Chikkaballapur News: ಬಾಲ್ಯ ವಿವಾಹ ಶಿಕ್ಷರ್ಹಾ ಅಪರಾಧ : 18 ವರ್ಷಕ್ಕೂ ಮೊದಲು ಮದುವೆ ಮಾಡಬಾರದು : ಜಿ.ಸೋಮಯ್ಯ
ವಿದ್ಯಾರ್ಥಿಗಳು ಮೊದಲು ಶಿಕ್ಷಣದ ಕಡೆ ಹೆಚ್ಚಿನ ಗಮನ ನೀಡಬೇಕು, ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾ ಧವಾಗಿದ್ದು, ಹೆಣ್ಣು ಮಕ್ಕಳಿಗೆ ೧೮ ವರ್ಷ, ಗಂಡು ಮಕ್ಕಳಿಗೆ ೨೧ ವರ್ಷ ತುಂಬಿದ ನಂತರ ಮದುವೆ ಮಾಡಿಕೊಳ್ಳಬೇಕು, ಯಾರಾದರೂ ಕಾನೂನು ಮೀರಿ ಮದುವೆ ಮಾಡಿದರೆ ಕುಟುಂಬ ಸಮೇತ ಹಾಗೂ ಮದುವೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಶಿಕ್ಷೆಯಾಗುತ್ತದೆ ಎಂದು ವಿದ್ಯಾರ್ಥಿ ಗಳಿಗೆ ತಿಳಿಸಿದರು
![ವಿದ್ಯಾರ್ಥಿಗಳು ಮೊದಲು ಶಿಕ್ಷಣದ ಕಡೆ ಹೆಚ್ಚಿನ ಗಮನ ನೀಡಬೇಕು](https://cdn-vishwavani-prod.hindverse.com/media/original_images/child_marrage_1.jpg)
ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧವಾಗಿದ್ದು ಪೋಷಕರು ಯಾವ ಕಾರಣಕ್ಕೂ ಮಕ್ಕಳಿಗೆ ೧೮ ವರ್ಷ ತುಂಬುವ ಮೊದಲೇ ಮದುವೆ ಮಾಡಬಾರದು ಎಂದು ಗ್ರಾಮ ಪಂಚಾಯಿತಿ ಸದಸ್ಯ, ಜಿ ಸೋಮಯ್ಯ ಮಾತನಾಡಿದರು.
![Profile](https://vishwavani.news/static/img/user.png)
ಗೌರಿಬಿದನೂರು : ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧವಾಗಿದ್ದು ಪೋಷಕರು ಯಾವ ಕಾರಣ ಕ್ಕೂ ಮಕ್ಕಳಿಗೆ 18 ವರ್ಷ ತುಂಬುವ ಮೊದಲೇ ಮದುವೆ ಮಾಡಬಾರದು ಎಂದು ಗ್ರಾಮ ಪಂಚಾ ಯಿತಿ ಸದಸ್ಯ, ಜಿ ಸೋಮಯ್ಯ ಮಾತನಾಡಿದರು. ತಾಲ್ಲೂಕಿನ ಇಡಗೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ದೊಡ್ಡ ಬಳ್ಳಾಪುರದ, ಕೊಂಗಾಡಿಯಪ್ಪ ಕಾಲೇಜು ವಿದ್ಯಾರ್ಥಿಗಳಿಂದ, ಬಾಲ್ಯ ವಿವಾಹ ಕಾಯ್ದೆ, ಮತ್ತು ಬಾಲಕಾರ್ಮಿಕರ ನಿರ್ಮೂಲನೆ ಕಾಯ್ದೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು.
ವಿದ್ಯಾರ್ಥಿಗಳು ಮೊದಲು ಶಿಕ್ಷಣದ ಕಡೆ ಹೆಚ್ಚಿನ ಗಮನ ನೀಡಬೇಕು, ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧವಾಗಿದ್ದು, ಹೆಣ್ಣು ಮಕ್ಕಳಿಗೆ 18 ವರ್ಷ, ಗಂಡು ಮಕ್ಕಳಿಗೆ 21 ವರ್ಷ ತುಂಬಿದ ನಂತರ ಮದುವೆ ಮಾಡಿಕೊಳ್ಳಬೇಕು, ಯಾರಾದರೂ ಕಾನೂನು ಮೀರಿ ಮದುವೆ ಮಾಡಿದರೆ ಕುಟುಂಬ ಸಮೇತ ಹಾಗೂ ಮದುವೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಶಿಕ್ಷೆಯಾಗುತ್ತದೆ ಎಂದು ವಿದ್ಯಾರ್ಥಿ ಗಳಿಗೆ ತಿಳಿಸಿದರು.
ವಕೀಲ ಸಂತೋಷ್ ಮಾತನಾಡಿ, ಬಾಲ್ಯ ವಿವಾಹ ಅಥವಾ ಬಾಲಕಾರ್ಮಿಕರು ಸಮಾಜದ ಪಿಡುಗುಗಳು, ಎಲ್ಲಾದರೂ ಇಂತಹ ವಿಚಾರಗಳು ಕಂಡು ಬಂದರೆ ತಕ್ಷಣ ಪೊಲೀಸರಿಗಾಗಲಿ, ಅಥವಾ ಸಂಭAದ ಪಟ್ಟ ಇಲಾಖೆಗಳಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ವಕೀಲ ರವಿಕುಮಾರ್ ಬಾಲ್ಯ ವಿವಾಹ ಮತ್ತು ಬಾಲ ಕಾರ್ಮಿಕರ ಬಗ್ಗೆ ವಿವರವಾಗಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ, ಪಂಚಾಯಿತಿ ಅಧ್ಯಕ್ಷೆ ಮಂಜುಳಾ, ಎಸ್ ಡಿ ಎಂ ಸಿ ಅಧ್ಯಕ್ಷ ಪ್ರಸನ್ನ ಕುಮಾರ್, ಶಾಲಾ ಶಿಕ್ಷಕರು, ಕೊಂಗಾಡಿಯಪ್ಪ ಮತ್ತು ಇಡಗೂರು ಶಾಲಾ ವಿದ್ಯಾರ್ಥಿಗಳು ಉಪಸ್ಥಿತ ರಿದ್ದರು.