ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಯಶಸ್ವಿ ಜೈಸ್ವಾಲ್ ಅಗತ್ಯವಿಲ್ಲ ಎಂದ ಆಕಾಶ ಚೋಪ್ರಾ!
Aakash chopra on Yashasvi Jaiswal: ಮುಂಬರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಭಾರತ ತಂಡಕ್ಕೆ ಎಡಗೈ ಆರಂಭಿಕ ಯಶಸ್ವಿ ಜೈಸ್ವಾಲ್ ಅವರ ಅಗತ್ಯವಿಲ್ಲ ಎಂದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಫೆಬ್ರವರಿ 19 ರಂದು ಪಾಕಿಸ್ತಾನದ ಆತಿಥ್ಯದಲ್ಲಿ ಚಾಂಪಿಯನ್ಸ್ ಟ್ರೋಫಿ ಆರಂಭವಾಗಲಿದೆ.
![ʻಚಾಂಪಿಯನ್ಸ್ ಟ್ರೋಫಿಗೆ ಜೈಸ್ವಾಲ್ ಅಗತ್ಯವಿಲ್ಲʼ-ಆಕಾಶ್ ಚೋಪ್ರಾ!](https://cdn-vishwavani-prod.hindverse.com/media/original_images/Yashasvi_Jaiswal-Aakash_chopra.jpg)
Aakash chopra on Yashasvi Jaiswa
![Profile](https://vishwavani.news/static/img/user.png)
ನವದೆಹಲಿ: ಮುಂಬರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಭಾರತ ತಂಡಕ್ಕೆ ಎಡಗೈ ಆರಂಭಿಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಅವರ ಅಗತ್ಯವಿಲ್ಲ. ಹಾಗಾಗಿ ಟೀಮ್ ಇಂಡಿಯಾದ 15 ಸದಸ್ಯರ ತಂಡದಿಂದ ಜೈಸ್ವಾಲ್ ಸ್ಥಾನ ಕಳೆದುಕೊಳ್ಳಬಹುದು ಎಂದು ಟೆಸ್ಟ್ ತಂಡದ ಮಾಜಿ ಆರಂಭಿಕ ಆಕಾಶ್ ಚೋಪ್ರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಫೆಬ್ರವರಿ 19 ರಂದು ಪಾಕಿಸ್ತಾನದ ಆತಿಥ್ಯದಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆರಂಭವಾಗಲಿದೆ. ಜಸ್‌ಪ್ರೀತ್ ಬುಮ್ರಾ ಅವರ ಅಲಭ್ಯತೆಯಲ್ಲಿ ಭಾರತ ತಂಡದ ಸಂಯೋಜನೆ ತುಂಬಾ ವಿಭಿನ್ನವಾಗಿ ಕಾಣಲಿದೆ ಎಂದು ಕ್ರಿಕೆಟ್ ವಿಶ್ಲೇಷಕ ತಿಳಿಸಿದ್ದಾರೆ.
ಫೆಬ್ರವರಿ 6 ರಂದು ಇಂಗ್ಲೆಂಡ್ ವಿರುದ್ಧದ ಮೊದಲನೇ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ರೋಹಿತ್ ಶರ್ಮಾ ಜೊತೆ ಇನಿಂಗ್ಸ್ ಆರಂಭಿಸಿದ್ದ ಅವರು ಬಹುಬೇಗ ವಿಕೆಟ್ ಒಪ್ಪಿಸಿದ್ದರು. ಈ ಪಂದ್ಯದಲ್ಲಿ ಶುಭಮನ್ ಗಿಲ್ ಮೂರನೇ ಕ್ರಮಾಂಕದಲ್ಲಿ ಆಡಿದ್ದರೆ, ಶ್ರೇಯಸ್ ಅಯ್ಯರ್ ನಾಲ್ಕನೇ ಕ್ರಮಾಂಕದಲ್ಲಿ ಆಡಿದ್ದರು. ಎರಡನೇ ಏಕದಿನ ಪಂದ್ಯಕ್ಕೆ ವಿರಾಟ್ ಕೊಹ್ಲಿ ಬಂದಿದ್ದರಿಂದ, ಜೈಸ್ವಾಲ್ ಪ್ಲೇಯಿಂಗ್ XIನಿಂದ ಹೊರಗೆ೪ ಉಳಿಯಬೇಕಾಯಿತು.
ವಿರಾಟ್ ಕೊಹ್ಲಿ ಅಲ್ಲ, ಈ ಆಟಗಾರ ಮಿಂಚಿದ್ರೆ ಭಾರತ ಚಾಂಪಿಯನ್ಸ್ ಟ್ರೋಫಿ ಗೆಲ್ಲೋದು ಪಕ್ಕಾ: ಅಝರುದ್ದಿನ್!
"ಭಾರತ ತಂಡದ ಬ್ಯಾಟಿಂಗ್ ಕ್ರಮಾಂಕ ಪೂರ್ಣಗೊಂಡಿದೆ ಎಂದು ಭಾವಿಸುತ್ತೇನೆ. ರೋಹಿತ್ ಶರ್ಮಾ ಸ್ಕೋರ್ ಮಾಡಲು ಆರಂಭಿಸಿದ್ದಾರೆ. ಶುಭಮನ್ ಗಿಲ್ ನಮ್ಮ ಉಪ ನಾಯಕ, ಅವರು ಉತ್ತಮ ಫಾರ್ಮ್‌ನಲ್ಲಿದ್ದಾರೆ. ವಿರಾಟ್ ಕೊಹ್ಲಿ ಕೂಡ ಫಾರ್ಮ್ ಮರಳುವ ಹಾದಿಯಲ್ಲಿದ್ದಾರೆ. ದೇವರ ಅನುಗ್ರಹ ಯಶಸ್ವಿ ಜೈಸ್ವಾಲ್ ಮೇಲಿದ್ದರೆ, ಅವರನ್ನು ತಂಡದಿಂದ ಕೈ ಬಿಡಲು ಸಾಧ್ಯವಿಲ್ಲ. ನಾಲ್ಕನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಹಾಗೂ ಐದನೇ ಕ್ರಮಾಂಕ ಕೆಎಲ್ ರಾಹುಲ್ ಅಥವಾ ರಿಷಭ್ ಪಂತ್ ಅಥವಾ ಅಕ್ಷರ್ ಪಟೇಲ್ ಅವರಿಂದ ಭರ್ತಿಯಾಗಿದೆ. ಕೆಎಲ್ ರಾಹುಲ್ ಹಾಗೂ ರಿಷಭ್ ಪಂತ್ ಅವರಲ್ಲಿ ಒಬ್ಬರು ಹೊರಗುಳಿಯಲಿದ್ದಾರೆ. ಆ ಮೂಲಕ ನಿಮಗೆ ಒಬ್ಬರು ಹೆಚ್ಚುವರಿ ಬ್ಯಾಟ್ಸ್‌ಮನ್ ಸಿಕ್ಕಂದಾಗುತ್ತದೆ," ಎಂದು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಆಕಾಶ್ ಚೋಪ್ರಾ ತಿಳಿಸಿದ್ದಾರೆ.
ಭಾರತ ಚಾಂಪಿಯನ್ಸ್ ಟ್ರೋಫಿ ತಂಡಕ್ಕೆ ಜೈಸ್ವಾಲ್ ಅಗತ್ಯವಿಲ್ಲ
"ಯಶಸ್ವಿ ಜೈಸ್ವಾಲ್ ಅವರ ಅಗತ್ಯತೆ ನಿಮಗೆ ಇಲ್ಲ ಎಂದು ನಾನು ಭಾವಿಸುತ್ತೇನೆ. ಇದು ನಡೆಯಬಹುದು. ನಿಮಗೆ ಎಡಗೈ ಹಾಗೂ ಬಲಗೈ ಬ್ಯಾಟ್ಸ್‌ಮನ್‌ಗಳ ಸಂಯೋಜನೆ ನಿಮಗೆ ಅಗತ್ಯವಿದ್ದರೆ, ನೀವು ಅವರನ್ನು ಉಳಿಸಿಕೊಳ್ಳಬಹುದು ಹಾಗೂ ಎಡಗೈ ಆಟಗಾರರನ್ನು ಕೈ ಬಿಡಲು ಸಾಧ್ಯವಾಗುವುದಿಲ್ಲ," ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.
ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಭಾರತಕ್ಕೆ ಎಚ್ಚರಿಕೆ ನೀಡಿದ ಪಾಕ್ ಮಾಜಿ ವೇಗಿ
ಮೊಹಮ್ಮದ್ ಸಿರಾಜ್‌ಗೆ ಸ್ಥಾನ ನೀಡಿ: ಚೋಪ್ರಾ
ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಒಳಗಾಗಿ ಜಸ್‌ಪ್ರೀತ್ ಬುಮ್ರಾ ಸಂಪೂರ್ಣ ಫಿಟ್ ಆಗಿಲ್ಲವಾದ್ರೆ ಮೊಹಮ್ಮದ್ ಸಿರಾಜ್ ಅವರಂಥ ಆಟಗಾರನಿಗೆ ಅವಕಾಶ ನೀಡಬೇಕೆಂದು ಆಕಾಶ್ ಚೋಪ್ರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಾಸ್ತವವಾಗಿ ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಭಾರತ ತಂಡದಲ್ಲಿ ಸಿರಾಜ್‌ಗೆ ಸ್ಥಾನ ನೀಡಲಾಗಿಲ್ಲ.
"ನೀವು ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಆಡಲು ಯಶಸ್ವಿ ಜಸ್ವಾಲ್‌ಗೆ ಅವಕಾಶ ನೀಡಿಲ್ಲವಾದರೆ, ಏಕೆ ಅವರನ್ನು ತಂಡಕ್ಕೆ ಆಯ್ಕೆ ಮಾಡಿದ್ದೀರಿ? ಯಶಸ್ವಿ ಜೈಸ್ವಾಲ್ ಅವರಿಗಿಂತ ಭಾರತ ತಂಡದಲ್ಲಿ ಆಡಲು ಮೊಹಮ್ಮದ್ ಸಿರಾಜ್‌ಗೆ ಹೆಚ್ಚಿನ ಅವಕಾಶವಿದೆ. ಪಾಕಿಸ್ತಾನದ ಎದುರು ಅನುಭವಿ ಬೌಲಿಂಗ್ ದಾಳಿಯ ಅಗತ್ಯತೆ ನಿಮಗೆ ಬೇಕಿದ್ದರೆ, ಸಿರಾಜ್ ಭಾರತ ತಂಡಕ್ಕೆ ಬರುವ ಅವಕಾಶ ಜಾಸ್ತಿ ಇದೆ. ನಿಮಗೆ ಮೂವರು ಫಾಸ್ಟ್ ಬೌಲರ್‌ಗಳ ಅಗತ್ಯವಿದ್ದರೆ, ನೀವು ಸಿರಾಜ್ ಅವರನ್ನು ಪರಿಗಣಿಸಬಹದು," ಎಂದು ಆಕಾಶ ಚೋಪ್ರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.