ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʻರಣಜಿ ಟ್ರೋಫಿ ರನ್ಸ್‌ಗೆ ಮರ್ಯಾದೆ ಇಲ್ಲವಾ?ʼ: ಸರ್ಫರಾಝ್‌ ಖಾನ್‌ಗೆ ಅವಕಾಶ ನೀಡದ ಬಿಸಿಸಿಐ ವಿರುದ್ಧ ಶಶಿ ತರೂರ್‌ ಕಿಡಿ!

ರಣಜಿ ಟ್ರೋಫಿ ಟೂರ್ನಿಯಲ್ಲಿ ರನ್‌ ಹೊಳೆ ಹರಿಸಿದರೂ ಭಾರತ ಟೆಸ್ಟ್‌ ತಂಡಕ್ಕೆ ಸರ್ಫರಾಝ್‌ ಖಾನ್‌ ಅವರನ್ನು ಆಯ್ಕೆ ಮಾಡದ ಬಿಸಿಸಿಐ ವಿರುದ್ದ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಣಜಿ ಟ್ರೋಫಿ ಟೂರ್ನಿಯಲ್ಲಿ ರನ್‌ ಗಳಿಸಿದರೂ ಭಾರತ ತಂಡದಲ್ಲಿ ಅವಕಾಶ ನೀಡಿಲ್ಲವಾದರೆ ಹೇಗೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಫರಾಝ್‌ ಖಾನ್‌ಗೆ ಅವಕಾಶ ನೀಡದ ಬಿಸಿಸಿಐ ವಿರುದ್ಧ ಶಶಿ ತರೂರ್‌ ಕಿಡಿ!

ಸರ್ಫರಾಝ್‌ ಖಾನ್‌ ಪರ ಬ್ಯಾಟ್‌ ಬೀಸಿದ ಶಶಿ ತರೂರ್‌. -

Profile Ramesh Kote Oct 29, 2025 5:36 PM

ನವದೆಹಲಿ: ದೇಶಿ ಕ್ರಿಕೆಟ್‌ನಲ್ಲಿ ಅದ್ಭುತ ದಾಖಲೆಯನ್ನು ಹೊಂದಿರುವ ಹೊರತಾಗಿಯೂ ಮುಂಬೈ ಬ್ಯಾಟ್ಸ್‌ಮನ್‌ ಸರ್ಫರಾಝ್‌ ಖಾನ್‌ (Sarfaraz Khan) ಅವರಿಗೆ ಭಾರತ ಟೆಸ್ಟ್‌ ತಂಡದಲ್ಲಿ ಸ್ಥಾನ ನೀಡದ ಬಗ್ಗೆ ತಿರುವನಂತಪುರಂ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಬಿಸಿಸಿಐ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂಗ್ಲೆಂಡ್‌ ವಿರುದ್ಧ ಐದು ಪಂದ್ಯಗಳ ಟೆಸ್ಟ್‌ (IND vs ENG) ಸರಣಿಯಿಂದ ಸರ್ಫರಾಝ್‌ ಖಾನ್‌ ಅವರನ್ನು ಕೈ ಬಿಡಲಾಗಿತ್ತು. ನಂತರ ವೆಸ್ಟ್‌ ಇಂಡೀಸ್‌ ವಿರುದ್ಧದ ಎರಡು ಪಂದ್ಯಗಳ ತವರು ಟೆಸ್ಟ್‌ ಸರಣಿಯ ಭಾರತ ತಂಡದಲ್ಲಿಯೂ ಅವಕಾಶ ನೀಡಲಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಾಜಿ ಕ್ರಿಕೆಟಿಗರು ಹಾಗೂ ಅಭಿಮಾನಿಗಳು ಬಿಸಿಸಿಐ (BCCI) ಆಯ್ಕೆದಾರರನ್ನು ಟೀಕಿಸಿದ್ದರು.

ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಧನಿ ಎತ್ತಿದ ಶಶಿ ತರೂರ್‌, ಅಂತಾರಾಷ್ಟ್ರೀಯ ಕ್ರಿಕೆಟ್‌ ಅಲ್ಪ ವೃತ್ತಿ ಜೀವನದಲ್ಲಿ ಹಾಗೂ ದೇಶಿ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಅಂಕಿಅಂಶಗಳನ್ನು ಹೊಂದಿರುವ ಹೊರತಾಗಿಯೂ ಸರ್ಫರಾಝ್‌ ಖಾನ್‌ಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ನೀಡಿಲ್ಲ ಎಂದು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಮುಂದಿನ ತಿಂಗಳು ದಕ್ಷಿಣ ಆಫ್ರಿಕಾ ವಿರುದ್ದದ ಟೆಸ್ಟ್‌ ಸರಣಿಗೆ ಭಾರತ ತಂಡವನ್ನು ಪ್ರಕಟಿಸಬಹುದು. ಈ ವೇಳೆ ಭಾರತ ತಂಡದಲ್ಲಿ ಸ್ಥಾನ ಪಡೆಯುವ ಬಗ್ಗೆ ಸರ್ಫರಾಝ್‌ ವಿಶ್ವಾಸವನ್ನು ಹೊಂದಿದ್ದಾರೆ.

AUS vs IND 1st T20I: ಮಳೆಯದ್ದೇ ಆಟ; ಭಾರತ-ಆಸೀಸ್‌ ಮೊದಲ ಟಿ20 ಪಂದ್ಯ ರದ್ದು

"ಇದು ನಿಜಕ್ಕೂ ಆಕ್ರೋಶದ ಸಂಗತಿ. ಸರ್ಫರಾಝ್‌ ಖಾನ್‌ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 65ಕ್ಕೂ ಹೆಚ್ಚಿನ ಸರಾಸರಿಯನ್ನು ಹೊಂದಿದ್ದಾರೆ. ತಮ್ಮ ಟೆಸ್ಟ್ ಚೊಚ್ಚಲ ಪಂದ್ಯದಲ್ಲಿ 50 ರನ್‌ ಮತ್ತು ಭಾರತ ಸೋತ ಟೆಸ್ಟ್‌ನಲ್ಲಿ 150 ರನ್ ಗಳಿಸಿದ್ದಾರೆ, ಇಂಗ್ಲೆಂಡ್‌ನಲ್ಲಿ ತಮ್ಮ ಏಕೈಕ ಪ್ರವಾಸದ ಪಂದ್ಯದಲ್ಲಿ 92 ರನ್ ಗಳಿಸಿದ್ದಾರೆ (ಭಾರತ ಟೆಸ್ಟ್ ತಂಡದ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಶತಕ). ಆದರೂ ಅವರನ್ನು ಇನ್ನೂ ಆಯ್ಕೆದಾರರ ಚೌಕಟ್ಟಿನಿಂದ ಹೊರಗಿಡಲ್ಪಟ್ಟಿದ್ದಾರೆ," ಎಂದು ತರೂರ್ ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದಿದ್ದಾರೆ.

ಸರ್ಫರಾಜ್ ಖಾನ್‌ ಇದುವರೆಗೂ ಆರು ಟೆಸ್ಟ್ ಪಂದ್ಯಗಳಿಂದ 37.10ರ ಸರಾಸರಿಯಲ್ಲಿ ಒಂದು ಶತಕ ಮತ್ತು ಮೂರು ಅರ್ಧಶತಕಗಳೊಂದಿಗೆ 371 ರನ್ ಗಳಿಸಿದ್ದಾರೆ. ಅವರು 57 ಪ್ರಥಮ ದರ್ಜೆ ಪಂದ್ಯಗಳಿಂದ 64.32ರ ಸರಾಸರಿಯಲ್ಲಿ 16 ಶತಕ ಮತ್ತು 15 ಅರ್ಧಶತಕಗಳೊಂದಿಗೆ 4760 ರನ್ ಗಳಿಸುವ ಮೂಲಕ ಅದ್ಭುತ ದಾಖಲೆಯನ್ನು ಹೊಂದಿದ್ದಾರೆ.

IND vs AUS: ಟಿ20ಐ ಸರಣಿಯ ಆರಂಭಕ್ಕೂ ಮುನ್ನ ಭಾರತ ತಂಡಕ್ಕೆ ಆಘಾತ, ನಿತೀಶ್‌ ರೆಡ್ಡಿಗೆ ಗಾಯ!

ಅಜಿಂಕ್ಯ ರಹಾನೆ, ಪೃಥ್ವಿ ಶಾ, ಕರುಣ್‌ ನಾಯರ್‌ಗೆ ತರೂರ್‌ ಮೆಚ್ಚುಗೆ

ಭಾರತ ತಂಡದಲ್ಲಿ ಸ್ಥಾನ ಕಳೆದುಕೊಂಡ ಬಳಿಕ ರಣಜಿ ಟ್ರೋಫಿ ಟೂರ್ನಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ತೋರುತ್ತಿರುವ ಅಜಿಂಕ್ಯ ರಹಾನೆ, ಪೃಥ್ವಿ ಶಾ ಹಾಗೂ ಕರುಣ್‌ ನಾಯರ್‌ ಅವರನ್ನು ಕೂಡ ಶಶಿ ತರೂರ್‌ ಶ್ಲಾಘಿಸಿದ್ದಾರೆ. ದೇಶಿ ಕ್ರಿಕೆಟ್‌ ರನ್‌ಗಳನ್ನು ಕಡೆಗಣಿಸಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ದಾಖಲೆಯನ್ನು ಇಲ್ಲಿ ಉಲ್ಲೇಖಿಸಲಾಗಿದೆ ಎಂದು ಮಾಜಿ ಸಂಸದ ಬೇಸರ ವ್ಯಕ್ತಪಡಿಸಿದ್ದಾರೆ.

"ರಣಜಿ ಟ್ರೋಫಿಯಲ್ಲಿ ಅಜಿಂಕ್ಯ ರಹಾನೆ, ಪೃಥ್ವಿ ಶಾ ಮತ್ತು ಕರುಣ್‌ ನಾಯರ್‌ ರನ್ ಗಳಿಸುವುದನ್ನು ನೋಡಿ ನನಗೆ ತುಂಬಾ ಸಂತೋಷವಾಗಿದೆ. ನಮ್ಮ ಆಯ್ಕೆದಾರರು ತ್ವರಿತವಾಗಿ ಬರುವ ಆಟಗಾರರನ್ನು ಆಯ್ಕೆ ಮಾಡಲು ಕಾಯುತ್ತಿರುತ್ತಾರೆ. ಆದರೆ, ಮೇಲೆ ಹೆಸರಿಸಿರುವವರು ತಮ್ಮನ್ನು ತಾವು ಮತ್ತೆ ಮತ್ತೆ ಸಾಬೀತುಪಡಿಸಿದ ಆಟಗಾರರು. ಐಪಿಎಲ್‌ ಮಾತ್ರವಲ್ಲ, ದೇಶಿ ಕ್ರಿಕೆಟ್‌ನಲ್ಲಿನ ರನ್‌ಗಳನ್ನು ಆಯ್ಕೆದಾರರು ಮೌಲ್ಯೀಕರಿಸಬೇಕು; ಇಲ್ಲದಿದ್ದರೆ ಯಾರು ಕೂಡ ರಣಜಿ ಟ್ರೋಫಿ ಆಡಲು ಆಸಕ್ತಿ ತೋರುವುದಿಲ್ಲ," ಎಂದು ಶಶಿ ತರೂರ್‌ ಗುಡುಗಿದ್ದಾರೆ.