ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Hegde Kageri Interview: ಶಾಸಕರ ಅಮಾನತು, ಕ್ಷೇತ್ರದ ಜನತೆಗೆ ಮಾಡಿದ ಅಪಮಾನ

ಕರ್ನಾಟಕದ ವಿಧಾನಮಂಡಲಕ್ಕೆ ತನ್ನದೇಯಾದ ಇತಿಹಾಸವಿದೆ. ಇಡೀ ವಿಶ್ವಕ್ಕೆ ಸಂಸತ್ ಅನ್ನು ಮೊದ ಲು ಪರಿಚಯಿಸಿದ್ದು ಬಸವಣ್ಣನವರ ಅನುಭವ ಮಂಟಪ. ಈಗಿನ ವಿಧಾನ ಪರಿಷತ್ ಅನ್ನು ಆರಂಭಿಸಿ ದ್ದು ಮೈಸೂರು ಒಡೆಯರ್ ಅವರು. ಅವರ ಅವಧಿಯಲ್ಲಿ ಪ್ರಜಾಪ್ರತಿನಿಧಿ ಸಭೆಯ ಮೂಲಕ ಇಡೀ ದೇಶಕ್ಕೆ ಸಂಸದೀಯ ವ್ಯವಸ್ಥೆಯನ್ನು ಪರಿಚಯಿಸಿದ್ದರು. ಇನ್ನು ಈ ಕರ್ನಾಟಕದ ಮಾದರಿ ಸಂಸದೀಯ ವ್ಯವಸ್ಥೆಗೆ ಅನೇಕರು ತಮ್ಮದೇಯಾದ ಕೊಡುಗೆ ನೀಡಿದ್ದಾರೆ

ಶಾಸಕರ ಅಮಾನತು, ಕ್ಷೇತ್ರದ ಜನತೆಗೆ ಮಾಡಿದ ಅಪಮಾನ

ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದರು, ಮಾಜಿ ವಿಧಾನ ಸಭಾಧ್ಯಕ್ಷ

ವಿಶ್ವೇಶ್ವರ ಹೆಗಡೆ ಕಾಗೇರಿ ಸಂದರ್ಶನ

ಸಂದರ್ಶನ: ರಂಜಿತ್‌ ಎಚ್.ಅಶ್ವತ್ಥ

ಆರು ತಿಂಗಳ ಅವಧಿಗೆ 18 ಶಾಸಕರನ್ನು ಅಮಾನತು ಮಾಡಿರುವುದು ಶಾಸಕರಿಗೆ ಮಾಡಿ ರುವ ಅಪಮಾನಕ್ಕಿಂತ, ಅವರನ್ನು ಗೆಲ್ಲಿಸಿರುವ ಲಕ್ಷಾಂತರ ಜನರಿಗೆ ಮಾಡಿರುವ ಅಪಮಾನ ಹಾಗೂ ಅನ್ಯಾಯ. ಈ ರೀತಿಯ ಕಠಿಣ ತೀರ್ಮಾನವನ್ನು ತೆಗೆದುಕೊಂಡಿರುವುದು ಸರಿ ಯಲ್ಲ. ಕೂಡಲೇ ತಿದ್ದುಪಡಿ ಮಾಡಬೇಕು ಎಂದು ಮಾಜಿ ವಿಧಾನಸಭಾಧ್ಯಕ್ಷ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆಗ್ರಹಿಸಿದ್ದಾರೆ. ಬಜೆಟ್ ಮೇಲಿನ ಚರ್ಚೆಯ ವೇಳೆ ಬಿಜೆಪಿ ಶಾಸಕರು ಸ್ಪೀಕರ್ ಪೀಠದಲ್ಲಿ ನಿಂತಿದ್ದು ಹಾಗೂ ಪೇಪರ್ ಎಸೆದ ಕಾರಣಕ್ಕೆ ಅಧಿವೇಶನದ ಕೊನೆಯ ದಿನ 18 ಬಿಜೆಪಿ ಶಾಸಕರನ್ನು ಆರು ತಿಂಗಳ ಅವಧಿಗೆ ಅಮಾನತುಗೊಳಿಸಲಾಗಿದೆ. ಈ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕಾಗೇರಿ ಅವರು, ಕೂಡಲೇ ಈ ತೀರ್ಮಾನವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ. ‘ವಿಶ್ವವಾಣಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಶಾಸಕರ ಅಮಾನತಿಗೆ ಸಂಬಂಧಿಸಿದಂತೆ ಹಲವು ಆಯಾಮಗಳಲ್ಲಿ ಮಾತನಾಡಿದ್ದಾರೆ. ಸಂದರ್ಶನದ ಪೂರ್ಣಪಾಠ ಇಲ್ಲಿದೆ.

ಶಾಸಕರ ಅಮಾನತಿನ ಅವಶ್ಯಕತೆ ಇತ್ತೇ?

ಕರ್ನಾಟಕದ ವಿಧಾನಮಂಡಲಕ್ಕೆ ತನ್ನದೇಯಾದ ಇತಿಹಾಸವಿದೆ. ಇಡೀ ವಿಶ್ವಕ್ಕೆ ಸಂಸತ್ ಅನ್ನು ಮೊದಲು ಪರಿಚಯಿಸಿದ್ದು ಬಸವಣ್ಣನವರ ಅನುಭವ ಮಂಟಪ. ಈಗಿನ ವಿಧಾನ ಪರಿಷತ್ ಅನ್ನು ಆರಂಭಿಸಿದ್ದು ಮೈಸೂರು ಒಡೆಯರ್ ಅವರು. ಅವರ ಅವಧಿಯಲ್ಲಿ ಪ್ರಜಾಪ್ರತಿನಿಧಿ ಸಭೆಯ ಮೂಲಕ ಇಡೀ ದೇಶಕ್ಕೆ ಸಂಸದೀಯ ವ್ಯವಸ್ಥೆಯನ್ನು ಪರಿಚಯಿಸಿದ್ದರು. ಇನ್ನು ಈ ಕರ್ನಾಟಕದ ಮಾದರಿ ಸಂಸದೀಯ ವ್ಯವಸ್ಥೆಗೆ ಅನೇಕರು ತಮ್ಮದೇಯಾದ ಕೊಡುಗೆ ನೀಡಿದ್ದಾರೆ. ಆದರೆ ಇಂತಹ ಇತಿಹಾಸ ಹೊಂದಿರುವ ಸದನದಲ್ಲಿ ಈ ರೀತಿಯ ಕಠಿಣ ಕ್ರಮ ಸರಿಯಲ್ಲ. ಅದರಲ್ಲಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಅವರಿರುವ ಸಮಯದಲ್ಲಿ ಇಂತಹ ನಿರ್ಣಯ ಸೂಕ್ತವಲ್ಲ.

ಶಾಸಕರನ್ನು ಅಮಾನತು ಮಾಡಲು ಅವಕಾಶವಿದೆಯೇ?

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಲಕ್ಷಾಂತರ ಜನರಿಂದ ಆಯ್ಕೆಯಾಗುವ ಶಾಸಕರನ್ನು ಯಾವ ರೀತಿಯಲ್ಲಿ ನಡೆಸಿಕೊಳ್ಳಬೇಕು ಎನ್ನುವುದಕ್ಕೆ ಸಾಕಷ್ಟು ನಿಯಮಾವಳಿಗಳಿವೆ. ಈ ಯಾವ ನಿಮಯ ಗಳಲ್ಲಿಯೂ ಈ ಪ್ರಮಾಣದ ಶಿಕ್ಷೆ ನೀಡಲು ಅವಕಾಶವಿಲ್ಲ. ಒಂದು ವೇಳೆ ಯಾವುದಾದರೂ ಶಾಸಕರು ತಪ್ಪು ಮಾಡಿದರೆ, ಅಪರಾಧ ಎಸಗಿದರೆ ಶಿಕ್ಷೆ ನೀಡಲು ನ್ಯಾಯಾಲಯಗಳಿವೆ. ಆದರೆ ಸಭಾಧ್ಯಕ್ಷರು ಈ ರೀತಿಯ ಕಠಿಣ ಕ್ರಮ ಕೈಗೊಳ್ಳುವುದು ಸರಿಯಲ್ಲ. ಶಾಸಕರು ಯಾರಾದರೂ ಸದನ ನಿಯಮವನ್ನು ಮೀರಿದರೆ, ಸಭಾಧ್ಯಕ್ಷರಾದವರು ಆ ದಿನದ ಕಲಾಪಕ್ಕೆ ಅಥವಾ ಆಯಾ ಅಧಿ ವೇಶನದ ಮುಕ್ತಾಯದವರೆಗೆ ಹೊರಹಾಕಲು ಅವಕಾಶವಿದೆ. ಅದು ಸಹ, ಶಾಸಕರಿಗೆ ತಿಳಿವಳಿಕೆ ನೀಡಲು ಅಥವಾ ಜಾಗೃತಿ ಮೂಡಿಸುವ ಪ್ರಯತ್ನವೇ ಹೊರತು, ಶಿಕ್ಷೆ ನೀಡುವುದಕ್ಕೆ ಅಲ್ಲ. ಸಭಾ ಧ್ಯಕ್ಷರಾದವರು ಶಾಸಕರ ವಿರುದ್ಧ ಯಾವುದೇ ರೀತಿಯ ತೀರ್ಮಾನ ಕೈಗೊಂಡರೂ ಲಕ್ಷಾಂತರ ಜನರ ಭಾವನೆಯನ್ನು ವ್ಯಕ್ತಪಡಿಸುವುದಕ್ಕೆಂದೇ ಆಯ್ಕೆಯಾಗುವ ಜನಪ್ರತಿನಿಧಿಯ ಹಕ್ಕನ್ನು ಹತ್ತಿಕ್ಕುವ ರೀತಿಯಲ್ಲಿರಬಾರದು. ಒಂದು ವೇಳೆ ಯಾರಾದರೂ ತಪ್ಪು ಮಾಡಿದರೆ ಅದನ್ನು ಸರಿಪಡಿಸುವುದಕ್ಕೆ ಎಲ್ಲರೂ ಸೇರಿ ಪ್ರಯತ್ನಿಸಬೇಕೇ ಹೊರತು, ಈ ರೀತಿ ಮಾಡಬಾರದು.

‘6 ತಿಂಗಳು ಅಮಾನತು’ ಎಂಬುದನ್ನು ಕೇಳಿದಾಗ ಏನನಿಸಿತು?

ಶುಕ್ರವಾರದ ವಿಧಾನಸಭಾ ಕಲಾಪದಲ್ಲಿ ಸಭಾಧ್ಯಕ್ಷರು ಕೈಗೊಂಡಿರುವ ತೀರ್ಮಾನ ಕಠಿಣ ನಿರ್ಣಯ. ಸಂಸದೀಯ ವ್ಯವಸ್ಥೆಯಲ್ಲಿ ದಶಕಗಳ ಕಾಲ ಇರುವ ಹಿರಿಯ ನಾಯಕರಾದ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಕಾನೂನು ಸಚಿವ ಎಚ್.ಕೆ.ಪಾಟೀಲ್ ಅವರಂತಹ ಹಿರಿಯರು ಇದ್ದಾಗ ಈ ರೀತಿಯ ಕಠಿಣ ನಿರ್ಣಯವನ್ನು ಹೇಗೆ ಒಪ್ಪಿದ್ದಾರೋ ಗೊತ್ತಿಲ್ಲ. ವಿಧಾನಸಭಾಧ್ಯಕ್ಷರಾದವರಿಗೆ, ಅನುಭವದ ಕೊರತೆಯಿರುತ್ತದೆ. ಆದರೆ ಅವರಿಗೆ ತಿಳಿಹೇಳಬೇಕಾಗಿರುವುದು ಹಿರಿಯರ ಕರ್ತವ್ಯ. ಆದ್ದರಿಂದ ಈ ನಿರ್ಣಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಹಾಗೂ ಎಚ್.ಕೆ.ಪಾಟೀಲ್ ಅವರೊಂದಿಗೆ ಮಾತನಾಡಿದ್ದೇನೆ. ಈ ನಿರ್ಣಯವನ್ನು ಹಿಂಪಡೆಯಲು ಅಥವಾ ತಿದ್ದುಪಡಿ ಮಾಡಲು ಮನವಿ ಮಾಡಿದ್ದೇನೆ. ಏಕೆಂದರೆ, ಶುಕ್ರವಾರದ ತೀರ್ಮಾನ ಯಾವುದೋ ಒಬ್ಬ ಶಾಸಕರ ಪ್ರಶ್ನೆಯಲ್ಲ. ಬದಲಿಗೆ ಇಡೀ ಸಂಸದೀಯ ವ್ಯವಸ್ಥೆಯ ಪ್ರಶ್ನೆಯಾಗಿದೆ. ಸಭಾಧ್ಯಕ್ಷ ಸ್ಥಾನದ ಪ್ರಶ್ನೆ ಯಾಗಿದೆ. ಆದ್ದರಿಂದ ಈ ಎರಡರ ಗೌರವವನ್ನು ಕಾಪಾಡುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು.

ಹಾಗಾದರೆ, ನಿನ್ನೆಯ ಘಟನೆ ನಡೆದಿದ್ದು ಏಕೆ ಅನಿಸುತ್ತದೆ?

ಈ ಪ್ರಕರಣವನ್ನು ಮೇಲ್ನೋಟಕ್ಕೆ ನೋಡಿದರೆ, ರಾಜಕೀಯ ಒತ್ತಡದಿಂದ ಆಗಿರುವ ನಿರ್ಣಯ ಎನಿಸುವುದು ಸ್ಪಷ್ಟ. ಈ ಘಟನೆಯಲ್ಲಿ ಸ್ಪೀಕರ್ ಅನುಭವದ ಕೊರತೆಯಿಂದ ಈ ತೀರ್ಮಾನ ಕೈಗೊಂಡಿದ್ದರೂ ಸಿದ್ದರಾಮಯ್ಯ ಹಾಗೂ ಎಚ್.ಕೆ.ಪಾಟೀಲ್ ಅವರು ಪ್ರಭುದ್ಧತೆಯನ್ನು ತೋರಿಸ ಬೇಕಿತ್ತು. ಈ ರೀತಿಯ ಕೆಟ್ಟ ಪರಂಪರೆಗೆ ನಾಂದಿಹಾಡಲು ಬಿಡಬಾರದಿತ್ತು. ಸಭಾಧ್ಯಕ್ಷ ಸ್ಥಾನದಲ್ಲಿ ಕೂತು ತೆಗೆದುಕೊಳ್ಳುವ ತೀರ್ಮಾನಗಳು ರಾಜಕೀಯ ಸೇಡು, ಸಿಟ್ಟು ತೀರಿಸಿಕೊಳ್ಳುವುದಕ್ಕೆ ಆಗಬಾರದು.

ಈ ಘಟನೆಯಲ್ಲಿ ನಿಮಗೆ ಅಚ್ಚರಿ ಮೂಡಿಸಿದ್ದು ಯಾವುದು?

ಮೊದಲಿಗೆ ಆರು ತಿಂಗಳು ಶಾಸಕರನ್ನು ಅಮಾನತು ಮಾಡಿದ್ದೇ ಅಚ್ಚರಿಯಾಯಿತು. ಆದರೆ ಅದಕ್ಕಿಂತ ಶಾಕ್ ಆಗಿದ್ದು, ಅಮಾನತುಗೊಂಡಿರುವ 18 ಶಾಸಕರಿಗೆ ವಿಧಿಸಿರುವ ಷರತ್ತುಗಳು. ಈ ಷರತ್ತುಗಳು ಶಾಸಕರಿಗೆ ನೀಡುವ ಶಿಕ್ಷೆಗಿಂತ ಹೆಚ್ಚಾಗಿ, ಕ್ಷೇತ್ರದ ಜನತೆಗೆ ನೀಡಿದ ಶಿಕ್ಷೆ ಎನ್ನಬಹುದು. ಈ ರೀತಿ ಶಾಸಕರು ಸಭೆ ನಡೆಸಬಾರದು, ಅಧಿಕಾರಿಗಳು ಸೂಚನೆ ಪಡೆಯಬಾರದು, ಮೊಗಸಾಲೆಗೆ ಬರಬಾರದು ಎನ್ನುವುದು ಯಾವ ರೀತಿಯ ಕ್ರಮ? ಈ ರೀತಿಯ ಕಠಿಣ ಷರತ್ತುಗಳನ್ನು ವಿಧಿಸಲು ಅವರೇನು ಕ್ರಿಮಿನಲ್‌ಗಳಾ?

ನೀವು ಸಭಾಧ್ಯಕ್ಷರಾಗಿದ್ದಾಗ ಈ ರೀತಿ ಘಟನೆ ನಡೆದಿರಲಿಲ್ಲವೇ?

ನಾನು ಸಭಾಧ್ಯಕ್ಷರಾಗಿದ್ದಾಗ ಎನ್ನುವುದಕ್ಕಿಂತ ಕರ್ನಾಟಕ ವಿಧಾನಮಂಡಲದಲ್ಲಿ, ದೇಶದ ವಿವಿಧ ರಾಜ್ಯಗಳ ಕಲಾಪದಲ್ಲಿ ಇದಕ್ಕಿಂತ ಹತ್ತಾರು ಕೆಟ್ಟ ರೀತಿಯ ಘಟನೆಗಳು ನಡೆದಿವೆ. ಆದರೆ ಯಾರೂಈ ರೀತಿಯ ನಿರ್ಣಯ ಕೈಗೊಂಡಿರಲಿಲ್ಲ. ಈ ಹಿಂದೆ ಸಿದ್ದರಾಮಯ್ಯ ಅವರೇ ಸದನದ ಬಾಗಿಲನ್ನು ಒದ್ದು ಒಳ ಪ್ರವೇಶ ಮಾಡಿರಲಿಲ್ಲವೇ? ವಿಧಾನ ಪರಿಷತ್‌ನಲ್ಲಿ ಸಭಾಪತಿಗಳು ಒಳಬಾರ ದಂತೆ ತಡೆದು, ಪೀಠದಲ್ಲಿದ್ದ ಉಪ ಸಭಾಪತಿಯನ್ನು ಎಳೆದಾಡಿ, ಇನ್ಯಾರೋ ಕೂತಿದ್ದ ಘಟನೆ ನಡೆದಿದೆ.

ಇನ್ನು ಈ ಹಿಂದೆ ಕಾಂಗ್ರೆಸ್‌ನವರೇ, ಪೇಪರ್ ವೇಟ್ ಅನ್ನು ಸ್ಪೀಕರ್‌ಗೆ ಎಸೆದಿದ್ದ ಘಟನೆ ನಡೆದಿದೆ. ಅಂತಹ ಗಂಭೀರ ಘಟನೆಯ ವೇಳೆಯೂ, ಶಾಸಕರನ್ನು ಆರು ತಿಂಗಳ ಕಾಲ ಅಮಾನತು ಮಾಡಿದ ಉದಾಹರಣೆ ಇಲ್ಲ. ಅಂತಹ ಸಮಯದಲ್ಲಿ ಶುಕ್ರವಾರದ ಘಟನೆ ಸಾಮಾನ್ಯವಾಗಿ ನಡೆಯುವ ಪ್ರಕ್ರಿಯೆ.

ಸ್ಪೀಕರ್ ತೀರ್ಮಾನವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದೇ?

ಖಂಡಿತವಾಗಿಯೂ ಸ್ಪೀಕರ್ ನಡೆಯನ್ನು ನ್ಯಾಯಾಲಯಗಳಲ್ಲಿ ಪ್ರಶ್ನಿಸಬಹುದು. ಈ ಹಿಂದಿನ ಹಲವು ಘಟನೆಗಳು ವಿವಿಧ ರಾಜ್ಯಗಳಲ್ಲಿ ಸಭಾಧ್ಯಕ್ಷರು ಮಾಡಿರುವ ಅಮಾನತುಗಳನ್ನು ನ್ಯಾಯಾ ಲಯಗಳು ತಿರಸ್ಕರಿಸಿರುವ ಉದಾಹರಣೆ ಇವೆ. ಮುಂದಿನ ದಿನಗಳಲ್ಲಿ ಅಮಾನತಾಗಿರುವ ಶಾಸಕರು, ಪ್ರಕರಣವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು.

ಪೀಠದ ಘನತೆ ಉಳಿಸಲು ಅಮಾನತು ಎನ್ನುತ್ತಾರಲ್ಲ?

ಈ ಪ್ರಕರಣವನ್ನು ನಾವು ಯಾವ ರೀತಿಯಲ್ಲಾದರೂ ನೋಡಬಹುದು. ಆದರೆ ಸ್ಥಾನದ ಗೌರವ ವನ್ನು ಉಳಿಸುವ ನಿಟ್ಟಿನಲ್ಲಿ ಶುಕ್ರವಾರದ ತೀರ್ಮಾನ ಸರಿಯಲ್ಲ. ಕೂಡಲೇ ಈ ತೀರ್ಮಾನವನ್ನು ತಿದ್ದುಪಡಿ ಮಾಡಬೇಕು. ಇನ್ನು ಈ ಪ್ರಕರಣದಲ್ಲಿ ರಾಜಕಾರಣಿಗಳು ಯಾವುದೇ ತೀರ್ಮಾನ ಕೈಗೊಳ್ಳಬಹುದು. ಆದರೆ ಅಧಿಕಾರಿಗಳು ರಾಜಕಾರಣಿಗಳನ್ನು ಗೈಡ್ ಮಾಡಬೇಕಿತ್ತು. ರಾಜಕಾರಣಿ ಗಳು ಹೇಳುವುದಕ್ಕೆಲ್ಲ ‘ಯೆಸ್..ಯೆಸ್’ ಅಂದರೆ ಈ ರೀತಿಯಾಗುತ್ತದೆ. ಈ ರೀತಿಯ ಷರತ್ತು ವಿಧಿಸಿದರೆ ನ್ಯಾಯಾಲಯದಲ್ಲಿ ಪ್ರಕರಣ ನಿಲ್ಲುವುದಿಲ್ಲ. ಆದ್ದರಿಂದ ಯಾವುದೇ ಒತ್ತಡಕ್ಕೆ ಮಣಿಯಬೇಡಿ ಎಂದು ಸಲಹೆ ನೀಡಬೇಕಿತ್ತು. ಆದರೆ ಅದನ್ನು ಮಾಡಿಲ್ಲ ಎನಿಸುತ್ತದೆ.

*

ಯಾವುದೇ ಶಾಸಕ ಅಶಿಸ್ತು ತೋರಿದರೆ ಆ ದಿನದ ಮಟ್ಟಿಗೆ, ಆ ಕಲಾ ಪದ ಮಟ್ಟಿಗೆ ಹೊರ ಹಾಕುವು ದನ್ನು ನೋಡಿದ್ದೇವೆ. ಆದರೆ ಆರು ತಿಂಗಳ ಕಾಲ ಅಮಾನತು ಮಾಡಿದರೆ ಹೇಗೆ? ಸಭೆ ನಡೆಸು ವಂತಿಲ್ಲ, ಅಧಿಕಾರಿಗಳಿಗೆ ಸೂಚನೆ ನೀಡುವಂತಿಲ್ಲ ಎನ್ನುವ ನಿಯಮವನ್ನು ಹಾಕಿದ್ದಾರೆ. ಹೀಗಾ ದರೆ, ಅಮಾನತಿನ ಅವಧಿ ಮುಗಿಯುವ ವೇಳೆಗೆ ಅಧಿಕಾರಿಗಳು ಶಾಸಕರ ಮಾತು ಕೇಳುವರೇ? ಕ್ಷೇತ್ರದ ಅಭಿವೃದ್ಧಿ ಸಾಧ್ಯವೇ?

- ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದರು, ಮಾಜಿ ವಿಧಾನ ಸಭಾಧ್ಯಕ್ಷರು