವೆ ಮಹತ್ವದ ಟ್ರೇಡ್‌ ಡೀಲ್‌ ಕುರಿತ ಅನಿಶ್ಚಿತತೆ ಇರುವ ಹಿನ್ನೆಲೆಯಲ್ಲಿ ಸ್ಟಾಕ್‌ ಮಾರ್ಕೆಟ್‌ನಲ್ಲಿ ಸೂಚ್ಯಂಕಗಳು ಮಂದಗತಿಯಲ್ಲಿ ಇತ್ತು ಎಂದು ತಜ್ಞರು ತಿಳಿಸಿದ್ದಾರೆ.

ಈ ನಡುವೆ ಕಚ್ಚಾ ತೈಲ ದರಗಳು ಇಳಿಕೆಯ ಹಾದಿಯಲ್ಲಿತ್ತು. ಏಕೆಂದರೆ ತೈಲೋತ್ಪಾದಕ ರಾಷ್ಟ್ರಗಳ ಒಕ್ಕೂಟವಾದ ಒಪೆಕ್‌, ಉತ್ಪಾದನೆಯನ್ನು ಹೆಚ್ಚಿಸುವುದಾಗಿ ತಿಳಿಸಿದೆ. ಇವತ್ತು ಸೆಕ್ಟರ್‌ಗಳ ಪೈಕಿ ನಿಫ್ಟಿ ಐಟಿ, ಮೆಟಲ್‌ ಮತ್ತು ಮೀಡಿಯಾ ಒತ್ತಡದಲ್ಲಿತ್ತು. ಮತ್ತೊಂದು ಕಡೆ FMCG, PSU ಬ್ಯಾಂಕ್‌, ಕನ್‌ ಸ್ಯೂಮರ್‌ ಡ್ಯೂರಬಲ್ಸ್‌ ಮತ್ತು ತೈಲ ಹಾಗೂ ಅನಿಲ ಸೆಕ್ಟರ್‌ನ ಷೇರುಗಳು ಲಾಭ ಗಳಿಸಿತು.



ಇವತ್ತು ನಷ್ಟಕ್ಕೀಡಾದ ಷೇರುಗಳು:

  • ಬಿಇಎಲ್‌
  • ಟೆಕ್‌ ಮಹೀಂದ್ರಾ
  • ಎಚ್‌ಸಿಎಲ್‌ ಟೆಕ್‌
  • ಐಶರ್‌ ಮೋಟಾರ್ಸ್‌
  • ಮಾರುತಿ ಸುಜುಕಿ

ಇವತ್ತು ಲಾಭ ಗಳಿಸಿದ ಷೇರುಗಳು

  • ಎಚ್‌ಯುಎಲ್
  • ಗೋದ್ರೇಜ್‌ ಕನ್‌ಸ್ಯೂಮರ್‌ ಪ್ರಾಡಕ್ಸ್ಟ್‌
  • ಡಾಬರ್‌ ಇಂಡಿಯಾ
  • ಹಿಂದುಸ್ತಾನ್‌ ಯುನಿಲಿವರ್
  • ಏಷ್ಯನ್‌ ಪೇಂಟ್ಸ್‌
  • ಬಜಾಜ್‌ ಫಿನ್‌ ಸರ್ವ್‌
  • ರಿಲಯನ್ಸ್‌ ಇಂಡಸ್ಟ್ರೀಸ್‌
  • ಎಚ್‌ಡಿಎಫ್‌ಸಿ ಬ್ಯಾಂಕ್‌

ಈಗ ಸುದ್ದಿಯಲ್ಲಿರುವ ಷೇರುಗಳ ಬಗ್ಗೆ ತಿಳಿಯೋಣ.

ಕಂಟೈನರ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ:

ಕಂಟೈನರ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ ಕಂಪನಿಯು ಹೂಡಿಕೆದಾರರಿಗೆ 1:4 ಅನುಪಾತದಲ್ಲಿ ಬೋನಸ್‌ ಷೇರುಗಳನ್ನು ವಿತರಿಸಲು ಉದ್ದೇಶಿಸಿದೆ. ಅಂದರೆ ಪ್ರತಿ 4 ಷೇರಿಗೆ ಒಂದು ಬೋನಸ್‌ ಷೇರು ಸಿಗಲಿದೆ. ಯಾರಾದರೂ ಹೂಡಿಕೆದಾರನಲ್ಲಿ 100 ಷೇರುಗಳು ಇದ್ದರೆ, ಹೆಚ್ಚುವರಿಯಾಗಿ 25 ಷೇರುಗಳು ಸಿಗಲಿವೆ. ಕಂಟೈನರ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ ಅಥವಾ ಕಾನ್‌ಕಾರ್‌ ಷೇರಿನ ಈಗಿನ ದರ 593/- ಆಗಿದೆ.

ಈ ಸುದ್ದಿಯನ್ನೂ ಓದಿ: Karnataka Bank: ಕರ್ಣಾಟಕ ಬ್ಯಾಂಕ್‌ ಎಂಡಿ-ಸಿಇಒ, ಕಾರ್ಯನಿರ್ವಾಹಕ ನಿರ್ದೇಶಕ ರಾಜೀನಾಮೆ; ಷೇರು ಬೆಲೆ ಭಾರಿ ಕುಸಿತ!

ಟ್ರಾವೆಲ್‌ ಫುಡ್‌ ಸರ್ವೀಸ್‌ ಐಪಿಒ:

ಟ್ರಾವೆಲ್‌ ಫುಡ್‌ ಸರ್ವೀಸ್‌ ಷೇರು ಮಾರುಕಟ್ಟೆಯನ್ನು ಐಪಿಒ ಮೂಲಕ ಪ್ರವೇಶಿಸುತ್ತಿದೆ. ಆಂಕರ್‌ ಇನ್ವೆಸ್ಟರ್ಸ್‌ಗಳಿಂದ 598 ಕೋಟಿ ರುಪಾಯಿಗಳ ಹೂಡಿಕೆ ಲಭಿಸಿದೆ. 2,000 ಕೋಟಿ ರುಪಾಯಿ ಮೌಲ್ಯದ ಐಪಿಒ ಇದಾಗಿದೆ. ಜುಲೈ 9ರಂದು Subscription ಮುಕ್ತಾಯವಾಗಲಿದೆ.

52 ವಾರಗಳ ಗರಿಷ್ಠ ಎತ್ತರಕ್ಕೇರಿದ ಷೇರುಗಳು:

  • ಫೋರ್ಟಿಸ್‌ ಹೆಲ್ತ್‌ಕೇರ್‌ ಲಿಮಿಟೆಡ್‌ : 808/-
  • ಎಲ್‌ &ಟಿ ಫೈನಾನ್ಸ್‌ ಲಿಮಿಟೆಡ್‌: 209/-
  • ಮುತ್ತೂಟ್‌ ಫೈನಾನ್ಸ್‌ ಲಿಮಿಟೆಡ್‌: 2658/-
  • ನವೀನ್‌ ಫ್ಲೋರಿನ್‌ ಇಂಟರ್‌ ನ್ಯಾಶನಲ್‌ ಲಿಮಿಟೆಡ್‌ : 4,958/-
  • ಸಿಎಸ್‌ಬಿ ಬ್ಯಾಂಕ್‌ : 409/-

ಜೈಪ್ರಕಾಶ್‌ ಪವರ್‌ ವೆಂಚರ್ಸ್‌ ಷೇರಿನ ದರದಲ್ಲಿ ಇವತ್ತು 14% ಏರಿಕೆಯಾಯಿತು. 22 ರುಪಾಯಿಗೆ ಏರಿಕೆ ದಾಖಲಿಸಿತು. ಕಂಪನಿಯ ವಾರ್ಷಿಕ ಪ್ರಧಾನ ಸಭೆಯು ವಾರಾಂತ್ಯಕ್ಕೆ ಯಶಸ್ವಿಯಾಗಿ ನಡೆದಿರುವುದು ಇದಕ್ಕೆ ಕಾರಣ. ಸೆಬಿ ನಿಯಮಾವಳಿಯ ಪ್ರಕಾರ ಎಜಿಎಂ ನಡೆಯಿತು.

ಈ ವಾರ ಸ್ಟಾಕ್‌ ಮಾರ್ಕೆಟ್‌ ಮೇಲೆ ಪ್ರಭಾವ ಬೀರಲಿರುವ 5 ಮುಖ್ಯಾಂಶಗಳ ಬಗ್ಗೆ ನೋಡೋಣ.

  1. ಭಾರತ- ಅಮೆರಿಕ ಟ್ರೇಡ್‌ ಡೀಲ್‌ ಏರ್ಪಡುವ ನಿರೀಕ್ಷೆ
  2. 2025-26ರ ಮೊದಲ ತ್ರೈಮಾಸಿಕದ ರಿಸಲ್ಟ್‌ಗಳು ಆರಂಭ.
  3. ಮುಂಗಾರು ಮಳೆಯ ಪ್ರಗತಿ
  4. ವಿದೇಶಿ ಹೂಡಿಕೆಯ ಹರಿವು
  5. ಅಮೆರಿಕದ ಫೆಡರಲ್‌ ರಿಸರ್ವ್‌ನ ಓಪನ್‌ ಮಾರ್ಕೆಟ್‌ ಕಮಿಟಿಯ ವರದಿ ಜೂನ್-‌17-18ಕ್ಕೆ ಮಂಡನೆ.

ಮೊದಲನೆಯದಾಗಿ ಭಾರತ- ಅಮೆರಿಕ ನಡುವಣ ವ್ಯಾಪಾರ ಒಪ್ಪಂದದ ಮಾತುಕತೆ ಇನ್ನೆರಡು ದಿನಗಳಲ್ಲಿ ಅಂತಿಮವಾಗಲಿದೆಯೇ ಎಂಬ ಕುತೂಹಲ ಇದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಜುಲೈ 9ಕ್ಕೆ ಗಡುವು ನಿಗದಿಪಡಿಸಿದ್ದರೂ, ಹೂಡಿಕೆದಾರರು ಕಾತರದಿಂದ ಮತ್ತು ಆತಂಕದಿಂದ ಎದುರು ನೋಡುತ್ತಿದ್ದಾರೆ.

ವರದಿಗಳ ಪ್ರಕಾರ ಭಾರತೀಯ ಸಂಧಾನಕಾರರು ಕಳೆದ ಶುಕ್ರವಾರ ಅಮೆರಿಕದಿಂದ ಹಿಂತಿರುಗಿದ್ದಾರೆ. ಭಾರತವು WTO ನಿಯಮಗಳ ಪ್ರಕಾರ ಅಮೆರಿಕದ ವಿರುದ್ಧ ಪ್ರತಿ ಸುಂಕವನ್ನೂ ವಿಧಿಸುವ ಸಾಧ್ಯತೆಯೂ ಇದೆ. ವರದಿಗಳ ಪ್ರಕಾರ ಉಭಯ ದೇಶಗಳ ನಡುವೆ ಸರಾಸರಿ 10 ಪರ್ಸೆಂಟ್‌ ಟಾರಿಫ್‌ ಜಾರಿಯಾಗುವ ಸಾಧ್ಯತೆ ಇದೆ.

ವಾಣಿಜ್ಯ ಸಚಿವ ಪಿಯೂಷ್‌ ಗೋಯೆಲ್‌ ಅವರು ಶುಕ್ರವಾರ ಮಾತನಾಡುತ್ತಾ, " ಭಾರತವು ಡೆಡ್‌ ಲೈನ್‌ ಅಧರಿಸಿ ಯಾವುದೇ ಒಪ್ಪಂದಕ್ಕೆ ಆತುರದಲ್ಲಿ ಸಹಿ ಹಾಕದು. ರಾಷ್ಟ್ರೀಯ ಹಿತಾಸಕ್ತಿಯನ್ನು ಪರಿಗಣಿಸಿ ಮಾತುಕತೆ ಪೂರ್ಣವಾದ ಬಳಿಕವಷ್ಟೇ ಒಪ್ಪಂದ ನಡೆಯಲಿದೆ ಎಂದು ಹೇಳಿದ್ದಾರೆ.

ಭಾರತ ಮತ್ತು ಅಮರಿಕ ನಡುವೆ ವ್ಯಾಪಾರ ಒಪ್ಪಂದ ನಡೆಯುವುದು ರಫ್ತು ಆಧಾರಿತವಾದ ಐಟಿ, ಔಷಧ ಮತ್ತು ಆಟೊಮೊಬೈಲ್‌ ಬಿಡಿ ಭಾಗಗಳ ಸೆಕ್ಟರ್‌ ದೃಷ್ಟಿಯಿಂದ ಮಹತ್ವಪೂರ್ಣವಾಗಲಿದೆ. ಒಪ್ಪಂದ ಇತ್ಯರ್ಥವಾಗದಿದ್ದರೆ ಅಥವಾ ತಡವಾದರೆ ತಾತ್ಕಾಲಿಕವಾಗಿ ಈ ಕ್ಷೇತ್ರಗಳ ಷೇರುಗಳ ಮೇಲೆ ನಕಾರಾತ್ಮಕ ಪ್ರಭಾವ ಬೀರುವ ಸಾಧ್ಯತೆ ಇದೆ.

ಎರಡನೆಯದಾಗಿ, ಭಾರತದ ಕಾರ್ಪೊರೇಟ್‌ ವಲಯದ ಕಂಪನಿಗಳು ಜುಲೈನಲ್ಲಿ ಪ್ರಸಕ್ತ 2025-26ರ ಸಾಲಿನ ಮೊದಲ ತ್ರೈಮಾಸಿಕ, ಅಂದರೆ ಏಪ್ರಿಲ್-ಜೂನ್‌ ಅವಧಿಯ ಫಲಿತಾಂಶವನ್ನು ಪ್ರಕಟಿಸಲು ಸಜ್ಜಾಗಿವೆ. ಹೂಡಿಕೆದಾರರೂ ಕಾತರದಿಂದ ಕಾಯುತ್ತಿದ್ದಾರೆ.

ಯಾವಾಗ ಯಾವ ಕಂಪನಿಯ ರಿಸಲ್ಟ್?‌

ಜುಲೈ 10: ಟಿಸಿಎಸ್‌ ಮತ್ತು ಟಾಟಾ ಎಲೆಕ್ಸಿ ‌

ಜುಲೈ 11: ಡಿಮಾರ್ಟ್‌

ಜುಲೈ 15: HDFC ಲೈಫ್‌, ICICI ಲ್ಯಾಂಬೋರ್ಡ್‌, ICICI ಪ್ರುಡೆನ್ಷಿಯಲ್‌, ಸ್ವರಾಜ್‌ ಫೈನಾನ್ಸ್‌

ಜುಲೈ 23: ಇನ್ಫೋಸಿಸ್‌

ಜುಲೈ 16 : ಟೆಕ್‌ ಮಹೀಂದ್ರಾ, ಎಲ್‌ಟಿ ಟೆಕ್ನಾಲಜಿ, ಏಂಜೆಲ್‌ ವನ್‌

ಜುಲೈ 17: ಎಕ್ಸಿಸ್‌ ಬ್ಯಾಂಕ್‌, ಪಾಲಿಕ್ಯಾಬ್‌, ಎಲ್‌ಟಿಐ ಮೈಂಡ್‌ ಟ್ರೀ

ಜುಲೈ 18: JSW ಸ್ಟೀಲ್‌

ಜುಲೈ 19: HDFC ಬ್ಯಾಂಕ್, ICICI ಬ್ಯಾಂಕ್‌, ಜೆಕೆ ಸಿಮೆಂಟ್‌, ಇಂಡಿಯಾ ಸಿಮೆಂಟ್ಸ್‌

ಜುಲೈ 22: ಯುನೈಟೆಡ್‌ ಬ್ರೇವರೇಜಸ್‌

ಜುಲೈ 23: ಇನ್ಫೋಸಿಸ್‌, ಬಜಾಜ್‌ ಹೌಸಿಂಗ್‌

ಜುಲೈ 24 : ಬಜಾಜ್‌ ಫೈನಾನ್ಸ್‌, ನೆಸ್ಲೆ

ಜುಲೈ 25: ಬಜಾಜ್‌ ಫಿನ್‌ ಸರ್ವ್‌

ಜುಲೈ 29 : ಏಷ್ಯನ್‌ ಪೇಂಟ್ಸ್‌

ವಿದೇಶಿ ಹೂಡಿಕೆದಾರರು ಕಳೆದ ಏಪ್ರಿಲ್-ಜೂನ್‌ ತ್ರೈಮಾಸಿಕದಲ್ಲಿ 16,483 ಕೋಟಿ ರುಪಾಯಿ ಮೌಲ್ಯದ ಐಟಿ ಷೇರುಗಳನ್ನು ಮಾರಿದ್ದಾರೆ. ಬಿಎಸ್‌ಇ ಐಟಿ ಇಂಡೆಕ್ಸ್‌ 5.5% ಏರಿಕೆಯಾಗಿದ್ದು, ಮಿಡ್‌ ಕ್ಯಾಪ್ಸ್‌ ಇದರ ನೇತೃತ್ವ ವಹಿಸಿತ್ತು. ಡೊಮೆಸ್ಟಿಕ್‌ ಇನ್‌ಸ್ಟಿಟ್ಯೂಷನಲ್‌ ಇನ್ವೆಸ್ಟರ್ಸ್‌ 1 ಲಕ್ಷದ 41 ಸಾವಿರ ಕೋಟಿ ರುಪಾಯಿ ಮೌಲ್ಯದ ಹೂಡಿಕೆಯನ್ನು ಮಾಡಿದ್ದಾರೆ.