ಗೌರಿಬಿದನೂರು : ಬಡವರಿರಲಿ ಶ್ರೀಮಂತರಿರಲಿ,ಎಲ್ಲರಿಗೂ ಕೂಡ ಕಾನೂನು ಸಮಾನ ಅವಕಾಶ ನೀಡಲಿದೆ.ಅಶಕ್ತರು ಜಿಲ್ಲಾ ಕಾನೂನು ಅರಿವು ನೆರವು ಪ್ರಾಧಿಕಾರದ ನೆರವು ಪಡೆದುಕೊಂಡು ನ್ಯಾಯಾಲಯದ ಅನುಕೂಲ ಪಡೆದುಕೊಳ್ಳಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಪಿ.ಎಂ ಸಚಿನ್ ತಿಳಿಸಿದರು. ನಗರದ ಅಂಬೇಡ್ಕರ್ ಭವನದಲ್ಲಿ ತಾಲ್ಲೂಕು ಸೇವಾ ಸಮಿತಿ, ವಕೀಲರ ಸಂಘ, ಹಾಗೂ ಕಾರ್ಮಿಕ ಇಲಾಖೆ ವತಿಯಿಂದ ಏರ್ಪಡಿಸಿದ್ದ ಕಾನೂನು ಅರಿವು ನೆರವು ಹಾಗೂ ಬಾಲ, ಕಿಶೋರ ಕಾರ್ಮಿಕ ನಿರ್ಮೂಲನೆ, ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಸರ್ಕಾರ ಸಮಾಜದ ಎಲ್ಲಾ ವರ್ಗಗಳಿಗೂ ನ್ಯಾಯ ಒದಗಿಸಲು ಹೆಚ್ಚಿನ ಆಧ್ಯತೆ ನೀಡಲಾಗಿದೆ. ಯಾವುದೇ ಮಗು ಜನನವಾದಾಗ ಯಾವುದೇ ಜಾತಿ, ಭೇದ ಇರುವುದಿಲ್ಲ, ನಂತರ ಎಲ್ಲಾ ರೀತಿಯ ಬೇಧ ಭಾವಗಳು ಹುಟ್ಟಿಕೊಳ್ಳುತ್ತವೆ, ಇಂತಹ ಪಿಡುಗುಗಳಿಂದ ಸಾರ್ವಜನಿಕ ಆಚೆ ಬಂದು ಎಲ್ಲರೂ ಒಂದೇ ಎಂದು ತಿಳಿದು ಬದುಕಬೇಕು.ಬಾಲಕರನ್ನು ಚಿಕ್ಕ ವಯಸ್ಸಿನಲ್ಲೇ ಕೆಲಸಕ್ಕೆ ಸೇರಿಸಿ, ಬಾಲ ಕಾರ್ಮಿಕರನ್ನಾಗಿ ಮಾಡಿ, ಅವರ ಬಾಲ್ಯವನ್ನು ಕಸಿದು ಕೊಳ್ಳಲಾಗುತ್ತಿದೆ. ಇಂತಹ ಬಾಲ ಕಾರ್ಮಿ ಕರು ಎಲ್ಲಾದರೂ ಕಂಡು ಬಂದರೆ ಸಂಭAದಪಟ್ಟ ಅಧಿಕಾರಿಗಳ ಗಮನಕ್ಕೆ ತರಬೇಕು. ಸಾರ್ವಜನಿ ಕರಿಗೆ ತೊಂದರೆ ಯಾದಲ್ಲಿ ಉಚಿತ ಕಾನೂನು ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: Chikkaballapur News: ಬಾಲ್ಯ ವಿವಾಹ ಶಿಕ್ಷರ್ಹಾ ಅಪರಾಧ : 18 ವರ್ಷಕ್ಕೂ ಮೊದಲು ಮದುವೆ ಮಾಡಬಾರದು : ಜಿ.ಸೋಮಯ್ಯ
ಕಾರ್ಮಿಕ ನಿರೀಕ್ಷಕ ಸತೀಶ್ ಮಾತನಾಡಿ, ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ನೀಡುವುದರಿಂದ ಬಾಲ ಕಾರ್ಮಿಕ ಪದ್ದತಿಯನ್ನು ನಿರ್ಮೂಲನೆ ಮಾಡಬಹುದು, ಸಮಾಜದಲ್ಲಿ ಎಲ್ಲರಿಗೂ ಬದುಕುವ ಹಕ್ಕಿದೆ, ಶಿಕ್ಷಣದಿಂದ ಮಾತ್ರ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಬಹುದು. ಪ್ರತಿಯೊಬ್ಬರು ಸಹ ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ದತಿಯನ್ನು ತೊಡೆದು ಹಾಕಲು ಪ್ರಯತ್ನ ಪಡಬೇಕು, ನಗರ ದಲ್ಲೂ ಸಹ ಕಿಶೋರ ಕಾರ್ಮಿಕರು ಕಂಡು ಬಂದಿದ್ದರು, ಅವರನ್ನು ನೇಮಕ ಮಾಡಿಕೊಂಡ ಮಾಲೀಕರಿಗೆ ಈಗಾಗಲೇ ದಂಡ ಹಾಕಲಾಗಿದೆ, ಇಂತಹ ಪದ್ಧತಿಗಳಿಗೆ ಯಾರು ಸಹ ಪ್ರೋತ್ಸಾಹ ನೀಡಬಾರದು, ಎಲ್ಲರೂ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಿ ಸಮಾಜದಲ್ಲಿ ಮಾದರಿ ವ್ಯಕ್ತಿಗ ಳಂತೆ ರೂಪಿಸಬೇಕು ಎಂದು ತಿಳಿಸಿದರು.
ಹಿರಿಯ ವಕೀಲ ಗೋಪಾಲ್ ಮಾತನಾಡಿ, ಸಂವಿಧಾನದಲ್ಲಿ ಸಾಮಾಜಿಕ ನ್ಯಾಯಕ್ಕೆ ಹೆಚ್ಚು ಒತ್ತು ನೀಡಲಾಗಿದೆ, ಎಲ್ಲರೂ ಶಿಕ್ಷಣ ಪಡೆದಾಗ ಮಾತ್ರ ಸಮಾಜದಲ್ಲಿರುವ ಜಾತಿ ಧರ್ಮ, ಲಿಂಗ ಭೇದ ದಂತಹ ಸಾಮಾಜಿಕ ಪಿಡುಗುಗಳಿಗೆ ಕಡಿವಾಣ ಹಾಕಬಹುದು. ಪೋಷಕರು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ಸರ್ಕಾರ ಮಹಿಳೆಯರಿಗೆ ವಿಶೇಷ ಸ್ಥಾನಮಾನ ಮತ್ತು ಅವಕಾಶ ಗಳನ್ನು ನೀಡಿದೆ, ಎಲ್ಲರೂ ದೈನಂದಿನ ಜೀವನದಲ್ಲಿ ಕಾನೂನನ್ನು ಪಾಲಿಸಬೇಕು, ಹಾಗೂ ಕಾನೂನನ್ನು ತಿಳಿದುಕೊಳ್ಳಬೇಕು.ಬಡವರಿಗೆ ಕಾನೂನಾತ್ಮಕ ಸಮಸ್ಯೆಗಳು ಎದುರಾದರೆ ಉಚಿತ ಕಾನೂನು ಸೇವಾ ಸಮಿತಿ ವತಿಯಿಂದ ಎಲ್ಲರಿಗೂ ಉಚಿತ ಕಾನೂನು ನೆರವು ನೀಡಲು ಸಿದ್ದರಾಗಿ ರುವುದಾಗಿ ತಿಳಿಸಿದರು.
ಸರ್ಕಾರಿ ಅಭಿಯೋಜಕ ಫಯಾಜ್ ಪಟೇಲ್ ಮಾತನಾಡಿ, ದೇಶ ಅಭಿವೃದ್ಧಿಯಾಗಬೇಕಾದರೆ ಎಲ್ಲ ರಿಗೂ ಸಮಾನ ಅವಕಾಶ ನೀಡಬೇಕು ಎಂದು ತಿಳಿಸಿದರು. ಇದೇ ವೇಳೆ ಕಟ್ಟಡ ಕಾರ್ಮಿಕರಿಗೆ ಟೂಲ್ ಕಿಟ್ ಗಳನ್ನು ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ, ಸರ್ಕಾರಿ ಅಭಿಯೋಜಕ, ಫಯಾಜ್ ಪಟೇಲ್, ಹಿರಿಯ ವಕೀಲ ಗೋಪಾಲ್, ಕಾರ್ಮಿಕ ಇಲಾಖೆಯ ಸಿಬ್ಬಂದಿಯಾದ ಪವನ್, ಕಾರ್ಮಿಕ ಸಂಘಟನೆಯ ವೆಂಕಟಾದ್ರಿ, ರಮೇಶ್, ಚರಣ್, ಅಂಜಿ, ಸೇರಿದಂತೆ ಕಟ್ಟಡ ಕಾರ್ಮಿಕರು ಉಪಸ್ಥಿತರಿದ್ದರು.